Wednesday 29th, May 2024
canara news

ಸೆ.03: ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬಯಿ ಇದರ ನೂತನ ಕಾರ್ಯಾಲಯದ ಶುಭಾರಂಭ ಮತ್ತು ಗುರು ಜಯಂತಿ ಆಚರಣೆ

Published On : 31 Aug 2023   |  Reported By : Rons Bantwal


ಮುಂಬಯಿ, ಅ.30: ಸಮಾಜ ಬಾಂಧವರ ಶ್ರೇಯೋಭಿವೃದ್ಧಿಗಾಗಿ ಸದಾ ಶ್ರಮಿಸುತ್ತಿರುವ ಬಿಲ್ಲವ ಸೇವಾ ಸಂಘ ಕುಂದಾಪುರ (ರಿ.) ಮುಂಬಯಿ ಉಪನಗರ ಥಾಣೆ ರೈಲ್ವೆ ನಿಲ್ದಾಣದ ಸಮೀಪ ನೌಪಾಡ ಪರಿಸರದಲ್ಲಿ ನೂತನ ಕಾರ್ಯಾಲಯ ರೂಪಿಸಿದ್ದು ಇದರ ಸೇವಾರ್ಪಣಾ ಶುಭಾರಂಭ ಮತ್ತು ಬ್ರಹ್ಮಶ್ರೀ ನಾರಾಯಣ ಗುರುವರ್ಯರ 169ನೇ ಜಯಂತ್ಯುತ್ಸವವನ್ನು ಇದೇ ಬರುವ ರವಿವಾರ (ಸೆ.03ರ) ಥಾಣೆ ಪಶ್ಚಿಮದ ನೌಪಾಡದ ಗಾಂವ್ದೇವಿ ಸಮೀಪವಿರುವ ಮುಕುಂದ್ ನಾಥು ಪಥ್ ನಲ್ಲಿರುವ `9 ಮಾನಸಿ' ಕಟ್ಟಡದ ಪ್ರಥಮ ಮಹಡಿಯಲ್ಲಿರುವ ಸಂಘದ ನೂತನ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದೆ.

   

SURESH S. POOJARI - HON. PRESIDENT    SURYA S. POOJARI - PRESIDENT

   

MANJUNATH BILLAVA SHIRURU                      N.T. POOJARI

   

.ANAND M.POOJARI                           VISHWANATH  A. POOJARI

THIMMAPPA C.POOJARI

ಸಂಘದ ಅಧ್ಯಕ್ಷ ಸೂರ್ಯ ಎಸ್.ಪೂಜಾರಿ ನೇತೃತ್ವದಲ್ಲಿ ಜರಗುವ ಕಾರ್ಯಕ್ರಮದಲ್ಲಿ ಅಂದು ಬೆಳಿಗ್ಗೆ 7.00 ಗಂಟೆಯಿಂದ ವಾಸ್ತು ಪೂಜೆ, ವಾಸ್ತು ಹೋಮ, ವಾಸ್ತು ಬಲಿ, ಗಣಹೋಮ, ಲಕ್ಷ್ಮಿ ಪೂಜೆ, ಮಂಟಪ ಶುದ್ಧಿ, ಗುರು ಪೂಜೆ ಮುಂತಾದ ಧಾರ್ಮಿಕ ವಿಧಿ-ವಿಧಾನಗಳು ನಡೆಸಲಾಗುವುದು. ಬಳಿಕ ಅತಿಥಿü ಗಣ್ಯರ ಹಸ್ತದಿಂದ ನೂತನ ಕಾರ್ಯಾಲಯದ ಉದ್ಘಾಟನೆ ನೆರವೇರಲಿದೆ ತದನಂತರ ಬ್ರಹ್ಮಶ್ರೀ ನಾರಾಯಣ ಗುರುವರ್ಯರ 169ನೇ ಜಯಂತಿ ಅಂಗವಾಗಿ ಭಜನೆ, ಮಹಾ ಮಂಗಳಾರತಿ, ತೀರ್ಥ-ಪ್ರಸಾದ ವಿತರಣೆ ಮತ್ತು ಅನ್ನ ಸಂತರ್ಪಣೆ ಜರಗಲಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ

ಸಂಘದ ಗೌರವಾಧ್ಯಕ್ಷ ಸುರೇಶ ಎಸ್.ಪೂಜಾರಿ ನೂತನ ಕಾರ್ಯಾಲಯ ಉದ್ಘಾಟಿಸಲಿದ್ದು ಅಧ್ಯಕ್ಷ ಸೂರ್ಯ ಎಸ್.ಪೂಜಾರಿ ಅಧ್ಯಕ್ಷತೆಯಲ್ಲಿ ನಡೆಸಲ್ಪಡುವ ಕಾರ್ಯಕ್ರಮದಲ್ಲಿ ಸಮಾಜದ ಗೌರವಾನ್ವಿತ ಗಣ್ಯರುಗಳಾಗಿ
ಟೆಕ್ನೋ ಫ್ಲೋ ಕನಸ್ಟ್ರ್‍ಕ್ಸನ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕ ಮಂಜುನಾಥ ಎ.ಬಿಲ್ಲವ ಶಿರೂರು (ಸಂಘದ ಮಾಜಿ ಅಧ್ಯಕ್ಷ), ಬಿಲ್ಲವ ಛೇಂಬರ್ಸ್ ಆಪ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಇದರ ಕಾರ್ಯಾಧ್ಯಕ್ಷ ಎನ್.ಟಿ.ಪೂಜಾರಿ, ಉದ್ಯಮಿ ಸುನೀಲ್ ಎಸ್.ಪೂಜಾರಿ (ಶಿವಸಾಗರ ವಿಲೇಪಾರ್ಲೆ), ಮುಂಬಯಿ ಉಚ್ಚ ನ್ಯಾಯಾಲಯದ ವಕೀಲ ನ್ಯಾ| ಆನಂದ ಎಂ.ಪೂಜಾರಿ (ಸಂಘದ ಮಾಜಿ ಅಧ್ಯಕ್ಷ), ಉದ್ಯಮಿ ವಿಶ್ವನಾಥ ಎ.ಪೂಜಾರಿ ಕೋಡಿ (ಅರುಣಾ ಟೆಕ್ಸ್‍ಟೈಲ್ಸ್ ಥಾಣೆ), ಉದ್ಯಮಿ ತಿಮ್ಮಪ್ಪ ಸಿ.ಪೂಜಾರಿ ಬಾಗಾಳಮನೆ ಏಳಜಿತ್ (ಮುಂಬಯಿ) ಮುಖ್ಯ ಅತಿಥಿüಗಳಾಗಿ ಆಗಮಿಸಲಿದ್ದು ಸಂಘದ ಮಾಜಿ ಅಧ್ಯಕ್ಷರುಗ ಳಾದ ಬಿ.ಎಂ ಬಾಳಿಕೆರೆ, ಎಸ್.ಟಿ ಕಂಡ್ಲೂರು, ಕೆ.ಡಿ ಪೂಜಾರಿ ಮತ್ತು ಎಸ್.ಟಿ ಪೂಜಾರಿ ಗೌರವ ಅತಿಥಿಧಿಗಳಾಗಿ ಆಗಮಿಸಲಿದ್ದಾರೆ.

ಸದಸ್ಯರು, ಸಮಾಜ ಬಾಂಧವರು ಹಾಗೂ ಹಿತಚಿಂತಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತೀರ್ಥ ಪ್ರಸಾದ ಸ್ವೀಕರಿಸಿ ಗುರುವರ್ಯರ ಕೃಪಾ ಕಟಾಕ್ಷಕ್ಕೆ ಪಾತ್ರರಾಗುವುದರೊಂದಿಗೆ ಕಾರ್ಯಕ್ರಮಗಳನ್ನು ಯಶಸ್ವಿ ಗೊಳಿಸಬೇಕೆಂದು ಸಂಘದ ಗೌರವಾಧ್ಯಕ್ಷ ಉಪಾಧ್ಯಕ್ಷರುಗಳಾದ ಎನ್.ಎಂ ಬಿಲ್ಲವ, ಆನಂದ ಕೆ.ಪೂಜಾರಿ ಗೌರವ ಪ್ರಧಾನ ಕಾರ್ಯದರ್ಶಿ ಅಶೋಕ ಎನ್.ಪೂಜಾರಿ, ಗೌರವ ಕೋಶಾಧಿಕಾರಿ ರಾಜಶ್ರೀ ಪಿ.ಸಾಲ್ಯಾನ್, ಜತೆ ಕಾರ್ಯದರ್ಶಿಗಳಾದ ಸುಶೀಲ ಆರ್.ಪೂಜಾರಿ, ಹರೀಶ್ ಎನ್.ಪೂಜಾರಿ, ಜತೆ ಕೋಶಾಧಿಕಾರಿಗಳಾದ ರಮೇಶ ಜಿ.ಬಿಲ್ಲವ, ರತ್ನಾಕರ ಎಸ್.ಪೂಜಾರಿ, ಮಹಿಳಾ ಸಮಿತಿ ಕಾರ್ಯಾಧ್ಯಕ್ಷೆ ಮಲ್ಲಿಕಾ ಎಸ್.ಪೂಜಾರಿ, ಯುವ ಅಭ್ಯುದಯ ಸಮಿತಿ ಕಾರ್ಯಾಧ್ಯಕ್ಷೆ ದೀಪಾ ವೈ.ಪೂಜಾರಿ, ಧಾರ್ಮಿಕ ಮತ್ತು ಸಾಮಾಜಿಕ ಸಮಿತಿಯ ಕಾರ್ಯಾಧ್ಯಕ್ಷ ಶ್ರೀಧರ ವಿ.ಪೂಜಾರಿ, ಕಾರ್ಯದರ್ಶಿ ಬಾಬು ಎ.ಪೂಜಾರಿ ಮತ್ತು ಆಡಳಿತ ಮಂಡಳಿ ಹಾಗೂ ಉಪಸಮಿತಿಗಳ ಪದಾಧಿಕಾರಿಗಳು ಮತ್ತು ಸದಸ್ಯರು ಈ ಮೂಲಕ ವಿನಂತಿಸಿದ್ದಾರೆ.

ಶ್ರೀ ನಾರಾಯಣ ಗುರುಗಳ ತತ್ವ-ಉಪದೇಶ ಗಳನ್ನು ಅಳವಡಿಸಿಕೊಂಡು ವಿದ್ಯೆಗೆ ಹೆಚ್ಚಿನ ಮಹತ್ವ ನೀಡಿ ಪ್ರತಿವರ್ಷ ಅಸಹಾಯಕ ಬಡ ವಿದ್ಯಾಥಿರ್üಗಳಿಗೆ ವಿದ್ಯಾಥಿರ್üವೇತನ, ಪ್ರತಿಭಾವಂತರಿಗೆ ಪ್ರತಿಭಾ ಪುರಸ್ಕಾರ ನೀಡುವುದಲ್ಲದೆ ಅಸಹಾಯಕ ಸಮಾಜ ಬಾಂಧವರಿಗೆ ವೈದ್ಯಕೀಯ ನೆರವು ನೀಡಿ, ವಧು-ವರರ ಅನ್ವೇಷಣೆಗೆ ಸಹಾಯ ಮಾಡುತ್ತಾ ಬಂದಿರುವ ಸಂಘವು ಸದಸ್ಯ ಬಾಂಧವರ ಸುಖ-ದುಃಖಗಳಿಗೆ ಸದಾ ಸ್ಪಂದಿಸಿ ಪ್ರಗತಿಯ ಪಥದಲ್ಲಿ ಮುನ್ನೆಡೆಯುತ್ತಾ ಪ್ರತಿ ವರ್ಷ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಯಶಸ್ವಿಯಾಗಿ ನಿರ್ವಹಿಸಿ ಸದಸ್ಯರ, ಹಿತೈಷಿಗಳ ಹಾಗೂ ಸಮಾಜ ಬಾಂಧವರ ಪ್ರಶಂಶೆಗೆ ಪಾತ್ರವಾಗಿದೆ. ಹೆಚ್ಚಿನ ಮಾಹಿತಿಗಾಗಿ ಆಡಳಿತ ಮಂಡಳಿ ಹಾಗೂ ಉಪಸಮಿತಿಗಳ ಪದಾಧಿಕಾರಿಗಳು ಮತ್ತು ಸದಸ್ಯರನ್ನು (9867811733 / 9820718785 / 9167116558) ಸಂಪರ್ಕಿಸಬಹುದು ಎಂದು ಪದಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 
More News

ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
"ದ ಡಾಪರ್ ಷೋ"
ಕೊಂಡೆವೂರು ಮಠಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ
ಕೊಂಡೆವೂರು ಮಠಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ

Comment Here