Monday 25th, September 2023
canara news

ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್ ನೆರವೇರಿದ ಶ್ರೀ ವಿಶ್ವಕರ್ಮ ಮಹೋತ್ಸವ

Published On : 19 Sep 2023   |  Reported By : Rons Bantwal


ಮುಂಬಯಿ, ಸೆ.17: ಬೃಹನ್ಮುಂಬಯಿಲ್ಲಿನ ಪ್ರತಿಷ್ಠಿತ ಸಂಸ್ಥೆಯಲ್ಲೊಂದಾದ ಕರ್ನಾಟಕ ವಿಶ್ವಕರ್ಮ ಅಸೋಸಿಯೇಶ ನ್ ಸಂಸ್ಥೆಯು ವಾರ್ಷಿಕವಾಗಿ ನೆರವೇರಿಸುವ ಶ್ರೀ ವಿಶ್ವಕರ್ಮ ಮಹೋತ್ಸವವನ್ನು ಇಂದಿಲ್ಲಿ ಕನ್ಯಾ ಸಂಕ್ರಮಣದ ಭಾದ್ರಪದ ಬಿದಿಗೆಯ ಭಾನುವಾರ ಮಲಾಡ್ ಪೂರ್ವದ ಮಲ್ಕಾನಿ ಎಸ್ಟೇಟ್‍ನಲ್ಲಿನ ಶ್ರೀ ಸ್ವಾಮಿ ನಾರಾಯಣ ಮಂದಿರದ ಸಭಾಗೃಹದಲ್ಲಿ ಸಂಪ್ರದಾಯಿಕವಾಗಿ ಶದ್ಧಾಭಕ್ತಿಯಿಂದ ಅದ್ದೂರಿಯಾಗಿ ನೆರವೇರಿಸಿತು.

ಉತ್ಸವದ ಅಂಗವಾಗಿ ಬೆಳಿಗ್ಗೆ ಬ್ರಹ್ಮಶ್ರೀ ಪುರೋಹಿತ ಶಂಕರನಾಥ ಆಚಾರ್ಯ ತನ್ನ ಪೌರೋಹಿತ್ಯದಲ್ಲಿ ಶ್ರೀ ವಿಶ್ವಕರ್ಮ ಹೋಮ ನೆರವೇರಿಸಿದರು. ಅಸೋಸಿಯೇಶನ್ ಉಪಾಧ್ಯಕ್ಷ ರವೀಶ್ ಜಿ. ಆಚಾರ್ಯ ಮತ್ತು ಜ್ಯೋತಿ ಆರ್.ಆಚಾರ್ಯ ದಂಪತಿ ಯಜ್ಞದ ಯಜಮಾನತ್ವ ವಹಿಸಿದ್ದರು. ವೇ| ಮೂ| ಶಂಕರ್‍ನಾಥ್ ಆಚಾರ್ಯ ಧಾರ್ಮಿಕ ಪೂಜಾಧಿಗಳನ್ನು ವಿಧಿವತ್ತಾಗಿ ನೆರವೇರಿಸಿ ತೀರ್ಥಪ್ರಸಾದವನ್ನಿತ್ತು ಅನುಗ್ರಹಿಸಿದರು. ಗೋಪಾಲಕೃಷ್ಣ ಆಚಾರ್ಯ, ಪ್ರಸನ್ನ ಆಚಾರ್ಯ, ಪೆÇರೋಹಿತ ಗೋಪಾಲಕೃಷ್ಣ ಆಚಾರ್ಯ, ಪ್ರಶಾಂತ್ ಆಚಾರ್ಯ, ಚೇತನ ಪ್ರಶಾಂತ್ ಆಚಾರ್ಯ, ಸಂತೋಷ್ ಆಚಾರ್ಯ ಮತ್ತಿತರ ಪುರೋಹಿತರು ಪೂಜಾಧಿಗಳಿಗೆ ಸಹಯೋಗದಿಂದ ಅಶೋಕ್ ಕೊಡ್ಯಡ್ಕ ನಿರ್ಮಿಸಿದ ಭವ್ಯ ದೇವರ ಮಂಟಪದಲ್ಲಿ ನೇರವೇರಿತು.

ವಿಶ್ವಕರ್ಮ ಮಹಿಳಾ ಬಳಗ ಡೊಂಬಿವಲಿ, ಶ್ರೀ ಲಲಿತಾಂಬಾ ಭಜನಾ ಮಂಡಳಿ ಬೊರಿವಲಿ, ಶ್ರೀ ವಿಶ್ವಕರ್ಮ ಕಾಳಿಕಾಂಬಾ ಭಜನಾ ವೃಂದ ಮಲಾಡ್ ಸೇರಿದಂತೆ ವಿಶ್ವಕರ್ಮ ಅಸೋಸಿಯೇಶನ್‍ನ ಪದಾಧಿಕಾರಿಗಳು, ಸದಸ್ಯರು, ಮಹಿಳಾ ವಿಭಾಗ, ಯುವ ವಿಭಾಗ, ಶೈಕ್ಷಣಿಕ-ಸಮಾಜ ಕಲ್ಯಾಣ ಸಮಿತಿ ಸದಸ್ಯರು ಹಾಗೂ ಭಕ್ತವೃಂದವು ಭಜನಾಮಹೋತ್ಸವ ನಡೆಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಅಸೋಸಿಯೇಶನ್‍ನ ಸದಸ್ಯರು, ಮಕ್ಕಳು ಶಾಸ್ತ್ರೀಯ ಮತ್ತು ವೈವಿಧ್ಯಮ ಯ ನೃತ್ಯಾವಳಿಗಳನ್ನು ಪ್ರಸ್ತುತ ಪಡಿಸಿದ್ದು, ಮಕ್ಕಳಿಗಾಗಿ ಛದ್ಮವೇಷ ಆಯೋಜಿಸಲಾಗಿತ್ತು. ಸುರೇಶ್ ಶೆಟ್ಟಿ ಪನ್ವೇಲ್ ಬಳಗವು ಭಕ್ತಿಗೀತೆ ಸಾದರ ಪಡಿಸಿತು.

ಸಂಜೆ ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಸದಾನಂದ ಆಚಾರ್ಯ ಕಲ್ಯಾಣ್ಪುರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಸಲ್ಪಟ್ಟಿದ್ದು, ಜೊತೆÀ ಕಾರ್ಯಾದರ್ಶಿಗಳಾದ ಪ್ರಸಾದ್ ಆಚಾರ್ಯ ಮತ್ತು ಶರತ್ ಜಿ. ಆಚಾರ್ಯ ಉಪಸ್ಥಿತರಿದ್ದು, ಪ್ರತಿಭಾನ್ವಿತರು ಮತ್ತು ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನಿತ್ತು, ವಿದ್ಯಾಭ್ಯಾಸ ಮತ್ತು ವೃತ್ತಿ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಮೂವರನ್ನು ಗೌರವಿಸಿ, ಅಭಿನಂದಿಸಿದರು. ಅಸೋಸಿಯೇಶನ್ ಶೈಕ್ಷಣಿಕ ಮತ್ತು ಸಮಾಜ ಕಲ್ಯಾಣ ಸಮಿತಿ ಕಾರ್ಯಾಧ್ಯಕ್ಷ ಡಾ| ಮೋಹನ್, ಅಂತರಿಕ ಲೆಕ್ಕ ಪರಿಶೋಧಕ ಅರುಣ್ ಪಿ.ಆಚಾರ್ಯ, ಸುಧೀರ್ ಜೆ, ಆಚಾರ್ಯ, ಕೆ.ವಿ ಆಚಾರ್ಯ, ಸುಂದರ ಆಚಾರ್ಯ, ಶ್ರೀಧರ ವಿ.ಆಚಾರ್ಯ ಸೇರ್ದಂತೆ ಮಹಿಳಾ ವಿಭಾಗ, ಶೈಕ್ಷಣಿಕ ಮತ್ತು ಸಮಾಜ ಕಲ್ಯಾಣ ಸಮಿತಿಯ ಸದಸ್ಯರು ಮಹೋತ್ಸವದ ಯಶಸ್ವಿಗೆ ಸಹಕಾರ ನೀಡಿದರು.

ಮಹಾಮಂಗಳಾರತಿಯೊಂದಿಗೆ ವಾರ್ಷಿಕ ಶ್ರೀ ವಿಶ್ವಕರ್ಮ ಮಹೋತ್ಸವಕ್ಕೆ ಇತಿಶ್ರೀಯನ್ನಾಡಲಾಯಿತು. ಉತ್ಸವದಲ್ಲಿ ಅಸೋಸಿಯೇಶನ್‍ನ ಮಾಜಿ ಅಧ್ಯಕ್ಷರುಗಳಾದ ಜಿ.ಟಿ ಆಚಾರ್ಯ, ನಿಟ್ಟೆ ದಾಮೋದರ ಆಚಾರ್ಯ, ಪಾದೂರು ಜನಾರ್ಧನ ಆಚಾರ್ಯ, ಮಹಾಬಲ ಎ.ಆಚಾರ್ಯ, ಕೋಶಾಧಿಕಾರಿ ಬಾಬುರಾಜ್ ಎಂ.ಆಚಾರ್ಯ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶುಭ ಸುನೀಲ್ ಆಚಾರ್ಯ, ಉಪಾಧ್ಯಕ್ಷೆ ಉಷಾ ಜಿ.ಆಚಾರ್ಯ, ಸಂಚಾಲಕರುಗಳಾದ ಸುಜತಾ ಜಿ.ಆಚಾರ್ಯ, ಅಮಿತಾ ಡಿ.ಆಚಾರ್ಯ, ಯುವ ವಿಭಾಗದ ಕಾರ್ಯಾಧ್ಯಕ್ಷ ರಾಜೇಶ್ ಎಸ್.ಆಚಾರ್ಯ, ಉಪಾಧ್ಯಕ್ಷರುಗಳಾದ ರಾಜೇಶ್ ಎ.ಆಚಾರ್ಯ ಮತ್ತು ಸಂದೇಶ್ ಜೆ.ಆಚಾರ್ಯ, ಸಂಚಾಲಕರುಗಳಾದ ಅಶ್ವತ್ ಆಚಾರ್ಯ ಮತ್ತು ಸಿದ್ದೇಶ್ ಡಿ.ಅಚಾರ್ಯ ಮುಂತಾದ ಅನೇಕ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಸೂರ್ಯ ಪುರೋಹಿತ್ ಅವರು ಮನಾಕರ್ಷಕ ಶ್ರೀ ವಿಶ್ವಕರ್ಮ ರೂಪವನ್ನು ರಚಿಸಿದ್ದರು. ರವೀಶ್ ಜಿ. ಆಚಾರ್ಯ ಸ್ವಾಗತಿಸಿದರು. ಗಣೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಪ್ರಸಾದ್ ಆಚಾರ್ಯ ಧನ್ಯವಾದಗೈದರು.
More News

ಸೆ.30: ಮುಂಬಯಿ ವಿವಿ ಕನ್ನಡ ವಿಭಾಗದಿಂದ ಜಯ ಸಿ.ಸುವರ್ಣ ಸಂಸ್ಮರಣೆ
ಸೆ.30: ಮುಂಬಯಿ ವಿವಿ ಕನ್ನಡ ವಿಭಾಗದಿಂದ ಜಯ ಸಿ.ಸುವರ್ಣ ಸಂಸ್ಮರಣೆ
ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ,ಶ್ರೀ ಗಣೇಶ ಚತುಥಿರ್s ಆಚರಣೆ
ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ,ಶ್ರೀ ಗಣೇಶ ಚತುಥಿರ್s ಆಚರಣೆ
ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನಕ್ಕೆ ರಜತ ಸಂಭ್ರಮ ಕಾರ್ಯಾಲಯ ಉದ್ಘಾಟನೆ
ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನಕ್ಕೆ ರಜತ ಸಂಭ್ರಮ ಕಾರ್ಯಾಲಯ ಉದ್ಘಾಟನೆ

Comment Here