Saturday 4th, May 2024
canara news

ಬಂಟ್ಸ್ ಸಂಘ ಮುಂಬಯಿ ಕುರ್ಲಾ-ಭಾಂಡೂಪ್ ಪ್ರಾದೇಶಿಕ ಸಮಿತಿ ವಾರ್ಷಿಕ ಸಹಮಿಲನ

Published On : 01 Oct 2023   |  Reported By : Rons Bantwal


ಸಾಧನೆಯೊಂದಿಗೆ ಬಂಟರ ಐಕ್ಯತೆ ವಿಶ್ವಮಾನ್ಯ ಗೊಳಿಸೋಣ : ಚಂದ್ರಹಾಸ ಕೆ.ಶೆಟ್ಟಿ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)


ಮುಂಬಯಿ, ಸೆ.30: ಸಮಯ ಪ್ರಜ್ಞೆವಂತರಾಗಿ ಸೇವೆ ಸಲ್ಲಿಸುವಲ್ಲಿ ಕೆಬಿಆರ್ ಸಮಿತಿ ಮುಂಚೂಣಿಯಲ್ಲಿದೆ. ಸಂಘ ಸಂಸ್ಥೆಗಳಲ್ಲಿ ಹೊಗಳುವುದನ್ನು ಅಭ್ಯಾಸ ಮಾಡುವುದು ನನ್ನಂತವರಿಗೆ ಕಷ್ಟದ ಕೆಲಸ. ನನ್ನ ಪ್ರಕಾರ ನಿಷ್ಠೆಯಿಂದ ಕೆಲಸ ಮಾಡಿ ಹೊಗಳಿಕೆ ಪಡೆಯುವುದು ಒಳಿತು. ಸ್ವಾರ್ಥದ ಸೇವೆಯಲ್ಲಿ ಸಂಘಸಂಸ್ಥೆಗಳನ್ನು ನಿಭಾಯಿಸುವುದೇ ದೊಡ್ಡ ಸಾಧನೆಯಾಗಿದೆ. ಬಂಟರಲ್ಲಿನ ಎಲ್ಲ ಸಮಿತಿಗಳಲ್ಲಿ ಪ್ರತಿಭಾನ್ವಿತರಿದ್ದಾರೆ. ಇವುಗಳನ್ನು ಇನ್ನಷ್ಟು ಉಜ್ವಲವಾಗಿಸುವ ಕೆಲಸವನ್ನು ನಾವೆಲ್ಲರೂ ಒಗ್ಗಟ್ಟಾಗಿ ನಿಭಾಯಿಸೋಣ. ಈ ಮೂಲಕ ಬಂಟರ ಸಾಧನೆ, ಪ್ರಸಿದ್ಧಿಯನ್ನು ವಿಶ್ವಮಾನ್ಯ ಗೊಳಿಸೋಣ ಎಂದು ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಚಂದ್ರಹಾಸ ಕೆ.ಶೆಟ್ಟಿ ತಿಳಿಸಿದರು.

ಬಂಟ್ಸ್ ಸಂಘ ಮುಂಬಯಿ ಇದರ ಕುರ್ಲಾ ಭಾಂಡೂಪ್ ಪ್ರಾದೇಶಿಕ ಸಮಿತಿಯು ತನ್ನ 2023ನೇ ವಾರ್ಷಿಕ ಸಹಮಿಲನವನ್ನು ಇಂದಿಲ್ಲಿ ಶನಿವಾರ ಕುರ್ಲಾ ಪೂರ್ವದ ಚುನ್ನಾಭಟ್ಟಿ ಇಲ್ಲಿನ ಬಂಟರ ಭವನದ ಶ್ರೀಮತಿ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸಭಾಗೃಹದಲ್ಲಿನ ದಿ| ಎಣ್ಣೆಹೊಳೆ ಸುಧಾಕರ ಶೆಟ್ಟಿ ವೇದಿಕೆಯಲ್ಲಿ ನೆರವೇರಿಸಿದ್ದು ಚಂದ್ರಹಾಸ ಶೆಟ್ಟಿ ದೀಪ ಪ್ರಜ್ವಲಿಸಿ ಸಹಮಿಲನಕ್ಕೆ ಚಾಲನೆಯನ್ನಿತ್ತು ಸಭಾಧ್ಯಕ್ಷತೆ ವಹಿಸಿ ಮಾತನಾಡಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿsಯಾಗಿ ಬಂಟ್ಸ್ ಸಂಘದ ಉನ್ನತ ಶಿಕ್ಷಣ ಸಮಿತಿ ಕಾರ್ಯದರ್ಶಿ ಸಿಎ| ವಿಶ್ವನಾಥ ಶೆಟ್ಟಿ, ಗೌರವ ಅತಿಥಿsಗಳಾಗಿ ಉನ್ನತ ಶಿಕ್ಷಣ ಸಮಿತಿ ಉಪಾಧ್ಯಕ್ಷ ಆದರ್ಶ್ ಬಿ.ಶೆಟ್ಟಿ, ಮಾತೃಭೂಮಿ ಕೋ. ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್‍ನ ಕಾರ್ಯದರ್ಶಿ ಪ್ರವೀಣ್ ಭೋಜ ಶೆಟ್ಟಿ ಉಪಸ್ಥಿತರಿದ್ದು ಡಾ| ಸುನೀತಾ ಎಂ.ಶೆಟ್ಟಿ ಮತ್ತು ನಾರಾಯಣ ಶೆಟ್ಟಿ ನಂದಳಿಕೆ (ಸಾಹಿತ್ಯ), ಸ್ವರೂಪ್ ಹೆಗ್ಡೆ, ಕನ್ನಡ ಭವನ ಎಜ್ಯುಕೇಶನ್ ಸೊಸೈಟಿ ಹೈಸ್ಕೂಲ್ ಮತ್ತು ಜೂನಿಯರ್ ಕಾಲೇಜು ಪ್ರಾಂಶುಪಾಲೆ ಅಮೃತಾ ಅಜಯ್ ಶೆಟ್ಟಿ (ಶಿಕ್ಷಣ), ಕನ್ನಡ ಸಿನಿನಟ ಪ್ರತೀಕ್ ಶೆಟ್ಟಿ (ಚಲನಚಿತ್ರ) ಇವರಿಗೆ ಸನ್ಮಾನಿಸಿ ಗೌರವಿಸಿ ಅಭಿನಂದಿಸಿದರು.

ಬಂಟ್ಸ್ ಸಂಘದ ಉಪಾಧ್ಯಕ್ಷ ರತ್ನಾಕರ ಶೆಟ್ಟಿ ಮುಂಡ್ಕೂರು, ಗೌ| ಪ್ರ| ಕಾರ್ಯದರ್ಶಿ ಡಾ| ಆರ್.ಕೆ ಶೆಟ್ಟಿ, ಗೌ| ಕೋಶಾಧಿಕಾರಿ ಸಿಎ| ಹರೀಶ್ ಡಿ.ಶೆಟ್ಟಿ, ಜತೆ ಕಾರ್ಯದರ್ಶಿ ದಿವಾಕರ್ ಶೆಟ್ಟಿ ಇಂದ್ರಾಳಿ, ಜತೆ ಕೋಶಾಧಿಕಾರಿ ಮುಂಡಪ್ಪ ಎಸ್.ಪಯ್ಯಡೆÀ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಮಾ ಕೃಷ್ಣ ಶೆಟ್ಟಿ, ಮಧ್ಯ ಪ್ರಾದೇಶಿಕ ಸಂಯೋಜನ ಸಮಿತಿ ಕಾರ್ಯಾಧ್ಯಕ್ಷ ಗುಣಪಾಲ್ ಆರ್.ಶೆಟ್ಟಿ ಐಕಳ, ಕೆಬಿಆರ್ ಸಮಿತಿ ಕಾರ್ಯಾಧ್ಯಕ್ಷ ಹರೀಶ್ ಎ.ಶೆಟ್ಟಿ, ಉಪಾಧ್ಯಕ್ಷ ಗಿರೀಶ್ ಆರ್.ಶೆಟ್ಟಿ, ಕಾರ್ಯದರ್ಶಿ ಸಂತೋಷ್ ಶೆಟ್ಟಿ, ಕೋಶಾಧಿಕಾರಿ ಭರತ್ ಶೆಟ್ಟಿ, ಜತೆ ಕಾರ್ಯದರ್ಶಿ ಭರತ್ ವಿ.ಶೆಟ್ಟಿ, ಜತೆ ಕೋಶಾಧಿಕಾರಿ ಸೀತಾರಾಮ ಶೆಟ್ಟಿ, ಮಹಿಳಾ ವಿಭಾಗಧ್ಯಕ್ಷೆ ಸಂಗೀತ ಸಿ.ಶೆಟ್ಟಿ, ಯುವ ವಿಭಾಗಧ್ಯಕ್ಷೆ ವಿಕಾಸ್ ರೈ ಮತ್ತಿತರ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.

ವಿಶ್ವನಾಥ ಶೆಟ್ಟಿ ಮಾತನಾಡಿ ಸಮಾಜ ಸೇವೆ, ಉತ್ಸವ, ಆಚರಣೆಗಳ ಶ್ರಮದಿಂದ ಅನುಭವ ಜಾಸ್ತಿಯಾತ್ತ್ತದೆ. ಸಾಮಾಜಿಕ ಸಂಸ್ಥೆಗಳಲ್ಲಿ ಸ್ಥಾನ ಪಡೆಯುವುದು ಸುಲಭ. ಆದರೆ ಸಮರ್ಪಣಾ ತಂಡವು ಸಮರ್ಪಕವಾಗಿ ಶ್ರಮಿಸಿದಾಗ ಮಾತ್ರ ಸಂಸ್ಥೆಯ ಮುನ್ನಡೆ ಸುಲಭ ಸಾಧ್ಯವಾಗುವುದು. ಸೇವಾ ಮನೋಭಾವ ಮೈಗೂಡಿಸಿದಾಗಲೇ ನಿಸ್ವಾರ್ಥ ಸೇವೆ ಮೌಲ್ಯಯುತವಾಗುವುದು ಎಂದರು.

ಕಳೆದ ಮೂರು ವರ್ಷಗಳ ಅದೂ ಕೋವಿಡ್ ಸಂಕಷ್ಟ ಕಾಲಾವಧಿಯಲ್ಲಿ ಈ ಸಮಿತಿ ಅನನ್ಯ ಸೇವೆಗೈದಿದೆ. ಇದೆಲ್ಲವೂ ಜನಹಿತ ಪುಣ್ಯದ ಸೇವೆಗಳಾಗಿ ಉಳಿಯಲಿದೆ. ಈ ಸಮಿತಿಯು ಪ್ರಚಾರಕ್ಕಿಂತ ಹೆಚ್ಚಾಗಿ ಕಾಯಕಕ್ಕೆ ಮಹತ್ವ ನೀಡುತ್ತಿರುವುದು ಪ್ರಶಂಸನೀಯ ಎಂದು ಆದರ್ಶ್ ಬಿ.ಶೆಟ್ಟಿ ನುಡಿದರು.

ಪ್ರವೀಣ್ ಶೆಟ್ಟಿ ಮಾತನಾಡಿಸಮಾಜದ ಏಳಿಗೆಗಾಗಿ ಬದುಕಿದ ಬಂಟರು ವೀರರು ಶೂರರು ಎಂದೇ ಪ್ರಸಿದ್ಧರು. ಬಂಟರ ಸಂಘದ ಪ್ರಾದೇಶಿಕ ಸಮಿತಿಗಳು ಮಾತೃ ಸಂಸ್ಥೆಯ ನವರತ್ನಗಳಾಗಿವೆ. ಸೇವೆಯನ್ನೇ ಸಾಧನೆಯನಾಗಿಸಿದ ಬಂಟರು ಎಲ್ಲರಿಗೂ ಮಾದರಿ. ಸಾಮಾಜಿಕ ಕ್ಷೇಮಾಭಿವೃದ್ಧಿ ಬಂಟರಲ್ಲಿನ ಹೃದಯಶೀಲತೆಯಾಗಿದ್ದು ಈ ಬಂಟರ ಸಂಘ ವಿಶ್ವ ಪ್ರಸಿದ್ಧಿ ಪಡೆಯಲು ಈ ಪ್ರಾದೇಶಿಕ ಸಮಿತಿಗಳ ಪಾತ್ರ ಹಿರಿದಾಗಿದೆ ಎಂದರು.

ಕೆಬಿಆರ್‍ಯಲ್ಲಿ ಪ್ರತಿಭಾನ್ವಿತರ ಖಜಾನೆನೇ ಇದೆ. ಎಲ್ಲಾ ರಂಗದಲ್ಲೂ ಸಾಧಕರೆಣಿಸಿದ ಈ ಪ್ರಾದೇಶಿಕ ಸಮಿತಿ ಸಂಪ್ರದಾಯಕ್ಕೆ ಒತ್ತು ನೀಡುತ್ತಿದ್ದು ಯುವ ವಿಭಾಗವು ಬಹಳಷ್ಟು ಸಶಕ್ತವಾಗಿದೆ. ಎಲ್ಲರಿಗೂ ಅಭಿನಂದನೀಯ ಎಂದು ಗುಣಪಾಲ್ ಶೆಟ್ಟಿ ತಿಳಿಸಿದರು.

ಡಾ| ಆರ್.ಕೆ ಶೆಟ್ಟಿ ಮಾತನಾಡಿ ಕೆಬಿಆರ್ ವಿಭಿನ್ನತೆಗೆ ಸಾಕ್ಷಿಯಾದ ವೈಶಿಷ್ಟ ್ಯಮಯ ಸಮಿತಿಯಾಗಿದೆ. ನಾರಾಯಣ ನಂದಳಿಕೆ ಪರಿವಾರವು ಮೂರು ಪೀಳಿಗೆಗಳನ್ನು ಒಗ್ಗೂಡಿಸಿ ಬಂಟರಲ್ಲಿನ ಕಲೆ, ಸಂಸ್ಕೃತಿ, ಪರಂಪರೆಯನ್ನು ಅನಾವರಣಗೊಳಿಸಿ ಯುವ ಪೀಳಿಗೆಯನ್ನು ಸಮಾಜದ ಜೊತೆ ಬೆಸೆಯುತ್ತಿರುವುದು ಸ್ತುತ್ಯರ್ಹ ಎಂದರು.

ಖೇಲೋ ಇಂಡಿಯಾ ಸ್ಪರ್ಧಿ ಮಾ| ಅಕ್ಷಯ್ ಶೆಟ್ಟಿ (ಕ್ರೀಡಾಪಟು), ಮಿಶ್ರ ಮಾರ್ಷಲ್ ಆರ್ಟ್ಸ್ ಮಾ| ರೋಶನ್ ಸಂಜೀವ ಶೆಟ್ಟಿ (ಅಂತರರಾಷ್ಟ್ರೀಯ ಆಟಗಾರ,), ಮಿಶ್ರ ಮಾರ್ಷಲ್ ಆರ್ಟ್ಸ್‍ನ ರಾಷ್ಟ್ರೀಯ ಆಟಗಾರ ಮಾ| ಪ್ರಥಮೇಶ್ ಜೆ.ಶೆಟ್ಟಿ ಇವರಿಗೆ ದಿ| ಸುಮಲತಾ ಶೆಟ್ಟಿ ಕಾಂಜೂರ್‍ಮಾರ್ಗ ಸ್ಮರಣಾರ್ಥ ಕೊಡಮಾಡುವ ಕೆಬಿಆರ್ ಬೆಸ್ಟ್ ಟ್ಯಾಲೆಂಟ್ ಪ್ರಶಸ್ತಿಯನ್ನು ಹಾಗೂ ಕೆಬಿಆರ್ ಸದಸ್ಯತ್ವ ಸಮಿತಿ ಕಾರ್ಯಾಧ್ಯಕ್ಷೆ ಶಾಂತಾ ಎನ್.ಶೆಟ್ಟಿ ನಂದಳಿಕೆ, ವೈವಾಹಿಕ ಸಮಿತಿ ಕಾರ್ಯಧ್ಯಕ್ಷ ಕೃಷ್ಣ ಶೆಟ್ಟಿ, ಕ್ರೀಡಾ ಸಮಿತಿ ಕಾರ್ಯಾಧ್ಯಕ್ಷೆ ವಾಣಿ ಶೆಟ್ಟಿ ಇವರಿಗೆ ದಿ| ಸುಜಾತಾ ಆಳ್ವ ಕಾಂಜೂರ್‍ಮಾರ್ಗ ಸ್ಮರಣಾರ್ಥ ಕೆಬಿಆರ್ ಶ್ರೇಷ್ಠ ಅಭಿನಯ ಪ್ರಶಸ್ತಿಗಳನ್ನು ಅತಿಥಿüಗಳು ಪ್ರದಾನಿಸಿ ಗೌರವಿಸಿದರು.

ಮಿಸ್ಟರ್ ಬಂಟ್ಸ್-ಮಿಸ್ ಬಂಟ್ಸ್ ವಿಜೇತರಾದ ಸ್ವಸ್ತಿಕ್ ಶೆಟ್ಟಿ, ಪ್ರಥಮೇಶ್ ಶೆಟ್ಟಿ ಮತ್ತು ಯುವಿಕಾ ಸ್ಪರ್ಧೆಯ ಕು| ತನಿಷ್ಕಾ ಶೆಟ್ಟಿ ಇವರಿಗೆ ಹಾಗೂ ಸ್ಪರ್ಧಾ ವಿಜೇತ ಕೆಬಿಆರ್ ನಾಟಕ ತಂಡವನ್ನು ಹಾಗೂ ಕೆಬಿಆರ್ ಕಾರ್ಯಾಧ್ಯಕ್ಷ ಹರೀಶ್ ಎ.ಶೆಟ್ಟಿ ಮತ್ತು ರೇಷ್ಮಾ ಹರೀಶ್ ದಂಪತಿಯನ್ನು ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಇದೇ ಸಂದರ್ಭ ಕೆಬಿಆರ್‍ನ ನೂತನ ಭಾವರೂಪದ `ಬರವುದ ತೇರ್' ಎಂಬ ಕಾರ್ಯಕ್ರಮ ಮುಖೇನ ಸಮಾಜ ಬಾಂಧವ ವಿದ್ಯಾಥಿರ್üಗಳಿಗೆ ಶಿಕ್ಷಣಕ್ಕೆ ನೆರವು ನೀಡಿ ವಿದ್ಯಾರ್ಜನೆಗೆ ಆಥಿರ್üಕವಾಗಿ ಆಶಕ್ತ ಮಕ್ಕಳ ದತ್ತು ಸ್ವೀಕಾರ ನಡೆಸಿದರು. ಸರೋಜ ಶೆಟ್ಟಿ ಕಾರ್ಯಕ್ರವದ ಬಗ್ಗೆ ತಿಳಿಸಿ ಫಲಾನುಭವಿಗಳ ಯಾದಿ ವಾಚಿಸಿದರು.

ಎಸ್ಸಾರ್ ಫೈನಾನ್ಶಿಯಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್‍ನ ಡಾ| ಆರ್.ಕೆ ಶೆಟ್ಟಿ ಇವರ ಸಹ ಪ್ರಾಯೋಜಕತ್ವದಲ್ಲಿ ಪ್ರಾದೇಶಿಕ ಸಮಿತಿಯ ಸದಸ್ಯರು, ಮಕ್ಕಳು, ಯುವ ವಿಭಾಗ ಹಾಗೂ ಮಹಿಳಾ ವಿಭಾಗದ ಸದಸ್ಯೆಯರು ವೈವಿಧ್ಯಮಯ ನೃತ್ಯಾವಳಿಗಳನ್ನು ಸಾದರ ಪಡಿಸಿದರು. ಹೆಸರಾಂತ ಸಾಹಿತಿ, ನಾಟಕಕಾರ ನಂದಳಿಕೆ ನಾರಾಯಣ ಶೆಟ್ಟಿ ಅವರ ಪರಿಕಲ್ಪನೆ ರಚನೆ, ನಿರ್ದೇಶನದಲ್ಲಿ ಮನೋಹರ್ ಶೆಟ್ಟಿ ನಂದಳಿಕೆ ಅವರ ಸಮಗ್ರ ನಿರ್ವಹಣೆ ನವೀನ್ ಶೆಟ್ಟಿ ಇನ್ನ ಬಾಳಿಕೆ ಅವರ ಸಹಕಾರದೊಂದಿಗೆ ಸದಸ್ಯರು "ತುಳುನಾಡ್ದ ಕಟ್ಟ ಕಟ್ಟಲೆ"ಎಂಬ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿದರು.

ಕು| ಚೇತನಾ ಶೆಟ್ಟಿ ಗಣಪತಿ ಸ್ತುತಿಗೈದರು. ವನಿತಾ ಶೆಟ್ಟಿ ಪ್ರಾರ್ಥನೆಯನಾಡಿದರು. ಬಂಟಗೀತೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಹರೀಶ್ ಎ.ಶೆಟ್ಟಿ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿ ಅತಿಥಿüಗಳಿಗೆ ಗೌರವಿಸಿದರು. ಅಕ್ಷಯ್ ತಾರನಾಥ್ ಶೆಟ್ಟಿ ಮತ್ತು ಕಾವ್ಯ ವಿಠಲ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಗಿರೀಶ್ ಆರ್.ಶೆಟ್ಟಿ ಧನ್ಯವದಿಸಿದರು. ಸಂತೋಷ್ ಶೆಟ್ಟಿ, ಸಂಗೀತ ಸಿ.ಶೆಟ್ಟಿ, ವಿಕಾಸ್ ರೈ ಸಮಿತಿಯ ಸೇವಾ ವೈಖರಿಯನ್ನು ತಿಳಿಸಿದರು. ವೀಣಾ ಶೆಟ್ಟಿ, ಸರೋಜಿನಿ ಎಸ್.ಶೆಟ್ಟಿ, ಭೂಮಿಕಾ ಶೆಟ್ಟಿ ಪುರಸ್ಕೃತರÀನ್ನು ಪರಿಚಯಿಸಿದರು.

 




More News

ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
"ದ ಡಾಪರ್ ಷೋ"
ಕೊಂಡೆವೂರು ಮಠಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ
ಕೊಂಡೆವೂರು ಮಠಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ

Comment Here