Sunday 3rd, December 2023
canara news

ಆ.20: ತೋನ್ಸೆ ಶ್ರೀ ಬ್ರಹ್ಮಬೈದರ್ಕಳ ಪಂಚ ಧೂಮಾವತಿ ಗರೋಡಿ ಟ್ರಸ್ಟ್ ಮುಂಬಯಿ ಇದರ ಪಂಚಮ ವಾರ್ಷಿಕ ಮಹಾಸಭೆ

Published On : 11 Aug 2023   |  Reported By : Rons Bantwal


ಮುಂಬಯಿ, ಆ.11: ಉಡುಪಿ ಜಿಲ್ಲೆಯ ಕಲ್ಯಾಣ್ಫುರ ಮೂಡುತೋನ್ಸೆ ಇಲ್ಲಿನ ಬ್ರಹ್ಮಶ್ರೀ ಬೈದರ್ಕಳ ಪಂಚ ಧೂಮವತೀ ಗರಡಿ ಇದರ ಸರ್ವೋನ್ನತಿಗಾಗಿ ಸೇವಾನಿರತ ತೋನ್ಸೆ ಶ್ರೀ ಬ್ರಹ್ಮಬೈದರ್ಕಳ ಪಂಚ ಧೂಮಾವತಿ ಗರೋಡಿ ಸೇವಾ ಟ್ರಸ್ಟ್ ಮುಂಬಯಿ ಇದರ ಪಂಚಮ (5ನೇ) ವಾರ್ಷಿಕ ಮಹಾಸಭೆಯನ್ನು ಇದೇ ಬರುವ ಆ.20ನೇ ಭಾನುವಾರ ಸಾಂತಾಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದ ಸಭಾಗೃಹದಲ್ಲಿ ಬೆಳಿಗ್ಗೆ 10.00 ಗಂಟೆಗೆ ಟ್ರಸ್ಟ್‍ನ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಅಧ್ಯಕ್ಷತೆಯಲ್ಲಿ ನಡೆಸಲಿದೆ ಎಂದು ಸೇವಾ ಟ್ರಸ್ಟ್ ಮುಂಬಯಿ ಇದರ ಪದಾಧಿಕಾರಿಗಳು ತಿಳಿಸಿದ್ದಾರೆ.

        

Nityanand D.Kotyan                                     Sanjiva Poojary                         Raviraj Kalyanpur.

ಸಭೆಯಲ್ಲಿ ಗತಸಾಲಿನ ಮಹಾಸಭೆಯ ವರದಿ, ಕಾರ್ಯ ಚಟುವಟಿಕೆಗಳು, ವಾರ್ಷಿಕ ಲೆಕ್ಕಪತ್ರಗಳ ಮಂಡನೆ ಇತ್ಯಾದಿಗಳನ್ನು ನಡೆಸಲಾಗುವುದು ಎಂದು ಟ್ರಸ್ಟ್‍ನ ಗೌ| ಪ್ರ| ಕೋಶಾಧಿಕಾರಿ ರವಿರಾಜ್ ಕಲ್ಯಾಣ್ಫುರ್ ತಿಳಿಸಿದ್ದಾರೆ. ಸಭೆಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರು, ಸಲಹಾದಾರರು, ಸದಸ್ಯರು ಹಾಜರಿರುವಂತೆ ಸೇವಾ ಟ್ರಸ್ಟ್ ಮುಂಬಯಿ ಇದರ ಗೌರವ ಪ್ರಧಾನ ಕಾರ್ಯದರ್ಶಿ ಸಂಜೀವ ಪೂಜಾರಿ ತೋನ್ಸೆ ಈ ಮೂಲಕ ವಿನಂತಿಸಿದ್ದಾರೆ.

 

 
More News

ಇಪ್ಪತ್ತ್ತರನೇ ವಾರ್ಷಿಕ ಮಹಾಸಭೆ ಪೂರೈಸಿದ ಗಾಣಿಗ ಸಮಾಜ ಮುಂಬಯಿ
ಇಪ್ಪತ್ತ್ತರನೇ ವಾರ್ಷಿಕ ಮಹಾಸಭೆ ಪೂರೈಸಿದ ಗಾಣಿಗ ಸಮಾಜ ಮುಂಬಯಿ
ಗೋಕುಲದಲ್ಲಿ ಸಂಭ್ರಮದ ತುಳಸೀ ವಿವಾಹ  (ಉತ್ಹಾನ ದ್ವಾದಶಿ ) ಆಚರಣೆ
ಗೋಕುಲದಲ್ಲಿ ಸಂಭ್ರಮದ ತುಳಸೀ ವಿವಾಹ (ಉತ್ಹಾನ ದ್ವಾದಶಿ ) ಆಚರಣೆ
ಸಾಹಿತಿ, ನಿವೃತ್ತ ಶಿಕ್ಷಕಿ ಮೇರಿ ಬಿ.ಪಿಂಟೋ ನಿಧನ
ಸಾಹಿತಿ, ನಿವೃತ್ತ ಶಿಕ್ಷಕಿ ಮೇರಿ ಬಿ.ಪಿಂಟೋ ನಿಧನ

Comment Here