Saturday 27th, April 2024
canara news

ಮಂಗಳೂರು-ಗೋವಾ ವಂದೇ ಭಾರತ್ ಸೂಪರ್ ಫಾಸ್ಟ್ ರೈಲಿನ ಸಮಯ ಬದಲಾವಣೆಗೆ ರೈಲ್ವೇ ಸಚಿವರಲ್ಲಿ ಮನವಿಗೈದ ಎರ್ಮಾಳ್ ಹರೀಶ್ ಶೆಟ್ಟಿ

Published On : 31 Dec 2023   |  Reported By : Rons Bantwal


ಮುಂಬಯಿ (ಆರ್‍ಬಿಐ), ಡಿ.30: ರಾಷ್ಟ್ರದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದಿಲ್ಲಿ ಸೇವಾರ್ಪಣೆಗೈದ ವಂದೇ ಭಾರತ್ ರೈಲು ಮಂಗಳೂರುನಿಂದ ಬೆಳಿಗ್ಗೆ 08:30 ಗಂಟೆಯ ಬದಲಾಗಿ ಬೆಳಗ್ಗೆ 6.30 ಗಂಟೆಗೆ ಸಮಯ ಬದಲಾಯಿಸಿ ಹೊರಡುವಂತೆ ಮತ್ತು ಮಡಗಾಂವ್ ನಿಂದ ಸಂಜೆ 6.10 ಗಂಟೆಯ ಬದಲಾಗಿ 4.30 ಗಂಟೆಗೆ ಹೊರಡಲು ವ್ಯವಸ್ಥೆ ಮಾಡುವರೇ ರೈಲ್ವೇ ಸಚಿವರಿಗೆ ಉತ್ತರ ಮುಂಬಯಿ ಜಿಲ್ಲಾ ಭಾರತೀಯ ಜನತಾ ಪಕ್ಷ (ಬಿಜೆಪಿ) ಉಪಾಧ್ಯಕ್ಷ ಎರ್ಮಾಳ್ ಹರೀಶ್ ಶೆಟ್ಟಿ ಪತ್ರದ ಮೂಲಕ ವಿನಂತಿಸಿದ್ದಾರೆ.

ಮಂಗಳೂರು ಗೋವಾ ವಂದೇ ಭಾರತ್ ಸೂಪರ್ ಫಾಸ್ಟ್ ರೈಲು ಮಂಗಳೂರಿನಿಂದ ಕೇವಲ 4.15 ಗಂಟೆ ಅವಧಿಯಲ್ಲಿ ಗೋವಾ ತಲುಪಲಿದೆ. ಈ ರೈಲು ಗಂಟೆಗೆ 160 ಕಿಮೀ ವೇಗದಲ್ಲಿ ಸಂಚರಿಸಲಿದೆ. ವಂದೇ ಭಾರತ್ ರೈಲು ಮಂಗಳವಾರ ಹೊರತುಪಡಿಸಿ ವಾರದ ಆರು ದಿನವೂ ಸಂಚಾರ ಮಾಡಲಿದೆ. ಮಂಗಳೂರಿನಿಂದ ಬೆಳಗ್ಗೆ 8.30 ಗಂಟೆಗೆ ಹೊರಡುವ ವಂದೇ ಭಾರತ್ ರೈಲು ಮಧ್ಯಾಹ್ನ 1.15 ಗಂಟೆಗೆ ಗೋವಾ (ಮಡಗಾಂವ್) ತಲುಪಲಿದೆ. ಮತ್ತೆ ಸಂಜೆ ಮಡಗಾಂವ್‍ನಿಂದ ಸಂಜೆ 6.10 ಗಂಟೆಗೆ ಹೊರಟು ರಾತ್ರಿ 10.45 ಗಂಟೆಗೆ ಮಂಗಳೂರು ತಲುಪಲಿದೆ.

ಈ ರೈಲಿಗೆ ಉಡುಪಿ ಮತ್ತು ಕಾರವಾರದಲ್ಲಿ ಎರಡು ಕಡೆ ಮಾತ್ರ ನಿಲುಗಡೆ ಇರಲಿದೆ. ಇದು ಎಂಟು ಬೋಗಿಗಳ ಹವಾನಿಯಂತ್ರಿತ ವ್ಯವಸ್ಥೆಯ ರೈಲಾಗಿದ್ದು, ಏರ್ ಲೈನ್ ಮಾದರಿ ಸೀಟುಗಳ ಜೊತೆಗೆ ಎಕ್ಸಿಕ್ಯುಟಿವ್ ಚೇರ್‍ಗಳ ವ್ಯವಸ್ಥೆ ಇದರಲ್ಲಿದ್ದು ಆನ್‍ಬೋರ್ಡ್ ಸಸ್ಯಹಾರಿ ಮತ್ತು ಮಾಂಸಹಾರಿ ಊಟದ ವ್ಯವಸ್ಥೆ ಕೂಡ ರೈಲಿನಲ್ಲಿದೆ ಅನ್ನೋದು ಸಂತೋಷಕರ.

ಆದರೆ ಸದ್ಯದ ವಂದೇ ಭಾರತ್ ಸೂಪರ್ ಫಾಸ್ಟ್ ರೈಲಿನ ಸಮಯದಿಂದಾಗಿ ಪ್ರಯಾಣಿಕರು ಮುಂಬಯಿ ಮಂಗಳೂರು ಮತ್ತು ಮಂಗಳೂರು ಮುಂಬಯಿ ಪ್ರಯಾಣದಿಂದ ವಂಚಿತರಾಗಿದ್ದು ಮಂಗಳೂರು-ಗೋವಾ ರೈಲು ಸಮಯವನ್ನು 08:30ರ ಬದಲಾಗಿ ಬೆಳಿಗ್ಗೆ 06:30 ಗಂಟೆಯಿಂದ ಬದಲಾಯಿಸಲು ವಿನಂತಿಸುತ್ತೇವೆ. ಇದರಿಂದ ರೈಲು ಗೋವಾಕ್ಕೆ ಪೂರ್ವಾಹ್ನ 11:15 ಗಂಟೆಗೆ ತಲುಪಬಹುದು ಮತ್ತು ವಂದೇ ಭಾರತ್‍ನಿಂದ ಆಗಮಿಸುವ ಪ್ರಾಯಾಣಿಕÀರು ಗೋವಾದಿಂದ ಮುಂಬಯಿ ಸಿಎಸ್‍ಟಿ 12:20 ಗಂಟೆಯ ರೈಲನ್ನು ಹತ್ತಬಹುದು. ಅದೇ ರೀತಿ ಗೋವಾದಿಂದ ಮಂಗಳೂರು ರೈಲಿನ ಸಮಯವನ್ನೂ ಸಂಜೆ 06:10 ಗಂಟೆಯ ಬದಲಾಗಿ 04:30 ಗಂಟೆಗೆ ಆರಂಭಿಸಿದ್ದಲ್ಲಿ ಮುಂಬಯಿ ಸಿಎಸ್‍ಟಿ ಯಿಂದ ಅಪರಾಹ್ನ 03:30 ಗಂಟೆಗೆ ಗೋವಾಕ್ಕೆ ಆಗಮಿಸಿದ ಜನರು ಗೋವಾದಿಂದ 04:30 ಗಂಟೆಯ ವಂದೇ ಭಾರತ್ ರೈಲಿನಲ್ಲಿ ಮಂಗಳೂರು ಪ್ರಯಾಣ ಬೆಳೆಸಬಹುದು.

ಈ ಸಮಯದಲ್ಲಿ ಈ ರೀತಿ ವ್ಯವಸ್ಥೆ ಮಾಡಿದ್ದಲ್ಲಿ ಪ್ರಯಾಣಿಕರು ಒಂದೇ ದಿನದೊಳಗೆ ಮುಂಬಯಿ ಮತ್ತು ಮಂಗಳೂರು ತಲುಪಲು ಸಾಧ್ಯವಾಗಲಿದೆ. ಈ ಅನುಕೂಲಕರ ವ್ಯವಸ್ಥೆ ಮಾಡುವರೇ ರೈಲ್ವೇ ಸಚಿವರು ಶೀಘ್ರವಾಗಿ ಕ್ರಮಕೈಗೊಳ್ಳುವರೇ ಪತ್ರದ ಮುಖೇನ ವಿನಂತಿಸಿರುವುದಾಗಿ ಎರ್ಮಾಳ್ ಹರೀಶ್ ಶೆಟ್ಟಿ ತಿಳಿಸಿದ್ದಾರೆ.

ಮೇಲಿನ ಸಲಹೆಗಳ ಪ್ರಕಾರ ಸಮಯವನ್ನು ಬದಲಾಯಿಸಲು ಮುಂಬಯಿ ರೈಲು ಪ್ರಯಾಣಿಕರ ಪರವಾಗಿ ವಿನಂತಿಸುತ್ತೇವೆ. ಕಾರಣ ಪ್ರಯಾಣಿಕರು ಒಂದೇ ದಿನದಲ್ಲಿ ತಮ್ಮ ಗಮ್ಯಸ್ಥಾನವನ್ನು ತಲುಪಬಹುದು ಈ ಸಮಯಗಳು ಹೆಚ್ಚು ಅನುಕೂಲರವಾಗಿದೆ ಎಂದೂ ಎರ್ಮಾಳ್ ಹರೀಶ್ ಶೆಟ್ಟಿ ಹಾಗೂ ರೈಲ್ವೇ ಯಾತ್ರಿ ಸಂಘ ಬೊರಿವಲಿ ಮುಂಬಯಿ (ಪಶ್ಚಿಮ ವಲಯ) ಅಧ್ಯಕ್ಷ ಶಿಮಂತೂರು ಉದಯ ಶೆಟ್ಟಿ ತಿಳಿಸಿದ್ದಾರೆ.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here