Sunday 3rd, December 2023
canara news

ಕನ್ನಡ ಸಂಘ ಸಾಂತಾಕ್ರೂಜ್ ಸಂಸ್ಥೆ ಆಚರಿಸಿದ ವಾರ್ಷಿಕ ಆಷಾಢೋತ್ಸವ

Published On : 09 Aug 2023   |  Reported By : Rons Bantwal


ಆಸೆ ಈಡೇರಿಸುವ ತಿಂಗಳು ಆಷಾಢವಾಗಿದೆ : ಹರೀಶ್ ಜಿ.ಅವಿೂನ್
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಆ.09: ಆಷಾಢ ಮಾಸವು ಅದೃಷ್ಟದಾಯಕವಾದುದು. ಧಾರ್ಮಿಕವಾಗಿ ನೋಡಿದರೆ ಮಂಗಳಮಯ ಮಾಸ ಇದಾಗಿದೆ. ಸಾಂಪ್ರದಾಯಿಕವಾಗಿ ಇದನ್ನು ಆಸೆ ಈಡೇರಿಸುವ ತಿಂಗಳು ಎಂದು ಕರೆಯಲ್ಪಡುತ್ತಿದೆ. ಆಷಾಢದ ಆಚರಣೆಯ ಖಾದ್ಯಗಳನ್ನು ಸವಿಯುವುದೇ ಆನಂದಕರ. ಮುಂಬಯಿಯಂತ ಹ ಮಹಾನಗರಗಳಲ್ಲಿನ ಈ ಆಚಾರಣೆ ಕೌಟುಂಬಿಕ ಉತ್ಸಹ ನೀಡುತ್ತದೆ ಎಂದು ಬಿಲ್ಲವರ ಅಸೋಸಿಯೇಶ ನ್ ಮುಂಬಯಿ ಅಧ್ಯಕ್ಷ ಹರೀಶ್ ಜಿ.ಅವಿೂನ್ ಅಭಿಪ್ರಾಯ ಪಟ್ಟರು.

 

ಇಂದಿಲ್ಲಿ ಬುಧವಾರ ಸಂಜೆ ಬಾಂದ್ರಾ ಪೂರ್ವದ ಖೇರ್‍ವಾಡಿ ಅಲ್ಲಿನ ರಾಜಯೋಗ್ ಸಭಾಗೃಹದಲ್ಲಿ ಕನ್ನಡ ಸಂಘ ಸಾಂತಾಕ್ರೂಜ್ ಸಂಸ್ಥೆಯು ಸಂಘದ ಅಧ್ಯಕ್ಷೆ ಸುಜತಾ ಆರ್.ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ 2023ನೇ ವಾರ್ಷಿಕ ಆಷಾಢೋತ್ಸ ಕಾರ್ಯಕ್ರಮಕ್ಕೆ ದೀಪಹಚ್ಚಿ ಉದ್ಘಾಟಿಸಿ ಹರೀಶ್ ಅವಿೂನ್ ಮಾತನಾಡಿದರು.

ಅತಿಥಿü ಅಭ್ಯಾಗತರುಗಳಾಗಿ ಕನ್ನಡ ಸಂಘ ಸಾಂತಾಕ್ರೂಜ್‍ನ ಗೌರವಾಧ್ಯಕ್ಷ ಎಲ್.ವಿ ಅವಿೂನ್, ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀ ಕಾರ್ಯಾಧ್ಯಕ್ಷ ಎನ್.ಟಿ ಪೂಜಾರಿ, ನಿರ್ದೇಶಕ ಪುರುಷೋತ್ತ ಮ ಎಸ್.ಕೋಟ್ಯಾನ್, ಬಂಟ್ಸ್ ಸಂಘ ಮುಂಬಯಿ ಇದರ ಮಹಿಳಾ ವಿಭಾಗದ ಜೊತೆ ಕೋಶಾಧಿಕಾರಿ ರತ್ನಾ ಪಿ.ಶೆಟ್ಟಿ, ಸಂಘದ ಪೆÇ್ರೀತ್ಸಹಕ ಸೂರಜ್ ಸದಾನಂದ ಸಫಲಿಗ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದು ಸುಜತಾ ಶೆಟ್ಟಿ ಮತ್ತು ಎಲ್.ವಿ ಅವಿೂನ್ ಪುಷ್ಪಗುಪ್ಛವನ್ನಿತ್ತು ಅಭಿವಂದಿಸಿದರು.

ಎಲ್.ವಿ.ಅವಿೂನ್ ಮಾತನಾಡಿ ಇಷ್ಟಾರ್ಥ ಈಡೇರಿಕೆಯ ತಿಂಗಳನ್ನು ಆಟಿ ಆಮವಾಸ್ಯೆ ನೆನಪಿನ ಕಹಿ ಕಷಾಯ ಕುಡಿದು ಕನ್ನಡ ಸಂಘ ಸಾಂತಾಕ್ರೂಜ್ ಸಂಸ್ಥೆ ಆಟಿಕೂಟವಾಗಿ ವಾಡಿಕೆಯಾಗಿ ಆಚರಿಸುತ್ತಿರುವುದು ಪ್ರಶಂಸನೀಯ. ಕಠಿಣವಾದ ಕಾಲದ ಆಚರಣೆ ಇಂದು ನೆನಪಿನ ಆಚರಣೆ ಆಗಿಸಲಾಗಿದೆ. ಮನೆಮಂದಿಯ ಆಚರಣೆ ಬದಲಾಗಿ ಸದ್ಯ ಸಂಸ್ಕೃತಿ ಪಾಲನೆಯ ಪರಿವಾರದ ಆಚರಣೆಯಾಗಿ ನಡೆಸಲಾಗುತ್ತಿದೆ. ಕನ್ನಡಿಗರೊಂದಿಗೆ ತುಳುವವರ ಸಂಭ್ರಮ ಜೀವಂತವಾಗಿಸುವ ಉದ್ದೇಶ ನಮ್ಮದಾಗಿದೆ ಎಂದರು.


ನಮ್ಮವರು ಮನೆಯಲ್ಲಿಯೇ ತಯಾರಿಸಿದ ಬಗೆಬಗೆಯ ಖಾದ್ಯಗಳು ಹಾಗೂ ವಿವಿಧ ಬಗೆಯ ಸಾಂಪ್ರದಾಯಿಕ ಶೈಲಿಯ ತಿಂಡಿ ತಿನಿಸುಗಳನ್ನು ಸಂಸ್ಕೃತಿಯೊಡನೆ ಸವಿಯುವ ಅವಕಾಶ ಇದಾಗಿದೆ. ಇದು ಮಕ್ಕಳಲ್ಲಿ ರೂಢಿಸಿ ಕೊಳ್ಳುವ ಪ್ರಯತ್ನ ನಡೆಯಬೇಕು ಎಂದು ಸಂಘದ ಉಪಾಧ್ಯಕ್ಷ ದೊಡ್ಡಗುತ್ತು ಭಜಂಗ ಆರ್.ಶೆಟ್ಟಿ ತಿಳಿಸಿದರು.

ಕರ್ನಾಟಕ ಕರಾವಳಿಯ (ತುಳುನಾಡ) ಆಚಾರ ವಿಚಾರ ಸಂಸ್ಕೃತಿಯನ್ನು ಪ್ರೀತಿಯ ಧ್ಯೋತಕವಾಗಿ ಆಚರಿಸುವ ಕಾರ್ಯಕ್ರಮ ಇದಾಗಿದೆ. ಇದರಿಂದ ಸಂಸ್ಕೃತಿಯ ಉಳಿವು ಮುನ್ನಡೆಸಲು ಸಾಧ್ಯ. ಭಾವೀ ಜನಾಂಗಕ್ಕೆ ಇಂತಹ ಆಚರಣೆಗಳು ಆದರ್ಶವಾಗುತ್ತವೆ ಎಂದು ಎನ್.ಟಿ ಪೂಜಾರಿ ತಿಳಿಸಿದರು.

ಸಂಘದ ಗೌ| ಪ್ರ| ಕಾರ್ಯದರ್ಶಿ ಜಯ ವಿ.ಪೂಜಾರಿ ಮಾತನಾಡಿ ನಮ್ಮ ಬಾಲ್ಯವಸ್ಥೆಯಲ್ಲಿ ಇದು ಮನೆಯಲ್ಲಿ ನಂಬಿಕೆಗಳ ಆಚರಣೆ, ಅಶುಭ ಮಾಸವೆಂದು ಸರಳವಾಗಿ ನಡೆಸುತ್ತಿದ್ದ ಕಾರ್ಯಕ್ರಮವಾಗಿದೆ. ಇದೀಗ ಇದು ಸಮೂಹಿಕವಾಗಿ ಮತ್ತು ಸಂಭ್ರಮಯುತ ಕಾರ್ಯಾಕ್ರಮವಾಗಿ ರೂಪುಗೊಂಡಿದೆ ಎಂದರು.

ಪೌರಾಣಿಕ ಮತ್ತು ಪ್ರಾಕೃತಿಕ ಹಿನ್ನಲೆಯುಳ್ಳ ಆಷಾಢಮಾಸವನ್ನು ಪೂರ್ವಿಕರು ಈ ಕಾಲವನ್ನು ವಿಶೇಷವಾಗಿ ವಿಶ್ಲೇಷಿಸಿದ್ದಾರೆ. ಶಿವವ್ರತ ಮಾಡುವ ಆಷಾಢsವು ಮಹಿಳೆಯರ ಪಾಲಿನ ಪಾವಿತ್ರ್ಯತಾ ಕಾಲವಾಗಿದೆ. ಶುಭ ಕಾರ್ಯಗಳಿಗೆ ನಿಷೇಧಿತ ಕಾಲವಾಗಿದ್ದರೂ ಲಕ್ಷ್ಮಿ ದೇವಿಯನ್ನು ವಿಶೇಷವಾಗಿ ಪೂಜಿಸುವ ಸಂಪ್ರದಾಯ ಇಂದಿಗೂ ಜಾರಿಯಲ್ಲಿದೆ. ಇದನ್ನು ನಮ್ಮ ಸಂಘವು ಸಂಭ್ರಮವಾಗಿಸದೆ ಆಚರಣೆಯ ಉಳಿವಿಗಾಗಿ ನಡೆಸುತ್ತಿದೆ ಎಂದು ಸುಜಾತಾ ಶೆಟ್ಟಿ ತಿಳಿಸಿ ಸಂಘದ ಉಪಾಧ್ಯಕ್ಷರಾಗಿ ಅಕಾಲಿಕವಾಗಿ ಅಗಲಿದೆ ರಾಜ್‍ಯೋಗ್ ಹೊಟೇಲ್‍ನ ಮಾಲಿಕ ಸದಾನಂದ ಕೆ.ಸಫಲಿಗ ಅವರನ್ನು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗಧ್ಯಕ್ಷೆ ವಜ್ರಾ ಪೂಂಜ, ಸಿಟಿ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗಧ್ಯಕ್ಷೆ ಸುಚಿತಾ ಶೆಟ್ಟಿ, ನವೀನ್ ಪಡುಇನ್ನಾ, ಸಂಘದ ಗೌ| ಕೋಶಾಧಿಕಾರಿ ಸುಧಾಕರ್ ಉಚ್ಚಿಲ್, ಗೌ| ಜೊತೆ ಕಾರ್ಯದರ್ಶಿ ಚಂದ್ರಹಾಸ ಜೆ.ಕೋಟ್ಯಾನ್, ಗೌ| ಜೊತೆ ಕೋಶಾಧಿಕಾರಿ ಬನ್ನಂಜೆ ರವೀಂದ್ರ ಅವಿೂನ್, ಕಾರ್ಯಕಾರಿ ಸಮಿತಿ ಸದಸ್ಯರಾದ ಸುಮಾ ಎಂ.ಪೂಜಾರಿ, ಶಾಲಿನಿ ಜಿ.ಶೆಟ್ಟಿ, ಸಿಎ| ಪ್ರಕಾಶ್ ಸಿ.ಶೆಟ್ಟಿ, ಸಲಹಾ ಸಮಿತಿ ಸದಸ್ಯ ಭೋಜ ಎನ್.ಶೆಟ್ಟಿ, ಶಿಕ್ಷಣ ಸಮಿತಿ ಕಾರ್ಯಾಧ್ಯಕ್ಷ ವಿಜಯಕುಮಾರ್ ಕೆ.ಕೋಟ್ಯಾನ್ ಸೇರಿದಂತೆ ಸಂಘದ ಹಿತೈಷಿಗಳು ಉಪಸ್ಥಿತರಿದ್ದರು. ಸುಧಾ

ಎಲ್ವೀ ಅವಿೂನ್ ಅವರು ಬೆಲ್ಲ, ಅಮವಾಸ್ಯೆ ಕಷಾಯ ನೀಡಿ ಸಂಪ್ರದಾಯಿಕವಾಗಿ ಸುಖಾಗಮನ ಬಯಸಿದÀÀ ರು. ಸಾಮಾಜಿಕ ಮತ್ತು ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷೆ ವನಿತಾ ವೈ.ನೋಂದ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಲಕ್ಷ್ಮೀ ಎನ್.ಕೋಟ್ಯಾನ್ ಧನ್ಯವದಿಸಿದರು.

 

 
More News

ಇಪ್ಪತ್ತ್ತರನೇ ವಾರ್ಷಿಕ ಮಹಾಸಭೆ ಪೂರೈಸಿದ ಗಾಣಿಗ ಸಮಾಜ ಮುಂಬಯಿ
ಇಪ್ಪತ್ತ್ತರನೇ ವಾರ್ಷಿಕ ಮಹಾಸಭೆ ಪೂರೈಸಿದ ಗಾಣಿಗ ಸಮಾಜ ಮುಂಬಯಿ
ಗೋಕುಲದಲ್ಲಿ ಸಂಭ್ರಮದ ತುಳಸೀ ವಿವಾಹ  (ಉತ್ಹಾನ ದ್ವಾದಶಿ ) ಆಚರಣೆ
ಗೋಕುಲದಲ್ಲಿ ಸಂಭ್ರಮದ ತುಳಸೀ ವಿವಾಹ (ಉತ್ಹಾನ ದ್ವಾದಶಿ ) ಆಚರಣೆ
ಸಾಹಿತಿ, ನಿವೃತ್ತ ಶಿಕ್ಷಕಿ ಮೇರಿ ಬಿ.ಪಿಂಟೋ ನಿಧನ
ಸಾಹಿತಿ, ನಿವೃತ್ತ ಶಿಕ್ಷಕಿ ಮೇರಿ ಬಿ.ಪಿಂಟೋ ನಿಧನ

Comment Here