Saturday 4th, May 2024
canara news

ಭಾರತ್ ಬ್ಯಾಂಕ್‍ನ 2023-28 ಸಾಲಿನ ನಿರ್ದೇಶಕ ಮಂಡಳಿ ಚುನಾವಣೆ

Published On : 02 Oct 2023   |  Reported By : Rons Bantwal


ಮೂರು ರಾಜ್ಯಗಳ ಶಾಖೆಗಳ ಮತದಾನ ಕೇಂದ್ರಗಳಲ್ಲಿ ನಡೆದ ಚುನಾವಣಾ ಪ್ರಕ್ರಿಯೆ

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ (ಆರ್‍ಬಿಐ), ಅ.02: ರಾಷ್ಟ್ರದ ಪ್ರತಿಷ್ಠಿತ ಹಣಕಾಸು ಸಂಸ್ಥೆ ಬೃಹನ್ಮುಂಬಯಿಯಲ್ಲಿ ತುಳು ಕನ್ನಡಿಗರ ಬ್ಯಾಂಕ್ ಎಂದೇ ಪರಿಚಿತ ಭಾರತ್ ಕೋ.ಆಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ಇದರ 2023-28ರ ಆಡಳಿತ (ನಿರ್ದೇಶಕ) ಮಂಡಳಿಗೆ ಸ್ಪರ್ಧೆ ಏರ್ಪಟ್ಟು ಇಂದಿಲ್ಲಿ ಮಂಗಳವಾರ ಚುನಾವಣೆ ನಡೆಸಲ್ಪಟ್ಟಿತು.

ಹದಿನೇಳು ಸಾಮಾನ್ಯ ಸ್ಥಾನಗಳು, ಎರಡು ಮಹಿಳಾ ಸ್ಥಾನಗಳು ಮತ್ತು ಒಂದು ಹಿಂದುಳಿದ ಜಾತಿ-ಪರಿಶಿಷ್ಟ ವರ್ಗದ ಸ್ಥಾನ ಹಾಗೂ ಇಬ್ಬರು ಸಹ ಸದಸ್ಯ (ಕೋ.ಆಪ್ಟೆಡ್) ಸ್ಥಾನ ಹೊಂದಿರುವ ಬ್ಯಾಂಕ್‍ನ ಒಟ್ಟು ಇಪ್ಪತ್ತೆರಡು ಸ್ಥಾನಗಳ ನಿರ್ದೇಶಕ ಮಂಡಳಿಗೆ ಸಹ ಸದಸ್ಯ ಸ್ಥಾನ ಹೊರತು ಪಡಿಸಿ ಸ್ಪರ್ಧೆಗೆ ಸುಮಾರು 49 ಆಕಾಂಕ್ಷಿಗಳು ನಾಮಪತ್ರ ಸಲ್ಲಿಸಿದ್ದರು. ಅಂತಿಮವಾಗಿ 40 ಉಮೇದುವಾರರು ಸ್ಪರ್ಧಾ ಕಣದಲ್ಲಿದ್ದು ಚುನಾವಣೆ ಎದುರುಗೊಂಡಿತು.

ಬಿಲ್ಲವರ ಅಸೋಸಿಯೇಶನ್‍ನ ಅಧ್ಯಕ್ಷ ಹರೀಶ್ ಜಿ.ಪೂಜಾರಿ ನೇತೃತ್ವದಲ್ಲಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಪ್ಯಾನೆಲ್‍ನಿಂದ ಸಾಮಾನ್ಯ ವರ್ಗದಿಂದ ಅವಿೂನ್ ಲಿಂಗಪ್ಪ ವೆಂಕಪ್ಪ, ಕೋಟ್ಯಾನ್ ಪುರುಷೋತ್ತಮ ಶ್ರೀನಿವಾಸ್, ಪೂಜಾರಿ ನಾರಾಯಣ ತಿಮ್ಮ, ಪೂಜಾರಿ ಕೊರಗಪ್ಪ ಬೂಬ, ಸಾಲಿಯಾನ್ ರಾಜಾ ವೊಡಿ ಪೂಜಾರಿ, ಮಹಿಳಾ ಸ್ಥಾನದಿಂದ ಕರ್ಕೇರ ಶಾರದ ಸೂರು (ಹಾಲಿ ನಿರ್ದೇಶಕರು), ಅವಿೂನ್ ನವೀನ್‍ಚಂದ್ರ ರಾಜು, ಅಂಚನ್ ಸುರೇಶ್ ರಘುನಾಥ್, ಸುವರ್ಣ ರೋಹಿತ್ ಮೋಹನ್‍ಚಂದ್ರ (ಮಾಜಿ ನಿರ್ದೇಶಕರು), ಕೋಟ್ಯಾನ್ ಕೇಶವ ಕುಡ್ಪ, ಕೋಟ್ಯಾನ್ ರವಿ ಜಾರಪ್ಪ, ಕುಂದರ್ ಹರಿಶ್ಚಂದ್ರ ಗೋಪಾಲ್, ಪೂಜಾರಿ ಜಯ ವಿಠಲ್, ಪೂಜಾರಿ ರಿತೇಶ್‍ಕುಮಾರ್ ಧರ್ಮಣ್ಣ, ಸಾಲ್ಯಾನ್ ಅನಿಲ್ ಬಾಬು, ಸಾಲಿಯಾನ್ ರತ್ನಾಕರ್ ನಾರಾಯಣ್, ಸುವರ್ಣ ರವೀಂದ್ರ ರಾಜು, ವಿಜಯ್ ಕುಮಾರ್ ಸದಾನಂದ್ ಜಿ.ಪಿ ಸ್ಪರ್ಧಿಸಿದ್ದು, ಮಹಿಳಾ ಸ್ಥಾನದಿಂದ ಅಂಚನ್ ನೀತಾ ಮಾಧವ್ ಸ್ಪರ್ಧಿಸಿದ್ದರು.

ಹಾಲಿ ನಿರ್ದೇಶಕ ಸೂರ್ಯಕಾಂತ ಜಯ ಸುವರ್ಣ ಸಾರಥ್ಯದಲ್ಲಿ ಜಯ ಸಿ.ಸುವರ್ಣ ಪ್ಯಾನೆಲ್‍ನಿಂದ ಸಾಮಾನ್ಯ ವರ್ಗದಿಂದ ಅಮೀನ್ ಸೋಮನಾಥ್ ಬಾಬು, ಕೋಟ್ಯಾನ್ ಜಯ ಐತಪ್ಪ, ಪೂಜಾರಿ ಗಂಗಾಧರ ಜಾರಪ್ಪ, ಸಾಲಿಯಾನ್ ಭಾಸ್ಕರ್ ಮುದ್ದು, ಸುವರ್ಣ ಸೂರ್ಯಕಾಂತ ಜಯ (ಹಾಲಿ ನಿರ್ದೇಶಕರು), ಕೋಟ್ಯಾನ್ ಅಶೋಕ್ ಮುತ್ತಪ್ಪ, ಪೂಜಾರಿ ಚಂದ್ರಶೇಖರ ಸೋಮಪ್ಪ, ಪೂಜಾರಿ ಮೋಹನ್‍ದಾಸ ಗಿರಿ (ಮಾಜಿ ನಿರ್ದೇಶಕರು), ಪೂಜಾರಿ ನರೇಶ್ ಕೃಷ್ಣ, ಪೂಜಾರಿ ನಿರಂಜನ್ ಲಕ್ಷ್ಮಣ್, ಪೂಜಾರಿ ಸಂತೋಷ್ ಕಾಂತಪ್ಪ, ಪೂಜಾರಿ ದಯಾನಂದ ರಾಜು, ಪೂಜಾರಿ ಗಣೇಶ್ ದೇಜು, ಪೂಜಾರಿ ಹರೀಶ್ ವಿಠಲ್, ಸುವರ್ಣ ನಾರಾಯಣ ಲೋಕಾಯ, ಸುವರ್ಣ ನಾರಾಯಣ ಕಾರ್ನಾಡ್ ವೆಂಕಟಪ್ಪ, ಸುವರ್ಣ ಸುರೇಶ್ ಬೆಚ್ಚಾ, ಮಹಿಳಾ ಸ್ಥಾನದಿಂದ ಬಂಗೇರ ಆಶಾ ರಾಜೇಶ್ ಸಾಲಿಯಾನ್, ಜಯಲಕ್ಷಿ ್ಮ ಪ್ರೇಮಾನಂದ ಸ್ಪರ್ಧಿಸಿದ್ದರು.

ಸ್ವತಂತ್ರ ಅಭ್ಯಥಿರ್üಗಳಾಗಿ ಡಾ| ಬಂಗೇರಾ ಸತೀಶ್ ನಾರಾಯಣ್ ಮತ್ತು ಸತೀಶ್ ಬಂಗೇರಾ ಜಗನ್ನಾಥ್ ಕಣದಲ್ಲಿದ್ದರು. ಹಿಂದುಳಿದ ಜಾತಿ-ಪರಿಶಿಷ್ಟ ವರ್ಗದ ಸ್ಥಾನಕ್ಕೆ ಹಾಲಿ ನಿರ್ದೇಶಕ ಅನ್ಬಲಗನ್ ಸಿ.ಹರಿಜನ ಅವರೊಬ್ಬರೇ ನಾಮಪತ್ರ ಸಲ್ಲಿಸಿದ ಕಾರಣ ಅವರು ಸರ್ವಾನುಮತದಿಂದ ಆಯ್ಕೆ ಆಗಿರುವರು.

ಬೆಳಿಗ್ಗಿನಿಂದ ಸಂಜೆ ವರೆಗೆ ನಡೆದ ಮತದಾನದಲ್ಲಿ ಹೆಚ್ಚಿನ ಮತದಾನ ಕೇಂಂದ್ರಗಳಲ್ಲಿ ಬಿರುಸಿನ ಮತ್ತು ಶಾಂತಿಯುತ ಮತದಾನ ನಡೆದಿದ್ದು ಬ್ಯಾಂಕ್‍ನ ಷೇರುದಾರರು ವಿಶೇಷವಾಗಿ ಹಿರಿಯ ನಾಗರೀಕರು ಮತ್ತು ಯುವ ಜನತೆ ಬೆಳಗಿನಿಂದಲೇ ಆಯಾಯ ಮತದಾನ ಕೇಂದ್ರಕ್ಕೆ ಆಗಮಿಸಿ ಮತದಾನಗೈದರು. ಎಲ್ಲೆಡೆ ಶಾಂತವಾಗಿಯೇ ಮತದಾನ ನಡೆದಿದ್ದು ಸಂಜೆ ವೇಳೆಗೆ ಸುಮಾರು 15,000 ಮತಗಳು ಚಲಾವಣೆ ಗೊಂಡಿವೆ ಎಂದು ಬಿಸಿಬಿ ಮೂಲಗಳಿ ತಿಳಿಸಿದೆ.

ಒಟ್ಟು 1,79,349 ಮತಗಳ ಮತದಾನಕ್ಕಾಗಿ ಬ್ಯಾಂಕ್‍ನ ಆಯಾಯ ಶಾಖೆಗಳಲ್ಲೇ ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಮುಂಬಯಿ ಹಾಗೂ ಉಪನಗರದದ್ಯಾಂತ (ಪಶ್ಚಿಮ ಪ್ರಥಮ ದಕ್ಷಿಣ 3 ಕೇಂದ್ರಗಳಲ್ಲಿ 5 ಬೂತ್‍ಗಳು, ಪಶ್ಚಿಮ ದ್ವಿತೀಯ 10 ಕೇಂದ್ರಗಳÀÀಲ್ಲಿ 20 ಬೂತ್‍ಗಳು, ಪಶ್ಚಿಮ ತೃತೀಯ ಅಪ್ಪರ್ ಸಬರ್ಬ್ 9 ಕೇಂದ್ರಗಳÀÀಲ್ಲಿ 12 ಬೂತ್‍ಗಳು, ಪಶ್ಚಿಮ ಚತುರ್ಥ ಉತ್ತರ ಮುಂಬಯಿ 7 ಕೇಂದ್ರಗಳÀÀಲ್ಲಿ 8 ಬೂತ್‍ಗಳು, ಹರ್ಬರ್ ಸೆಂಟ್ರಲ್ 3 ಕೇಂದ್ರಗಳÀÀಲ್ಲಿ 5 ಬೂತ್‍ಗಳು, ಸೆಂಟ್ರಲ್ 8 ಕೇಂದ್ರಗಳÀÀಲ್ಲಿ 12 ಬೂತ್‍ಗಳು, ಥಾಣೆ 3 ಕೇಂದ್ರಗಳÀÀಲ್ಲಿ 3 ಬೂತ್‍ಗಳು, ನವಿಮುಂಬಯಿ 4 ಕೇಂದ್ರಗಳÀÀಲ್ಲಿ 4 ಬೂತ್‍ಗಳು, ಭಿವಂಡಿ 2 ಕೇಂದ್ರಗಳÀÀಲ್ಲಿ 3 ಬೂತ್‍ಗಳು, ಡೊಂಬಿವಿಲಿ / ದಿವಾ 2 ಕೇಂದ್ರಗಳÀÀಲ್ಲಿ 4 ಬೂತ್‍ಗಳು ರಚಿಸಲಾಗಿತ್ತು. ಮಹಾರಾಷ್ಟ್ರದ ಪುಣೆ ಇಲ್ಲಿನ 4 ಕೇಂದ್ರಗಳÀÀಲ್ಲಿ 4 ಬೂತ್‍ಗಳು, ನಾಸಿಕ್-ಶಿರ್ಡಿ 2 ಕೇಂದ್ರಗಳÀÀಲ್ಲಿ 2 ಬೂತ್‍ಗಳು, ಕರ್ನಾಟಕ ರಾಜ್ಯದದ್ಯಾಂತದ ಬೆಂಗಳೂರು 4 ಕೇಂದ್ರಗಳÀÀಲ್ಲಿ 7 ಬೂತ್‍ಗಳು, ಮಂಗಳೂರು 11 ಕೇಂದ್ರಗಳÀÀಲ್ಲಿ 17 ಬೂತ್‍ಗಳು, ಬೆಳಗಾವಿ 1 ಕೇಂದ್ರದ 1 ಬೂತ್, ಹುಬ್ಬಳ್ಳಿ 1 ಕೇಂದ್ರದ 1 ಬೂತ್ ಮತ್ತು ಗುಜರಾತ್ ರಾಜ್ಯದ 5 ಕೇಂದ್ರಗಳÀÀಲ್ಲಿ 5 ಬೂತ್‍ಗಳೊಂದಿಗೆ ಒಟ್ಟು 79 ಕೇಂದ್ರಗಳಲ್ಲಿ 113 ಬೂತ್‍ಗಳನ್ನು ನಿರ್ಮಿಸಲಾಗಿತ್ತು.

ಇದೇ ಬುಧವಾರ (ಅ.04) ಮುಂಬಯಿ ಗೋರೆಗಾಂವ್ ಪೂರ್ವದ ಸೋನಾವಣೆ ರಸ್ತೆಯಲ್ಲಿನ ಬ್ರಿಜ್‍ವಾಸಿ ಪ್ಯಾಲೇಸ್ ಸಭಾಗೃಹದಲ್ಲಿ ಬೆಳಿಗ್ಗೆಯಿಂದ ಮತ ಎಣಿಕೆ ನಡೆಸಿ ಸಂಜೆ ವೇಳೆಗೆ ಸ್ಪರ್ಧಿಗಳ ಫಲಿತಾಂಶ ಪ್ರಕಟವಾಗುವ ನಿರೀಕ್ಷೆಯಿದೆ. ಗುರುವಾರ (ಅ.05) ಬ್ರಿಜ್‍ವಾಸಿ ಸಭಾಗೃಹದಲ್ಲೇ ಸಂಜೆ ನಡೆಯಲಿರುವ ಬ್ಯಾಂಕ್‍ನ ವಿಶೇಷ ಮಹಾ ಸಭೆಯಲ್ಲಿ ಬ್ಯಾಂಕ್ ಮಂಡಳಿಯ ನೂತನ ನಿರ್ದೇಶಕರ ಆಯ್ಕೆ ಅಧಿಕೃತವಾಗಿ ಚುನಾವಣಾಧಿಕಾರಿಗಳು ಬಹಿರಂಗ ಪಡಿಸಲಿದ್ದಾರೆ ಎಂದು ಬ್ಯಾಂಕ್ ಮೂಲಗಳು ತಿಳಿಸಿದೆ.

 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here