Thursday 28th, September 2023
canara news

ಸಾಯಾನ್ ; ತುಳು ಕನ್ನಡಿಗರ ಸಂಘ ಸ್ಥಾಪನೆಗೆ ಪೂರ್ವಭಾವಿ ಸಭೆ

Published On : 10 Sep 2023   |  Reported By : Rons Bantwal


ಸಮಸ್ಯೆಗಳಿಗೆ ಸ್ಪಂದಿಸಲು ಸಂಘದ ಅಗತ್ಯವಿದೆ : ಜಯರಾಮ್ ಶೆಟ್ಟಿ ಇನ್ನ

ಮುಂಬಯಿ (ಆರ್‍ಬಿಐ), ಸೆ.08: ನಾನು ಸಾಯಾನ್‍ನಲ್ಲಿ ಸುಮಾರು ನಾಲ್ಕು ದಶಕಗಳಿಂದ ಇದ್ದು, ಬೇರೆ ಬೇರೆ ಸಂಘಗಳಲ್ಲಿ ನಾನು ಸೇವನಿರತನಾಗಿದ್ದೇನೆ. ಆದರೆ ಸಾಯಾನ್ ಪ್ರದೇಶದಲ್ಲಿ ಸಮಾಜ ಸೇವೆ ಮಾಡಬೇಕು ಎಂಬ ಇಚ್ಛೆ ನನ್ನಲ್ಲಿತ್ತು. ಇಂತಹ ಆಶಯ ಸದ್ಯ ಈಡೇರುವಂತಿದೆ ಎಂದು ಅಜಂತಾ ಕ್ಯಾಟರರ್ಸ್‍ನ ಪ್ರವರ್ತಕ ಇನ್ನ ಕುರ್ಕಿಲ್‍ಬೆಟ್ಟು ಬಾಳಿಕೆ ಜಯರಾಮ ಬಿ.ಶೆಟ್ಟಿ ತಿಳಿಸಿದರು.

ಕಳೆದ ಭಾನುವಾರ ಸಾಯಾನ್ ನಿತ್ಯಾನಂದ ಸಭಾಗೃಹದಲ್ಲಿ ಸ್ಥಾನೀಯ ಪರಿಸರದ ತುಳು ಕನ್ನಡಿಗರ ಸಂಘ ಸ್ಥಾಪನೆಗೆ ನಡೆಸಲ್ಪಟ್ಟ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಜಯರಾಮ ಶೆಟ್ಟಿ ಮಾತನಾಡಿ ಸಂಘದ ಉದ್ದೇಶ ನಮ್ಮವರನ್ನು ಒಗ್ಗೂಡಿಸಿ ಜನಹಿತ ಕಾರ್ಯಗಳನ್ನು ಕೈಗೊಳ್ಳುವುದು. ಈ ಕಾರ್ಯಕ್ಕೆ ಖಂಡಿತವಾಗಿ ಎಲ್ಲರೂ ಸಹಾಯ ಮಾಡುತ್ತಾರೆ ಎಂಬ ವಿಶ್ವಾಸ ನನಗಿದೆ. ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಲು ಸಂಘದ ಅಗತ್ಯವಿದೆ. ಎಲ್ಲರೂ ಒಗ್ಗಟ್ಟಿಗೆ ಪ್ರಾಮಾಣಿಕವಾಗಿ ಕೆಲಸ ಮಾಡೋಣ ಎಂದು ನುಡಿದರು.

 

ಪ್ರಭಾದೇವಿ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದ ಟ್ರಸ್ಟಿ ಭಾಸ್ಕರ್ ಶೆಟ್ಟಿ ಇನ್ನ ಮಾತನಾಡಿ ಯಾವುದೇ ಸಂಘಟನೆಯನ್ನು ಆರಂಭಿಸಿದ ಬಳಿಕ ಅದರ ಬೆಳವಣಿಗೆಗೆ ಪೂರಕವಾಗಿ ಎಲ್ಲರೂ ಕಾರ್ಯ ನಿರ್ವಹಿಸಬೇಕು. ಸಂಘವನ್ನು ಮುನ್ನಡೆಸಲು ಎಲ್ಲರ ಸಹಕಾರ ಅಗತ್ಯ. ಸಂಸ್ಥೆಗಳಲ್ಲಿ ಮಹಿಳೆಯರ ಪಾತ್ರವೂ ಪ್ರಧಾನವಾದುದು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸಂಘದ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದರು.

ಲಕ್ಷಿ ್ಮ ಕ್ಯಾಟರರ್ಸ್ ಮಾಲಕ ಸತೀಶ್ ಶೆಟ್ಟಿ ಮಾತನಾಡಿ ಕೆಲವು ದಿನಗಳಿಂದ ಸಮಾನ ಮನಸ್ಕರಾದ ನಾವು ಸಂಘದ ಸ್ಥಾಪನೆಗಾಗಿ ಕಾರ್ಯ ಪ್ರವೃತ್ತರಾಗಿರುವೆವು. ಸಂಘ ಸಂಸ್ಥೆಗಳನ್ನು ಆರಂಭಿಸುವುದು ಬಹಳ ಸುಲಭ ಆದರೆ ಅದನ್ನು ಮುನ್ನಡೆಸುವುದು ಕಷ್ಟದ ಕೆಲಸ. ಸಂಘದ ಮೂಲಕ ಎಲ್ಲರ ಪರಿಚಯವಾಗುತ್ತದೆ. ಅಗತ್ಯತೆಯ ಸಂದರ್ಭ ಸಂಘ ಸಂಸ್ಥೆಗಳ ಸದಸ್ಯರು ಸಹಾಯಕ್ಕೆ ಧಾವಿಸುತ್ತಾರೆ. ಸಂಘಟನೆಯನ್ನು ಒಳ್ಳೆ ರೀತಿಯಲ್ಲಿ ಮುನ್ನಡೆಸುತ್ತಾ ಹೋದರೆ ಎಲ್ಲರಿಗೂ ಒಳ್ಳೆಯದು ಎಂದರು.

ಗಿರ್ನಾರ್ ಟೀ ಮಾಲಕ ಪಿ.ಧನಂಜಯ ಶೆಟ್ಟಿ ಅನಿಸಿಕೆ ವ್ಯಕ್ತ ಪಡಿಸಿ ಸಾಯಾನ್ ನಲ್ಲಿ ಸುಮಾರು 40 ವರ್ಷಗಳಿಂದ ವಾಸವಾಗಿದ್ದು ಹಲವಾರು ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದೇನೆ. ಎಲ್ಲಾ ಕಡೆ Àಂಸ್ಥೆಗಳಿವೆ ಆದರೆ ನಮ್ಮ ಪರಿಸರದಲ್ಲಿ ಏಕೆ ಇಲ್ಲ ಎಂದು ಯೋಚಿಸುತ್ತಿದ್ದೆ. ಈಗ ನಮ್ಮಲ್ಲಿ ಸಂಘಟನೆಯೊಂದು ಆರಂಭಗೊಳ್ಳುವುದು ಸಂತಸದ ವಿಷಯ ಎಂದರು.

ಗಂಗಾ ವಿಹಾರ ಸಾಯನ್ ಮಾಲಕ ಚಂದ್ರಹಾಸ್ ಶಿಮಂತೂರು ಮಾತನಾಡಿ ಈ ಪರಿಸರದಲ್ಲಿ ಸಂಘದ ಅಗತ್ಯ ಬಹಳವಿದೆ. ಸಂಘದ ಎಲ್ಲಾ ಪದಾಧಿಕಾರಿಗಳು ಪರಿಶುದ್ಧ ಮನಸ್ಸಿನಿಂದ ಕೆಲಸ ಮಾಡಬೇಕು. ಎಲ್ಲರೂ ನಿಸ್ವಾರ್ಥ ದಿಂದ ಕೆಲಸ ಮಾಡಿದಾಗ ಮಾತ್ರ ಸಂಘದ ಉನ್ನತಿ ಸಾಧ್ಯ. ಸಂಘಟನೆಗಳಿಂದ ನಮಗೆ ಬಲ ಬರುತ್ತದೆ. ಒಬ್ಬರಿಗೊಬ್ಬರ ಪರಿಚಯವಾಗುತ್ತದೆ ಎಂದರು.

ಉದ್ಯಮಿಗಳಾದ ಶಂಕರ್ ಶೆಟ್ಟಿ, ಸದಾಶಿವ ಶೆಟ್ಟಿ ಪ್ರತಿಕ್ಷಾ ನಗರ, ಪ್ರಸನ್ನ ಶೆಟ್ಟಿ, ರವೀಂದ್ರ ಶೆಟ್ಟಿ, ಮೋಹನ್ ಕೋಟ್ಯಾನ್, ಬಾಬಣ್ಣ ಶೆಟ್ಟಿ ಕೋಳಿವಾಡ, ಸದಾನಂದ ಶೆಟ್ಟಿ ಕಮಾನ್, ಪ್ರಭಾ ಎನ್. ಸುವರ್ಣ, ಚಂದ್ರ ಶೆಟ್ಟಿ, ಸಂಜೀವ ಬಂಗೇರ, ದಯಾನಂದ ಮೂಲ್ಯ, ಕೋಲಿವಾಡ ಹಾಗೂ ಕುರ್ಲಾ, ಚುನಾಭಟ್ಟಿ, ಪ್ರತಿಕ್ಷಾ ನಗರ್, ಸಾಯನ್, ಧಾರವಿ, ದಾದರ್, ಮಹಿಮ್ ಪರಿಸರದ ತುಳು-ಕನ್ನಡಿಗರು ಉದ್ಯಮಿಗಳು, ಸಮಾಜ ಸೇವಕರನೇಕರು ಉಪಸ್ಥಿತರಿದ್ದು ಸಂದರ್ಭೋಚಿತವಾಗಿ ಮಾತನಾಡಿ ಪೆÇ್ರೀತ್ಸಾಹಿಸಿದರು.
ಸಂಘಟಕ ಹ್ಯಾರಿ ಆರ್.ಸೀಕ್ವೆರಾ, ದಯಾನಂದ ಮೂಲ್ಯ, ಉಮೇಶ್ ಶೆಟ್ಟಿ ಕುಕ್ಕುಂದುರು, ಜಯಾಶೀಲ ಮೂಲ್ಯ ಸಹಕರಿಸಿದ್ದು, ಗಣ್ಯರು ದೀಪ ಬೆಳಗಿಸಿ ಸಭೆಗೆ ಚಾಲನೆ ನೀಡಿದರು. ಡಾ|ಜಿ.ಪಿ ಕುಸುಮಾ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿ ಕಾರ್ಯಕ್ರಮ ನಿರೂಪಿಸಿದರು. ಹ್ಯಾರಿ ಸೀಕ್ವೆರಾ ವಂದಿಸಿದರು.
More News

ಸೆ.30: ಮುಂಬಯಿ ವಿವಿ ಕನ್ನಡ ವಿಭಾಗದಿಂದ ಜಯ ಸಿ.ಸುವರ್ಣ ಸಂಸ್ಮರಣೆ
ಸೆ.30: ಮುಂಬಯಿ ವಿವಿ ಕನ್ನಡ ವಿಭಾಗದಿಂದ ಜಯ ಸಿ.ಸುವರ್ಣ ಸಂಸ್ಮರಣೆ
ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ,ಶ್ರೀ ಗಣೇಶ ಚತುಥಿರ್s ಆಚರಣೆ
ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ,ಶ್ರೀ ಗಣೇಶ ಚತುಥಿರ್s ಆಚರಣೆ
ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನಕ್ಕೆ ರಜತ ಸಂಭ್ರಮ ಕಾರ್ಯಾಲಯ ಉದ್ಘಾಟನೆ
ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನಕ್ಕೆ ರಜತ ಸಂಭ್ರಮ ಕಾರ್ಯಾಲಯ ಉದ್ಘಾಟನೆ

Comment Here