Friday 8th, December 2023
canara news

ಶ್ರೀ ಮಾತಾ ವೈಷ್ಣೋೀದೇವಿ ಯಕ್ಷ ಧ್ರುವ ಪಟ್ಲ ಪೌಂಡೇಷನ್ ಸಾಂಸ್ಕೃತಿಕ ಕಾರ್ಯಕ್ರಮ

Published On : 20 Oct 2023   |  Reported By : Rons Bantwal

ಮುಂಬಯಿ,(ಅರ್‍ಬಿಐ) ಅ.20: ಶ್ರೀ ಮಾತಾ ವೈಷ್ಣೋೀದೇವಿ ಶ್ರೈನ್ ಬೋರ್ಡ್ ಕಟ್ರಾ, ಜಮ್ಮು ಕಾಶ್ಮೀರ ಪ್ರತಿ ವರ್ಷ ನವರಾತ್ರಿಯಲ್ಲಿ ಆಯೋಜಿಸುವ ಒಂಭತ್ತು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮದ ರಾಷ್ಟ್ರೀಯ ಭಕ್ತಿ ಗೀತೆಗಳ ಸ್ಪರ್ಧೆಗಳ ಉದ್ಘಾಟನಾ ಸಮಾರಂಭದಲ್ಲಿ ಯಕ್ಷ ಧ್ರುವ ಪಟ್ಲ ಪೌಂಡೇಷನ್ ಅವರ ದೇವಿಮಹಾತ್ಮೆ ಯಕ್ಷಗಾನ ಮತ್ತು ಕಳಂಜದ ನಿನಾದ ಸಾಂಸ್ಕೃತಿಕ ಕೇಂದ್ರದಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು. ತಾಯಿ ವೈಷ್ಣೋದೇವಿಯ ಪದತಳ ಜಮ್ಮುವಿನ ಕಟ್ರಾದಲ್ಲಿ ಮೊದಲ ಬಾರಿಗೆ ನವರಾತ್ರಿ ಉತ್ಸವದ ಪ್ರಥಮ ದಿನ ಜಮ್ಮುವಿನ ಸಾಂಸ್ಕೃತಿಕ ಸಚಿವಾಲಯದ ಸಹಯೋಗದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ಮಂಗಳೂರಿನ ವತಿಯಿಂದ ಪಾವಂಜೆ ಮೇಳದ ಕಲಾವಿದರಿಂದ ದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ ನಡೆಯಿತು. ಜಮ್ಮುವಿನ ವಿದ್ಯುತ್ ಸಚಿವಾಲಯದ ಪ್ರಿನ್ಸಿಪಲ್ ಸೆಕ್ರೆಟರಿ ರಾಜೇಶ್ ಪ್ರಸಾದ್ ಅವರ ನೇತೃತ್ವದಲ್ಲಿ ಒಕ್ಟೋಬರ್ 2ರಂದು ಕಾಶ್ಮೀರದ ಶ್ರೀನಗರದಲ್ಲಿ ನಡೆದ ಯಕ್ಷಗಾನ ಪ್ರದರ್ಶನ ಕಂಡು ಪುಲಕಿತರಾದ ಮಾನ್ಯ ಗವರ್ನರ್ ಮನೋಜ್ ಸಿನ್ಹಾ ಅವರು ವೈಷ್ಣೋದೇವಿ ಸನ್ನಿಧಾನದಲ್ಲಿ ಯಕ್ಷಗಾನ ಪ್ರದರ್ಶನ ನಡೆಸಿಕೊಡುವಂತೆ ಆಗ್ರಹಿಸಿದರು. ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ನೇತೃತ್ವದ ಕಲಾವಿದರ ತಂಡ ಹಿಂದಿಯಲ್ಲಿ ದೇವಿ ಮಹಾತ್ಮೆ ಪ್ರದರ್ಶನ ನೀಡಿ ಕಟ್ರಾದ 2000 ಕ್ಕೂ ಮಿಗಿಲಾಗಿ ಸೇರಿದ ಜನಸ್ತೋಮಕ್ಕೆ ರಸದೌತಣ ಉಣಬಡಿಸಿ ಮಹಿಷಾಸುರ ವಧೆಯ ಕಥೆಯನ್ನು ಸೊಗಸಾಗಿ ವರ್ಣಿಸಿದರು. ಟೂರಿಸಮ್ ಇಲಾಖೆಯ ಮುಖ್ಯ ಕಾರ್ಯದರ್ಶಿ ಅರುಣ್ ಮೆಹ್ತಾ ಅವರು ಮುಖ್ಯ ಅತಿಥಿsಗಳಾಗಿ ಆಗಮಿಸಿ ನವರಾತ್ರಿಯ ದುರ್ಗೆಯ ವೈಭವವನ್ನು ವರ್ಣಿಸಿ ನಮ್ಮ ನಿತ್ಯ ಜೀವನದಲ್ಲೂ ದುಷ್ಟ ಶಿಕ್ಷೆ ಶಿಷ್ಟ ರಕ್ಷೆಯ ಕುರಿತು ನೆರೆದ ಸಭಿಕರನ್ನುದ್ದೇಶಿಸಿ ಮಾತನಾಡಿದರು. ತುಳು ಸಂಘ ಬರೋಡಾ ಅಧ್ಯಕ್ಷ ಶಶಿಧರ ಬಿ.ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ತದನಂತರ ದೆಹಲಿ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ, ಸುಳ್ಯದ ತಂಟೆಪ್ಪಾಡಿಯ ನಿನಾದ ಸಾಂಸ್ಕೃತಿಕ ಕೇಂದ್ರದ ಮುಖ್ಯ ರೂವಾರಿ ವಸಂತ ಶೆಟ್ಟಿ ಬೆಳ್ಳಾರೆ ಅವರ ತಂಡದ ವಿದ್ಯಾರ್ಥಿಗಳು ತುಳು-ಕನ್ನಡ ಶಾಸ್ತ್ರೀಯ ಸಂಗೀತದ ಪದಗಳಿಗೆ ಭರತನಾಟ್ಯ ಪ್ರದರ್ಶನ ನೀಡಿ ನೆರೆದ ಕಲಾ ರಸಿಕರ ಮನ ಗೆದ್ದರು. ಟ್ರಸ್ಟಿ ಹಿತೈಷಿ ಮತ್ತು ದೆಹಲಿ ಯಕ್ಷಧ್ರುವ ಪಟ್ಲ ಘಟಕದ ಕಾರ್ಯದರ್ಶಿ ಪೃಥ್ವಿ ಶೆಟ್ಟಿ ಕಾರಿಂಜೆ ಕಾರ್ಯಕ್ರಮ ನಿರೂಪಿಸಿದರು. ಈ ಮೂಲಕ ಕರ್ನಾಟಕದ ಗ್ರಾಮೀಣ ಕಲೆಯ ಪ್ರಕಾರಗಳು ಮೊದಲ ಬಾರಿಗೆ ದೇಶದ ಮುಕುಟವಾದ ಜಮ್ಮುವಿನ ತಾಯಿ ವೈಷ್ಣೋೀದೇವಿ ಪದಕಮಲಗಳಿಗೆ ಸಮರ್ಪಿತಗೊಂಡಿತು

More News

ಹಳೆ ವಿದ್ಯಾರ್ಥಿಗಳ ಸಂಘ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡೇರಿ

ಪೆರ್ಮಂಕಿಗುತ್ತು ರಿತೇಶ್ ಪಕ್ಕಳ ಅವರಿಗೆ ಪಿಹೆಚ್‍ಡಿ ಪದವಿ

ಇಪ್ಪತ್ತ್ತರನೇ ವಾರ್ಷಿಕ ಮಹಾಸಭೆ ಪೂರೈಸಿದ ಗಾಣಿಗ ಸಮಾಜ ಮುಂಬಯಿ

Comment Here