Thursday 29th, February 2024
canara news

ದಿ| ಜಯ ಎನ್.ಶೆಟ್ಟಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದ ಬಾಂಬೇ ಬಂಟ್ಸ್ ಅಸೋಸಿಯೇಶನ್

Published On : 22 Jan 2024   |  Reported By : Rons Bantwal


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜ.20: ಬಾಂಬೇ ಬಂಟ್ಸ್ ಅಸೋಸಿಯೇಶನ್ ಇದರ ಮಾಜಿ ಅಧ್ಯಕ್ಷರಾಗಿದ್ದು ಇತ್ತೀಚೆಗೆ (ಡಿ. 20) ಸ್ವರ್ಗೀಯರಾದ ಸುರತ್ಕಲ್ ಮಧ್ಯಗುತ್ತು ಜಯ ಎನ್.ಶೆಟ್ಟಿ ಅವರಿಗೆ ಬಂಟ್ಸ್ ಅಸೋಸಿಯೇಶನ್ ವತಿಯಿಂದ ಇಂದಿಲ್ಲಿ ಶ್ರದ್ಧಾಂಜಲಿ ಸಭೆ ಆಯೋಜಿಸಿ ಬಾಷ್ಪಾಂಜಲಿ ಕೋರಲಾಯಿತು.

ಸಯಾನ್ ನಿತ್ಯಾನಂದ ಸಭಾಗೃಹದಲ್ಲಿ ಇಂದಿಲ್ಲಿ ಶÀನಿವಾರ ಸಂಜೆ ಬಾಂಬೆ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಸಿಎ ಸುರೇಂದ್ರ ಕೆ.ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಸಲಾದ ಸಂತಾಪ ಸೂಚನಾ ಸಭೆಯಲ್ಲಿ ಅಸೋಸಿಯೇಶನ್‍ನ ಉಪಾಧ್ಯಕ್ಷ ನ್ಯಾಯವಾದಿ ಡಿ.ಕೆ.ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಐಕಳ ಕಿಶೋರ್ ಕೆ.ಶೆಟ್ಟಿ, ಗೌರವ ಕೋಶಾಧಿಕಾರಿ ಸಿಎ| ವಿಶ್ವನಾಥ್ ಎಸ್.ಶೆಟ್ಟಿ, ಜತೆ ಕಾರ್ಯದರ್ಶಿ ನ್ಯಾಯವಾದಿ ಗುಣಕರ ಡಿ.ಶೆಟ್ಟಿ, ಜತೆ ಕೋಶಾಧಿಕಾರಿ ಸಿಎ| ದಿವಾಕರ್ ಡಿ.ಶೆಟ್ಟಿ, ಮಹಿಳಾ ವಿಭಾಗದ ಉಪಕಾರ್ಯಾಧ್ಯಕ್ಷೆ ಶಾಂತಾ ಎನ್.ಶೆಟ್ಟಿ, ಯುವ ವಿಭಾಗದ ಉಪಾಧ್ಯಕ್ಷ ನಿಶಾನ್ ಶೆಟ್ಟಿ ವೇದಿಕೆಯಲ್ಲಿದ್ದು ಜಯ ಎನ್.ಶೆಟ್ಟಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಶ್ರದ್ಧಾಂಜಲಿ ಕೋರಿದರು.

ಮೃದು ಸ್ವಭಾವಿ, ಸಹೃದಯಿಯಾಗಿದ್ದ ಜಯಣ್ಣ, ಬದುಕಿನ ಪ್ರಯಾಣದ ನಡುವೆ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಸೇವಾ ಸಾಧನೆಗೈದು ಜನಪ್ರಿಯರೂ ನಮಗೆಲ್ಲ ಮಾರ್ಗದರ್ಶಕರೂ ಆಗಿದ್ದವರು. ನಾವು ಕಳೆದುಕೊಂಡ ಹಿರಿಯ ಮುಂದಾಳು ಜಯಣ್ಣರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಪ್ರಾಥಿರ್üಸುತ್ತೇವೆ. ಅವರ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿ-ತಾಳ್ಮೆ ಶ್ರೀಹರಿ ಅವರ ಕುಟುಂಬವರ್ಗಕ್ಕೆ ದಯಪಾಲಿಸಲಿ ಎÉಂದು ಪ್ರಾರ್ಥಿಸುತ್ತೇನೆ ಎಂದು ಸುರೇಂದ್ರ ಕೆ.ಶೆಟ್ಟಿ ಶ್ರದ್ಧಾಂಜಲಿ ಕೋರಿದರು.

ಚೆಂಬೂರು ಕರ್ನಾಟಕ ಸಂಘದ ಮಾಜಿ ಅಧ್ಯಕ್ಷರಾಗಿದ್ದ ಮೃತರ ಶೋಕಸಭೆಯಲ್ಲಿ ಅಸೋಸಿಯೇಶನ್‍ನ ಸಮಿತಿ ಸದಸ್ಯರು, ಮಾಜಿ ಅಧ್ಯಕ್ಷರು, ಟ್ರಸ್ಟಿಗಳು, ಸದಸ್ಯರು ಹಾಗೂ ಜಯ ಶೆಟ್ಟಿ ಅವರ ಪತ್ನಿ ಜಯಂತಿ ಜೆ.ಶೆಟ್ಟಿ, ಪುತ್ರ ಆಶ್ವಿನ್ ಜೆ.ಶೆಟ್ಟಿ, ಪುತ್ರಿ ಆಶಾ ಶೆಟ್ಟಿ, ಸೊಸೆ ಕೃತಿ ಎ.ಶೆಟ್ಟಿ ಸೇರಿದಂತೆ ಅಭಿಮಾನಿಗಳು, ಕುಟುಂಬಸ್ಥರು, ಬಂಧು-ಬಳಗ ಉಪಸ್ಥಿತರಿದ್ದು ಅಗಲಿದ ಚೇತನಕ್ಕೆ ಪುಷ್ಫಾಂಜಲಿ ಅರ್ಪಿಸಿ ನುಡಿನಮನ ಸಲ್ಲಿಸಿದರು.

ಅಸೋಸಿಯೇಶನ್‍ನ ಮಾಜಿ ಅಧ್ಯಕ್ಷರುಗಳಾದ ಎನ್.ಸಿ ಶೆಟ್ಟಿ, ನ್ಯಾಯವಾದಿ ಕಡಂದಲೆ ಪರಾರಿ ಪ್ರಕಾಶ್ ಎಲ್.ಶೆಟ್ಟಿ, ಜಯಂತ್ ಕೆ.ಶೆಟ್ಟಿ, ನ್ಯಾಯವಾದಿ ರತ್ನಾಕರ್ ವಿ.ಶೆಟ್ಟಿ, ನ್ಯಾಯವಾದಿ ಅಶೋಕ್ ಡಿ.ಶೆಟ್ಟಿ, ಉಪ್ಪೂರು ಶೇಖರ್ ಶೆಟ್ಟಿ, ನ್ಯಾ| ಸುಭಾಷ್ ಬಿ.ಶೆಟ್ಟಿ, ಮುರಳೀ ಕೆ.ಶೆಟ್ಟಿ, ಮಾಜಿ ಮಹಿಳಾ ವಿಭಾಗಧ್ಯಕ್ಷೆ ಶೈಲಜಾ ಎ.ಶೆಟ್ಟಿ, ಆಶಾ ಎಸ್.ಶೆಟ್ಟಿ ಮುಂತಾದ ಗಣ್ಯರು ಹಾಜರಿದ್ದು ಸಂತಾಪ ವ್ಯಕ್ತ ಪಡಿಸಿ, ಪುಷ್ಫನಮನದೊಂದಿಗೆ ಶ್ರದ್ಧಾಂಜಲಿ ಅರ್ಪಿಸಿದರು. ನಾರಾಯಣ ಶೆಟ್ಟಿ ನಂದಳಿಕೆ ಸಂತಾಪ ಕಲಾಪ ನಿರೂಪಿಸಿದರು.

 
More News

ಖ್ಯಾತ ಸಿನಿಮಾ ನಟ & ಸಿರಿ ಬ್ರ್ಯಾಂಡ್ ರಾಯಭಾರಿ ಶ್ರೀ ರಮೇಶ್ ಅರವಿಂದ್ ಸಿರಿ ಸಂಸ್ಥೆಯ ಪ್ರಧಾನ ಕಛೇರಿಗೆ ಭೇಟಿ
ಖ್ಯಾತ ಸಿನಿಮಾ ನಟ & ಸಿರಿ ಬ್ರ್ಯಾಂಡ್ ರಾಯಭಾರಿ ಶ್ರೀ ರಮೇಶ್ ಅರವಿಂದ್ ಸಿರಿ ಸಂಸ್ಥೆಯ ಪ್ರಧಾನ ಕಛೇರಿಗೆ ಭೇಟಿ
ಆಸರೆ ಗೆಳೆಯರ ಬಳಗ ಮಂಗಳೂರು ರಿ ಮಂಗಳೂರು ಏಳನೆಯ ವರ್ಷದ ಸ್ಥಾಪನಾ ದಿನಾಚರಣೆ
ಆಸರೆ ಗೆಳೆಯರ ಬಳಗ ಮಂಗಳೂರು ರಿ ಮಂಗಳೂರು ಏಳನೆಯ ವರ್ಷದ ಸ್ಥಾಪನಾ ದಿನಾಚರಣೆ
ಎಚ್.ಡಿ. ದೇವೆಗೌಡ ಹಾಗೂ ಧರ್ಮಪತ್ನಿ ಶ್ರೀಮತಿ ಚೆನ್ನಮ್ಮ ದಂಪತಿ ಧರ್ಮಸ್ಥಳಕ್ಕೆ ಭೇಟಿ
ಎಚ್.ಡಿ. ದೇವೆಗೌಡ ಹಾಗೂ ಧರ್ಮಪತ್ನಿ ಶ್ರೀಮತಿ ಚೆನ್ನಮ್ಮ ದಂಪತಿ ಧರ್ಮಸ್ಥಳಕ್ಕೆ ಭೇಟಿ

Comment Here