Thursday 8th, May 2025
canara news

ಜೈನ ಆಚಾರ್ಯ ಕಾಮ ಕುಮಾರ ನಂದಿ ಮುನಿ ರಾಜ್ ಬರ್ಬರ ಹತ್ಯೆ ಖಂಡಿಸಿ

Published On : 19 Jul 2023   |  Reported By : Rons Bantwal


ದೆಹಲಿ ಹಾಗೂ ಉತ್ತರ ಪ್ರದೇಶಗಳಲ್ಲಿ ಪ್ರತಿಭಟನೆ

ಮುಂಬಯಿ (ಆರ್‍ಬಿಐ), ಜೂ.19: ಜೈನ ಆಚಾರ್ಯ ಕಾಮ ಕುಮಾರ ನಂದಿ ಮುನಿ ರಾಜ್ ಬರ್ಬರ ಹತ್ಯೆ ಖಂಡಿಸಿ ಶ್ರೀ ದಿಗಂಬರ ಜೈನ ಮಠ, ಜೈನಕಾಶಿ ಮೂಡಬಿದಿರೆ ಮಹಾಕ್ಷೇತ್ರದ ಜೈನ ಮಹಾಸಂಸ್ಥಾನದ ಪೀಠಾಧ್ಯಕ್ಷ ಭಾರತ ಭೂಷಣ ಜಗದ್ಗುರು ಸ್ವಸ್ತಿಶ್ರೀ ಜಗದ್ಗುರು ಸ್ವಸ್ತಿಶ್ರೀ ಡಾ| ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಇಂದು (ಜು.17)ರಿಂದ ಬರುವ ಬುಧವಾರ (ಜು.19) ವರೆಗೆ ದೆಹಲಿ ಹಾಗೂ ಉತ್ತರ ಪ್ರದೇಶದ ಬಡೋತ್‍ನಲ್ಲಿ ಜೈನ ಸಮಾಜ ಪ್ರಮುಖ ರಿಂದ ಖಂಡನೆ ಹಾಗೂ ಆರೋಪಿಗಳಿಲೆ ಕಠಿಣ ಶಿಕ್ಷೆ ಗೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುತ್ತಿದೆ.

ಇಂದು ದೆಹಲಿ ಜಂತರ್ ಮಂತರ್‍ನಲ್ಲಿ ಪೂರ್ವಾಹ್ನ 11ರಿಂದ ಮಧ್ಯಾಹ್ನ 1.00ಗಂಟೆ ವರೆಗೆ ಆಚಾರ್ಯ ಪ್ರಗ್ಯಾ ಸಾಗರಮುನಿ, ಮೂಡುಬಿದಿರೆ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಪೀಠಧಿಶ ಸುರೇಂದ್ರಜೀ, ತಿಜಾರ ಸ್ವಾಮೀಜಿ ಉಪಸ್ಥಿತಿಯಲ್ಲಿ ಆಚಾರ್ಯ ಕಾಮ ಕುಮಾರ ಮುನಿ ಹತ್ಯೆ ಈ ಶತಮಾನದಲ್ಲಿ ಕಂಡು ಕೇಳರಿಯದ ಕ್ರೂರ ಹತ್ಯೆಯಾಗಿದೆ ಎಂದು ಖಂಡನಾ ನಿರ್ಣಯ ಮಾಡಲಾಯಿತು.

ಮುನಿ ಗಳ ವಿಹಾರ ಸಂಧರ್ಭ ರಕ್ಷಣೆ
ಸಮಾಜ ಹತ್ತಿರದ ಪೆÇಲೀಸ್ ಭದ್ರತೆ ಪಡೆದು ಕೊಂಡು ವಿಹಾರ ಮಾಡಿಸ ಬೇಕು. ಚಿತ್ರಹಿಂಸೆ ಮಾಡಿ ಕೊಲೆ ಗೈದ ಅಪರಾಧಿಗಳನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಎರಡು ಅಪರಾಧಿಗಳನ್ನು ಈಗ ಬಂಧಿಸಿದ್ದು ಇದರ ಹಿಂದಿರುವ ಇನ್ನಿತರ ಶಕ್ತಿಗಳನ್ನು ಪತ್ತೆಹಚ್ಚಿ ನ್ಯಾಯ ಒದಗಿಸಬೇಕು ಎಂಬ ನಿರ್ಣಯ ಮಾಡಿ ಸಂಬಂಧಪಟ್ಟ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಪತ್ರ ರವಾನಿಸಿ ಒಂದು ಗಂಟೆ ನಮೋಕಾರ ಮಂತ್ರ ಪಠಿಸಿ ಮೃತ ಆಚಾರ್ಯರ ಆತ್ಮಕ್ಕೆ ಉತ್ತಮ ಸದ್ಗತಿ ಕೋರಲಾಯಿತು.

ದಿಗಂಬರ ಜೈನ ಸಮಾಜದ ಅಧ್ಯಕ್ಷ ಗಜರಾಜ್ ಗಂಗವಾಲ್, ಕೋಶಾಧಿಕಾರಿ ಪವನ್ ಗೋಧಾ ಪುನೀತ್ ಜೈನ್ ಸ್ವರಾಜ್ ಜೈನ್, ಸಂಜಯ್, ಯೋಗಾ ಚಾರ್ಯ ನವೀನ್, ರಾಜ್ಯಸಭಾ ಸಂಸದ ರಾಜೇಂದ್ರ ಜೈನ್, ನಿರ್ಮಲ್ ಜೈನ್, ಪ್ರದ್ಯುಮ್ನ, ವಿನೇಶ್ ದೆಹಲಿ ಮೊದಲಾದವರು ಪ್ರಧಾನವಾಗಿ ಉಪಸ್ಥಿತರಿದ್ದರು.

ಬಳಿಕ ಉತ್ತರ ಪ್ರದೇಶದ ಬಡೋತ್‍ನ ಭಗವಾನ್ ಅದಿನಾಥ್ ಜಿನ ಮಂದಿರದಲ್ಲಿ ಚಾತುರ್ಮಾಸ ನಿರತ ಆಚಾರ್ಯ ವಿಶುದ್ಧ ಸಾಗರ ಮುನಿ ರಾಜರ ಭೇಟಿ ಮಾಡಿ ಆಶೀರ್ವಾದ ಪಡೆದು ಸತ್ಯೆಂದ್ರ ಜೈನ್, ಶ್ರೇಯಾಂಸ್ ಜೈನ್, ಹಾಗೂ ಸಮಾಜ ಪ್ರಮುಖ ರ ಉಪಸ್ಥಿತಿ ಯಲ್ಲಿ ಖಂಡನಾ ನಿರ್ಣಯ ಮಾಡಲಾಯಿತು.

ಬಳಿಕ ಇದೇ ಬುಧವಾರ (ಜು.19) ಬೆಳಿಗ್ಗೆ 8.00 ಗಟೆಯಿಂದ ಮಧ್ಯಾಹ್ನ 1.00ರ ವರೆಗೆ ದೆಹಲಿ ವೃಷಬ್ ವಿಹಾರ, ಲೋದಿ ರಸ್ತೆ, ರಾಜ ಬಜಾರ್ ಜಿನ ಮಂದಿರಗಳ ಭೇಟಿ ಮಾಡಿ ಸ್ವಾಮೀಜಿ ಆಚಾರ್ಯ ಸುನೀಲ್ ಸಾಗರ, ಆಚಾರ್ಯ ಪ್ರಗ್ಯಾ ಸಾಗರ್ ಮುನಿ ರಾಜರ ಭೇಟಿ ದರ್ಶನ ಮಾಡಿ ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗುವುದು ಎಂದರು.

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here