Thursday 8th, May 2025
canara news

ವಿಜಯ ಕಾಲೇಜು ಹಳೆ ವಿದ್ಯಾಥಿರ್s ಸಂಘ ಮುಂಬಯಿ ಸಲಹಾ ಸಮಿತಿ ಸಭೆ

Published On : 19 Sep 2023   |  Reported By : Rons Bantwal


ಮುಂಬಯಿ, ಸೆ.19: ವಿಜಯ ಕಾಲೇಜಿ ಮೂಲ್ಕಿ ಹಳೆ ವಿದ್ಯಾಥಿರ್s ಅಸೋಸಿಯೆಶನ್ ಮುಂಬಯಿ ಇದರ ಸಲಹಾ ಸಮಿತಿಯ ಸಭೆಯು ಕಳೆದ ಶುಕ್ರವಾರ (ಸೆ.15) ಬೊರಿವಿಲಿ ಇಲ್ಲಿನ ಮೆಜಿಸ್ಟಿಕ್ ಎನ್‍ಎಕ್ಸ್‍ನ ಸಭಾಗೃಹದಲ್ಲಿ ನಡೆಯಿತು.

ಸಭೆಯು ಸಂಘದ ಅಧ್ಯಕ್ಷ ವಾಸುದೇವ ಸಾಲ್ಯಾನ್ ಅವರ ಅಧ್ಯಕ್ಷತೆಯಲ್ಲಿ ನೇರವೇರಿದ್ದು, ಗೌರವ ಅಧ್ಯಕ್ಷ ಆನಂದ ಶೆಟ್ಟಿ, ಉಪಧ್ಯಕ್ಷ ನ್ಯಾ| ಶೇಖರ ಭಂಡಾರಿ, ಕಾರ್ಯದರ್ಶಿ ಭಾಸ್ಕರ ಬಿ.ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಾಸುದೇವ ಸಾಲ್ಯಾನ್ ಅವರು ಮಾತನಾಡಿ ಸಂಘದ ವಾರ್ಷಿಕ ಸ್ನೇಹ ಮಿಲನ ಕಳೆದ 3ವರ್ಷಗಳಿಂದ ಕೊವೀಡ್ ಮತ್ತು ಇತರ ಕಾರಣಾಂತರಗಳಿಂದ ನಡೆಯಲಿಲ್ಲ. ಆದರೂ ಸಂಘ ಪ್ರತಿವರ್ಷ ಕಾಲೇಜಿನ ವಿದ್ಯಾಥಿರ್sಗಳಿಗೆ ನೀಡುವ ಆಥಿರ್sಕ ಸಹಾಯವನ್ನು ನೀಡುತ್ತಾ ಬಂದಿದೆ. ಇದಕ್ಕೆ ನಮ್ಮ ಮುಂಬಯಿಯಲ್ಲಿನ ಹಳೆ ವಿದ್ಯಾಥಿರ್s ಉದಾರ ಮನಸ್ಸು ಕಾರಣವಾಗಿದೆ ಎಂದರು.

ಆನಂದ ಶೆಟ್ಟಿ ಅವರು ಮಾತನಾಡಿ, ನಮ್ಮ ಅಸೋಸಿಯೇಶನ್ ಈವಾಗ ವಿಜಯ ಕಾಲೇಜು ಗ್ಲೋಬಲ್ ಅಲ್ಯೂಮ್ನಿ ಅಸೋಸಿಯೇಶನ್ ಆಗಿ ಪರಿವರ್ತನೆ ಆಗಿದೆ. ಇನ್ನೂ ಮುಂದೆ ನಾವೂ ಪ್ರಪಂಚದ ಯಾವ ಮೂಲೆಯಲ್ಲಿ ವಾಸಿಸುವ ವಿಜಯ ಕಾಲೇಜಿನ ಹಳೆ ವಿದ್ಯಾಥಿರ್sಯರನ್ನು ಸಂಘದಲ್ಲಿ ಕಾಣಬಹುದು ಮತ್ತು ಬಹಳಷ್ಟು ದೇಣಿಗೆಯನ್ನು ಕೂಡಿಸಬಹುದು. ಇದರಿಂದ ನಮ್ಮ ಕಾಲೇಜಿನ ವಿದ್ಯಾಥಿರ್sಗಳಿಗೆ ತುಂಬಾ ಪ್ರಯೋಜನ ಆಗಬಹುದು ಎಂದರು.

ಭಾಸ್ಕರ ಬಿ.ಶೆಟ್ಟಿ ಅವರು ಮಾತನಾಡಿ ಮುಂಬಯಿ ಸಮಿತಿಯು ಕಾಲೇಜಿನ ಹಲವಾರು ಬಡ ವಿದ್ಯಾಥಿರ್sಗಳಿಗೆ ಸಹಾಯ ಮಾಡುತ್ತಾ ಬಂದಿದೆ. ನಾವೂ ಮುಂದೆ ಇನ್ನಷ್ಟು ಹೆಚ್ಚಿನ ವಿದ್ಯಾಥಿರ್sಗಳಿಗೆ ಸಹಾಯ ಮಾಡುವ ಉದ್ದೇಶವನ್ನು ಇಟ್ಟುಕೊಂಡಿದ್ದೇವೆ. ಎಲ್ಲರೂ ಉದಾರ ಮನಸ್ಸಿನಿಂದ ಸಹಾಯ ಧನವನ್ನು ಮಾಡಬೇಕು ಎಂದರು.

ನ್ಯಾ| ಶೇಖರ ಭಂಡಾರಿ ಮಾತನಾಡಿ ಕಾಲೇಜಿನ ವಿದ್ಯಾಥಿರ್s ಸಂಘ ಕಡಿಮೆಯಾಗುತ್ತಾ ಬರುತ್ತಿದೆ. ಬಡ ವಿದ್ಯಾಥಿರ್sಗಳಿಗೆ ಸಹಾಯ ಮಾಡಿ ಆದಷ್ಟು ಜಾಸ್ತಿ ವಿದ್ಯಾಥಿರ್sಗಳನ್ನು ವಿಜಯ ಕಾಲೇಜ್‍ನಲ್ಲಿ ಸೇರಿಸುವ ಉದ್ದೇಶ ನಮ್ಮದಾಗಿದೆ. ಇದಕ್ಕೆ ಮುಂಬಯಿ ಮತ್ತು ಪರಿಸರದಎಲ್ಲಾ ಹಳೆ ವಿದ್ಯಾಥಿರ್sಗಳ ಉದಾರ ಮನಸ್ಸಿನಿಂದ ದೇಣಿಗೆಯನ್ನು ಪಡೆಯಬೇಕು ಎಂದರು.

ಹಳೆ ವಿದ್ಯಾಥಿರ್s, ಭಾರತ್ ಬ್ಯಾಂಕ್ ನಿರ್ದೇಶಕ ಭಾಸ್ಕರ್ ಎಂ.ಸಾಲ್ಯಾನ್, ಹಳೆ ವಿದ್ಯಾಥಿರ್sಗಳಾದ ರಮೇಶ್ ಶೆಟ್ಟಿ, ಕೆ.ಎನ್ ಸುವರ್ಣ, ಲಾರೆನ್ಸ್ ಡಿಸೋಜಾ, ಬಾಸ್ಕರ ಎಂ.ಸಾಲ್ಯಾನ್, ಸಿಎ| ಸೋಮನಾಥ ಕುಂದರ್, ಸಿಎ| ಕಿಶೋರ್‍ಕುಮಾರ್ ಸುವರ್ಣ, ಸಿಎ| ರೋಹಿತಾಕ್ಷ, ನವೀನ್‍ಚಂದ್ರ ಬಂಗೇರ,ಕೋಲ್‍ನಾಡು ಅಶೋಕ್ ಶೆಟ್ಟಿ, ನವೀನ್‍ಚಂದ್ರ ಸುವರ್ಣ, ದಾಮೋದರ ರೈ, ಸರೀತ ಎಸ್.ರಾವ್, ಉಷಾ ಶೇಖರ್ ಸೇರಿದಂತೆ ಅನೇಕ ಹಳೆ ವಿದ್ಯಾಥಿರ್sಗಳು ಉಪಸ್ಥಿತರಿದ್ದು, ಭಾಸ್ಕರ ಬಿ.ಶೆಟ್ಟಿ ಧನ್ಯವಾದಗೈದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here