Monday 25th, September 2023
canara news

ತುಳು ಸಂಘ ಬರೋಡಾ ತುಳು ಚಾವಡಿಯಲ್ಲಿ ಆಯೋಜಿತ ಭಜನಾ ಕಾರ್ಯಕ್ರಮ

Published On : 31 Aug 2023   |  Reported By : Rons Bantwal


ಅಧುನಿಕ ಯುಗದ ಶ್ರವಣಕುಮಾರ್ ಪ್ರಸಿದ್ಧಿಯ ಕೃಷ್ಣ ಕುಮಾರ್‍ಗೆ ಸನ್ಮಾನ

ಮುಂಬಯಿ (ಆರ್‍ಬಿಐ), ಆ.31: ಗುಜರಾತ್ ರಾಜ್ಯದ ಬರೋಡಾ ಇಲ್ಲಿ ಸೇವಾ ನಿರತ ತುಳು ಸಂಘ ಬರೋಡಾ ಮಹಾನಗರದಲ್ಲಿನ ಇಂಡಿಯಾ ಬುಲ್ಸ್ ಮೆಘಾ ಮಾಲ್‍ನಲ್ಲಿ ತುಳು ಸಂಘ ಬರೋಡಾ ನಿರ್ಮಿತ ವಿಶ್ವದ ಪ್ರಪ್ರಥಮ ಹಾಗೂ ಏಕೈಕ ತುಳು ಚಾವಡಿಯಲ್ಲಿ ಕಳೆದ ಬುಧವಾರ (ಆ.30) ಸಂಜೆ ಭಜನಾ ಕಾರ್ಯಕ್ರಮ ಭಕ್ತಿಪೂರ್ವಕವಾಗಿ ನಡೆಸಲಾಯಿತು.

ಉದ್ಯಮಿ ಬಿ.ಆರ್ ರವಿಕುಮಾರ್ ಗೌಡ ಮತ್ತು ಕವಿತಾ ಗೌಡ ಮೂಡಿಗೆರೆ ಮತ್ತು ಪರಿವಾರದ ಪ್ರಾಯೋಜಕತ್ವ ಹಾಗೂ ತುಳು ಸಂಘ ಬರೋಡಾ ಇದರ ಗೌರವಾಧ್ಯಕ್ಷ ದಯಾನಂದ ಆರ್.ಬೋಂಟ್ರ ಅವರ ಮಾರ್ಗದರ್ಶನದಲ್ಲಿ ನಡೆಸಲ್ಪಟ್ಟ ತಿಂಗಳ ಭಜನೆಯ ವಿಶೇಷ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿüಯಾಗಿ ಉಪಸ್ಥಿತ ಚೂಡರತ್ನಮ್ಮ ಕೃಷ್ಣ ಕುಮಾರ್ ಮತ್ತು ದಕ್ಷಿಣ್‍ಮೂರ್ತಿ ಕೃಷ್ಣ ಕುಮಾರ್ ಮೈಸೂರು (ತನ್ನ ಚೇತಕ್ ಸ್ಕೂಟರ್‍ನಲ್ಲಿ ತನ್ನ ತಾಯಿಯೊಂದಿಗೆ ಭಾರತದಾದ್ಯಂತ ತೀರ್ಥಯಾತ್ರೆ ಮಾಡುತ್ತಿರುವ, ಇದೀಗಲೇ ಮಾತಾಜಿ ಜೊತೆಗೆ ಸುಮಾರು 76,150 ಕಿಮೀ ಪ್ರಯಾಣಿಸಿ ನಾಲ್ಕು ದೇಶಗಳ ಯಾತ್ರಾ ಸ್ಥಳಗಳಿಗೆ ಭೇಟಿ ನೀಡಿದ ಅಧುನಿಕ ಯುಗದ ಶ್ರವಣಕುಮಾರ್ ಪ್ರÀಸಿದ್ಧಿಯ) ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಮದನ್‍ಕುಮಾರ್ ಮೂಡುಗೆರೆ, ಕಾರ್ತಿಕ್ ಗೌಡ, ಸಂಘದ ಮಹಿಳಾ ಮುಖ್ಯಸ್ಥೆ ಡಾ| ಶರ್ಮಿಳಾ ಎಂ.ಜೈನ್ ಸ್ವಾಗತಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಎ.ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಗೌ| ಪ್ರ| ಕೋಶಾಧಿಕಾರಿ ಪಿ.ಬಾಲಚಂದ್ರ ಗೌಡ ಧನ್ಯವದಿಸಿದರು. ಉಪಸ್ಥಿತ ಭಕ್ತರು ಭಜನೆಗೈದು ಮಾತೆ ಕಟೀಲೇಶ್ವರಿಯ ಆಶೀರ್ವಾದಕ್ಕೆ ಪಾತ್ರರಾದರು.




More News

ಸೆ.30: ಮುಂಬಯಿ ವಿವಿ ಕನ್ನಡ ವಿಭಾಗದಿಂದ ಜಯ ಸಿ.ಸುವರ್ಣ ಸಂಸ್ಮರಣೆ
ಸೆ.30: ಮುಂಬಯಿ ವಿವಿ ಕನ್ನಡ ವಿಭಾಗದಿಂದ ಜಯ ಸಿ.ಸುವರ್ಣ ಸಂಸ್ಮರಣೆ
ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ,ಶ್ರೀ ಗಣೇಶ ಚತುಥಿರ್s ಆಚರಣೆ
ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ,ಶ್ರೀ ಗಣೇಶ ಚತುಥಿರ್s ಆಚರಣೆ
ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನಕ್ಕೆ ರಜತ ಸಂಭ್ರಮ ಕಾರ್ಯಾಲಯ ಉದ್ಘಾಟನೆ
ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನಕ್ಕೆ ರಜತ ಸಂಭ್ರಮ ಕಾರ್ಯಾಲಯ ಉದ್ಘಾಟನೆ

Comment Here