Thursday 28th, September 2023
canara news

ದೋಷ ಸರಿಪಡಿಸಿ, ಗಾಯ ಗುಣಪಡಿಸಿ ವಿಶ್ವಮಾನ್ಯ ಮಾನವರಾಗಿ,- ನಾಗರಾಜ ಬೀಜಗನಹಳ್ಳಿ

Published On : 03 Sep 2023


ಸಮಸ್ತ ಶಿಕ್ಷಕರ ಒಕ್ಕೂಟದ ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭ ಪರಿಷತ್ತು ರಿಜಿಸ್ಟರ್ಡ್ ಮೈಸೂರು ಇದರ ನಿರೂಪಕರು ಹಾಗೂ ಭಾಷಣಕಾರರ ಸಮಿತಿಯ ವ್ಯಕ್ತಿತ್ವ ವಿಕಸನ ಮಾಲಿಕೆಯ ಮೂರನೇ ರಾಜ್ಯಮಟ್ಟದ ಉಪನ್ಯಾಸ ಕಾರ್ಯಕ್ರಮದಲ್ಲಿ ಮೈಸೂರಿನ ಸಾಲಿಗ್ರಾಮದ ರಾಜ್ಯಶಾಸ್ತ್ರ ಉಪನ್ಯಾಸಕರಾದ ನಾಗರಾಜ ಬೀಜಗನಹಳ್ಳಿ ಅವರು ಉಪನ್ಯಾಸ ನೀಡಿದರು. ನಿಮ್ಮ ಭಾಗ್ಯವನ್ನು ಅನ್ವೇಶಿಸಿ ಕೊಳ್ಳಲು ಸೂಚಿಸಿದ ಅವರು ಪಾಕಿಸ್ತಾನದಿಂದ ಬರಿಗೈಯಲ್ಲಿ ಬಂದು 19 54 ರಲ್ಲಿ ಲೂಧಿಯಾನದಲ್ಲಿ ಹೀರೋ ಸೈಕಲ್ ಶಾಪ್ ಸ್ಥಾಪಿಸಿದ ಬ್ರಿಜ್ ಮೋಹನ್ ಲಾಲ್ ಅವರು ತನ್ನ 92ನೇ ವಯಸ್ಸಿನಲ್ಲಿ 40,000 ಕೋಟಿಯ ಹೀರೋ ಹೋಂಡಾ ಸಂಸ್ಥೆಯ ಒಡೆಯನಾದದನ್ನು ತಿಳಿಸಿದರು.

ಕಾರಣ ಅವಕಾಶವನ್ನು ಸದುಪಯೋಗಿಸಿಕೊಂಡು ಬೆಳೆದುದು. ಬೆಳಗಿನ ತಿಂಡಿಗೂ ಹಣವಿಲ್ಲದ, ಬಸ್ಸು-ರಸ್ತೆ ಸಂಪರ್ಕವೇ ಇಲ್ಲದ ಕೇರಳದ ವೈನಾಡಿನ ಕುಗ್ರಾಮದ ಪಿ ಸಿ ಮುಸ್ತಫ ಎಂಬ ವ್ಯಕ್ತಿ ಸಂಗ್ರಹಿಸಿದ 25 000 ದಲ್ಲಿ"ಇಡ್ಲಿ ದೋಸೆ ಫ್ರೆಶ್" ಹೋಟೆಲ್‌ನ ಮೂಲಕ ಸುಮಾರು 40 ವರ್ಷಗಳಲ್ಲಿ 50,000 ಕೋಟಿಯ ಸರದಾರನಾದನು. ಹೀಗಾಗಿ ಸೋಲೇ ಗೆಲುವಿನ ಸೋಪಾನ, ಬಂದ ಅವಕಾಶಗಳನ್ನು ಸಾಧನೆಯನ್ನಾಗಿ ಪರಿವರ್ತಿಸಿಕೊಂಡು ಜಗ್ಗದೆಯೇ, ಕುಗ್ಗದೇ ಮುಂದುವರೆದರೆ ಕೀರ್ತಿ ಶತಸಿದ್ಧ ಎಂದು ಉದಾಹರಣೆಗಳ ಮೂಲಕ ತಿಳಿಸಿದರು.

ಬಸವಕಲ್ಯಾಣದ ಕ್ಷೇತ್ರ ಶಿಕ್ಷಣಾಧಿಕಾರಿ ಚೆನ್ನಪ್ಪ ಹಳ್ಳದ ರವರ ಕಾರ್ಯಕ್ರಮವನ್ನು ಉದ್ಘಾಟಿಸಿ ಶಿಕ್ಷಕರ ಪ್ರತಿಭೆಯನ್ನು, ಗುರುತಿಸಿ, ಬೆಳೆಸಿ, ಸಾಕಷ್ಟು ಪ್ರೋತ್ಸಾಹವನ್ನು ನೀಡುತ್ತಿರುವ ಪರಿಷತ್ತಿನ ಕಾರ್ಯಗಳನ್ನು ಕೊಂಡಾಡಿದರು. ವೇದಿಕೆಯಲ್ಲಿ ಪರಿಷತ್ತಿನ ಸಂಸ್ಥಾಪಕ ಮುಖ್ಯಸ್ಥ ಮಹೇಶ್ ಪಿ., ತಾಂತ್ರಿಕ ಸಮಿತಿಯ ಮುಖ್ಯಸ್ಥ ಚಂದ್ರಶೇಖರ್ ನಾಯಕ್, ಪ್ರಧಾನ ಕಾರ್ಯದರ್ಶಿ, ಸಂತೋಷ ಬಂಡೆ, 12 ಸಮಿತಿಗಳ ಸಂಚಾಲಕಿ ಶ್ರೀಮತಿ ಉಮಾ ಗುಡ್ಡದ, ನಿರೂಪಕರ ಮತ್ತು ಭಾಷಣಕಾರರ ಸಮಿತಿಯ ಮುಖ್ಯಸ್ಥೆ ಶ್ರೀಮತಿ ಶೈಲಾಶ್ರೀ ಜೋಶಿ ಹಾಜರಿದ್ದರು. ಶ್ರೀಮತಿ ಜುಬೇದ ಬದಾಮಿ ಪ್ರಾರ್ಥಿಸಿದರು. ಶ್ರೀಮತಿ ಶಾರದ ಹಳ್ಳದ ಸ್ವಾಗತಿಸಿದರು. ಶ್ರೀಮತಿ ಶಂಕ್ರಮ್ಮ ಕುಬಸದ ಪ್ರಾಸ್ತಾವಿಕ ಮಾತುಗಳನ್ನಾಡಿ ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀಮತಿ ಕಲ್ಪನಾ ಉದ್ಘಾಟಕರನ್ನು ಪರಿಚಯಿಸಿದರು.

ಶಿಕ್ಷಕರಾದ ವೀರೇಶ್, ಚೌಡಪ್ಪ, ಸುನಿಲ್, ಆನಂದ್, ಮುತ್ತಪ್ಪ, ಸಂತೋಷ್ ಜಿ ಎನ್ ಕಾರ್ಯಕ್ರಮ ಸಂಘಟಿಸಿದರು. ರಾಯಿ ರಾಜಕುಮಾರ ಮೂಡುಬಿದಿರೆ ವಂದಿಸಿದರು.




More News

ಸೆ.30: ಮುಂಬಯಿ ವಿವಿ ಕನ್ನಡ ವಿಭಾಗದಿಂದ ಜಯ ಸಿ.ಸುವರ್ಣ ಸಂಸ್ಮರಣೆ
ಸೆ.30: ಮುಂಬಯಿ ವಿವಿ ಕನ್ನಡ ವಿಭಾಗದಿಂದ ಜಯ ಸಿ.ಸುವರ್ಣ ಸಂಸ್ಮರಣೆ
ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ,ಶ್ರೀ ಗಣೇಶ ಚತುಥಿರ್s ಆಚರಣೆ
ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ,ಶ್ರೀ ಗಣೇಶ ಚತುಥಿರ್s ಆಚರಣೆ
ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನಕ್ಕೆ ರಜತ ಸಂಭ್ರಮ ಕಾರ್ಯಾಲಯ ಉದ್ಘಾಟನೆ
ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನಕ್ಕೆ ರಜತ ಸಂಭ್ರಮ ಕಾರ್ಯಾಲಯ ಉದ್ಘಾಟನೆ

Comment Here