Wednesday 24th, April 2024
canara news

ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Published On : 09 Mar 2024   |  Reported By : Rons Bantwal


ಘಟಕಧ್ಯಕ್ಷ ಡಾ| ಆರ್.ಕೆ ಶೆಟ್ಟಿ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ

ಮುಂಬಯಿ (ಆರ್‍ಬಿಐ), ಮಾ.07: ಕರ್ನಾಟಕ ಜಾನಪದ ಪರಿಷತ್ತು (ರಿ.) ಬೆಂಗಳೂರು ಮಹಾರಾಷ್ಟ್ರ ಘಟಕ ಇದರ ದ್ವಿತೀಯ ವಾರ್ಷಿಕೋತ್ಸವವು ಮಾ.24ರಂದು ಅದ್ದೂರಿಯಾಗಿ ಸಂಭ್ರಮಿಸಲಿದ್ದು ಆ ಪ್ರಯುಕ್ತ ಜಾನಪದ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಡಾ| ಆರ್.ಕೆ ಶೆಟ್ಟಿ ಅಧ್ಯಕ್ಷತೆಯಲ್ಲಿ ಕಳೆದ ಬುಧವಾರ (ಮಾ.05) ದಾದರ್ ಶಿವಾಜಿಪಾರ್ಕ್ ಅಲ್ಲಿನ ಕೊಹಿನೂರ್ ಸ್ಕ್ವೇೀರ್‍ನ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಸಲ್ಪಟ್ಟಿತು.

ಇದೇ ಬರುವ ಮಾ.24ರ ಆದಿತ್ಯವಾರ ಅಪರಾಹ್ನ 2.00 ಗಂಟೆಯಿಂದ ಕುರ್ಲಾ ಪೂರ್ವದಲ್ಲಿನ ಬಂಟರ ಭವನ ಸಭಾಗೃಹದಲ್ಲಿ ಮಹಾರಾಷ್ಟ್ರ ಘಟಕದ 2ನೇ ವಾರ್ಷಿಕೋತ್ಸವ ಡಾ| ಆರ್.ಕೆ ಶೆಟ್ಟಿ ಸಭಾಧ್ಯಕ್ಷತೆಯಲ್ಲಿ ನೆರವೇರÀಲಿದ್ದು, ಮುಖ್ಯ ಅತಿಥಿsಯಾಗಿ ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರವೀಣ್ ಬಿ.ಶೆಟ್ಟಿ, ಅತಿಥಿs ಅಭ್ಯಾಗತರುಗಳಾಗಿ ವಿಶ್ರಾಂತ ಕುಲಪತಿ ಹಾಗೂ ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ಇದರ ಕಾರ್ಯಾಧ್ಯಕ್ಷ ಪೆÇ್ರ| ಇ.ಟಿ ಬೋರಲಿಂಗಯ್ಯ ಆಗಮಿಸಲಿದ್ದು ಬೃಹನ್ಮುಂಬಯಿಯಲ್ಲಿನ ಹೆಸರಾಂತ ಕತೆಗಾರ್ತಿ, ಕಾದಂಬರಿಕಾರೆ ಮಿತ್ರಾ ವೆಂಕಟ್ರಾಜ್ ಮತ್ತು ಕರ್ನಾಟಕದ ವಿದ್ವಾಂಸ ಡಾ| ಅರುಣ್ ಉಲ್ಲಾಳ್ ಪಾಲ್ಗೊಳ್ಳÀಲಿದ್ದಾರೆ ಎಂದು ಆರ್.ಕೆ ಶೆಟ್ಟಿ ಸಭೆಗೆ ತಿಳಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ತಾಳ ಮದ್ದಳೆ ಪ್ರಹಸನ, ಜಾನಪದ ಸಿರಿಸಿಂಚನ ನೃತ್ಯ ಸ್ಪರ್ಧೆ ಹಾಗೂ ಬೆಂಗಳೂರುನ ವಿವಿಧ ಕಲಾ ತಂಡಗಳಿಂದ ಜಾನಪದ ನೃತ್ಯ ವೈಭವ ಜರಗಲಿದೆ ಎಂದರು.

ಸಭೆಯಲ್ಲಿ ಜಾನಪದ ಮಹಾರಾಷ್ಟ್ರ ಘಟಕದ ಪದಾಧಿಕಾರಿಗಳು, ಸಮಿತಿ ಸದಸ್ಯರಾದ ಡಾ| ಸುರೇಂದ್ರಕುಮಾರ್ ಹೆಗ್ಡೆ, ಅಶೋಕ್ ಪಕ್ಕಳ, ಗಣೇಶ್ ನಾಯಕ್, ಶಿವರಾಮ್ ಎನ್.ಶೆಟ್ಟಿ, ಶ್ರೀನಿವಾಸ ಪಿ.ಸಾಫಲ್ಯ, ಲ| ಕೃಷ್ಣಯ್ಯ ಹೆಗ್ಡೆ, ಕರ್ನೂರು ಮೋಹನ್ ರೈ, ಪದ್ಮನಾಭ ಸಸಿಹಿತ್ತು, ನವೀನ್ ಶೆಟ್ಟಿ ಇನ್ನ ಬಾಳಿಕೆ, ಅನಿತಾ ಶೆಟ್ಟಿ, ಪಿ.ಧನಂಜಯ ಶೆಟ್ಟಿ, ಅಡ್ವಕೇಟ್ ಆರ್.ಎಂ ಭಂಡಾರಿ, ಸುಶೀಲಾ ಎಸ್.ದೇವಾಡಿಗ, ಲ| ಮುರಳೀಧರ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ವಿನಯ್ ಪೂಜಾರಿ, ಎನ್.ಪೃಥ್ವಿರಾಜ್ ಮುಂಡ್ಕೂರು, ಕಮಲಾಕ್ಷ ಸರಾಫ್, ಕುಸುಮಾ ಸಿ.ಪೂಜಾರಿ, ಶಾರದಾ ಅಂಬೆಸಂಗೆ ಮೊದಲಾದವರು ಉಪಸ್ಥಿತರಿದ್ದು ವಾರ್ಷಿಕೋತ್ಸದ ಯಶಸ್ಸಿಗೆ ಸೂಕ್ತ ಅಭಿಪ್ರಾಯಗಳನ್ನಿತ್ತು ಸಹಕರಿಸಿದರು. ಅಶೋಕ್ ಪಕ್ಕಳ ಸ್ವಾಗತಿಸಿ ಧನ್ಯವದಿಸಿದರು.

 
More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here