Wednesday 29th, May 2024
canara news

ಬಿ. ಎಸ್. ಕೆ. ಬಿ. ಎಸೋಸಿಯೇಶನ್, ಗೋಕುಲದಲ್ಲಿ ಸ್ವಾತಂತ್ರ್ಯ ದಿನಾಚರಣೆ

Published On : 20 Aug 2023   |  Reported By : Rons Bantwal


ಮುಂಬಯಿ, ಆ.19: ಬಿ.ಎಸ್.ಕೆ.ಬಿ. ಎಸೋಸಿಯೇಶನ್, ಗೋಕುಲ, ಭಾರತದ 77ನೆಯ ಸ್ವಾತಂತ್ರ್ಯ ದಿನಾಚರಣೆಯನ್ನು ಮಂಗಳವಾರ ದಿನಾಂಕ 15.8.2023ರಂದು ಗೋಕುಲದಲ್ಲಿ ಸಂಭ್ರಮದಿಂದ ಆಚರಿಸಿತು. ಅಧ್ಯಕ್ಷ ಡಾ| ಸುರೇಶ್ ಎಸ್. ರಾವ್, ಪದಾಧಿಕಾರಿಗಳು ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಸಂಘದ ಸದಸ್ಯರ ಉಪಸ್ಥಿತಿಯಲ್ಲಿ ಧ್ವಜಾರೋಹಣಗೈದು ಸರ್ವರಿಗೂ ಸ್ವಾತಂತ್ರ್ಯದಿನದ ಶುಭಾಶಯಗಳನ್ನು ಕೋರಿದರು.

ಡಾ| ಸುರೇಶ್ ಎಸ್. ರಾವ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ, ಉಪಾಧ್ಯಕ್ಷ ವಾಮನ್ ಹೊಳ್ಳ, ಗೌ. ಕಾರ್ಯದರ್ಶಿ ಎ.ಪಿ.ಕೆ. ಪೆÇೀತಿ, ಕೋಶಾಧಿಕಾರಿ ಹರಿದಾಸ್ ಭಟ್ ಜತೆ ಕಾರ್ಯದರ್ಶಿ ಚಿತ್ರಾ ಮೇಲ್ಮನೆ ಮತ್ತು ಪ್ರಶಾಂತ್ ಹೆರ್ಲೆ, ಕಲಾವೃಂದ ಅಧ್ಯಕ್ಷೆ ವಿನೋದಿನಿ ರಾವ್ ಉಪಸ್ಥಿತರಿದ್ದರು. ಗೌರವ ಅತಿಥಿsಯಾಗಿ ಆಗಮಿಸಬೇಕಿದ್ದ ಕರ್ನಾಟಕ ಬ್ಯಾಂಕ್ ನಿಕಟ ಪೂರ್ವ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ| ಮಹಾಬಲೇಶ್ವರ ಎಂ. ಎಸ್, ಅÀವರು ಕಾರಣಾಂತರಗಳಿಂದ ಉಪಸ್ಥಿತರಿರಲಾಗದ ಕಾರಣ ಅವರ ಅನುಪಸ್ಥಿತಿಯಲ್ಲಿ, ಬಿ. ಎಸ್. ಕೆ. ಬಿ. ಎಸೋಸಿಯೇಶನ್, ಗೋಕುಲವು ಅವರಿಗೆ ಬ್ಯಾಂಕಿಂಗ್ ಕ್ಷೇತ್ರ ಮತ್ತು ಬ್ರಾಹ್ಮಣ ಸಮಾಜಕ್ಕೆ ಡಾ| ಮಹಾಬಲೇಶ್ವರ್ ಅವರು ನೀಡಿದ ಅಮೂಲ್ಯ ದೇಣಿಗೆಯನ್ನು ಪರಿಗಣಿಸಿ "ಬ್ಯಾಂಕಿಂಗ್ ಕ್ಷೇತ್ರ ನಿಪುಣ-ವಿಪ್ರ ಭೂಷಣ" ಎಂಬ ಬಿರುದಿನೊಂದಿಗೆ ಗೌರವಿಸಿದ ಸನ್ಮಾನ ಪತ್ರವನ್ನು ವಿನೋದಿನಿ ರಾವ್ ವಾಚಿಸಿದರು.

ಇದೇ ವೇದಿಕೆಯಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಗಣನೀಯ ಸಾಧನೆಯನ್ನು ಮಾಡಿದ ಸಾವಿತ್ರಿ ಮೋಹನ್ ರಾಜ್ ಮತ್ತು ಶ್ರೇಯಾ ಭಟ್ ಅವರನ್ನು ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಶಾಲು ಹೊದಿಸಿ ಸನ್ಮಾನಿಸಿದರು. ಸನ್ಮಾನಿತರು ತಮ್ಮ ಕ್ಷೇತ್ರದಲ್ಲಿ ತಾವು ನಡೆದು ಬಂಡ ದಾರಿ ಹಾಗೂ ಸಾಧನೆಯ ಬಗ್ಗೆ ತಿಳಿಸುತ್ತಾ ಗೋಕುಲದ ಪದಾಧಿಕಾರಿಗಳಿಗೆ ಧನ್ಯವಾದ ಸಲ್ಲಿಸಿದರು.

ವಾಮನ್ ಹೊಳ್ಳ ಮತ್ತು ಹರಿದಾಸ್ ಭಟ್ ಅವರು ವಿನೂತನ ಶೈಲಿಯಲ್ಲಿ ಗೋಕುಲದ ಬಗ್ಗೆ ತಮ್ಮ ಹಿಂದಿನ ಕನಸುಗಳು, ಕನಸು ನನಸಾದ ಪರಿ ಹಾಗೂ ಮುಂದಿನ ತಮ್ಮ ಯೋಜನೆಗಳನ್ನು ಪ್ರಸ್ತುತ ಪಡಿಸಿದರು. ಡಾ. ಸುರೇಶ್ ರಾವ್ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಗೋಕುಲದ ಸದ್ಯದ ಪ್ರಗತಿ, ನಡೆಯುತ್ತಿರುವ ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳ ಬಗ್ಗೆ ವಿಸ್ತಾರವಾಗಿ ತಿಳಿಸುತ್ತಾ, ಸದಸ್ಯರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು, ತಂತಮ್ಮ ಮನೆಯ ಎಲ್ಲಾ ಕಾರ್ಯಕ್ರಮಗಳನ್ನು ಗೋಕುಲದಲ್ಲಿ ಮಾಡುವಂತೆ ಕರೆ ನೀಡಿದರು. ವಾಮನ್ ಹೊಳ್ಳ ಸ್ವಾಗತ ಭಾಷಣ ಗೈದರು. ಚಿತ್ರಾ ಮೇಲ್ಮನೆ ಮತ್ತು ಪ್ರಿಯಾಂಜಲಿ ರಾವ್ ಸಭಾ ಕಾರ್ಯಕ್ರಮ ನಿರೂಪಿಸಿದರು. ಗೌ. ಕಾರ್ಯದರ್ಶಿ ಎ.ಪಿ.ಕೆ. ಪೆÇೀತಿ, ಧನ್ಯವಾದ ಸಮರ್ಪಣೆ ಗೈದರು.

ಪೂರ್ವಾಹ್ನದಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿವಿಧ ವಲಯಗಳ ಸದಸ್ಯರಿಂದ ದೇಶಭಕ್ತಿ ಗೀತೆಗಳು, ಕಿರಿಯ ಹಾಗೂ ಹಿರಿಯ ಸದಸ್ಯರಿಂದ ಭಾರತದ ಸ್ವಾತಂತ್ರ್ಯ ವೀರರ ಛದ್ಮವೇಷ ಸ್ಪರ್ಧೆ ಜರಗಿತು. ಮೋಹನ್ ರಾಜ್, ಚಿತ್ರಾ ಮೇಲ್ಮನೆ ಮತ್ತು ವಿದ್ಯಾ ರಾವ್ ಛದ್ಮವೇಷ ಸ್ಪರ್ಧೆಯ ತೀರ್ಪುಗಾರಗಾಗಿ ಸಹಕರಿಸಿದರು.

ಅಪರಾಹ್ನದ ನಂತರದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಯುವ ವಿಭಾಗದವರಿಂದ ಅಭಿಷೇಕ್ ಐತಾಳ್ ಮತ್ತು ಚಂದನಾ ಕಾರಂತ್ ರವರ ನಿರೂಪಣೆಯಲ್ಲಿ ಫಿಲಂ ನಾಟ್ ಸೊ ಫೇರ್ ಅವಾರ್ಡ್" (ಈiಟm ಟಿoಣ so ಜಿಚಿiಡಿ ಚಿತಿಚಿಡಿಜ) ಎಂಬ ಶೀರ್ಷಿಕೆಯಲ್ಲಿ ನಡೆದ ಹಾಸ್ಯ ಪ್ರಹಸನದಲ್ಲಿ, ಸಂಗೀತ, ನೃತ್ಯ, ಫ್ಯಾಷನ್ ಶೋ ಇತ್ಯಾದಿ, ವಲಯ ಸಮಿತಿ ಅಧ್ಯಕ್ಷರಾದ ಮೋಹನ್ ರಾಜ್ ರವರ ನಿರೂಪಣೆಯಲ್ಲಿ, ಬಾಲ ಕಲಾವೃಂದದ ಪುಟಾಣಿಗಳಿಂದ ವಿಕಟ ಕವಿ ತೆನಾಲಿ ರಾಮನ ಕಥೆಯಾಧಾರಿತ ಕಿರು ಪ್ರಹಸನ, ದೇಶ ಭಕ್ತಿ ಗೀತೆ, ಸಂಘದ ವಿವಿಧ ವಲಯಗಳ ಸದಸ್ಯರಿಂದ ತೆನಾಲಿ ರಾಮನ ಹಾಸ್ಯ ಪ್ರಸಂಗಗಳು, ಸಾಮಾಜಿಕ ಹಾಸ್ಯ ಪ್ರಹಸನ ಇತ್ಯಾದಿಗಳು ಪ್ರದರ್ಶನಗೊಂಡು ತುಂಬಿದ ಸಭಾಗೃಹದಲ್ಲಿ ನೆರೆದ ಜನರನ್ನು ನಗೆಗಡಲಲ್ಲಿ ತೇಲಿಸಿದವು. ಕೊನೆಯಲ್ಲಿ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.

 
More News

ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
"ದ ಡಾಪರ್ ಷೋ"
ಕೊಂಡೆವೂರು ಮಠಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ
ಕೊಂಡೆವೂರು ಮಠಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ

Comment Here