Saturday 13th, July 2024
canara news

ಭಾರತ್ ಬ್ಯಾಂಕ್ ; ನವೀನ್ ಕುಮಾರ್ ಗುಳಿಬೆಟ್ಟು ವೃತ್ತಿ ನಿವೃತ್ತಿ-ಬೀಳ್ಕೋಡುಗೆ

Published On : 01 Jun 2024   |  Reported By : Rons Bantwal


ಮುಂಬಯಿ (ಆರ್‍ಬಿಐ), ಜೂ.02: ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್‍ನ ಉಡುಪಿ ಶಾಖೆಯ ಪ್ರಬಂಧಕ ನವೀನ್ ಕುಮಾರ್ ಗುಳಿಬೆಟ್ಟು ಇಂದಿಲ್ಲಿ ಕಾರ್ಯನಿವೃತ್ತಿ ಹೊಂದಿದ್ದು ಅವರಿಗೆ ಬೀಳ್ಕೋಡುಗೆ ಕಾರ್ಯಕ್ರಮ ಇಂದಿಲ್ಲಿ ಉಡುಪಿ ಶಾಖೆಯಲ್ಲಿ ನಡೆಸಲಾಯಿತು.

ಬ್ಯಾಂಕ್ ಮುಂದಿನ ದಿನಗಳಲ್ಲಿ ಬಹಳ ಕಷ್ಟಕರ ಇದೀಗ ಖಾಸಗಿ ಬ್ಯಾಂಕ್‍ಗಳ ಬೆಳವಣಿಗೆ ಹೆಚ್ಚಾಗುತ್ತಿದೆ ಮುಂದೆ ಎಲ್ಲ ಸಿಬ್ಬಂದಿಗಳು ಪ್ರಾಮಾಣಿಕ ಮನೋಭಾವನೆಯಲ್ಲಿ ದುಡಿಯುವ ಮೂಲಕ ನಮ್ಮ ಬ್ಯಾಂಕ್ ಉನ್ನತ ಮಟ್ಟಕ್ಕೇರಿಸಲು ಸಾಧ್ಯ. ಸಿಬ್ಬಂದಿಗಳು ಬರೆ ಪದೋನ್ನತಿಗಾಗಿ ಅಥವಾ ಸಂಬಳಕ್ಕೆ ಸೀಮಿತರಾಗಿ ದುಡಿಯದೆ ನಮ್ಮ ಸಂಸ್ಥೆ ಅಭಿವೃದ್ಧಿ ಕಾಣುವ ಗುರಿಯೊಂದಿಗೆ ಕೆಲಸ ನಿರ್ವಾಹಿಸಬೇಕು. ನವೀನ್ ಗುಳಿಬೆಟ್ಟು ಅವರ ಬ್ಯಾಂಕಿಂಗ್ ಸೇವಾ ಕಾರ್ಯವೈಖರಿ ಬಗ್ಗೆ ಗೌರವವಿದೆ. ಇವರೋರ್ವ ಉತ್ತಮ ಬ್ಯಾಂಕ್ ಉದ್ಯಮಿ. ಇವರಿಂದ ತುಂಬಾ ಕಲಿಯಲಿಕಿದೆ. ಎಂದು ಈ ಸಂದರ್ಭದಲ್ಲಿ ಬ್ಯಾಂಕ್‍ನ ಮುಖ್ಯ ಪ್ರಬಂಧಕ ಮುರಳೀಧರ ಕೋಟ್ಯಾನ್ ನುಡಿದರು.

38 ವರ್ಷ ನನ್ನ ಜೊತೆ ನನ್ನ ಬ್ಯಾಂಕಿಂಗ್ ಕ್ಷೆತ್ರದಲಿ ಸಹಕಾರ ನೀಡಿದ ಭಾರತ್ ಬ್ಯಾಂಕ್‍ನ ಆಡಳಿತ ಮಂಡಳಿ, ನಿರ್ದೇಶಕರು, ಉನ್ನತಾಧಿಕಾರಿಗಳು, ನೌಕರರ ವೃಂದಕ್ಕೆ ವಂದಿಸುವೆ. ತಮ್ಮೆಲ್ಲರ ಸಹಯೋಗದಿಂದ ನನ್ನ ಬ್ಯಾಂಕಿಂಗ್ ಉದ್ಯೋಗ ಯಶಸ್ವಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಯಿತು. ಇಂದು ಇಲ್ಲಿನ ವೃತ್ತಿ ವಿದಾಯಕ್ಕೆ ಪ್ರೀತಿ ಪೂರ್ವಕವಾಗಿ ಗೌರವ ಮಾಡಿದ ತಮ್ಮೆಲ್ಲರಿಗೂ ನಾನು ಚಿರಋಣಿ ಆಗಿದ್ದೇನೆ ಎಂದರು.

ಅವಿನಾಶ್ ಆನಂದ್ ಪೂಜಾರಿ ಮತ್ತು ಉಡುಪಿ ಶಾಖಾ ಸಿಬ್ಬಂದಿ ವರ್ಗವು ಬೀಳುಕೊಳ್ಳುವ ಕಾರ್ಯಕ್ರಮ ಆಯೋಜಿಸಿದ್ದು ಈ ಸಂದರ್ಭದಲ್ಲಿ ಬ್ಯಾಂಕ್‍ನ ಮುಖ್ಯ ಪ್ರಬಂಧಕ ಅರುಣ್‍ಕುಮಾರ್ ಜಿ.ಕೋಟಿಯನ್, ಹಿರಿಯ ಪ್ರಬಂಧಕರುಗಳಾದ ಉದಯ ಸಾಲಿಯಾನ್, ಇತರ ಶಾಖ ಪ್ರಮುಖರುಗಳಾದ ಹೇಮಲತಾ ಅಶೋಕ್ ಮನಂಪಡಿ, ಶಕುಂತಲಾ ನಿರೇಂದ್ರ, ಪ್ರಭಾವತಿ ಕಾರ್ಕಳ, ಅಜಿತ್ ಸುವರ್ಣ, ಲಕ್ಷ್ಮೀಶ ಮೊಗೇರಯ, ರೇಷ್ಮಾ ಶೆಟ್ಟಿ, ಶೇಖರ್ ಯು.ಪೂಜಾರಿ, ಸೇರಿದಂತೆ ಹಲವು ಸಿಬ್ಬದಿಗಳು ಉಪಸ್ಥಿತರಿದ್ದು ಎಲ್ಲರೂ ಜೊತೆಗೂಡಿ ನವೀನ್ ಕುಮಾರ್‍ಗೆ ಸನ್ಮಾನಿಸಿ ಅಭಿವಂದಿಸಿ ಶುಭಾರೈಸಿದರು.

ಪ್ರಫುಲ್ಲಾ ವಿ.ಬಂಗೇರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ರೇವತಿ ನವೀನ್ ಪೂಜಾರಿ ವಂದಿಸಿದರು.

ನವೀನ್ ಕುಮಾರ್ ಗುಳಿಬೆಟ್ಟು:
ಉಡುಪಿ ತಾಲೂಕು ಕೇಮಣ್ಣು ಗ್ರಾಮದ ಗುಳಿಬೆಟ್ಟು ನಿವಾಸಿ ರುಕ್ಮಿಣಿ ಸೋಮ ಪೂಜಾರಿ ದಂಪತಿ ಸುಪುತ್ರ. ಉಡುಪಿಯಲ್ಲಿ ವಾಣಿಜ್ಯ ವಿದ್ಯಾಭ್ಯಾಸ ಮುಗಿಸಿ ಜುಲೈ 1984ರಲ್ಲಿ ಮುಂಬಯಿ ಪಯಣ ಬೆಳೆಸಿದರು. ಇಲ್ಲಿ ಕೆನರಾ ಬ್ಯಾಂಕ್ ಆಫೀಸರ್ಸ್ ಮುಂಬಯಿನಲ್ಲಿ ಒಂದು ವರ್ಷ ಕೆಲಸ ಮಾಡಿ ನಂತರ ನರೀಮಾನ್ ಪಾಯಿಂಟ್‍ನಲ್ಲಿ ಖಾಸಾಗಿ ಸಂಸ್ಥೆಯಲ್ಲಿ ಮೂರು ವರ್ಷ ದುಡಿದಿರುವರು. ಬಳಿಕ ಭಾರತ್ ಬ್ಯಾಂಕ್‍ನಲ್ಲಿ ಉದ್ಯೋಗ ನಿರತರಾಗಿರುವರು.

ಅತೀವ ಸಾಮಾಜಿಕ ಕಳಕಳಿಯುಳ್ಳ ಇವರು ಬಿಡುವಿನ ಸಮಯ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಮಹಾನಗರದಲ್ಲಿ ನವೀನ್ ಗುಳಿಬೆಟ್ಟು ಎಂದೇ ಚಿರಪರಿಚಿತರಾಗಿರುವರು. ಗೋರೆಗಾಂವ್ ಕರ್ನಾಟಕ ಸಂಘದ ಯುವ ವಿಭಾಗ, ಚಾರ್‍ಕೋಪ್ ಕನ್ನಡಿಗರ ಬಳಗ ಕಾಂದಿವಿಲಿ (ರಿ.) ಸಂಸ್ಥೆಗಳಲ್ಲಿ ಸಕ್ರೀಯರಾಗಿದ್ದು ವೀರ ಕೇಸರಿ ಕಲಾವೃಂದ ಮುಂಬಯಿ ಇದರ ಗೌರವ ಪ್ರಧಾನ ಕಾರ್ಯದರ್ಶಿ, ಶ್ರೀ ಬ್ರಹ್ಮ ಬೈದರ್ಕಳ ಪಂಚ ಧೂಮಾವತೀ ಗರೋಡಿ ಸೇವಾ ಟ್ರಸ್ಟ್ ಮುಂಬಯಿ (ರಿ.) ಇದರ ಕಾರ್ಯದರ್ಶಿ ಆಗಿಯೂ ಶ್ರಮಿಸಿದ್ದು ಓರ್ವ ಕಲಾವಿದನಾಗಿದ್ದು ಹೆಸರಾಂತ ರಂಗವಿದ್ವಾಂಸ ರಮೇಶ್ ಶಿವಪುರ ಇವರ ನಿರ್ದೇಶÀನದ ಹಾಗೂ ಚಂದ್ರಹಾಸ ಸುವರ್ಣ ಶಿಮಂತೂರು ಅವರ ನಿರ್ದೇಶನದ ನಾಟಕಗಳಲ್ಲಿ ಅಭಿನಯಿಸಿರುವರು.

ಬಿಲ್ಲವರ ಅಸೋಸಿಯೇಶÀನ್ ಮುಂಬಯಿ ಇದರ ಬೋರಿವಿಲಿ ಸ್ಥಳೀಯ ಕಚೇರಿಲ್ಲಿ ಜೊತೆ ಕಾರ್ಯದರ್ಶಿ, ಭಾರತ್ ಬ್ಯಾಂಕ್ ಎಂಪ್ಲಾಯಿಸ್ ಯೂನಿಯನ್‍ನಲ್ಲೂ ನಿರಂತರ ಸೇವೆ ಮಾಡಿರುವರು. ಇವರ ಸೇವೆಯನ್ನು ಮನವರಿಸಿ ಹಲವು ಸಂಘ ಸಂಸ್ಥೆಗಳು ಸನ್ಮಾನ ಮಾಡಿ ಗೌರವಿಸಿವೆ.
More News

ಡ್ರಾಮಾ ಜೂನಿಯರ್ ವಿಜೇತೆಗೆ ವಿಪ್ರ ಸನ್ಮಾನ
ಡ್ರಾಮಾ ಜೂನಿಯರ್ ವಿಜೇತೆಗೆ ವಿಪ್ರ ಸನ್ಮಾನ
 ಬೆಳುವಾಯಿ ಮರಿಯಮ್ ನಿಕೇ ತನ್ ಶಾಲೆಯಲ್ಲಿ ಹೆತ್ತವರಿಗೆ ಮಾಹಿತಿ
ಬೆಳುವಾಯಿ ಮರಿಯಮ್ ನಿಕೇ ತನ್ ಶಾಲೆಯಲ್ಲಿ ಹೆತ್ತವರಿಗೆ ಮಾಹಿತಿ
ಅಂಡಮಾನ್‍ನಲ್ಲಿ ಸಂಭ್ರಮಿಸಲ್ಪಟ್ಟ 19ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನ
ಅಂಡಮಾನ್‍ನಲ್ಲಿ ಸಂಭ್ರಮಿಸಲ್ಪಟ್ಟ 19ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನ

Comment Here