Saturday 27th, April 2024
canara news

ಭಾರತೀಯ ಭವ್ಯ ಸಂಸ್ಕೃತಿ ಜೀವಂತವಾಗಿಸಲು ಯುವಜನತೆ ಸಮಯ ನೀಡಬೇಕು

Published On : 21 Jan 2024   |  Reported By : Rons Bantwal


ದೇವುಲಪಾಡ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಸ್ವರ್ಣಮಹೋತ್ಸವದಲ್ಲಿ ಎಂಪಿ ಗೋಪಾಲ್ ಶೆಟ್ಟಿ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜ.20: ಆಧುನಿಕ ಕಾಲದ ಪಾಶ್ಚತ್ಯ ಸಂಸ್ಕೃತಿ ಮತ್ತು ಟಿವಿ, ಸಾಮಾಜಿಕ ಮಾಧ್ಯಮಗಳಿಂದ ಗತ ಕಾಲದ ಧಾರ್ಮಿಕ ಮತ್ತು ಸಾಂಸ್ಕೃತಿಕ ವೈಭವ ಮರೆಯಾಗುತ್ತಿದೆ. ಆದ್ದರಿಂದ ಯುವ ಜನತೆ ವಿದ್ಯುನ್ಮಾನ ಶಾಸ್ತ್ರಗಳಿಂದ ಹೊರಬಂದು ಸಂಸ್ಕಾರ, ಭಾರತೀಯ ಭವ್ಯ ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಸಾಮಾಜಿಕ ಪಥದ ಚಿಂತನೆಯೊಂದಿಗೆ ಸೇವಾ ಮುಂಚೂಣಿಯಲ್ಲಿ ಬರಬೇಕು. ಪಾವಿತ್ರ್ಯತೆಯ ಸಂಸ್ಕೃತಿ ಜೀವಂತವಾಗಿಸಲು ಸಮಯ ನೀಡಬೇಕಾಗಿದೆ. ಮಂದಿರ ನಿರ್ಮಾಣದಿಂದ ಜನರ ವಿಶ್ವಾಸ ಹೆಚ್ಚುತ್ತಿದ್ದು ದೇಶದ ಭವ್ಯ ಭವಿಷ್ಯ ವಿಶ್ವಕ್ಕೆ ಮಾದರಿಯಾಗಲಿದೆ ಎಂದು ಉತ್ತರ ಮುಂಬಯಿ ಲೋಕಸಭಾ ಕ್ಷೇತ್ರದ ಸಂಸದ ಗೋಪಾಲ್ ಸಿ.ಶೆಟ್ಟಿ ತಿಳಿಸಿದರು.

ಬೊರಿವಿಲಿ ಪೂರ್ವದ ಮಗಥಾಣೆ ಸನಿಹದಲ್ಲಿನ ದೇವುಲಪಾಡ ಅಶ್ವತ್ತದಡಿ ಅಲ್ಲಿನÀ ಓಂ ಶ್ರೀ ಜಗಧೀಶ್ವರೀ ಸೇವಾ ಸಮಿತಿ ಮತ್ತು ಶ್ರೀ ಬ್ರಹ್ಮ ಬೈದರ್ಕಳ ಗರಡಿ ಇಂದಿಲ್ಲಿ ಐವತ್ತರ ಸೇವೆಯ ಸ್ವರ್ಣಮಹೋತ್ಸವ ಆಚರಿಸಿದ್ದು ಬೊರಿವಿಲಿಯ ಜ್ಞಾನ್ ಸಾಗರ್ ಆಂಪಿಥಿsಯೇಟರ್ ಸಭಾಗೃಹದಲ್ಲಿ ಆಯೋಜಿಸಿದ್ದ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಭ್ರಮದಲ್ಲಿ ಮುಖ್ಯ ಅತಿಥಿsಯಾಗಿದ್ದ ಗೋಪಾಲ್ ಶೆಟ್ಟಿ ದೀಪಹಚ್ಚಿ ಕಾರ್ಯಕ್ರಮಕ್ಕೆ ಚಾಲನೆಯನ್ನಿತ್ತರು ಹಾಗೂ ಗರಡಿಯ ಸುವರ್ಣ ಮಹೋತ್ಸವ ಸ್ಮರಣಿಕೆ ಬಿಡುಗಡೆ ಗೊಳಿಸಿ ಶುಭಾರೈಸಿ ಮಾತನಾಡಿದರು.

ಸಮಾರಂಭದಲ್ಲಿ ಹಿರಿಯ ಸಾಹಿತಿ ಬಾಬು ಶಿವ ಪೂಜಾರಿ, ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಸೂರ್ಯಕಾಂತ್ ಜೆ.ಸುವರ್ಣ, ನಿರ್ದೇಶಕರಾದ ಭಾಸ್ಕರ್ ಎಂ.ಸಾಲ್ಯಾನ್, ಸಂತೋಷ್ ಕೆ.ಪೂಜಾರಿ, ಉದ್ಯಮಿಗಳಾದ ಕರಿಯಪ್ಪ ಗೌಡ, ಮುಂಡಪ್ಪ ಎಸ್.ಪಯ್ಯಡೆÉ, ಡಾ| ಹರೀಶ್ ಬಿ.ಶೆಟ್ಟಿ, ಡಾ| ಸತೀಶ್ ಬಿ.ಶೆಟ್ಟಿ, ಪ್ರೇಮನಾಥ್ ಕೋಟ್ಯಾನ್, ಅವಿನಾಶ್ ಶೆಟ್ಟಿ, ಬಿಲ್ಲವರ ಅಸೋಸಿಯೇಶನ್ ಬೊರಿವಲಿ-ದಹಿಸರ್ ಸ್ಥಳೀಯ ಕಛೇರಿ ಕಾರ್ಯಾಧ್ಯಕ್ಷ ಮೋಹನ್ ಬಿ.ಅಮೀನ್, ಬಿಜೆಪಿ ಧುರೀಣ ಡಾ| ಯೋಗೇಶ್ ದುಬೆ ಮತ್ತಿತರ ಮಹಾನೀಯರು ಗೌರವ ಅತಿಥಿsಗಳಾಗಿದ್ದು ಕ್ಷೆತ್ರದ ಧಾರ್ಮಿಕ, ಸಾಮಾಜಿಕ ಸೇವೆಯನ್ನು ಪ್ರಶಂಸಿಸಿ ಶುಭ ಕೋರಿದರು.

ಓಂ ಶ್ರೀ ಜಗದೀಶ್ವರಿ ಸೇವಾ ಸಮಿತಿಯ ಸ್ಥಾಪಕ ಅಧ್ಯಕ್ಷ ಶೇಖರ್ ಇಂದು ಸಾಲಿಯಾನ್ ಅವರನ್ನು (ಪತ್ನಿ ಸುಮಿತ್ರಾ ಎಸ್.ಸಾಲಿಯಾನ್ ಮತ್ತು ಪರಿವಾರ ಸಹಿತ) ಅತಿಥಿüಗಳು ಸನ್ಮಾನಿಸಿ ಅಭಿನಂದಿಸಿದರು. ಗರಡಿಗೆ ಅಪಾರ ಸೇವೆ ನೀಡಿದ ದಾನಿಗಳು, ಗಣ್ಯರು, ಸೇವೆಗೈದು ಪ್ರಾತಃ ಸ್ಮರಣೀಯರಾದ ಮನೆಮಂದಿ ಹಾಗೂ ಸೇವಾ ಸಮಿತಿಯ ಹಿರಿಕಿರಿಯ ಸೇವಾಕರ್ತರು ಪದಾಧಿಕಾರಿಗಳು ಸತ್ಕರಿಸಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಸೇವಾ ಸಮಿತಿ ಅಧ್ಯಕ್ಷ ಲಕ್ಷ್ಮಣ್ ಎಸ್.ಸಾಲಿಯಾನ್, ಉಪಾಧ್ಯಕ್ಷ ನರಸಪ್ಪ ಕೆ.ಮಾರ್ನಾಡ್, ಗೌ| ಪ್ರ| ಕಾರ್ಯದರ್ಶಿ ಸಿಎ| ಅಭಿಜಿತ್ ಜಿ.ಶೆಟ್ಟಿ, ಗೌರವ ಕೋಶಾಧಿಕಾರಿ ಆಶಿಶ್ ಆರ್. ಕೋಟ್ಯಾನ್, ಜತೆ ಕಾರ್ಯದರ್ಶಿ ಸದಾಶಿವ ಎಸ್.ಸಾಲಿಯಾನ್, ಜತೆ ಕೋಶಾಧಿಕಾರಿ ಉಷಾ ಎಸ್.ಮೆಂಡನ್, ಸಲಹೆಗಾರರುಗ ಳಾದ ವಿಶ್ವನಾಥ ಬಿ.ಬಂಗೇರ, ರಜಿತ್ ಸುವರ್ಣ, ಪ್ರವೀಣ್ ವರಡ್ಕರ್ ಸೇರಿದಂತೆ ಮಾಜಿ-ಹಾಲಿ ಪದಾಧಿಕಾರಿಗಳು, ಆಡಳಿತ ಸಮಿತಿ, ಅರ್ಚಕ ವೃಂದ, ಯುವವಾಹಿನಿ ಮತ್ತು ಮಹಿಳಾ ಸಮಿತಿ ಹಾಗೂ ಸದಸ್ಯರನೇಕರು ಉಪಸ್ಥಿತರಿದ್ದರು.

ಹರಿಣಾಕ್ಷಿ ಬಿ.ಶೆಟ್ಟಿ, ಜಯಂತಿ ಕೋಟ್ಯಾನ್, ಪ್ರಮೋದ ಪೂಜಾರಿ ಪ್ರಾರ್ಥನೆಯನ್ನಾಡಿದರು. ಕಾರ್ಯಕ್ರಮ ಸಮಿತಿ ಅಧ್ಯಕ್ಷ ದಯಾನಂದ ಪೂಜಾರಿ ವಾರಂಗ ಸ್ವಾಗತಿಸಿ ಪ್ರಸ್ತಾವನೆಗೈದÀರು. ಪದಾಧಿಕಾರಿಗಳು ಅತಿಥಿüಗಳಿಗೆ ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು. ಸಚಿನ್ ಪೂಜಾರಿ ಭಿವಂಡಿ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಕರುಣಾಕರ್ ಕೆ.ಕಾಪು ವಂದನಾರ್ಪಣೆಗೈದರು.

ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸಮಿತಿಯ ಸದಸ್ಯರು, ಮಕ್ಕಳು ಸಂಸ್ಕೃತಿ ನೃತ್ಯ ವೈಭವ ಸಾದರ ಪಡಿಸಿದರು. ಮನೋರಂಜನೆಯ ಅಂಗವಾಗಿ ರಮಾನಂದ ನಾಯಕ್ ಜೋಡುರಸ್ತೆ ಕಾರ್ಕಳ ರಚಿಸಿ ಕರುಣಾಕರ ಕೆ.ಕಾಪು ನಿರ್ದೇಶಿತ `ಓಯಿಕ್‍ಲಾ ದಿನ ಬರೋಡ್' ತುಳು ಹಾಸ್ಯ ನಾಟಕವನ್ನು ಅಭಿನಯ ಮಂಟಪ (ರಿ.) ಮುಂಬಯಿ ತಂಡವು ಪ್ರದರ್ಶಿಸಿತು.

ದೇವುಲಪಾಡ ಕ್ಷೇತ್ರದ ಶ್ರೀ ಜಗನ್ಮಾತೆಯಾದ ಓಂ ಶ್ರೀ ಜಗಧೀಶ್ವರೀ ದೇವಸ್ಥಾನದ ಸನ್ನಿಧಿಯಲ್ಲಿ ದೇವರ ವಿಶೇಷ ಪೂಜೆ ಹಾಗೂ ಶ್ರೀಬ್ರಹ್ಮ ಬೈದರ್ಕಳರ ಶಕ್ತಿಯ ಪ್ರಭಾವದ ಕ್ಷೇತ್ರÀ ಪ್ರಸಿದ್ಧ ತುಳುನಾಡ ವೀರ ದೈವಗಳಾದ ದೈವಗಳಾದ ಕೋಟಿ-ಚೆನ್ನಯರ ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ರಘು ಕೆ.ಕೋಟ್ಯಾನ್ ಶಾಸ್ತ್ರಾನುಸಾರ ವಿಧಿಗಳನ್ನು ನೆರವೇರಿಸಿ ಆರತಿಗೈದÀು ನೆರೆದ ಭಕ್ತರಿಗೆ ಪ್ರಸಾದ ವಿತರಿಸಿ ಹರಸಿದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here