Thursday 8th, May 2025
canara news

ಮೂಡಬಿದ್ರೆ ಶ್ರೀ ಜೈನ ಮಠದ ಸ್ವಸ್ತಿಶ್ರೀ ಭಟ್ಟಾರಕ ಭವನದಲ್ಲಿ

Published On : 21 Jun 2024   |  Reported By : Rons Bantwal


ಸ್ವಸ್ತಿಶ್ರೀ ಜೈನ ವಸತಿ ಪದವಿ ಕಾಲೇಜ್‍ನ ವಿದ್ಯಾಥಿರ್sಗಳಿಂದ ವಿಶ್ವ ಯೋಗ ದಿನಾಚರಣೆ

ಮುಂಬಯಿ, (ಆರ್‍ಬಿಐ) ಜೂ.21: ಸ್ವಸ್ತಿಶ್ರೀ ಜೈನ ವಸತಿ ಪದವಿ ಕಾಲೇಜ್‍ನ ವಿದ್ಯಾಥಿರ್sಗಳು ಇಂದಿಲ್ಲಿ ಶುಕ್ರವಾರ ಶ್ರೀ ಜೈನ ಮಠದ ಬಳಿ ಸ್ವಸ್ತಿಶ್ರೀ ಭಟ್ಟಾರಕ ಭವನದಲ್ಲಿ ಬೆಳಿಗ್ಗೆ ಯೋಗಾಸನಾ ಮಾಡುದರ ಮೂಲಕ ವಿಶ್ವ ಯೋಗ ದಿನಾಚರಣೆ ಆಚರಿಸಿದರು. ಮಹಾಕ್ಷೇತ್ರದ ಜೈನ ಮಹಾಸಂಸ್ಥಾನದ ಪೀಠಾಧ್ಯಕ್ಷ ಭಾರತ ಭೂಷಣ ಜಗದ್ಗುರು ಸ್ವಸ್ತಿಶ್ರೀ ಡಾ| ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ ಯೋಗಗೈದು ಕಾರ್ಯಕ್ರಮಕ್ಕೆ ಚಾಲನೆಯನ್ನಿತ್ತರು. ಹಾಗೂ ಯೋಗದ ವಿವಿಧ ಆಸನಗಳ ಪರಿಚಯವನ್ನು ಮಕ್ಕಳಿಗೆ ಸ್ವಾಮೀಜಿ ತಿಳಿಸಿಕೊಟ್ಟರು.

ಸರಳ ಯೋಗದ ಆಸನಗಳಾದ ಪದ್ಮಾಸನ ವೀರಾಸನಾ ಶಲಾಭಾಸನಾ, ಪರ್ವತಾಸನಾ, ವೃಕ್ಷಾಸನ ಸರ್ವಾoಗಸನಾ ಯೋಗ ಅಸನಗಳ ರಾಜ ಶಿರ್ಷಾ ಸನಾ ಕೂಡಾ ಮಾಡಿ ಅದರ ಪ್ರಯೋಜನ ತಿಳಿಸಿದ ಶ್ರೀಗಳು ಭಾರತೀಯ ಸಂಸ್ಕೃತಿಯ ಶ್ರೇಷ್ಠ ಕೊಡುಗೆಗಳಲ್ಲಿ ಯೋಗ ಹಾಗೂ ಧ್ಯಾನವು ಶ್ರೇಷ್ಠ ಜೀವನ ಕಲೆಯಾಗಿದ್ದು ಅದಿಯೋಗಿ ಭಗವಾನ್ ಆಧಿನಾಥರು ಸಹಸ್ರ ಸಹಸ್ರ ವರ್ಷಗಳ ಪೂರ್ವದಲ್ಲೇ ಯೋಗ ಭೋದಿಸಿದ್ದರು. ಮಾನವ ಮನಸು ಹಾಗೂ ದೇಹ ಅರೋಗ್ಯಕ್ಕೆ ಯೋಗ ಪೂರಕವಾಗಿದ್ದು ದಿನಾ ಬೆಳಿಗ್ಗೆ ಅನುಲೋಮ ವಿಲೋಮ ಮಾಡುವ ವಿದ್ಯಾಥಿರ್üಗಳು ಉತ್ಸಾಹದಿಂದ ಕಲಿಕೆಯಲ್ಲಿ ಮುಂದಿರಲು ಸಾಧ್ಯ ಎಂದು ಹರಸಿದರು.

ದ್ವಿತೀಯ ಪಿಯು ವಿದ್ಯಾಥಿರ್sನಿಯರಾದ ಕು| ಸ್ವಾತಿ ಹಾಗೂ ಕು| ಮನಸ್ವಿನಿ ಕೆಲವು ಆಸನಗಳನ್ನು ತಿಳಿಸಿಕೊಟ್ಟರು. ಸ್ವಸ್ತಿಶ್ರೀ ಕಾಲೇಜು ಉಪನ್ಯಾಸಕ ವೃಂದ ಉಪಸ್ಥಿತರಿದ್ದು ವಿದ್ಯಾಥಿರ್sಗಳು ವಿವಿಧ ಯೋಗದ ಆಸನಗಳನ್ನು ಮಾಡಿದರು. ಪ್ರಾಂಶುಪಾಲೆ ಸೌಮ್ಯಶ್ರೀ ಸ್ವಾಗತಿಸಿದರು. ಉಪನ್ಯಾಸಕಿ ಸುಜಾತಾ ವಂದಿಸಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here