Thursday 8th, May 2025
canara news

`ಪೇಜಾವರ ವಿಶ್ವೇಶತೀರ್ಥ ನಮನ' ಕಾರ್ಯಕ್ರಮ ; ಮುಂಬಯಿ ಸಾಧಕರಾದ

Published On : 30 Dec 2023   |  Reported By : Rons Bantwal


ಶಿವರಾಮ ಭಂಡಾರಿ-ಭಾಸ್ಕರ ಸಸಿಹಿತ್ಲುಗೆ `ಶ್ರೀ ವಿಶ್ವೇಶತೀರ್ಥ ಜೀವಮಾನ ಸಾಧನಾ ಪ್ರಶಸ್ತಿ'

ಮುಂಬಯಿ (ಆರ್‍ಬಿಐ), ಡಿ.30: ಹರಿಪಾದಗೈದಿರುವ ಪೇಜಾವರ ವಿಶ್ವೇಶತೀರ್ಥ ಶ್ರೀಗಳ ಸಂಸ್ಮರಣಾರ್ಥ `ಪೇಜಾವರ ವಿಶ್ವೇಶತೀರ್ಥ ನಮನ' ಕಾರ್ಯಕ್ರಮವನ್ನು ಕಲ್ಕೂರ ಪ್ರತಿಷ್ಠಾನ ಮಂಗಳೂರು ಸಂಸ್ಥೆಯು ಕಳೆದ ಶುಕ್ರವಾರ (ಡಿ.29) ಮಂಗಳೂರು ಕದ್ರಿ ಕಂಬಳ ಇಲ್ಲಿನ ಮಂಜು ಪ್ರಸಾದ ಇದರ ವಾದಿರಾಜ ಮಂಟಪದಲ್ಲಿನ ವಿಶ್ವೇಶತೀರ್ಥ ವೇದಿಕೆಯಲ್ಲಿ ಆಯೋಜಿಸಿತ್ತು.

ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಶಿರೂರು ಮಠಾಧೀಶ ಶ್ರೀ ವೇದ ವರ್ಧನ ತೀರ್ಥ ಶ್ರೀಪಾದರು ಹಾಗೂ ಚಿತ್ರಾಪುರ ಮಠಾಧೀಶ ಶ್ರೀ ವಿದ್ಯೇಂದ್ರತೀರ್ಥ ಶ್ರೀಪಾದರು ಉಪಸ್ಥಿತರಿದ್ದು ಗುರುವಂದ ನಾ ಸಂಸ್ಮರಣೆಗೈದರು. ಮುಂಬಯಿಯಲ್ಲಿನ ಸಾಧಕರಾದ ಶಿವಾ'ಸ್ ಹೇರ್ ಡಿಝೈನರ್ಸ್ ಪ್ರೈವೇಟ್ ಲಿಮಿಟೆಡ್‍ನ ಆಡಳಿತ ನಿರ್ದೇಶಕ ಡಾ| ಶಿವರಾಮ ಕೆ.ಭಂಡಾರಿ ಮತ್ತು ಭಾಸ್ಕರ ಸುವರ್ಣ ಸಸಿಹಿತ್ಲು ಸೇರಿದಂತೆ ಇನ್ನಿತರ ಮಹಾನೀಯರಿಗೆ ಯತಿವರ್ಯರು `ಪೇಜಾವರ ಶ್ರೀ ವಿಶ್ವೇಶತೀರ್ಥ ಜೀವಮಾನ ಸಾಧನಾ ಪ್ರಶಸ್ತಿ' ಪ್ರದಾನಿಸಿ ಗೌರವಿಸಿದರು.

ಮಂಗಳೂರು ಮಹಾನಗರ ಪಾಲಿಕೆಯ ಮಹಾಪೌರ ಸುಧೀರ್ ಶೆಟ್ಟಿ ಕಣ್ಣೂರು ದೀಪ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಂಗಳೂರು ದಕ್ಷಿಣ ಶಾಸಕ ಡಿ.ವೇದವ್ಯಾಸ ಕಾಮತ್ ಅಧ್ಯಕ್ಷತೆಯಲ್ಲಿ ಜರುಗಿದ ಸಮಾರಂಭದಲ್ಲಿ ಆಳ್ವಾಸ್ ವಿದ್ಯಾಸಂಸ್ಥೆಗಳ ಅಧ್ಯಕ್ಷ ಡಾ| ಎಂ.ಮೋಹನ ಆಳ್ವ ಪುಷ್ಪ ನಮನ ಸಲ್ಲಿಸಿದರು.

ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತ ಡಾ| ಲಕ್ಷಿ ್ಮೀಶ ತೋಳ್ಪಾಡಿ, ಶಿರೂರು ಮಠದ ದಿವಾನ ಎಂ. ಉದಯಕುಮಾರ್ ಸರಳತ್ತಾಯ ಮತ್ತು ಕಟೀಲು ಹರಿನಾರಾಯಣ ಆಸ್ರಣ್ಣ ಮತ್ತು ಕಟೀಲು ಅನಂತ ಪದ್ಮನಾಭ ಆಸ್ರಣ್ಣ ಉಪಸ್ಥಿತರಿದ್ದು ಕೃಷ್ಣೈಕ್ಯ ಪೂಜ್ಯ ವಿಶ್ವೇಶತೀರ್ಥ ಸ್ವಾಮೀಜಿ ಅವರಿಗೆ ಸಂಸ್ಮರಣಾ ನುಡಿನಮನ ಸಲ್ಲಿಸಿದÀರು.

ಕಾರ್ಯಕ್ರಮ ಪ್ರಯುಕ್ತ ವಿವಿಧ ಕ್ಷೇತ್ರಗಳ ಹಿರಿಯ ಸಾಧಕರನ್ನು ಗುರುತಿಸಿ ವಾರ್ಷಿಕ `ಪೇಜಾವರ ಶ್ರೀ ವಿಶ್ವೇಶತೀರ್ಥ ಜೀವಮಾನ ಸಾಧನಾ ಪ್ರಶಸ್ತಿ' ಪ್ರದಾನ ಮಾಡಿ ಗೌರವಿಸಲಾಗಿದ್ದು ಆ ನಿಮಿತ್ತ ಆಯೋಜಿಸಲಾ ದ ವಿಶ್ವೇಶತೀರ್ಥರ ಚಿತ್ರ ರಚನಾ ಸ್ಪರ್ಧೆ ಹಾಗೂ ಅವರ ಕುರಿತಾದ ಪ್ರಬಂಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಜಯಶ್ರೀ ಅರವಿಂದ್, ಪೂರ್ಣಿಮಾ ರಾವ್ ಪೇಜಾವರ ಹಾಗೂ ಶಶಿಪ್ರಭಾ ಐತಾಳ್ ನೇತೃತ್ವದಲ್ಲಿ ಶ್ರೀ ಕೃಷ್ಣನಿಗೆ ಸಂಬಂಧಿಸಿದ `ಕೃಷ್ಣ ಗೀತ ಗಾಯನ' ಕಾರ್ಯಕ್ರಮ ನೆರವೇರಿದ್ದು ಬಳಿಕ ಪ್ರಸಾದ ವಿತರಿಸಲಾಯಿತು.

ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here