Saturday 13th, July 2024
canara news

ಬಿಲ್ಲವ ಭವನದಲ್ಲಿ ವಿದ್ಯಾದಾಯಿನಿ ಸಭಾದ ಶತಮಾನೋತ್ಸವದ ಸಮಾರೋಪ

Published On : 01 Nov 2023   |  Reported By : Rons Bantwal


ಮುಂಬಯಿ, ನ. 01- ವಿದ್ಯಾದಾಯಿನಿ ಸಭಾ ಸಾವಿರಾರು ಮಂದಿ ವಿದ್ಯಾಥಿರ್sಗಳಿಗೆ ವಿದ್ಯಾ ದಾನವನ್ನು ನೀಡಿದ ಸಂಸ್ಥೆಯಾಗಿದೆ. ಕೆನರಾ ವಿದ್ಯಾದಾಯಿನಿ ರಾತ್ರಿ ಶಾಲೆಯ ಮೂಲಕ ಶಿಕ್ಷಣವಂತರಾದವರು ಅಪಾರ ಮಂದಿ ಉತ್ತಮ ನಾಗರಿಕರಾಗಿ, ಉನ್ನತ ಹುದ್ದೆಯೊಂದಿಗೆ ಸಮಾಜದಲ್ಲಿ ಉತ್ತಮ ಸ್ಥಾನ-ಮಾನವನ್ನು ಪಡೆದಿರುತ್ತಾರೆ. ಪ್ರತಿಯೊಂದು ನೋವು, ಒಂದು ಪಾಠವನ್ನು ಕಲಿಸುತ್ತದೆ. ಪ್ರತಿಯೊಂದು ಪಾಠ ವ್ಯಕ್ತಿಯನ್ನು ಬದಲಿಸುತ್ತದೆ. ಅಂತಹ ನೂರು ವ್ಯಕ್ತಿಗಳು ಒಂದು ಸಂಸ್ಥೆಯ ಚಿತ್ರಣವನ್ನು ಬದಲಿಸಲು ಸಾಧ್ಯ. ಎಲ್ಲರೂ ಜೊತೆ ಸೇರಿ ಹೊಸ ಚಿಂತನೆಯೊಂದಿಗೆ ವಿದ್ಯಾದಾಯಿನಿ ಸಭಾಗೆ ಹೊಸ ಕಾಯಕಲ್ಪ ನೀಡಬೇಕು. ಇಡೀ ಜಗತ್ತನ್ನು ಬದಲಾಯಿಸುವ ಅತ್ಯಂತ ಶಕ್ತಿಶಾಲಿ ಅಸ್ತ್ರ ಶಿಕ್ಷಣ ಮಾತ್ರ ಆಗಿರುತ್ತದೆ ಎಂದು ವಿದ್ಯಾದಾಯಿನಿ ಸಭಾ (ರಿ.)ದ ಅಧ್ಯಕ್ಷ ಪುರುಷೋತ್ತಮ ಎಸ್. ಕೋಟ್ಯಾನ್ ಹೇಳಿದರು.

ಅವರು ಸಾಂತಾಕ್ರೂಜ್ ಪೂರ್ವದ ಬಿಲ್ಲವ ಭವನದಲ್ಲಿ ವಿದ್ಯಾದಾಯಿನಿ ಸಭಾ (ರಿ.)ದ ಶತಮಾನೋತ್ಸವ ಸಂಭ್ರಮಾಚರಣೆಯ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಅತಿಥಿsಗಳಾಗಿ ಜಯ ಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಅಧ್ಯಕ್ಷ ಎಲ್. ವಿ. ಅಮೀನ್, ಪುಣೆ ಬಿಲ್ಲವ ಸೇವಾ ಸಂಘ ಅಧ್ಯಕ್ಷ ವಿಶ್ವನಾಥ್ ಪೂಜಾರಿ ಕಡ್ತಲ, ಆದಿತ್ಯ ಬಿರ್ಲಾದ ಉಪಾಧ್ಯಕ್ಷ ಅಶೋಕ್ ಸುವರ್ಣ, ವಿಶ್ವನಾಥ್ ಪೂಜಾರಿ ಕಡ್ತಲ, ಭಾರತ್ ಬ್ಯಾಂಕ್ ಮಾಜಿ ನಿರ್ದೇಶಕ ರಾಜಾ ವಿ.ಸಾಲ್ಯಾನ್, ಭಾರತ್ ಬ್ಯಾಂಕಿನ ಮಾಜಿ ನಿರ್ದೇಶಕಿ ಶಾರದಾ ಸೂರು ಕರ್ಕೇರ, ಬಿಲ್ಲವರ ಎಸೋಸಿಯೇಶನ್ ಡೊಂಬಿವಲಿ ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷ ಸುಭಾಶ್ ಪಾಲನ್, ವಿದ್ಯಾದಾಯಿನಿ ಸಭಾದ ಗೌರವಾಧ್ಯಕ್ಷ ಜೆ. ಎಮ್. ಕೋಟ್ಯಾನ್, ಉಪಾಧ್ಯಕ್ಷ ಆರ್. ಕೆ. ಕೋಟ್ಯಾನ್, ಗೌ. ಕೋಶಾಧಿಕಾರಿ ಪದ್ಮನಾಭ ಎಸ್. ಪೂಜಾರಿ, ಶಾಲಾ ಕಾರ್ಯಾಧ್ಯಕ್ಷ ಡಾ. ಪ್ರಕಾಶ್ ಮೂಡುಬಿದ್ರಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಸಂತಿ ಆರ್. ಕೋಟ್ಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಿದ್ಯಾದಾಯಿನಿ ಸಭಾದ ವತಿಯಿಂದ ಬಿಲ್ಲವರ ಎಸೋಸಿಯೇಶನ್ ಮುಂಬಯಿಯ ಅಧ್ಯಕ್ಷ ಹರೀಶ್ ಜಿ. ಅಮೀನ್ ಅವರಿಗೆ ಶತಮಾನದ ಶ್ರೇಷ್ಠ ಸಮಾಜ ಸೇವಕ ಹಾಗೂ ಬಿಲ್ಲವ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಕಾರ್ಯಾಧ್ಯಕ್ಷ, ಉದ್ಯಮಿ ಎನ್. ಟಿ. ಪೂಜಾರಿ ಅವರಿಗೆ `ಶತಮಾನದ ಶ್ರೇಷ್ಠ ಉದ್ಯಮಿ' ಎಂಬ ಬಿರುದನ್ನು ನೀಡಿ ಸನ್ಮಾನಿಸಲಾಯಿತು ಹಾಗೂ ವಿದ್ಯಾದಾಯಿನಿ ಸಭಾದ ಅಧ್ಯಕ್ಷ ಪುರುಷೋತ್ತಮ ಎಸ್. ಕೋಟ್ಯಾನ್ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಮೊಮಿತಾ ಹರೀಶ್ ಅಮಿನ್, ಯಶೋಧಾ ನಾರಾಯಣ ಪೂಜಾರಿ, ಪೂಜಾ ಪುರುಷೋತ್ತಮ್ ಕೋಟ್ಯಾನ್ ಉಪಸ್ಥಿತರಿದ್ದರು. ಅಲ್ಲದೆ ಕ್ರೀಡಾ ಪ್ರತಿಭೆ ಮೋಕ್ಷಾ ಸುರೇಶ್ ಪೂಜಾರಿ ಅವರಿಗೆ ಕ್ರೀಡಾ| ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ನಿರೂಪಕರಾದ ಸಚೇಂದ್ರ ಅಂಬಾಗಿಲು ಮತ್ತು ಹರಿಣಿ ನಿಲೇಶ್ ಪೂಜಾರಿ ಅವರನ್ನು ಗೌರವಿಸಲಾಯಿತು.


ಮಾನವ ಜನ್ಮ ದೊಡ್ಡದು. ಅದನ್ನು ಉತ್ತಮವಾಗಿ ಸದುಪಯೋಗಪಡಿಸಿಕೊಳ್ಳಬೇಕು. ಪರೋಪಕಾರದ ಬದುಕು ನಮ್ಮದಾಗಬೇಕು. ನಮ್ಮಿಂದ ಇತರರಿಗೆ ಸಹಾಯವಾಗಬೇಕು. ನಾವು ಸಾಮಾಜಿಕವಾಗಿ ಬದುಕಿದರೆ ಜನ್ಮ ಸಾರ್ಥಕತೆಯನ್ನು ಪಡೆಯುತ್ತದೆ. ಅಂತಹ ಒಳ್ಳೆಯ ಸಮಾಜಪರ ಕಾರ್ಯಗಳು ವಿದ್ಯಾದಾಯಿನಿ ಸಭಾದವರಿಂದ ನಡೆಯುತ್ತಿರುವುದು ಶ್ಲಾಘನೀಯ. ಮುಂದೆಯೂ ಕೂಡಾ ಈ ಸಂಸ್ಥೆ ಬಹಳ ಎತ್ತರಕ್ಕೆ ಮಟ್ಟಕ್ಕೆ ಬೆಳೆಯಲಿ ಎಂದು ಅಂತಾರಾಷ್ಟ್ರೀಯ ಖ್ಯಾತಿಯ ಪುರೋಹಿತ, ಜ್ಯೋತಿಷ್ಯ ಡಾ. ಪ್ರವೀಣ್ ಭಟ್ ನುಡಿದರು.

ಹರೀಶ್ ಜಿ. ಅಮೀನ್ ಮಾತನಾಡಿ, ವಿದ್ಯಾದಾಯಿನಿ ಸಭಾದ ಶತಮಾನೋತ್ಸವವನ್ನು ಬಹಳ ಒಳ್ಳೆಯ ಕಾರ್ಯಕ್ರಮಗಳೊಂದಿಗೆ ಆಚರಿಸಿದ್ದೀರಿ. ಈ ಸಂದರ್ಭದಲ್ಲಿ ನನಗೂ ದೊಡ್ಡ ಬಿರುದಿನೊಂದಿಗೆ ಸನ್ಮಾನಿಸಿದ್ದೀರಿ. ಈ ಸನ್ಮಾನವು ನನ್ನ ಸಾಮಾಜಿಕ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಬಿಲ್ಲವರ ಎಸೋಸಿಯೇಶನ್ ಮುಖಾಂತರ ನನಗೆ ಸಮಾಜ ಸೇವೆ ಮಾಡುವ ಯೋಗ ಒದಗಿದೆ. ಈ ಸುಸಂದರ್ಭದಲ್ಲಿ ನವಿಮುಂಬಯಿ ಸಮುದಾಯ ಭವನದ ಲೋಕಾರ್ಪಣೆಯ ಜೊತೆಗೆ ಎಸೋಸಿಯೇಶನ್‍ಗೆ ಭದ್ರ ಬುನಾದಿಯನ್ನು ಹಾಕುವ ಯೋಜನೆಯ ಕನಸನ್ನು ಕಂಡಿದ್ದೇನೆ. ಗುರು ದೇವರ ಅನುಗ್ರಹದಿಂದ ಯೋಜನೆಗಳು ಸಾಕಾರಗೊಳ್ಳುವ ಆಶಯ ಹೊಂದಿದ್ದೇನೆ. ಎಂದರು.

ಎನ್. ಟಿ. ಪೂಜಾರಿ ಮಾತನಾಡಿ, ಮಹಾರಾಷ್ಟ್ರದಲ್ಲಿ ವಿದ್ಯಾದಾಯಿನಿ ಸಭಾ ತುಂಬಾ ಹಳೆಯ ಸಂಸ್ಥೆ, ಈ ಸಂಸ್ಥೆಯಿಂದ ಸಾವಿರಾರು ಮಂದಿ ವಿದ್ಯೆಯನ್ನು ಪಡೆದು ಧನ್ಯರಾಗಿದ್ದಾರೆ. ಮದರ್ ಇಂಡಿಯಾ ರಾತ್ರಿ ಶಾಲೆಯಲ್ಲಿ ಶಿಕ್ಷಣವನ್ನು ಪಡೆದಿದ್ದೆ. ನಮ್ಮ ಹಿರಿಯರು ಒಳ್ಳೆಯ ಧೈಯೋದ್ದೇಶದಿಂದ ರಾತ್ರಿ ಶಾಲೆಗಳನ್ನು ಸ್ಥಾಪಿಸಿದ್ದಾರೆ. ನನ್ನಂತಹ ಅನೇಕ ಮಂದಿಗೆ ಉದ್ಯೋಗದೊಂದಿಗೆ ಈ ರಾತ್ರಿ ಶಾಲೆಗಳಲ್ಲಿ ಶಿಕ್ಷಣ ಪಡೆಯುವ ಅವಕಾಶ ಸಿಕ್ಕಿದೆ. ವಿದ್ಯೆಯಿಂದ ವಂಚಿತರಾಗುವವರಿಗೆ ವಿದ್ಯಾದಾಯಿನಿ ಸಭಾ ವಿದ್ಯೆಯನ್ನು ನೀಡುತ್ತಾ ಬಂದಿದೆ ಎಂದರು.

ಎಲ್.ವಿ ಅಮೀನ್ ಮಾತನಾಡಿ, ಯಾವುದೇ ಒಂದು ಸಂಸ್ಥೆ ಶತಮಾನೋತ್ಸವ ಆಚರಿಸುತ್ತಿದೆಯಾದರೆ ಅದೊಂದು ದೊಡ್ಡ ಸಾಧನೆ. ಉದರ ಪೆÇೀಷಣೆಗಾಗಿ ಅಂದು ಮುಂಬಯಿ ಸೇರಿದ ಸಾವಿರಾರು ಮಂದಿ ವಿದ್ಯೆಯಿಂದ ವಂಚಿತರಾದವರಿಗೆ ವಿದ್ಯೆ ನೀಡುವ ಮಹತ್ತರವಾದ ಕಾಯಕವನ್ನು ವಿದ್ಯಾದಾಯಿನಿ ಸಭಾ ಮಾಡಿದೆ. ಅಂದು ತುಳುನಾಡಿನ ಜನರ ಏಳಿಗೆಗಾಗಿ ಈ ವಿದ್ಯಾದಾಯಿನಿ ಸಭಾ ಸ್ಥಾಪಿತವಾಗಿದೆ. ವಿದ್ಯಾ ದಾನದ ಸೇವೆಯು ವಿದ್ಯಾದಾಯಿನಿ ಸಭಾದ ವತಿಯಿಂದ ಸದಾ ಮುಂದುವರಿಯಬೇಕು ಎಂದರು.

ವಿಶ್ವನಾಥ್ ಪೂಜಾರಿ ಕಡ್ತಲ ಮಾತನಾಡಿ, ನೂರು ವರ್ಷಗಳ ಹಿಂದೆ ನಮ್ಮೂರವರು ಉದ್ಯೋಗ ನಿಮಿತ್ತ ಮುಂಬಯಿ ಸೇರಿದ ಬಳಿಕ ವಿದ್ಯೆಯನ್ನು ಕಲಿಯುವ ಆಸಕ್ತರಿಗೆ ವಿದ್ಯೆಯನ್ನು ಕಲ್ಪಿಸಿ ಆಶ್ರಯ ನೀಡಿದ ಸಂಸ್ಥೆಯೇ ವಿದ್ಯಾದಾಯಿನಿ ಸಭಾ. ಅದೆಷ್ಟೋ ಹಿರಿಯರು ಈ ಸಂಸ್ಥೆಯ ಬೆಳವಣಿಗೆಗೆ ಶ್ರಮಿಸಿದ್ದಾರೆ. ಇಲ್ಲದೆ ಅಪಾರ ಶಿಕ್ಷಕರು ವಿದ್ಯಾರ್ಥಿಗಳಿಗೆ ವಿದ್ಯೆಯನ್ನು ಧಾರೆಯೆರೆದು ಅವರ ಉಜ್ವಲ ಭವಿಷ್ಯಕ್ಕೆ ಕಾರಣೀಕರ್ತರಾಗಿದ್ದಾರೆ ಎಂದರು.

ವಿದ್ಯಾದಾಯಿನಿ ಸಭಾದ ಗೌರವ ಪ್ರಧಾನ ಕಾರ್ಯದರ್ಶಿ ಚಿತ್ರಾಪು ಕೆ. ಎಮ್. ಕೋಟ್ಯಾನ್ ಪ್ರಾಸ್ತಾವಿಕ ಭಾಷಣಗೈದರು. ಸನ್ಮಾನ ಪತ್ರವನ್ನು ಶತಮಾನೋತ್ಸವ ಸಮಿತಿಯ ಗೌರವ ಕೋಟ್ಯಾನ್ ವಾಚಿಸಿದರು. ಕಾರ್ಯಕ್ರಮವನ್ನು ಸಚೇಂದ್ರ ಅಂಬಾಗಿಲು, ಹರಿಣಿ ನಿಲೇಶ್ ಪೂಜಾರಿ ಹಾಗೂ ವಿದ್ಯಾದಾಯಿನಿ ಸಭಾದ ಜೊತೆ ಕಾರ್ಯದರ್ಶಿ ಹರೀಶ್ ಶಾಂತಿ ನಿರೂಪಿಸಿದರು. ಜೊತೆ ಕಾರ್ಯದರ್ಶಿ ಉಮೇಶ್ ಅಂಚನ್ ಸಹಕರಿಸಿದರು.

 

 
More News

ಡ್ರಾಮಾ ಜೂನಿಯರ್ ವಿಜೇತೆಗೆ ವಿಪ್ರ ಸನ್ಮಾನ
ಡ್ರಾಮಾ ಜೂನಿಯರ್ ವಿಜೇತೆಗೆ ವಿಪ್ರ ಸನ್ಮಾನ
 ಬೆಳುವಾಯಿ ಮರಿಯಮ್ ನಿಕೇ ತನ್ ಶಾಲೆಯಲ್ಲಿ ಹೆತ್ತವರಿಗೆ ಮಾಹಿತಿ
ಬೆಳುವಾಯಿ ಮರಿಯಮ್ ನಿಕೇ ತನ್ ಶಾಲೆಯಲ್ಲಿ ಹೆತ್ತವರಿಗೆ ಮಾಹಿತಿ
ಅಂಡಮಾನ್‍ನಲ್ಲಿ ಸಂಭ್ರಮಿಸಲ್ಪಟ್ಟ 19ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನ
ಅಂಡಮಾನ್‍ನಲ್ಲಿ ಸಂಭ್ರಮಿಸಲ್ಪಟ್ಟ 19ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನ

Comment Here