Wednesday 22nd, May 2024
canara news

ತುಳು ಸಂಘ ಬರೋಡ ಸಂಭ್ರಮಿಸಿದ 77ನೇ ಸ್ವಾತಂತ್ರ್ಯೋತ್ಸವ

Published On : 16 Aug 2023


(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ, ಆ.15 : ತುಳು ಸಂಘ (ರಿ.) ಬರೋಡ ಸಂಸ್ಥೆಯು ಕಳೆದ ಮಂಗಳವಾರ ಗುಜರಾತ್ ರಾಜ್ಯದ ಬರೋಡ ಇಲ್ಲಿನ ತುಳು ಚಾವಡಿ ಸಭಾಗೃಹದಲ್ಲಿ ಮಕ್ಕಳಿಂದ, ಮಕ್ಕಳಿಗಾಗಿ, ಮಕ್ಕಳು ನಿರೂಪಿಸಿದ ಕಾರ್ಯಕ್ರಮವಾಗಿಸಿ ರಾಷ್ಟ್ರಹಬ್ಬ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮೋಲ್ಲಾಸದಿಂದ ಆಚರಿಸಿದರು.

ಭಾರತದ ಭವಿಷ್ಯತ್ತಿನ ಪ್ರಜೆಗಳಾದ ಮಕ್ಕಳೇ ಮಕ್ಕಳಿಗಾಗಿ ಸಂಭ್ರಮಿಸಿದ ವೈಶಿಷ್ಟ್ಯಮಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಳು ಸಂಘ ಬರೋಡ ಇದರ ಮಕ್ಕಳ ವಿಭಾಗದ ಕಾರ್ಯಧ್ಯಕ್ಷೆ ಕು| ವೈಷ್ಣವಿ ಶೆಟ್ಟಿ ವಹಿಸಿದ್ದು, ಪಾರುಲ್ ಕಾಲೇಜ್‍ನ ವಿದ್ಯಾಥಿರ್sನಿ ವಂದನಾ ನಾರಾಯಣ ಮುಖ್ಯ ಅತಿಥಿಯಾಗಿದ್ದು ದೀಪ್ರ ಪ್ರಜ್ವಲಿಸಿ ಸಂಭ್ರಮಕ್ಕೆ ಚಾಲನೆ ನೀಡಿ ರಾಷ್ಟ್ರೀಯ ಭಾವೈಕ್ಯತೆಯಲ್ಲಿ ಮಕ್ಕಳು ತೊಡಗಿಸಿ ಕೊಳ್ಳುವಂತೆ ತಿಳಿಸಿ ಶುಭಾರೈಸಿದರು.

ಕಾರ್ಯಕ್ರಮದಲ್ಲಿ ತುಳು ಸಂಘ ಬರೋಡ ಇದರ ಗೌರವಾಧ್ಯಕ್ಷ ದಯಾನಂದ ಬೋಂಟ್ರಾ, ಅಧ್ಯಕ್ಷ ಶಶಿಧರ ಬಿ.ಶೆಟ್ಟಿ, ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಕೋಶಾಧಿಕಾರಿ ಬಾಲಚಂದ್ರ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಕ್ಕಳ ವಿಭಾಗದ ಉಪಾಧ್ಯಕ್ಷೆ ಕು| ರಕ್ಷಿಕಾ, ಮಾಧವ ಶೆಟ್ಟಿ, ಸತೀಶ್ ಶೆಟ್ಟಿ, ಮಹಾವೀರ್ ಜೈನ್, ದಿನಾಕರ್ ಶೆಟ್ಟಿ ಹಾಜರಿದ್ದು ಡಾ| ಶರ್ಮಿಳಾ ಜೈನ್ ಮತ್ತು ಮಂಜುಳಾ ಗೌಡ ಅವರ ಸಂಯೋಜನೆಯಲ್ಲಿ ಕಾರ್ಯಕ್ರಮದ ನಡೆಸಲ್ಪಟ್ಟಿತು.

ವೈಷ್ಣವಿ ಶೆಟ್ಟಿ ಸ್ವಾಗತಿಸಿದರು. ಮಾ| ಕುಶಲ್ ಗೌಡ ಮತ್ತು ಕು| ಪ್ರಾಪ್ತಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಕು| ಮಿಥಾಲಿ ಗೌಡ ವಂದಿಸಿದರು. ಸಂಘದ ಮಹಿಳೆಯರು ಮತ್ತು ಮಕ್ಕಳು ರಾಷ್ಟ್ರಪ್ರೇಮ ಸಾರುವ ವೈಶಿಷ್ಟ ಮಯ ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತ ಪಡಿಸಿದರು.

ಆ ಮೊದಲು ತುಳು ಸಂಘ ಬರೋಡ ಇದರ ಅಧ್ಯಕ್ಷ ಶಶಿಧರ ಬಿ.ಶೆಟ್ಟಿ ಅಧ್ಯಕ್ಷತೆಯಲ್ಲಿ ಸಂಘದ ವಾರ್ಷಿಕ ಮಹಾಸಭೆ ನಡೆಸಲ್ಪಟ್ಡಿತು.

 

 
More News

ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
"ದ ಡಾಪರ್ ಷೋ"
ಕೊಂಡೆವೂರು ಮಠಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ
ಕೊಂಡೆವೂರು ಮಠಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ

Comment Here