Sunday 3rd, December 2023
canara news

ಗೋಕುಲ ಮಹಿಳಾ ವಿಭಾಗದವರಿಂದ "ಆಟಿ -ಶ್ರಾವಣ ಮಾಸ ವಿಶೇಷತೆಗಳು " ಆಚರಣೆ

Published On : 11 Aug 2023   |  Reported By : Rons Bantwal


ಮುಂಬಯಿ, ಆ.11: ಬಿ.ಎಸ್.ಕೆ.ಬಿ. ಎಸೋಸಿಯೇಷನ್ ಗೋಕುಲ, ಸಾಯನ್, ಮಹಿಳಾ ವಿಭಾಗದವರು ರವಿವಾರ ದಿನಾಂಕ 6.8.2023 ರಂದು ಗೋಕುಲದಲ್ಲಿ ಆಟಿಡೊಂಜಿ ದಿನದ ಅಂಗವಾಗಿ ಆಟಿ -ಶ್ರಾವಣ ಮಾಸ ವಿಶೇಷತೆಗಳು ಎಂಬ ಕಾರ್ಯಕ್ರಮವನ್ನು ಆಯೋಜಿಇಸಿದ್ದರು.

ತುಳುನಾಡಿನಲ್ಲಿ ಆಟಿ ತಿಂಗಳಿನಲ್ಲಿ ತಯಾರಿಸುವ ವಿಶೇಷ ಸಿಹಿ-ಖಾರ ತಿಂಡಿ ತಿನಿಸುಗಳನ್ನು ಸಂಘದ ಸದಸ್ಯರು ತಯಾರಿಸಿ ತಂದು ಕಲಾತ್ಮಕವಾಗಿ ಅಲಂಕರಿಸಿದ್ದರು. ಸಂಘದ ಅಧ್ಯಕ್ಷರಾದ ಡಾ. ಸುರೇಶ್ ಎಸ್ ರಾವ್ ಅವರ ಮಾತೃಶ್ರೀ ಕಾತ್ಯಾಯನಿ ರಾವ್, ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ವಿಶ್ವಸ್ಥ ಮಂಡಳಿ ಸದಸ್ಯೆ ಶೈಲಿನಿ ರಾವ್ ಅವರ ಮಾತೃಶ್ರೀ ಶಾರದಾ ರಾವ್ ಅವರು ಕಾರ್ಯಕ್ರಮದ ಉದ್ಘಾಟನೆ ಗೈದು ತಿಂಡಿಗಳನ್ನು ಸವಿದು ಮೆಚ್ಚುಗೆ ವ್ಯಕ್ತ ಪಡಿಸಿದರು. ಶಾಲಿನಿ ರಾವ್ ಮತ್ತು ಶೈಲಿನಿ ರಾವ್ ಅವರು ರಸ ಪ್ರಶ್ನೆಗಳನ್ನು ಕೇಳುವುದರ ಮೂಲಕ ವಿಶಿಷ್ಠ ರೀತಿಯಲ್ಲಿ ತುಳುನಾಡಿನ ಬಗ್ಗೆ ಮಾಹಿತಿ ನೀಡಿದರು. ಸ್ಮಿತಾ ಭಟ್ ಶ್ರಾವಣ ಮಾಸ ವಿಶೇಷತೆಗಳನ್ನು ತಿಳಿಸಿದರು.

ಪರೇಲ್ ಶ್ರೀನಿವಾಸ್ ಭಟ್ ರವರು ಅಧಿಕಮಾಸದ ಬಗ್ಗೆ, ಜಿ.ಕೆ. ಶಾಂತಾರವರು ಪ್ರಕೃತಿ ದತ್ತ ಗಿಡ ಮೂಲಿಕೆಗಳಿಂದ ಆರೋಗ್ಯವನ್ನು ಕಾಪಾಡುವ ಬಗ್ಗೆ ಮಾಹಿತಿ ನೀಡಿದರು. ಕಾತ್ಯಾಯನಿ ರಾವ್, ವಿಜಯಲಕ್ಷ್ಮಿ ರಾವ್, ಪರೇಲ್ ಶ್ರೀನಿವಾಸ್ ಭಟ್ ಸಹಿತ ಹಲವಾರು ಮಹಿಳೆಯರು ರುಚಿಕರವಾದ ವೈವಿಧ್ಯಮಯ ತಿಂಡಿಗಳನ್ನು ತಯಾರಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಭಾಗವಹಿಸಿದವರೆಲ್ಲರಿಗೂ ಡಾ. ಸುರೇಶ್ ರಾವ್ ನೆನಪಿನ ಕಾಣಿಕೆಯನ್ನಿತ್ತು ಗೌರವಿಸಿದರು. ಪ್ರೇಮಾ ರಾವ್ ಕಾರ್ಯಕ್ರಮ ನಿರೂಪಿಸಿ, ಸಮರ್ಪಣೆಗೈದರು

 




More News

ಇಪ್ಪತ್ತ್ತರನೇ ವಾರ್ಷಿಕ ಮಹಾಸಭೆ ಪೂರೈಸಿದ ಗಾಣಿಗ ಸಮಾಜ ಮುಂಬಯಿ
ಇಪ್ಪತ್ತ್ತರನೇ ವಾರ್ಷಿಕ ಮಹಾಸಭೆ ಪೂರೈಸಿದ ಗಾಣಿಗ ಸಮಾಜ ಮುಂಬಯಿ
ಗೋಕುಲದಲ್ಲಿ ಸಂಭ್ರಮದ ತುಳಸೀ ವಿವಾಹ  (ಉತ್ಹಾನ ದ್ವಾದಶಿ ) ಆಚರಣೆ
ಗೋಕುಲದಲ್ಲಿ ಸಂಭ್ರಮದ ತುಳಸೀ ವಿವಾಹ (ಉತ್ಹಾನ ದ್ವಾದಶಿ ) ಆಚರಣೆ
ಸಾಹಿತಿ, ನಿವೃತ್ತ ಶಿಕ್ಷಕಿ ಮೇರಿ ಬಿ.ಪಿಂಟೋ ನಿಧನ
ಸಾಹಿತಿ, ನಿವೃತ್ತ ಶಿಕ್ಷಕಿ ಮೇರಿ ಬಿ.ಪಿಂಟೋ ನಿಧನ

Comment Here