Saturday 4th, May 2024
canara news

ಮುಂಬಯಿ ; ಮದರ್ ಇಂಡಿಯಾ ಎಕ್ಸ್ ಸ್ಟೂಡೆಂಟ್ಸ್ ಫೌಂಡೇಶನ್ ವಾರ್ಷಿಕ ಮಹಾಸಭೆ

Published On : 02 Oct 2023   |  Reported By : Rons Bantwal


ವಿದ್ಯಾಥಿರ್ಗಳ ಜ್ಞಾನಸಂಪಾದನೆಗೆ ಪ್ರೇರಣೆ ಅತ್ಯವಶ್ಯ : ಸುರೇಂದ್ರ ಎ.ಪೂಜಾರಿ
(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)

ಮುಂಬಯಿ, ಅ.01: ಜ್ಞಾನಾರ್ಜನೆಗೆ ಪ್ರೇರಣೆ ನೀಡುವ ಸೇವೆ ಎಂದೂ ವಿಫಲವಾಗದು. ಆದ್ದರಿಂದ ವಿದ್ಯಾಥಿರ್üಗ ಳ ಜ್ಞಾನಸಂಪಾದನೆಗೆ ಪ್ರೇರಣೆ ಅತ್ಯವಶ್ಯ. ಶೈಕ್ಷಣಿಕ ಸೇವೆಯ ಮನೋಭಾವ ಸಮಾಜದ ಒಳಿತಿಗೆ ಕಾರಣವಾಗುತ್ತಿದ್ದು ಇದರಿಂದ ಮನುಕುಲದ ನೈತಿಕ ಮೌಲ್ಯಗಳಿಗೆ ಪ್ರೇರಣೆ ನೀಡಿದಂತಾಗುವುದು. ನಮ್ಮ ಫೌಂಡೇಶನ್‍ನ ಉದ್ದೇಶವೂ ವಿದ್ಯಾಥಿರ್ü ತಳಹದಿ ಉತ್ತಮ ಭವಿಷ್ಯದ ಬುನಾದಿ ಹಾಕಲು ಸಹಕರಿ ಆಗಬೇಕು. ಸೇವಾ ಸಂಸ್ಥೆಗಳ ಮುನ್ನಡೆಗೆ ಆತ್ಮಸ್ಥೈರ್ಯವೂ ಅಗತ್ಯವಾಗಿದೆ ಎಂದು ಮದರ್ ಇಂಡಿಯಾ ಎಕ್ಸ್ ಸ್ಟೂಡೆಂಟ್ಸ್ ಫೌಂಡೇಶನ್‍ನ ಅಧ್ಯಕ್ಷ ಸುರೇಂದ್ರ ಎ.ಪೂಜಾರಿ ತಿಳಿಸಿದರು.

ಇಂದಿಲ್ಲಿ ಆದಿತ್ಯವಾರ ಪೂರ್ವಾಹ್ನ ಮುಂಬಯಿ ಕೋಟೆಯಲ್ಲಿನ ಮದರ್ ಇಂಡಿಯಾ ಎಕ್ಸ್ ಸ್ಟೂಡೆಂಟ್ಸ್ ಫೌಂಡೇಶನ್ ತನ್ನ ಪ್ರಥಮ ವಾರ್ಷಿಕ ಮಹಾಸಭೆ ನಡೆಸಿದ್ದು ಸಭೆಗೆಚಾಲನೆಯನ್ನಿತ್ತು ಸಭಾಧ್ಯಕ್ಷತೆ ವಹಿಸಿ ಸುರೇಂದ್ರ ಪೂಜಾರಿ ಮಾತನಾಡಿದರು.

ಎಂಐಎಎಫ್ ಉಪಾಧ್ಯಕ್ಷರುಗಳಾದ ಉಮೇಶ್ ಶೆಟ್ಟಿ, ಯಶವಂತ್ ಎನ್.ಪೂಜಾರಿ, ಗೌರವ ಪ್ರಧಾನ ಕಾರ್ಯದರ್ಶಿ ಹರೀಶ್ ಜಿ.ಮೈಂದಾನ್, ಗೌ| ಕೋಶಾಧಿಕಾರಿ ಟಿ.ವಿ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಮಹಾಸಭೆಯಲ್ಲಿ ವರದಿ ಮಂಡನೆ, ಲೆಕ್ಕ ಪಟ್ಟಿಗಳ ಮಂಜೂರಾತಿ ನಡೆಸಲಾಗಿ ಫೌಂಡೇಶನ್‍ನ ಮುಂದಿನ ಕಾರ್ಯಯೋಜನೆಗಳ ಬಗ್ಗೆ ಚರ್ಚೆ ನಡೆಸಿ ಸೇವಾ ನಿರ್ಣಯಗಳನ್ನು ತೆಗೆದು ಕೊಳ್ಳಲಾಯಿತು.

ಎಂಐಎಎಫ್ ಕಾರ್ಯಕ್ರಮ ಸಮಿತಿ ಕಾರ್ಯಾಧ್ಯಕ್ಷ ಸದಾನಂದ ಶೆಟ್ಟಿ, ಉಪ ಕಾರ್ಯಾಧ್ಯಕ್ಷ ಸಂತೋಷ್ ಶೆಟ್ಟಿ, ಗೌ| ಕಾರ್ಯದರ್ಶಿ ಜಯರಾಂ ಎಂ.ಪೂಜಾರಿ, ಧನ ಸಂಗ್ರಹ ಸಮಿತಿ ಕಾರ್ಯಾಧ್ಯಕ್ಷ ಮಂಜುನಾಥ ಕೆ.ಪೂಜಾರಿ, ಉಪ ಕಾರ್ಯಾಧ್ಯಕ್ಷ ಯಶವಂತ್ ಎನ್.ಪೂಜಾರಿ, ಗೌ| ಕಾರ್ಯದರ್ಶಿ ಡಾ| ಹರೀಶ್ ಪೂಜಾರಿ ಹಾಜರಿದ್ದರು.

ಸದಸ್ಯರಾಗಿದ್ದು ಸ್ವರ್ಗೀಯರಾದ ಶಂಕರ್ ಶೆಟ್ಟಿ ಅವರಿಗೆ ಮೌನ ಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಕೋರಲಾಯಿತು. ಹರೀಶ್ ಜಿ.ಮೈಂದಾನ್ ಸಂಸ್ಥೆಯ ಸೇವೆಯನ್ನು ತಿಳಿಸಿದರು. ಟಿ.ವಿ ಪೂಜಾರಿ ಗತ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಅಶೋಕ ಎಸ್.ಸುವರ್ಣ ಸ್ವಾಗತಿಸಿದರು. ಗತ ವಾರ್ಷಿಕ ಮಹಾಸಭೆ ವರದಿ ವಾಚಿಸಿ ಧನ್ಯವದಿಸಿದರು.

 

 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here