Sunday 28th, April 2024
canara news

ವಾಪಿ-ಗುಜರಾತ್ ; ತುಳುನಾಡ ಐಸಿರಿ ವಾಪಿ ಸಂಸ್ಥೆ ಆಯೋಜಿತ ಆಷಾಢೋತ್ಸವ

Published On : 15 Aug 2023   |  Reported By : Rons Bantwal


ಸೌಂದರ್ಯದ ಐಸಿರಿ ಸಾಮರಸ್ಯದ ಬಾಳಿಗೆ ಪ್ರೇರಕ : ಶಶಿಧರ ಶೆಟ್ಟಿ ಬರೋಡಾ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಗುಜರಾತ್ (ವಾಪಿ), ಆ.13: ತುಳುನಾಡ ಕೃಷಿ ಪ್ರಧಾನ ಪ್ರದೇಶದ ವೈಶಿಷ್ಟ ್ಯತೆ ಆಟಿ (ಆಷಾಢ) ಆಗಿದೆ. ಪರಸ್ಪರ ಕೌಟುಂಬಿಕ ಸುಖದುಃಖ ತಿಳಿದು ಪರಿವಾರವಾಗಿ ಬಾಳುವ ಸಮಯವಾಗಿದೆ. ಐಸಿರಿ ಅಂದರೆ ಸೌಂದರ್ಯ, ಲಕ್ಷ್ಮೀವಾಗಿದ್ದು ಇದು ಭಾವನೆಯ ಸಂದೇಶವಾಗಿದೆ. ಗುಜರಾತ್‍ನಲ್ಲಿ ತುಳುಕನ್ನಡಿಗರನ್ನು ಒಗ್ಗೂಡಿಸಿ ಸಾಮರಸ್ಯದ ಬಾಳಿಗೆ ಪ್ರೇರಕವಾದ ಐಸಿರಿಯು ಮುಂದಿನ ವರ್ಷ ಸ್ವಂತ ತುಳು ಚಾವಡಿ ಹೊಂದುವಂತಾಗಲಿ. ಎಂದು ತುಳು ಕೂಟ ಬರೋಡಾ ಅಧ್ಯಕ್ಷ ಶಶಿಧರ ಬಿ.ಶೆಟ್ಟಿ ತಿಳಿಸಿದರು.

ಗುಜರಾತ್ ರಾಜ್ಯದಲ್ಲಿನ ವಾಪಿ, ದಮನ್ ವಲ್ಸಡ್, ಉಮ್ಮರ್‍ಗಾಂವ್, ಸಿಲ್ವಾಸ ಪರಿಸರದ ಹೆಸರಾಂತ ಸಂಸ್ಥೆ `ತುಳುನಾಡ ಐಸಿರಿ' ಆಯೋಜಿಸಿದ್ದ 2023ನೇ ವಾರ್ಷಿಕ ಆಟಿಡ್ ಒಂಜಿ ದಿನ (ಆಷಾಢೋತ್ಸವ) ಕಾರ್ಯಕ್ರಮ ದೀಪ ಪ್ರಜ್ವಲಿಸಿ ಉದ್ಘಾಟಿಸಿ ಸಭಾಧ್ಯಕ್ಷತೆ ವಹಿಸಿ ಶಶಿಧರ ಶೆಟ್ಟಿ ಮಾತನಾಡಿದರು.

ಇಂದಿಲ್ಲಿ ಆದಿತ್ಯವಾರÀ ದಮನ್ ದುನೇತಾ ಇಲ್ಲಿನ ಕೋಲಿ ಸಮಾಜ ಸಭಾಗೃಹದಲ್ಲಿ ತುಳುನಾಡ ಐಸಿರಿ ಅಧ್ಯಕ್ಷ ಬಾಲಕೃಷ್ಣ ಎಸ್.ಶೆಟ್ಟಿ ಮತ್ತು ಗೌರವಾಧ್ಯಕ್ಷ ಸದಾಶಿವ ಜಿ.ಪೂಜಾರಿ ಸಾರಥ್ಯದಲ್ಲಿ ನಡೆಸಲ್ಪಟ್ಟ ಸಭಾ ಕಾರ್ಯಕ್ರಮವನ್ನು ತುಳು ಸಂಘ ಅಂಕಲೇಶ್ವರ ಅಧ್ಯಕ್ಷ ಶಂಕರ್ ಶೆಟ್ಟಿ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿsಯಾಗಿ ಕರ್ನಾಟಕ ಸಮಾಜ ಸೂರತ್ ಅಧ್ಯಕ್ಷ ಮನೋಜ್ ಸಿ.ಪೂಜಾರಿ, ಅತಿಥಿs ಅಭ್ಯಾಗತರಾಗಿ ಗುಜರಾತ್ ಬಿಲ್ಲವ ಸಂಘ ಇದರ ಗೌರವಾಧ್ಯಕ್ಷ ದಯಾನಂದ ಆರ್.ಬೋಂಟ್ರ, ಉದಯ ಎಸ್.ಶೆಟ್ಟಿ (ಸಾಯಿ ಪ್ಯಾಲೇಸ್ ಸಮೂಹ) ಉಪಸ್ಥಿತರಿದ್ದು, ತುಳು ಕನ್ನಡತಿ, ದಾದ್ರಾನಗರ ಹವೇಲಿ ಸಿಲ್ವಾಸಾ ಇದರ ನೂತನ ಮೇಯರ್ ರಜನಿ ಗೋವಿಂದ ಶೆಟ್ಟಿ ಅವರನ್ನು ಸನ್ಮಾನಿಸಿ ಅಭಿನಂದಿಸಿದರು.

ನಿತೀಶ್ ಶೆಟ್ಟಿ ಅಹ್ಮದಾಬಾದ್, ಜಯಂತ್ ಶೆಟ್ಟಿ ಸೂರತ್, ವಾಸು ವಿ.ಸುವರ್ಣ ಬರೋಡ, ಪಿ.ಎಸ್ ಕಾರಂತ್ ವಾಪಿ, ಭಾಸ್ಕರ್ ಸರಪಾಡಿ, ರಮೇಶ್ ಪೂಜಾರಿ ವಾಪಿ, ಡಾ| ಆರ್.ಕೆ ನಾಯರ್, ರಾಧಕೃಷ್ಣ ಮೂಲ್ಯ ವಿಶೇಷ ಆಮಂತ್ರಿತರಾಗಿ ವೇದಿಕೆಯನ್ನಲಂಕರಿಸಿದ್ದರು.

ಹೊರನಾಡಿನಲ್ಲಿ ಆಷಾಢ ಆಚರಣೆ ಅಂದರೆ ಸಂಪ್ರದಾಯ ಉಳಿಸಿ ಬೆಳೆಸುವ ಒಗ್ಗಟ್ಟಿನ ಸಂಕೇತವಾಗಿದೆ. ಇಂತಹ ಆಚರಣೆಗಳಿಂದ ಸಂಸ್ಕೃತಿಯ ಜೀವಾಳ ಸಾಧ್ಯ. ಐಸಿರಿಯು ಸ್ಪಂದನಾ ಮನೋಭಾವದ ವೇದಿಕೆಯಾಗಿದೆ. ಇದು ಬರೇ ತುಳುನಾಡ ವೇದಿಕೆಯಾಗದೆ ದೇಶದ ಸೀಮೆಯನ್ನು ಮೀರಿ ಬೆಳೆಯುವ ಸದ್ಭಾವನಾ ಸಂಸ್ಥೆಯಾಗಲಿ ಎಂದು ಮನೋಜ್ ಪೂಜಾರಿ ತಿಳಿಸಿದರು.

ದಯಾನಂದ ಬೋಂಟ್ರ ಮಾತನಾಡಿ ತುಳುವರು ಮರುಭೂಮಿಯಲ್ಲಿ ಜಲಾಶಯ ಸೃಷ್ಟಿಸುವ ತಾಕತ್ತುವುಳ್ಳವರು ಎಂದು ಐಸಿರಿ ಮೂಲ್ಕ ಬಾಲಕೃಷ್ಣ ಶೆಟ್ಟಿ ತೋರ್ಪಡಿಸಿದ್ದಾರೆ. ಗುಜರಾತ್‍ನಲ್ಲಿ ನಾಯಕತ್ವ ನೀಡುವ ಕಾಯಕ ತುಳುನಾಡ ಐಸಿರಿ ಮಾಡುತ್ತಿದ್ದು ಊರಿನ ತಿನಿಸುಗಳಂತೆ ಸ್ವಾದೀಷ್ಟಕರವಾಗಿ ಈ ಸಂಸ್ಥೆ ಬೆಳೆಯಲಿ ಎಂದÀು ಹಾರೈಸಿದರು.

ಹಳ್ಳಿಯಿಂದ ನಗರ ಸೇರಿಕೊಂಡ ನಾವು ನಮ್ಮ ಆಸ್ತಿತ್ವವನ್ನು ದೃಢ ಮಾಡಿಕೊಂಡು ಬಾಳಿದವರು. ತುಳುವರು ಸಂಪ್ರದಾಯಸ್ಥರು ಆಗಿದ್ದು ನಂಬಿಕೆಗಳನ್ನು ಪರಿಪಾಲಿಸುವವರು. ನಮ್ಮಲ್ಲಿನ ಮಹಿಳೆಯರು ರಾಜಕೀಯವಾಗಿ ಪ್ರತಿಭಾನ್ವಿತರಾಗಿ ಜನ ಪ್ರತಿನಿಧಿಗಳಾಗುವ ಪ್ರಯತ್ನ ಮಾಡಬೇಕು. ಆ ಮೂಲಕ ಗುಜರಾತ್‍ನ ರಾಜಕೀಯ ಕ್ಷೇತ್ರದಲ್ಲಿ ತುಳುವರು ಪ್ರಭಾವಿಗಳಾಗಬೇಕು ಎಂದು ರಜನಿ ಶೆಟ್ಟಿ ನುಡಿದರು.

ಮಾನವ ಜನಾಂಗವು ಜೊತೆಗೂಡಿ ಬಾಳುವುದೇ ದೊಡ್ಡ ಬದುಕುವಾಗಿದೆ. ಆಟಿ ಅನ್ನುವುದು ಇದಕ್ಕೆ ಪೂರಕವಾಗಿದೆ. ತಪಸ್ಸು ಮಾಡಿದಾಗ ಯಶಸ್ಸು ಸಾಧ್ಯ ಅನ್ನುವಂತೆ ಜವಾಬ್ದಾರಿ ನಿಭಾಯಿಸಿದ ಐಸಿರಿ ಸಂಸ್ಕೃತಿ ಉಳಿಸಿ ಬೆಳೆಸಲು ಶ್ರಮಿಸುತ್ತಿದೆ ಎಂದು ಬಾಲಕೃಷ್ಣ ಶೆಟ್ಟಿ ಎಂದರು.

ತುಳುನಾಡ ಐಸಿರಿ ಗೌ| ಕೋಶಾಧಿಕಾರಿ ಪ್ರದೀಪ್ ಪೂಜಾರಿ, ಜೊತೆ ಕಾರ್ಯದರ್ಶಿ ಸುಕೇಶ್ ಎ.ಶೆಟ್ಟಿ, ಜೊತೆ ಕೋಶಾಧಿಕಾರಿ ಗಣೇಶ್ ಶೆಟ್ಟಿ, ಸಂಚಾಲಕ ಪುಷ್ಪರಾಜ್ ಜಿ.ಶೆಟ್ಟಿ ಪುತ್ತೂರು, ವೆಂಕಟೇಶ್ ಪೂಜಾರಿ ಸಿಲ್ವಾಸ್, ಪುರುಷ ವಿಭಾಗ, ಮಹಿಳಾ ವಿಭಾಗ, ಯುವ ವಿಭಾಗದ ಸದಸ್ಯರು ಸೇರಿದಂತೆ ಅಪಾರ ಸಂಖ್ಯೆಯ ಸದಸ್ಯರು ಪಾಲ್ಗೊಂಡು ಆಷಾಢೋತ್ಸವ ಆಚರಿಸಿದರು.

ಕಾರ್ಯಕ್ರಮದ ಅಂಗವಾಗಿ ತುಳುನಾಡ ಆಟೋಟ ಸ್ಪರ್ಧೆ ನಡೆಸಲ್ಪಟ್ಟವು. ತುಳುನಾಡ ಐಸಿರಿ ಕಲಾವಿದರು ವೈವಿಧ್ಯಮಯ ಮನೋರಂಜನಾ ಕಾರ್ಯಕ್ರಮ, ಪಿಲಿ ನಲಿಕೆ, ಆಟಿ ಕಳೆಂಜ, ಭಜನೆ ಕುಣಿತ, ನೃತ್ಯಗಳನ್ನು ಹಾಗೂ ಅಕ್ಷತಾ ಭಟ್ ಸೂರತ್ ಮತ್ತು ತಂಡವು ಭರತನಾಟ್ಯ ಸಾದರ ಪಡಿಸಿದರು. ಕಸ್ತೂರಿ ಲೋಕನಾಥ್ ಶೆಟ್ಟಿ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು.

ಶಾಲಿನಿ ಶೆಟ್ಟಿ ಮತ್ತು ಪ್ರಫುಲ್ಲಾ ಶೆಟ್ಟಿ ಪ್ರಾರ್ಥನೆಯನ್ನಾಡಿದರು. ಧನಶ್ರೀ ಶ್ರೀಧರ ಶೆಟ್ಟಿ ಇವರಿಂದ ಸ್ವಾಗತ ನೃತ್ಯಗೈದರು. ಉಪಾಧ್ಯಕ್ಷ ನವೀನ್ ಎಸ್.ಶೆಟ್ಟಿ ಸ್ವಾಗತಿಸಿದರು. ಡಾ| ಆರ್.ಕೆ ನಾಯರ್ ಆಶಾಢ ಆಚರಣೆ ಬಗ್ಗೆ ಮಾಹಿತಿಯನ್ನಿತ್ತÀರು. ಅಕ್ಷತಾ ಶೆಟ್ಟಿ, ಪ್ರಫುಲ್ಲಾ ಶೆಟ್ಟಿ, ವಸಂತಿ ಪೂಜಾರಿ, ಶಾಲಿನಿ ಶೆಟ್ಟಿ, ಸಪ್ನಾ ಪೂಜಾರಿ ಅತಿಥಿüಗಳನ್ನು ಪರಿಚಯಿಸಿದರು. ಮಹಿಳಾ ವಿಭಾಗದ ಕಾರ್ಯದರ್ಶಿ ಅರುಂಧತಿ ಶೆಟ್ಟಿ ಸಂಘದ ವಿದ್ಯಾನಿಧಿ ಬಗ್ಗೆ ಮಾಹಿತಿ ನೀಡಿದ್ದು ಅತಿಥಿüಗಳು ಶೈಕ್ಷಣಿಕ ಪುರಸ್ಕಾರ ಪ್ರದಾನಿಸಿದರು. ಮಹಿಳಾ ವಿಭಾಗದ ಕಾರಾಧ್ಯಕ್ಷೆ ರಜನಿ ಶೆಟ್ಟಿ, ಸಚಿನ್ ಪೂಜಾರಿ ಭಿವಂಡಿ ಮತ್ತು ಸೃಷ್ಠಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಗೌ| ಪ್ರ| ಕಾರ್ಯದರ್ಶಿ ಉದಯ ಬಿ.ಶೆಟ್ಟಿ ವಂದಿಸಿದರು.

 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here