Saturday 27th, April 2024
canara news

ಗಾಣಿಗ ಸಮಾಜ ಮುಂಬಯಿ ಸಂಸ್ಥೆಯಿಂದ ಪುನರ್ವಾಸ್ ವಿಕಲಚೇತನ ಮಕ್ಕಳ ಭೇಟಿಗಾಣಿಗ ಸಮಾಜ ಮುಂಬಯಿ ಸಂಸ್ಥೆಯಿಂದ ಪುನರ್ವಾಸ್ ವಿಕಲಚೇತನ ಮಕ್ಕಳ ಭೇಟಿ

Published On : 02 Mar 2024   |  Reported By : Rons Bantwal


ವಿಕಲಚೇತನ ಮಕ್ಕಳ ಪರೋಪಕಾರಕ್ಕೆ ಸ್ಪಂದಿಸಬೇಕು.: ಬೈಕಾಡಿ ವಾಸುದೇವ ರಾವ್
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಮಾ.02: ಗಾಣಿಗ ಸಮಾಜ ಮುಂಬಯಿ (ಜಿಎಸ್‍ಎಂ) ಇದರ ಪದಾಧಿಕಾರಿಗಳು ಜಿಎಸ್‍ಎಂ ಅಧ್ಯಕ್ಷ ಬೈಕಾಡಿ ವಾಸುದೇವ ರಾವ್ (ಬಿ.ವಿ ರಾವ್) ಮುಂದಾಳುತ್ವದಲ್ಲಿ ಕಳೆದ ಶುಕ್ರವಾರ (ಮಾ.01) ದಾನಶೀಲ ಕಾರ್ಯಕ್ರಮವನ್ನಾಗಿಸಿ ಉಪನಗರ ಗೋರೆಗಾಂವ್ ಪಶ್ಚಿಮದ ಎಸ್.ವಿ ರಸ್ತೆಯಲ್ಲಿನ ಪುನರ್ವಾಸ್ ಅಜ್ಯುಕೇಶನ್ ಸೊಸೈಟಿ ಇದರ ವಿಕಲಚೇತನ ಮಕ್ಕಳ ಶಾಲೆಗೆ ಭೇಟಿಯನ್ನೀಡಿತು.

ಈ ಮಾನಸಿಕ ಅಂಗವಿಕಲ ಸಂಸ್ಥೆಯ ವಿಶೇಷ ಶಾಲಾ ಪ್ರಾಂಶುಪಾಲೆ ಶುಭಾಂಗಿ ಪವಾರ್ ಶಾಲೆಯ ವಿವಿಧ ತರಗತಿಗಳಿಗೆ (3 ರಿಂದ 18 ವರ್ಷದ ವಿದ್ಯಾಥಿರ್üಗಳ ಕಕ್ಷಕ್ಕೆ) ಕರೆದುಕೊಂಡು ಹೋಗಿ ಸಂಸ್ಥೆಯ ಕಾರ್ಯ ಚಟುವಟಿಕೆಗಳನ್ನು ಸ್ಥೂಲವಾಗಿಸಿ ತಿಳಿಸಿ ವಿದ್ಯಾಥಿರ್üಗಳ ದೈನಂದಿನ ಚಟುವಟಿಕೆ ಹಾಗೂ ವಸ್ತು ಸ್ಥಿತಿಯನ್ನು ಮನವರಿಸಿದರು ಮತ್ತು ಹಲವಾರು ನಿಯೋಜಿತ ಯೋಜನೆಗಳ ಬಗ್ಗೆ ಮಾಹಿತಿಯನ್ನಿತ್ತರು.

ಬುದ್ಧಿಜೀವಿಗಳಾದ ಮಾನವರು ಸಹಾನುಭೂತಿಯುಳ್ಳವರಾಗಿ ದಾನಶೀಲ ಸ್ವಭಾವವನ್ನು ಮೈಗೂಡಿಸಿ ಇಂತಹ ಮಕ್ಕಳಲ್ಲಿ ಅನುಕಂಪ ಮೆರೆದಾಗ ಶ್ರೀದೇವರ ಅನುಗ್ರಹ ತನ್ನಿತಾನೇ ಪ್ರಾಪ್ತಿಸುವುದು. ಗಾಣಿಗ ಸಮಾಜದ ಪದಾಧಿಕಾರಿಗಳು, ಸಮಿತಿ ಸದಸ್ಯರು, ಬಂಧುಗಳು ಇಂತಹ ವಿಕಲಚೇತನ ಮಕ್ಕಳ ಪರೋಪಕಾರಕ್ಕೆ ಸ್ಪಂದಿಸಬೇಕು. ವಿಶೇಷವಾಗಿ ನಮ್ಮಲ್ಲಿನ ಮಕ್ಕಳಲ್ಲಿ ಈ ಬಗ್ಗೆ ಅರಿವು ಮೂಡಿಸಬೇಕು. ಮುಂದೆ ಇಂತಹ ಹಲವಾರು ಕಾರ್ಯಕ್ರಮವನ್ನು ಹಮ್ಮಿಕೊಳ್ಳುವಲ್ಲಿ ಗಾಣಿಗರು ಕಾರ್ಯೋನ್ಮುಖರಾಗ ಬೇಕೆಂದು ಸಂಘದ ಅಧ್ಯಕ್ಷ ಬಿ.ವಿ ರಾವ್ ವಿನಂತಿಸಿದರು.

1981ರಲ್ಲಿ 2 ವಿದ್ಯಾಥಿರ್üಗಳೊಂದಿಗೆ ಪಿ.ಎನ್ ಮೋದಕ್ ಅವರು ಪುನರ್ವಸ ಶಾಲೆಯನ್ನು ಪ್ರಾರಂಭಿಸಿ ಸ್ಥಾಪಕರೆಣಿಸಿದ್ದು ಈ ದೇವರಜ್ಜಿ ಗುಂಡೇಚ ಪುನರ್ವಸ ವಿಶೇಷ ಶಾಲೆ ಮತ್ತು ಮಾನಸಿಕ ವಿಕಲಚೇತನರ ವೃತ್ತಿಪರ ತರಬೇತಿ ಕೇಂದ್ರ ನೂರಾರು ಮಕ್ಕಳಪಾಲಿನ ಆಶ್ರಯತಾಣವಾಗಿದೆ. ಸುಮಾರು ಮೂರ್ನಾಲ್ಕು ಗಂಟೆಗಳ ಅಮೂಲ್ಯ ಸಮಯವನ್ನು ಅಲ್ಲಿನ ಬುದ್ಧಿಮಾಂದ್ಯ ವಿದ್ಯಾಥಿರ್üಗಳೊಂದಿಗೆ ಕಳೆದ ಗಾಣಿಗ ಸಮಾಜ ಅಲ್ಲಿನ ಮಕ್ಕಳ ಮನಕಲಕುವ ಸನ್ನಿವೇಶವನ್ನರಿತು ಮೂರು ವಿದ್ಯಾಥಿರ್üಗಳ ವಾರ್ಷಿಕ ವಿದ್ಯಾಭ್ಯಾಸದ ಖರ್ಚನ್ನು ಭರಿಸುವ "ಬಾಲಕ ಪಾಲಕ ಯೋಜನೆ"ಯಲ್ಲಿ ಪಾಲ್ಗೊಳ್ಳುವ ನಿರ್ಧಾರ ತೆಗೆದುಕೊಂಡಿತು.

ಜಿಎಸ್‍ಎಂ ಉಪಾಧ್ಯಕ್ಷ ಗೋಪಾಲಕೃಷ್ಣ ಗಾಣಿಗ, ಕಾರ್ಯದರ್ಶಿ ಗಂಗಾಧರ ಗಾಣಿಗ, ಜೊತೆ ಕಾರ್ಯದರ್ಶಿ ಜಗದೀಶ್ ಗಾಣಿಗ, ಯುವ ವಿಭಾಗಧ್ಯಕ್ಷ ಗಣೇಶ್ ಕುತ್ಪಾಡಿ, ವಿದ್ಯೋದಯ ಸಮಿತಿ ಕಾರ್ಯಾಧ್ಯಕ್ಷ ದಿನೇಶ್ ರಾವ್ ಹಾಗೂ ಸಮಿತಿ ಸದಸ್ಯರಾದ ರಾಜೇಶ್ ಕುತ್ಪಾಡಿ, ರಮೇಶ್ ಗಾಣಿಗ, ಮಾಧವ್ ಗಾಣಿಗ, ನಾಗರಾಜ್ ಗಾಣಿಗ ಮತ್ತು ವಿಶೇಷವಾಗಿ ಪುಟಾಣಿ ಮಾಸ್ಟರ್ ಯುವಾನ್ ರಾಜೇಶ್ ಮತ್ತು ಬೇಬಿ ಧ್ರುತಿ ಗಣೇಶ್ ಜೊತೆಗಿದ್ದು ಶಾಲಾ ವಿದ್ಯಾಥಿರ್üಗಳೊಂದಿಗೆ ಪ್ರೀತಿ ಸಂವಾದ ನಡೆಸಿದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here