Saturday 13th, July 2024
canara news

ಸಂಸದ ಗೋಪಾಲ್ ಸಿ.ಶೆಟ್ಟಿ ಆಯೋಜಿಸಿದ `ಶ್ರೀರಾಮ ಭಂಡಾರ' ಧಾರ್ಮಿಕ ಕಾರ್ಯಕ್ರಮ

Published On : 02 Jun 2024   |  Reported By : Rons Bantwal


ಫಾಲ್ಘುನಿ ಪಾಠಕ್ ತಂಡದಿಂದ `ಏಕ್ ಶಾಮ್ ಶ್ರೀ ರಾಮ್ ಕೆ ನಾಮ್'ಭಕ್ತಿ ಲಹರಿ

ಮುಂಬಯಿ (ಆರ್‍ಬಿಐ), ಜೂ.01: ಉತ್ತರ ಪ್ರದೇಶದಲ್ಲಿನ ಅಯೋಧ್ಯೆಗೆ ಸ್ವಪರಿವಾರದ ಸಹಿತ ತೆರಳಿ ಅಲ್ಲಿ ಪ್ರತಿಷ್ಠಾಪಿತ ಮರ್ಯಾದಾ ಪುರುಷೋತ್ತಮ ಭಗವಾನ್ ಶ್ರೀರಾಮನ ದರ್ಶನದೊಂದಿಗೆ ಆಶೀರ್ವಾದಿತ ಉತ್ತರ ಮುಂಬಯಿ ಲೋಕಸಭಾ ಕ್ಷೇತ್ರದ ಸಂಸದ ಗೋಪಾಲ್ ಸಿ.ಶೆಟ್ಟಿ ಅವರು ಇಂದಿಲ್ಲಿ ಶನಿವಾರ ಸಂಜೆ ಕಾಂದಿವಿಲಿ ಪೆÇಯಿಸರ್ ಜಿಮ್ಖಾನದ ಸನಿಹದ ಸಾಪ್ತಾಹ ಮೈದಾನದಲ್ಲಿ `ಶ್ರೀರಾಮ ಭಂಡಾರ' ಧಾರ್ಮಿಕ ಕಾರ್ಯಕ್ರಮ ನೆರವೇರಿಸಿದರು.

ಶ್ರೀ ಗೋಪಾಲ್ ಸಿ.ಶೆಟ್ಟಿ (ಸಂಸದ) ತುಳು-ಕನ್ನಡಿಗರ ಅಭಿಮಾನಿ ಬಳಗದ ಮುಖ್ಯಸ್ಥ, ಉತ್ತರ ಮುಂ¨ಯಿ ಬಿಜೆಪಿ ಉಪಾಧ್ಯಕ್ಷ ಎರ್ಮಾಳ್ ಹರೀಶ್ ಶೆಟ್ಟಿ ಸಂಯೋಜನೆಯಲ್ಲಿ ನಡೆಸಲಾದ ಶ್ರೀರಾಮನ ಮಹಾಪ್ರಸಾದ (ಭಂಡಾರ) ಕಾರ್ಯಕ್ರಮದಲ್ಲಿ ಗರ್ಭಾ ರಾಣಿ ಫಾಲ್ಘುನಿ ಪಾಠಕ್ ತಂಡವು `ಏಕ್ ಶಾಮ್ ಶ್ರೀ ರಾಮ್ ಕೆ ನಾಮ್' ಭಜನಾ ಕಾರ್ಯಕ್ರಮ ಪ್ರಸ್ತುತ ಪಡಿಸಿದರು.

 

ಈ ಸಂದರ್ಭದಲ್ಲಿ ಉಷಾ ಗೋಪಾಲ್ ಶೆಟ್ಟಿ (ಪತ್ನಿ), ರಾಕೇಶ್ ಗೋಪಾಲ್ ಶೆಟ್ಟಿ, ಜ್ಯೋತಿ ಸುದರ್ಶನ್, ಐಶ್ಚರ್ಯ ಆರ್.ಶೆಟ್ಟಿ, ಉತ್ತರ ಪ್ರದೇಶದ ಮಾಜಿ ರಾಜ್ಯಪಾಲ ರಾಮ್ ನಾೈಕ್ (ಮಾಜಿ ಕೇಂದ್ರ ಸಚಿವ), ಪ್ರಸಿದ್ಧ ಸಂಗೀತಕಾರ ಅಭಿಜಿತ್ ಸಾವಂತ್, ಎರ್ಮಾಳ್ ಹರೀಶ್ ಶೆಟ್ಟಿ, ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಮಾಜಿ ಅಧ್ಯಕ್ಷ ಚಂದ್ರಹಾಸ ಕೆ.ಶೆಟ್ಟಿ, ಉಪಾಧ್ಯಕ್ಷ ಮಹೇಶ್ ಎಸ್.ಶೆಟ್ಟಿ, ಗೌರವ ಕೋಶಾಧಿಕಾರಿ ಸಿಎ| ರಮೇಶ್ ಬಿ.ಶೆಟ್ಟಿ, ಜೊತೆ ಕಾರ್ಯದರ್ಶಿ ಗಿರೀಶ್ ಆರ್.ಶೆಟ್ಟಿ ತೆಳ್ಳಾರು, ಜೊತೆ ಕೋಶಾಧಿಕಾರಿ ಶಶಿಧರ್ ಕೆ.ಶೆಟ್ಟಿ ಇನ್ನಂಜೆ, ಡಾ| ಪಿ.ವಿ ಶೆಟ್ಟಿ, ಕರುಣಾಕರ ಎಸ್.ಶೆಟ್ಟಿ (ಪೆÇಯಿಸರ್ ಜಿಮ್ಖಾನಾ), ಡಾ| ವಿರಾರ್ ಶಂಕರ್ ಬಿ.ಶೆಟ್ಟಿ, ಮುಂಡಪ್ಪ ಎಸ್.ಪಯ್ಯಡೆ, ರವಿ ಎಸ್.ಶೆಟ್ಟಿ (ಸಾಯಿ ಪ್ಯಾಲೇಸ್), ರವೀಂದ್ರ ಶೆಟ್ಟಿ, ರಘು ಎಲ್.ಶೆಟ್ಟಿ (ಪ್ಯಾಪಿಲಾನ್), ಸತೀಶ್ ಆರ್.ಶೆಟ್ಟಿ (ಪೆನಿನ್ಸುಲಾ), ಸುಕೇಶ್ ಶೆಟ್ಟಿ (ಆಹಾರ್), ಜಿತೇಂದ್ರ ಜೆ.ಗೌಡ, ನಿತ್ಯಾನಂದ ಎಸ್.ಹೆಗ್ಡೆ, ಭಾಸ್ಕರ್ ಎಂ.ಕೋಟ್ಯಾನ್, ಶ್ರೀನಿವಾಸ ಪಿ.ಸಾಫಲ್ಯ, ಕಮಲೇಶ್ ಶೆಟ್ಟಿ ಸೇರಿದಂತೆ ನೂರಾರು ಗಣ್ಯರು, ಅಪಾರ ಸಂಖ್ಯೆಯ ಬಿಜೆಪಿ ಕಾರ್ಯಕರ್ತರು, ಸಾವಿರಾರು ಸಂಖ್ಯೆಯ ಹಿತೈಷಿಗಳು ಮತ್ತು ಅಭಿಮಾನಿಗಳು, ಬಂಟ್ಸ್ ಸಂಘ ಮುಂಬಯಿ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇವುಗಳ ವಿವಿಧ ಪ್ರಾದೇಶಿಕ ಸಮಿತಿಗಳು, ಸ್ಥಳೀಯ ಕಛೇರಿಗಳು, ಚಾರ್‍ಕೋಪ್ ಕನ್ನಡಿಗರ ಬಳಗ ಕಾಂದಿವಿಲಿ, ಬ್ರಹ್ಮಕುಮಾರಿ ಸಂಸ್ಥೆ ಮತ್ತಿತರ ಹಲವು ಸಂಘ-ಸಂಸ್ಥೆಗಳ ಮುಖ್ಯಸ್ಥರು, ಸದಸ್ಯರು ಪಾಲ್ಗೊಂಡು ಭಾವಭಕ್ತಿಯಿಂದ ಕರತಾಡನದೊಂದಿಗೆ ಭಜನೆಯಲ್ಲಿ ಭಾಗಿಗಳಾದರು.

ಆವರಣದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಲಾದ ಶ್ರೀರಾಮನ ದೇಗುಲದಲ್ಲಿ ಪುರೋಹಿತರಾದ ವೆ| ಮೂ| ವೆಂಕಟ್ರಾಮಣ ತಂತ್ರಿ ಮತ್ತು ವೇ| ಮೂ| ದರೆಗುಡ್ಡೆ ಶ್ರೀನಿವಾಸ ಭಟ್ ಪೂಜಾಧಿಗಳನ್ನು ನೆರವೇರಿಸಿ ನೆರೆದ ಸಾವಿರಾರು ಭಕ್ತರಿಗೆ ತೀರ್ಥಪ್ರಸಾದ ವಿತರಿಸಿ ಹರಸಿದರು.

ಸಂಸದ ಗೋಪಾಲ್ ಸಿ.ಶೆಟ್ಟಿ ಅವರು ಮಾತನಾಡಿ ಇವತ್ತು ಇಲ್ಲಿ ವಿತರಿಸುವ ಶ್ರೀರಾಮನ ಮಹಾಪ್ರಸಾzದವು ತಮ್ಮೆಲ್ಲರ ಪರಿಶ್ರಮದ ಪ್ರಸಾದವಾಗಿದೆ. ಸನಾತನ ಧರ್ಮದ ಉಳಿವಿನ ಸಂದೇಶದ ಧ್ಯೋತಕವಾಗಿದೆ. ಅಯೋಧ್ಯೆ ಕುರಿತ ಹಳೆ ನೆನಪುಗಳನ್ನು ಮೆಲುಕು ಹಾಕುತ್ತಾ 1990ರಲ್ಲಿ ಕÀರಸೇವಕನಾಗಿ ಮೊದಲ ಬಾರಿ ಮತ್ತು 1991ರಲ್ಲಿ 300 ಕಿ.ಮೀ ಕಾಲ್ನಡಿಗೆಯಲ್ಲಿ ಅಯೋಧ್ಯೆಗೆ ಭೇಟಿ ನೀಡಿದ್ದನ್ನು ಬಳಿಕ ನೈನಿ ಜೈಲಿನಲ್ಲಿ ಬಂಧನಕ್ಕೊಳಗಾಗಿದ್ದು,1992ರಲ್ಲಿ ಬಾಬರಿ ಮಸೀದಿ ಧ್ವಂಸ ಘಟನೆ ನಡೆದಾಗ ಸಾಕ್ಷಿಯಾಗಿರುವುದನ್ನು ಸ್ಮರಿಸಿದರು. ಅಯೋಧ್ಯೆ ಶ್ರೀರಾಮನ ದರ್ಶನ ಪಡೆಯುವುದರೊಂದಿಗೆ ನನ್ನ ಪಾಲಿನ ರಾಮರಾಜ್ಯದ ಕನಸು ನನಸಾಗಿದೆ. ಪ್ರತಿಷ್ಠಾಪಿತ ಭಗವಾನ್ ಶ್ರೀರಾಮನ ದಿವ್ಯಮೂರ್ತಿ ಕಂಡು ಮತ್ತೆ ಹೊಸ ಚೈತನ್ಯ ಮೂಡಿದೆ ಎಂದು ತಿಳಿಸಿದರು.
More News

ಡ್ರಾಮಾ ಜೂನಿಯರ್ ವಿಜೇತೆಗೆ ವಿಪ್ರ ಸನ್ಮಾನ
ಡ್ರಾಮಾ ಜೂನಿಯರ್ ವಿಜೇತೆಗೆ ವಿಪ್ರ ಸನ್ಮಾನ
 ಬೆಳುವಾಯಿ ಮರಿಯಮ್ ನಿಕೇ ತನ್ ಶಾಲೆಯಲ್ಲಿ ಹೆತ್ತವರಿಗೆ ಮಾಹಿತಿ
ಬೆಳುವಾಯಿ ಮರಿಯಮ್ ನಿಕೇ ತನ್ ಶಾಲೆಯಲ್ಲಿ ಹೆತ್ತವರಿಗೆ ಮಾಹಿತಿ
ಅಂಡಮಾನ್‍ನಲ್ಲಿ ಸಂಭ್ರಮಿಸಲ್ಪಟ್ಟ 19ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನ
ಅಂಡಮಾನ್‍ನಲ್ಲಿ ಸಂಭ್ರಮಿಸಲ್ಪಟ್ಟ 19ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನ

Comment Here