Thursday 8th, May 2025
canara news

ಬ್ರಹ್ಮಕುಮಾರಿ ಸಂಸ್ಥೆಯ ಸಯನ್ ಸೆಂಟರ್‍ನಿಂದ ಮಹಿಳಾ ದಿನಾಚರಣೆ

Published On : 09 Mar 2024   |  Reported By : Rons Bantwal


ಪಕ್ಷಪಾತ ಮುಕ್ತ ಸಮಾಜಕ್ಕಾಗಿ ಮಹಿಳೆಯರು ಶ್ರಮಿಸಬೇಕು : ಸಂತೋಷ ದೀದೀಜಿ

ಮುಂ¨ಯಿ, ಮಾ.09: ಮಹಿಳೆಯರಿಗೂ ಸಮಾನ ಸ್ಥಾನಮಾನ ಸಿಗಬೇಕು ಎಂಬುದು ಅಂತರಾಷ್ಟ್ರೀಯ ಮಹಿಳಾ ದಿನದ ಉದ್ದೇಶವಾಗಿದೆ. ಮಹಿಳಾ ಸಬಲೀಕರಣದ ಮಹತ್ವ ಸಾರಲು ಲಿಂಗ ಪಕ್ಷಪಾತ ಮುಕ್ತ ಸಮಾಜವನ್ನು ನಿರ್ಮಿಸಲು ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಕೊಡುಗೆಯನ್ನು ಸ್ಮರಿಸಲು ,ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ನಿಂದನೆಯನ್ನು ತಡೆಯಲು ಜಾಗೃತಿ ಮೂಡಿಸಲು ಮತು ಮಹಿಳೆಯರ ಸಮಾನ ಹಕ್ಕುಗಳನ್ನು ಪ್ರತಿಪಾದಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಜನರಿಗೆ ಅರಿವು ಮೂಡಿಸಲು ಅನೇಕ ಕಾರ್ಯಕ್ರಮಗಳು ಮತ್ತು ಅಭಿಯಾನಗಳನ್ನು ಜಗತ್ತಿನ ಅತ್ಯಂತ ಆಚರಿಸಲಾಗುತ್ತದೆ. ಮಹಿಳಾ ಜಾಗೃತಿಗೊಳಿಸಿ ಅನೇಕ ಮಹತ್ವದ ವಿಚಾರವನ್ನು ಬ್ರಹ್ಮಕುಮಾರಿ ಸಂಸ್ಥೆಯ ಆಡಳಿತಾಧಿಕಾರಿ ಸಯನ್ ಸೆಂಟರ್‍ನ ಮುಖ್ಯ ಸಂಚಾಲಕಿ ಸಂತೋಷ ದೀದೀಜಿ ತಿಳಿಸಿದರು.

ಮಹಿಳಾ ದಿನಾಚರಣೆಯ ಅಂಗವಾಗಿ ಬ್ರಹ್ಮಕುಮಾರಿ ಸಂಸ್ಥೆಯ ಸಯನ್ ಸೆಂಟರ್ ಇಲ್ಲಿನ ಪ್ರತೀಕ್ಷನಗರದಲ್ಲಿ ಮಹಿಳೆಯರ ಕಾರ್ಯಕ್ರಮ ಆಯೋಜಿಸಿದ್ದು ಮಹಿಳೆಯರನ್ನುದ್ದೇಶಿಸಿ ಆಶೀರ್ವಾದ ವಚನ ನೀಡಿ ಸಂತೋಷ ದೀದೀಜಿ ಮಾತನಾಡಿದರು.

ಹಿಂದೂ ಧರ್ಮವು ಯತ್ರ ನಾರ್ಯಸ್ತು ಪೂಜ್ಯಂತೆ ರಮತೇ ತತ್ರ ದೇವತಾ ಅಂದರೆ ಎಲ್ಲಿ ಸ್ತ್ರೀಯರನ್ನು ಗೌರವಿಸಲಾಗುತ್ತದೆಯೊ ಅಲ್ಲಿ ದೇವತೆಗಳು ವಾಸ ಮಾಡುತ್ತಾರೆಂಬ ವ್ಯಾಖ್ಯಾನವನ್ನು ಮಂಡಿಸುತ್ತಲೆ ನಸ್ರಿ ಸ್ವಾತಂತ್ರ ಮರ್ಹತಿಯನ್ನು ಮನುಸ್ಮೃತಿ ರೂಢಿಗೊಳಿಸಿದೆ. ಇದಕ್ಕೆ ವಿವಿಧ ಧರ್ಮಶಾಸ್ತ್ರ ಗ್ರಂಥಗಳು ಕಾರಣವಾಗಿದೆ ಎಂದು ನವಿಮುಂಬಯಿಯ ಸಂಚಾಲಕಿ ಬಿ.ಕೆ ಶೀಲು ತಿಳಿಸಿ ಭಗವದ್ಗೀತೆಯಲ್ಲಿರುವ ಸ್ತ್ರೀಯರ ಮಹತ್ವದ ಕುರಿತು ಹೇಳಿದರು.

ಭಾರತೀಯ ಶಿಕ್ಷಣದ ಮೂಲ ಆಧಾರವೇ ವ್ಯಕ್ತಿತ್ವ ವಿಕಾಸನ ಆಗಿದೆ, ಆತ್ಮ ಸಾಕ್ಷಾತ್ಕಾರ ವ್ಯಕ್ತಿತ್ವದ ವಿಕಾಸನಕ್ಕೆ ಆಧ್ಯಾತ್ಮಿಕ ಶಿಕ್ಷಣದ ಜೊತೆಯಲ್ಲಿ ಶಾರೀರಿಕ ಶಿಕ್ಷಣವು ಅಗತ್ಯವಾಗಿದೆ ಎಂದು ರಾಜಯೋಗಿ ಮಾಟುಂಗ ಸೆಂಟರ್ ವಂದನಾ ಬೆಹನಜಿ ಶಿಕ್ಷಣದ ಕುರಿತು ವಿಚಾರ ವಿನಿಮಯ ಮಾಡಿದರು.

ಭಗವದ್ಗೀತೆಯು ಮಾನವನ ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಕನ್ನಡಿಯಾಗಿದೆ ಒಂದು ಜಾತಿ ಅಥವಾ ಮತಕ್ಕೆ ಮಾತ್ರ ಸೀಮಿತವಾಗಿದೆ. ಇಡೀ ಮಾನವ ಜನಾಂಗಕ್ಕೆ ದಾರಿ ದೀಪವಾಗಿದೆ ಮತ್ತು ಬ್ರಹ್ಮಕುಮಾರಿ ಸಂಸ್ಥೆಯ ಪರಿಚಯವನ್ನು ಸಹೋದರಿ ಮಾಲಾ ವ್ಯಕ್ತಪಡಿಸಿದರು.

ಸಮಾಜ ಸೇವಕಿ ಕಂಚನ ವೆಂಕಟೇಶ್ ಮತ್ತು ಗೌತಮಿ ಸ್ಕೂಲಿನ ಪ್ರಿನ್ಸಿಪಲ್ರಾದ ಸುನಂದ ಮಾನವೀಯ ಮೌಲ್ಯದ ಬಗ್ಗೆ ತನ್ನ ವಿಚಾರವನ್ನು ಮಂಡಿಸಿದರು. ಬಿಜೆಪಿ ವಾರ್ಡ್ ಅಧ್ಯಕ್ಷರಾದ ಮಾಯಾ ದೋಯಿಪೆÇಡೆ ಮಹಿಳೆಯರಿಗೆ ಶುಭಕೋರಿ ನಾನು ಬ್ರಹ್ಮಕುಮಾರಿ ಸಂಸ್ಥೆಗೆ ಏನಾದರೂ ಸಹಾಯ ಬೇಕಾದರೆ ನಾನು ಸಿದ್ಧನಾಗಿದ್ದೇನೆ ಎಂದರು.

ನೃತ್ಯ, ಸಂಗೀತ, ಸಂಸ್ಕೃತಿ ಕಾರ್ಯಕ್ರಮ ಆಯೋಜಿಸಲಾಗಿ ಮಹಾಶಿವರಾತ್ರಿ ಮತ್ತು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಗಿದ್ದು ಲಾಲ್‍ಭಾಗ್‍ನ ಸಹೋದರಿ ದಾನೇಶ್ವರಿ ಸ್ವಾಗತಿಸಿದರು. ಚುನ್ನಾಭಟ್ಟಿಯ ಸಪ್ನಾ ಬೆಹೆನಜಿ ಕಾರ್ಯಕ್ರಮ ನಿರೂಪಿಸಿದರು. ಪರೇಲ್ ಸೆಂಟರ್‍ನ ಭಾವನಾ ವಂದಿಸಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here