Thursday 8th, May 2025
canara news

ಡಿ.17 ; ಝೂಮ್ ವೇದಿಕೆಯಲ್ಲಿ ಐಲೆಸಾï-ದಿ ವಾಯ್ಸ್ ಆಫ್ ಓಷನ್ ದಿಂದ

Published On : 13 Dec 2023   |  Reported By : Rons Bantwal


ಸುರೇಂದ್ರ ಮಾರ್ನಾಡ್ ಸಾಹಿತ್ಯದ `ಹಾಡು ಮತ್ತೇನಿಲ್ಲಾ' ಬಿಡುಗಡೆ

ಮುಂಬಯಿ (ಆರ್‍ಬಿಐ), ಡಿ.13: ತಾಯಿ ವಾತ್ಸಲ್ಯದ, ತ್ಯಾಗದ ವಿಶಿಷ್ಟ ಸಾಹಿತ್ಯವಿರುವ ಆ ಹಾಡು `ಮತ್ತೇನಿಲ್ಲಾ' ಇದೇ ಡಿ.17ನೇ ಭಾನುವಾರ ಸಂಜೆ 7.30 ಕ್ಕೆ ಐಲೇಸಾ ಡಿಜಿಟಲ್ ವೇದಿಕೆಯಲ್ಲಿ ಬಿಡುಗಡೆ ಆಗಲಿದೆ .

ಮುಂಬಯಿ ರಂಗ ಮತ್ತು ಧ್ವನಿ ಕಲಾವಿದ ಸುರೇಂದ್ರ ಮಾರ್ನಾಡ್ ಅವರ ಸಾಹಿತ್ಯದ ಈ ಹಾಡನ್ನು ಪ್ರಸಿದ್ಧ ಗಾಯಕ ರಾಮಚಂದ್ರ ಹಡಪದ ಸಂಗೀತ ಸಂಯೋಜಿಸಿ ತಾನೇ ಹಾಡಿದ್ದಾರೆ. ಬೆಂಗಳೂರು ಅಲ್ಲಿನ ಉದ್ಯಮಿ ಕಾರ್ಕಳ ರೆಂಜಾಳದ ವಲೆರಿಯನ್ ರೋಡ್ರಿಗಸ್ ಹಾಡನ್ನು ಪ್ರಾಯೋಜಿಸಿದ್ದು ಐಲೇಸಾ ದಿ ವಾಯ್ಸ್ ಆಫ್ ಓಷನ್ (ರಿ.) ಸಂಸ್ಥೆಯ ಮೂಲಕ ಸಂಗೀತ ಪ್ರಿಯರಿಗೆ ಸಮರ್ಪಿಸಿದ್ದಾರೆ. ಸಚ್ಚು ಮಾರ್ನಾಡ್ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದು, ಛಾಯಾಗ್ರಹಣದಲ್ಲಿ ಸಂದೀಪ ಮೂಡಬಿದ್ರೆ ಅವರು ತಮ್ಮ ಕೈಚಳಕ ತೋರಿಸಿದ್ದಾರೆ ಗೋಪಾಲ್ ಪಟ್ಟೆ, ಜಯಂತ್ ಐತಾಳ್, ವಿನಾಯಕ್ ಮಲ್ಯ ಸಂಕಲನದಲ್ಲಿ ಹಾಡು ಅದ್ಭುತವಾಗಿ ಮೂಡಿ ಬಂದಿದೆ.

ಸಾಂಸಾರಿಕ ಜೀವನದಲ್ಲಿ ಹೆಣ್ತನದ ,ತಾಯ್ತನದ ತ್ಯಾಗವನ್ನು ವಿಸ್ತರಿಸುತ್ತಾ ಹೋಗುವ ಈ ಹಾಡು ತಾಯಿ ತನಗಾಗಿ ಏನನ್ನೂ ಬಯಸದೆ ಎಲ್ಲವನ್ನೂ ಮಕ್ಕಳ ಶ್ರೇಯಸ್ಸಿಗೆ ದೇವರಲ್ಲಿ ಮೊರೆಯಿಡುತ್ತಾ ತಾನು ಅವರ ಏಳಿಗೆಯಲ್ಲೆ ಸಂತೋಷವನ್ನು ಕಾಣುವುದನ್ನು ಮಾರ್ಮಿಕವಾಗಿ ಬಿಡಿಸಿಡುತ್ತದೆ. ಸುಸಂಸ್ಕೃತರಾಗಿ ಬೆಳೆಯ ಬೇಕಾದ ಮಕ್ಕಳು ಸ್ವಾಥಿರ್üಗಳಾಗುವುದನ್ನು ನೋಡುತ್ತಾ `ಮತ್ತಿನ್ನೇನೂ ಉಳಿದಿಲ್ಲ' ಎನ್ನುವ ವಾಸ್ತವ ಒಪ್ಪಿಕೊಳ್ಳುವಲ್ಲಿ ಬಾಳು ಮುಗಿಯುವುದನ್ನು ಒಪ್ಪಿಕೊಳ್ಳುತ್ತಾ ಹಾಡು ಕೊನೆಯಾಗುವುದು .

ಭಾರತೀಯ ಚಿತ್ರರಂಗದ ಪ್ರಬುದ್ಧ, ರಂಗಭೂಮಿಯ ಶ್ರೇಷ್ಠ ನಟ ಕಾಶ್ಮೀರಿ ಫೈಲ್ಸ್ ಚಿತ್ರ ಖ್ಯಾತಿಯ ಪ್ರಕಾಶ್ ಬೆಳವಾಡಿ ಅವರು ಈ ಹಾಡನ್ನು ಬಿಡುಗಡೆ ಗೊಳಿಸಲಿದ್ದಾರೆ, ಹಾಡಿನ ಸಾಹಿತ್ಯದ ಬಗ್ಗೆ ನಿಟ್ಟೆ ವಿಶ್ವವಿದ್ಯಾಲಯದ ಡಾ| ಸಾಯಿಗೀತಾ ಹೆಗ್ಡೆ ಮಾತಾಡಲಿದ್ದಾರೆ, ಮುಂಬಯಿ ವಿಶ್ವವಿದ್ಯಾಲಯ ಮತ್ತು ಚಿಣ್ಣರ ಬಿಂಬದ ಮಕ್ಕಳು ಕೂಡಾ ಭಾಗವಹಿಸಲಿದ್ದಾರೆ. ಮುಂಬಯಿ ರಂಗ ಕಲಾವಿದ ಅವಿನಾಶ್ ಕಾಮತ್ ಕಾರ್ಯಕ್ರಮ ನಡೆಸಿ ಕೊಡಲಿದ್ದಾರೆ.

ಆ ನಿಮಿತ್ತ ಡಿ.17ರ ಭಾನುವಾರ ಸಂಜೆ 7:30 ಗಂಟೆಗೆ ಝೂಮ್ ವೇದಿಕೆಯಲ್ಲಿ Zoom Iಆ: 81328827677 Pಚಿss ಅoಜe: iಟesಚಿ ಬಳಸಿಕೊಂಡು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಐಲೇಸಾ ತಂಡದ ಮಾಧ್ಯಮ ಸಂಚಾಲಕ ಗೋಪಾಲ್ ಪಟ್ಟೆ ಮತ್ತು ವಿವೇಕಾನಂದ ಮಂಡಕರೆ ನಾಡಿನ ಸಮಸ್ತ ಸಂಗೀತ ಪ್ರಿಯರಲ್ಲಿ ಈ ಮೂಲಕ ವಿನಂತಿಸಿದ್ದಾರೆ

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here