Thursday 29th, February 2024
canara news

ಮುಂಬಯಿಯಲ್ಲಿ ಸಂಭ್ರಮಿಸಲ್ಪಟ್ಟ ಕರ್ನಾಟಕ-ಮಹಾರಾಷ್ಟ್ರ ಪತ್ರಕರ್ತರ ಸಹಮಿಲನ

Published On : 24 Dec 2023   |  Reported By : Ronida Mumbai


ಕನ್ನಡಿಗ ಪತ್ರಕರ್ತರು ಮಹಾರಾಷ್ಟ್ರದಲ್ಲಿ ಕನ್ನಡತ್ವ ಬೆಳೆಸಿದ್ದಾರೆ-ಸ್ಪೀಕರ್ ಯು.ಟಿ ಖಾದರ್

ಮುಂಬಯಿ, ಡಿ.23: ಪತ್ರಕರ್ತ ಮತ್ತು ರಾಜಕಾರಣಿಗಳಿಗೆ ನಿಕಟ ಸಂಬಂಧವಿದ್ದು, ಒಬ್ಬೊರನ್ನು ಬಿಟ್ಟು ಇನ್ನೊಬ್ಬರು ಇರಲು ಸಾಧ್ಯವಿಲ್ಲ. ಊರಿನಿಂದ ಮುಂಬಯಿಗೆ ಬಂದು ನೆಲೆನಿಂತು ಕನ್ನಡ ಭಾಷೆ, ಸಂಸ್ಕತಿ, ಪರಂಪರೆಯನ್ನು ಬಹಳಷ್ಟು ಬಲ ಪಡಿಸಲು ಪತ್ರಕರ್ತರ ಜವಾಬ್ದಾರಿ ಮಹತ್ತರವಾದುದು. ಪತ್ರಕರ್ತರು ಬರೀ ತಮ್ಮ ವೃತ್ತಿ ಮಾತ್ರವಲ್ಲ ಭಾಷೆ, ಸಂಸ್ಕೃತಿಯನ್ನೂ ಉಳಿಸುವ ದೊಡ್ಡ ಕೊಡುಗೆ ನೀಡಿದ್ದಾರೆ. ಪಾಶ್ಚತ್ಯ ಸಂಸ್ಕೃತಿಯೊಂದಿಗೆ ನಾಶದ ಅಂಚಿನಲ್ಲಿರುವ ಕನ್ನಡತನವನ್ನು ನಾಶವಾಗದಂತೆ ಮಹಾರಾಷ್ಟ್ರದಲ್ಲಿನ ಕನ್ನಡಿಗ ಪತ್ರಕರ್ತರ ಸೇವೆಯೂ ಸ್ತುತ್ಯಾರ್ಹ ಎಂದು ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ ಖಾದರ್ ಎಂದರು.

ಇಂದಿಲ್ಲಿ ಶನಿವಾರ ಮುಂಬಯಿ ಅಂಧೇರಿ ಪೂರ್ವದ ಕ್ಲಬ್ ಹೌಸ್‍ನಲ್ಲಿನ ಸ್ವರ್ಗೀಯ ರಾಧಾ ಭೋಜ ಶೆಟ್ಟಿ ಸುರತ್ಕಲ್ ವೇದಿಕೆಯಲ್ಲಿ ಕೆಯುಡಬ್ಲ್ಯೂಜೆ ಅಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆಯಲ್ಲಿ ಜರುಗಿದ ಸಮಾರಂಭವನ್ನು ಕರ್ನಾಟಕ ಸರ್ಕಾರದ ಕೃಷಿ ಖಾತೆ ಸಚಿವ ಚೆಲುವರಾಯ ಸ್ವಾಮಿ ಉದ್ಘಾಟಿಸಿದ್ದು ಮುಖ್ಯ ಅತಿಥಿüಯಾಗಿದ್ದು ಯು.ಟಿ ಖಾದರ್ ಮಾತನಾಡಿದರು.

ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕದ ಅಧ್ಯಕ್ಷ ಡಾ| ಆರ್.ಕೆ ಶೆಟ್ಟಿ, ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಹರೀಶ್ ಜಿ.ಅವಿೂನ್, ವೈಬ್ರೆಂಟ್ ಎಕ್ಸ್‍ಪೆÇೀರ್ಟೆಕ್ಸ್ ಪ್ರೈವೇಟ್ ಲಿಮಿಟೆಡ್‍ನ ಕಾರ್ಯಾಧ್ಯಕ್ಷ ಬಿ.ಆರ್ ರಾವ್ (ಬಡನಿಡಿಯೂರು), ಮುಂಬಯಿಯಲ್ಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ| ಸುನೀತಾ ಎಂ.ಶೆಟ್ಟಿ, ಕೆಯುಡಬ್ಲ್ಯೂಜೆ ಪ್ರಧಾನ ಕಾರ್ಯದರ್ಶಿ ಜಿ.ಸಿ ಲೋಕೇಶ, ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಅತಿಥಿü ಅಭ್ಯಾಗತರಾಗಿದ್ದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಆಗಿ ಆಯ್ಕೆಗೊಂಡ ರೋನ್ಸ್ ಬಂಟ್ವಾಳ್ ಹಾಗೂ ಪ್ರಧಾನ ಕಾರ್ಯದರ್ಶಿ ಆಗಿರುವ ಡಾ| ಶಿವ ಮೂಡಿಗೆರೆ ಅವರಿಗೆ ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ ಖಾದರ್ ಅವರು ಕೆಯುಡಬ್ಲೂ ್ಯಜೆ ಗುರುತುಪತ್ರ ವಿತರಿಸಿದರು. ಕೆಯುಡಬ್ಲ್ಯೂಜೆ ಅಧ್ಯಕ್ಷ ಶಿವಾನಂದ ತಗಡೂರು ಅವರು ಅಧಿಕಾರ ವಹಿಸಿ ಶುಭಾರೈಸಿದರು.

ಜವರಿಯಲ್ಲಿ ಜರುಗುವ ಪತ್ರಕರ್ತರ ರಾಜ್ಯ ಮಟ್ಟದ ದಿ| ಕ್ಯಾ| ಎಂ.ವಿ ಪ್ರಾಂಜಲ್ ಗೌರವಾರ್ಥ ಕೆಯುಡಬ್ಲ್ಯೂಜೆ ಬ್ರಾ ್ಯಂಡ್ ಮಂಗಳೂರು ರೋಹನ್ ಕಪ್ ಪಂದ್ಯಾಟದ ಕರೆಯೋಲೆಯನ್ನು ಸಚಿವ ಚೆಲುವರಾಯ ಬಿಡುಗಡೆ ಗೊಳಿಸಿದರು. ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಕಪಸಮ ಮುಂಬಯಿ ತಂಡಕ್ಕೆ ಶ್ರೀನಿವಾಸ ನಾಯಕ್ ಆಹ್ವಾನಿಸಿ ಕ್ಯಾಪ್ಟನ್ ಶಿವ ಮೂಡಿಗೆರೆ ಅವರಿಗೆ ಆಹ್ವಾನಿಸಿದರು.

ಕÀನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸಹಯೋಗದೊಂದಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಸಂಭ್ರಮಿಸಿದ ಕರ್ನಾಟಕ-ಮಹಾರಾಷ್ಟ್ರ ಪತ್ರಕರ್ತರ ಸಹಮಿಲನವನ್ನು ಉದ್ಘಾಟಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮಹಾರಾಷ್ಟ್ರ ಘಟಕಕ್ಕೆ ಚಾಲನೆಯನ್ನಿತ್ತು ಸಚಿವ ಚೆಲುವರಾಯ ಸ್ವಾಮಿ ಮಾತನಾಡಿ ರಾಜ್ಯದ ಪತ್ರಕರ್ತರ ಸಂಘದ ಘಟಕ ಹೊರ ರಾಜ್ಯದಲ್ಲಿ ಪ್ರಾರಂಭವಾಗುವುದು ವಿಶೇಷ. ಇದರಿಂದ ವೈಚಾರಿಕ, ಸಾಂಸ್ಕೃತಿಕ ವಿನಿಮಯಕ್ಕೆ ಅನುಕೂಲವಾಗುವ ಜೊತೆಗೆ ವಾಣಿಜ್ಯ ನಗರಿಯಲ್ಲಿ ಇರುವ ನಮ್ಮ ರಾಜ್ಯದ ಪತ್ರಕರ್ತರ ಒಗ್ಗೂಡುವಿಕೆ, ಸಂಘಟನೆ ಪತ್ರಕರ್ತರ ಹಿತ ಸಂರಕ್ಷಣೆಗೂ ಸಹಕಾರಿಯಾಗುತ್ತದೆ. ಮಾಧ್ಯಮಗಳು ಜನಸಾಮಾನ್ಯರ ಧ್ವನಿಯಾಗಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯ ಕಾವಲುಗಾರನಂತೆ ಕೆಲಸಮಾಡಬೇಕು ಎಂದರು.

ಶಿವಾನಂದ ತಗಡೂರು ಅಧ್ಯಕ್ಷೀಯ ನುಡಿಗಳನ್ನಾಡಿ ಮಹಾರಾಷ್ಟ್ರದಲ್ಲಿ ನಿರಂತರವಾಗಿ ಶ್ರಮಿಸುತ್ತಿರುವ ಎಲ್ಲಾ ಕನ್ನಡ ಪತ್ರಕರ್ತರನ್ನು ಒಗ್ಗೂಡಿ ಒಂದೇ ವೇದಿಕೆಯಲ್ಲಿ ತರುವ ಸಲುವಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಮಹಾರಾಷ್ಟ್ರ ಘಟನೆ ಸ್ಥಾಪನೆ ಮಾಡಲಾಗಿದೆ. ರಾಷ್ಟ್ರದ ಉದ್ದಗಲಕ್ಕೂ ಕನ್ನಡ ಪತ್ರಕರ್ತರು ಎಲ್ಲೆಲ್ಲಿದ್ದಾರೆ ಅವರೆಲ್ಲರನ್ನು ಒಂದೇ ವೇದಿಕೆಯಡಿ ತರುವಂತಹ ಕೆಲಸ ನಡೆಯುತ್ತಿದೆ. ಕಾಸರಗೋಡು ಇಲ್ಲಿ ಜಿಲ್ಲಾ ಘಟಕ ಸ್ಥಾಪಿಸಿದ್ದು ಇದೀಗ ಮುಂಬಯಿಯಲ್ಲಿ ಮಹಾರಾಷ್ಟ್ರ ಘಟಕ ಅಸ್ತಿತ್ವಕ್ಕೆ ತರಲಾಗಿದೆ. ಈ ಮೂಲಕ ಎಲ್ಲರೂ ಒಂದೇ ವೇದಿಕೆಯಲ್ಲಿ ಬರುವಂತಾಗಿದೆ. ಮುಂಬಯಿಯಲ್ಲಿ ಕನ್ನಡಿಗ ಪತ್ರಕರ್ತರು ಸೇರಿ ಭವನ ಕಟ್ಟುವ ನಿಟ್ಟಿನಲ್ಲಿ ಅನುದಾನ ಬೇಡಿಕೆಯಿಟ್ಟಿದ್ದು ಸರಕಾರ ಸ್ಪಂದಿಸಬೇಕಾಗಿದೆ. ಎಲ್ಲಾ ಪತ್ರಕರ್ತರು ಈ ಸಂಘಟನೆಯನ್ನು ಬಲಪಡಿಸಿ ಸಂಘದ ಸದುಯೋಗ ಪಡೆಯುವಂತಾಗಲಿ ಎಂದರು.

ಕೆಯುಡಬ್ಲ್ಯೂಜೆ ಉಪಾಧ್ಯಕ್ಷರಾದ ಅಜ್ಜಮಾಡ ರಮೇಶ್ ಕುಟ್ಟಪ್ಪ, ಭವಾನಿಸಿಂಗ್ ಠಾಕೂರ್, ಕಾರ್ಯದರ್ಶಿಗಳಾದ ಮತ್ತೀಕೆರೆ ಜಯರಾಮ, ನಿಂಗಪ್ಪ ಚಾವಡಿ, ಸೋಮಶೇಖರ ಕೆರಗೋಡು ಖಜಾಂಚಿ ಎಂ.ವಾಸುದೇವ ಹೊಳ್ಳ, ದ.ಕ ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಉಳ್ಳಾಲ ತಾಲೂಕು ಪತ್ರಕರ್ತರ ಸಂಘದ ಉಪಾಧ್ಯಕ್ಷ ಆರೀಫ್ ಕಲಕಟ್ಟಾ ವಿಶೇಷ ಆಹ್ವಾನಿತರಾಗಿದ್ದು ಇವರೆಲ್ಲರಿಗೂ ಉದ್ಯಮಿ ಸುರೇಂದ್ರ ಎ.ಪೂಜಾರಿ ಹಾಗೂ ಶ್ರೀ ಚಿತ್ತಾರಿ ಹಾಸ್ಪಿಟಾಲಿಟಿ ನಿರ್ದೇಶಕ ಸದರಾಮ ಎನ್.ಶೆಟ್ಟಿ ಸಂಪದಮನೆ ಅವರಿಗೆ ಯು.ಟಿ ಖಾದರ್ ವಿಶೇಷವಾಗಿ ಗೌರವಿಸಿದರು.

ಕÀನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಉಪಾಧ್ಯಕ್ಷ ಡಾ| ಶಿವ ಮೂಡಿಗೆರೆ ಸ್ವಾಗತಿಸಿದರು. ಅಧ್ಯಕ್ಷ ರೋನ್ಸ್ ಬಂಟ್ವಾಳ್ ಪ್ರಸ್ತಾವನೆಗೈದÀು ಅತಿಥಿüಗಳನ್ನು ಗೌರವಿಸಿದರು. ವಿಶ್ವನಾಥ್ ಪೂಜಾರಿ ನಿಡ್ಡೋಡಿ, ಡಾ| ಜಿ.ಪಿ ಕುಸುಮಾ, ನಾಗೇಶ್ ಪೂಜಾರಿ ಏಳಿಂಜೆ, ಅನಿತಾ ಪೂಜಾರಿ ತಾಕೋಡೆ, ಗೋಪಾಲ ಪೂಜಾರಿ ತ್ರಾಸಿ, ಸವಿತಾ ಎಸ್.ಶೆಟ್ಟಿ, ರಂಗ ಎಸ್.ಪೂಜಾರಿ, ಡಾ| ದುರ್ಗಪ್ಪ ವೈ.ಕೋಟಿಯಾವರ್ ಅತಿಥಿüಗಳನ್ನು ಪರಿಚಯಿಸಿದರು. ಗೌ| ಪ್ರ| ಕಾರ್ಯದರ್ಶಿ ಸಾ.ದಯಾ ಕಾರ್ಯಕ್ರಮ ನಿರೂಪಿಸಿ ಧನ್ಯವದಿಸಿದರು. ರಾಷ್ಟ್ರಗೀತೆಯೊಂದಿಗೆ ಸಮಾರಂಭ ಸಮಾಪನ ಗೊಂಡಿತು.

 
More News

ಖ್ಯಾತ ಸಿನಿಮಾ ನಟ & ಸಿರಿ ಬ್ರ್ಯಾಂಡ್ ರಾಯಭಾರಿ ಶ್ರೀ ರಮೇಶ್ ಅರವಿಂದ್ ಸಿರಿ ಸಂಸ್ಥೆಯ ಪ್ರಧಾನ ಕಛೇರಿಗೆ ಭೇಟಿ
ಖ್ಯಾತ ಸಿನಿಮಾ ನಟ & ಸಿರಿ ಬ್ರ್ಯಾಂಡ್ ರಾಯಭಾರಿ ಶ್ರೀ ರಮೇಶ್ ಅರವಿಂದ್ ಸಿರಿ ಸಂಸ್ಥೆಯ ಪ್ರಧಾನ ಕಛೇರಿಗೆ ಭೇಟಿ
ಆಸರೆ ಗೆಳೆಯರ ಬಳಗ ಮಂಗಳೂರು ರಿ ಮಂಗಳೂರು ಏಳನೆಯ ವರ್ಷದ ಸ್ಥಾಪನಾ ದಿನಾಚರಣೆ
ಆಸರೆ ಗೆಳೆಯರ ಬಳಗ ಮಂಗಳೂರು ರಿ ಮಂಗಳೂರು ಏಳನೆಯ ವರ್ಷದ ಸ್ಥಾಪನಾ ದಿನಾಚರಣೆ
ಎಚ್.ಡಿ. ದೇವೆಗೌಡ ಹಾಗೂ ಧರ್ಮಪತ್ನಿ ಶ್ರೀಮತಿ ಚೆನ್ನಮ್ಮ ದಂಪತಿ ಧರ್ಮಸ್ಥಳಕ್ಕೆ ಭೇಟಿ
ಎಚ್.ಡಿ. ದೇವೆಗೌಡ ಹಾಗೂ ಧರ್ಮಪತ್ನಿ ಶ್ರೀಮತಿ ಚೆನ್ನಮ್ಮ ದಂಪತಿ ಧರ್ಮಸ್ಥಳಕ್ಕೆ ಭೇಟಿ

Comment Here