Friday 8th, December 2023
canara news

15ನೇ ವಾರ್ಷಿಕ ಮಹಾಸಭೆ ಪೂರೈಸಿದ ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ

Published On : 30 Sep 2023   |  Reported By : Rons Bantwal


ಕಲಾವಿದರನ್ನು ಸಮಾಜಶ್ರೇಷ್ಠರನ್ನಾಗಿಸೋಣ : ಡಾ| ಸುರೇಂದ್ರಕುಮಾರ್ ಹೆಗ್ಡೆ
(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)

ಮುಂಬಯಿ, ಸೆ.29: ಕಲಾವಿದರಿಂದ ಕಲಾವಿದರಿಗಾಗಿ ಸ್ಥಾಪನೆಗೊಂಡ ಕನ್ನಡಿಗ ಕಲಾವಿದರ ಪರಿಷತ್ತು ಇದೀಗ ಒಂದುವರೆ ದಶಕದ ಸೇವೆಯಲ್ಲಿದೆ. ಈಗಾಗಲೇ ನಿರ್ಣಾಯಗೊಂಡಂತೆ ಸಂಸ್ಥೆಯ ಸ್ವಂತ ಕಛೇರಿಯ ಹುಡುಕಾಟ ಈಗಾಗಲೇ ಮುಗಿದಿದ್ದು ಸದ್ಯ ಸುಮಾರು ಅರ್ಧ ಕೋಟಿಯ ಒಂದು ಕಛೇರಿ ಲಭ್ಯವಾಗಿದೆ. ಈಗಾಗಲೇ ಸುಮಾರು ಹನ್ನೊಂದು ಲಕ್ಷ ಮುಂಗಡ ಪಾವತಿಸಿದ್ದೇವೆ. ಈ ಕಾಯಕಕ್ಕೆ ಸಹೃದಯರ ಸಹಯೋಗ ಅವಶ್ಯವಿದೆ. ಕಲಾಭಿಮಾನಿಗಳ ಸಹಕಾರದಿಂದ ಇದು ಶೀಘ್ರವೇ ನನಸಾಗುವ ಭರವಸೆ ನಮಗಿದೆ. ಈ ಮೂಲಕ ಕಲಾವಿದರನ್ನು ಸಮಾಜಶ್ರೇಷ್ಠರನ್ನಾಗಿಸುವ ಶ್ರಮಕ್ಕೆ ಕನ್ನಡಿಗ ಕಲಾವಿದರ ಪರಿಷತ್ತು ಪೂರಕವಾಗಲಿದೆ ಎಂದು ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಇದರ ಅಧ್ಯಕ್ಷ ಡಾ| ಸುರೇಂದ್ರಕುಮಾರ್ ಹೆಗ್ಡೆ ತಿಳಿಸಿದರು.

ಇಂದಿಲ್ಲಿ ಶನಿವಾರ ಸಂಜೆ ಸಾಂತಾಕ್ರೂಜ್ ಪೂರ್ವದಲ್ಲಿನ ಬಿಲ್ಲವ ಭವನದ ಕಿರು ಸಭಾಗೃಹದಲ್ಲಿ ಇಂದಿಲ್ಲಿ ಶನಿವಾರ ಸಂಜೆ ಸಾಂತಾಕ್ರೂಜ್ ಪೂರ್ವದಲ್ಲಿನ ಬಿಲ್ಲವ ಭವನದ ಕಿರು ಸಭಾಗೃಹದಲ್ಲಿ 15ನೇ ವಾರ್ಷಿಕ ಮಹಾಸಭೆ ನಡೆಸಿದ್ದು ದೀಪ ಬೆಳಗಿಸಿ ಸಭೆಗೆ ಚಾಲನೆಯನ್ನಿತ್ತು ಸಭಾಧ್ಯಕ್ಷತೆ ವಹಿಸಿ ಸುರೇಂದ್ರಕುಮಾರ್ ಮಾತನಾಡಿದರು.

ಪರಿಷತ್ತ್‍ನ ಉಪಾಧ್ಯಕ್ಷÀರುಗಳಾದ ಕಮಲಾಕ್ಷ ಜಿ.ಸರಾಫ್, ಶ್ರೀನಿವಾಸ ಪಿ.ಸಾಫಲ್ಯ, ಗೌ| ಪ್ರ| ಕಾರ್ಯದರ್ಶಿ ದಾಮೋದರ ಶೆಟ್ಟಿ ಇರುವೈಲು, ಗೌ| ಪ್ರ| ಕೋಶಾಧಿಕಾರಿ ಪಿ.ಬಿ ಚಂದ್ರಹಾಸ್, ಜೊತೆ ಕಾರ್ಯದರ್ಶಿ ಚಂದ್ರಾವತಿ ದೇವಾಡಿಗ, ಜೊತೆ ಕೋಶಾಧಿಕಾರಿ ನವೀನ್ ಶೆಟ್ಟಿ ಇನ್ನಬಾಳಿಕೆ, ಮಹಿಳಾಧ್ಯಕ್ಷೆ ತಾರಾ ಆರ್. ಬಂಗೇರ, ಸಂಚಾಲಕಿ ಕುಸುಮಾ ಸಿ.ಪೂಜಾರಿ ಮತ್ತಿತರ ಪದಾಧಿಕಾರಿಗಳು, ಜಿ.ಟಿ ಆಚಾರ್ಯ, ಕೊಲ್ಯಾರು ರಾಜು ಶೆಟ್ಟಿ, ವಿ.ಕೆ ಸುವರ್ಣ, ಚಂದ್ರಶೇಖರ ರಾವ್ ವೇದಿಕೆಯಲ್ಲಿದ್ದರು.

ದಾಮೋದರ ಶೆಟ್ಟಿ ಇರುವೈಲು ವಾರ್ಷಿಕ ವರದಿ ಮಂಡಿಸಿದರು. ಪಿ.ಬಿ ಚಂದ್ರಹಾಸ್ ಗತವಾರ್ಷಿಕ ಲೆಕ್ಕಪತ್ರಗಳನ್ನು ಮಂಡಿಸಿದರು. ಜಗದೀಶ್ ಡಿ.ರೈ ಅವರನ್ನು ಲೆಕ್ಕಪರಿಶೋಧಕರನ್ನಾಗಿ ಹಾಗೂ ರಾವ್ ಎಂಡ್ ಅಶೋಕ್ ಚಾರ್ಟರ್ಡ್ ಅಕೌಂಟೆಂಟ್ಸ್ ಇವರನ್ನು ಬಾಹ್ಯ ಲೆಕ್ಕಪರಿಶೋಧಕರನ್ನಾಗಿ ಸಭೆಯು ಸರ್ವಾನುಮತದಿಂದ ಆಯ್ಕೆಗೊಳಿಸಿತು.

ಸಂಘದ ಸದಸ್ಯರನೇಕರು ಹಾಜರಿದ್ದು ಸಭೆಯಲ್ಲಿನ ಡಾ| ಸತೀಶ್ ಎನ್.ಬಂಗೇರ, ಡಾ| ಬಿ.ಆರ್ ಮಂಜುನಾಥ್, ಕೆ.ಕೆ ಶೆಟ್ಟಿ, ಗುರುರಾಜ್ ಎನ್.ನಾಯಕ್, ಕೆ.ಮಂಜುನಾಥಯ್ಯ, ಅನಿಲ್ ಹೆಗ್ಡೆ, ಅಮಿತಾ ಜತ್ತನ್, ಮಧುಸೂದನ ಟಿ.ಆರ್, ವೀಣಾ ಸುವರ್ಣ, ದೇವಲ್ಕುಂದ ಭಾಸ್ಕರ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಪ್ರೇಮನಾಥ್ ಆರ್.ಕುಕ್ಯಾನ್, ಪದ್ಮನಾಭ ಸಸಿಹಿತ್ಲು ಮತ್ತಿತರ ಸದಸ್ಯರು ಮಾತಾನಾಡಿ ಸಲಹೆ ಸೂಚನೆಗಳನ್ನು ನೀಡಿ ಸಂಘದ ಅಭ್ಯುದಯಕ್ಕೆ ಹಾರೈಸಿದರು. ಡಾ| ಬಿ.ಆರ್ ಮಂಜುನಾಥ್ ಪ್ರಾರ್ಥನೆಯನ್ನಾಡಿದರು. ಚಂದ್ರಾವತಿ ದೇವಾಡಿಗ ಧನ್ಯವದಿಸಿದರು.

 




More News

ಹಳೆ ವಿದ್ಯಾರ್ಥಿಗಳ ಸಂಘ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡೇರಿ
ಹಳೆ ವಿದ್ಯಾರ್ಥಿಗಳ ಸಂಘ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡೇರಿ
ಪೆರ್ಮಂಕಿಗುತ್ತು ರಿತೇಶ್ ಪಕ್ಕಳ ಅವರಿಗೆ ಪಿಹೆಚ್‍ಡಿ ಪದವಿ
ಪೆರ್ಮಂಕಿಗುತ್ತು ರಿತೇಶ್ ಪಕ್ಕಳ ಅವರಿಗೆ ಪಿಹೆಚ್‍ಡಿ ಪದವಿ
ಇಪ್ಪತ್ತ್ತರನೇ ವಾರ್ಷಿಕ ಮಹಾಸಭೆ ಪೂರೈಸಿದ ಗಾಣಿಗ ಸಮಾಜ ಮುಂಬಯಿ
ಇಪ್ಪತ್ತ್ತರನೇ ವಾರ್ಷಿಕ ಮಹಾಸಭೆ ಪೂರೈಸಿದ ಗಾಣಿಗ ಸಮಾಜ ಮುಂಬಯಿ

Comment Here