Friday 4th, July 2025
canara news

ಡ್ರಾಮಾ ಜೂನಿಯರ್ ವಿಜೇತೆಗೆ ವಿಪ್ರ ಸನ್ಮಾನ

Published On : 30 Jun 2024   |  Reported By : Rons Bantwal


ವಿಪ್ರಸಮಾಗಮ ವೇದಿಕೆಯ ಪ್ರತಿಭಾ ಪುರಸ್ಕಾರ; ರಿಷಿಕಾ ಕುಂದೇಶ್ವರಗೆ ಸನ್ಮಾನ

ಮುಂಬಯಿ (ಆರ್‍ಬಿಐ), ಜೂ.29: ಮಂಗಳೂರು ಅಲ್ಲಿನ ಶಾರದಾ ವಿದ್ಯಾಲಯದ ಧ್ಯಾನ ಮಂದಿರದಲ್ಲಿ ವಿಪ್ರ ಸಮಾಗಮ ವೇದಿಕೆಯ ಕಲಾ ಪ್ರತಿಭೋತ್ಸವ ಕಾರ್ಯಕ್ರಮದಲ್ಲಿ ಝೀ ಕನ್ನಡ ಡ್ರಾಮಾ ಜೂನಿಯರ್ಸ್ ಸೀಸನ್-5ರ ವಿಜೇತೆ ರಿಷಿಕಾ ಕುಂದೇಶ್ವರಗೆ ಗೌರವ ಸನ್ಮಾನ ನಡೆಯಿತು.

ಶಾರದಾ ವಿದ್ಯಾಲಯ ಸಮೂಹ ಸಂಸ್ಥೆಗಳ ಅಧ್ಯಕ್ಷ ಪೆÇ್ರ. ಎಂ.ಬಿ ಪುರಾಣಿಕ್, ಕಾರ್ಯದರ್ಶಿ ಎಸ್.ಪ್ರದೀಪ ಕುಮಾರ ಕಲ್ಕೂರ, ಟ್ರಸ್ಟಿ ಸುಧಾಕರ ರಾವ್ ಪೇಜಾವರ, ಎಸ್‍ಕೆಡಿಬಿ ಅಸೋಸಿಯೇಶನ್ ಅಧ್ಯಕ್ಷ ಪ್ರಭಾಕರ ರಾವ್ ಪೇಜಾವರ, ರಿಷಿಕಾ ಪೆÇೀಷಕರಾದ ಜಿತೇಂದ್ರ ಕುಂದೇಶ್ವರ, ಸಂಧ್ಯಾ ಕುಂದೇಶ್ವರ, ಪದಾಧಿಕಾರಿಗಳಾದ ರಮಾಮಣಿ ಭಟ್, ಪದ್ಮಾ ಭಿಡೆ, ಕೆ.ಎಲ್ ಉಪಾಧ್ಯಾಯ, ಸುಬ್ರಹ್ಮಣ್ಯ ರಾವ್, ಶೇಷಾದ್ರಿ ಭಟ್, ಸುಧಾಕರ ಭಟ್, ಪ್ರಕಾಶ್ ರಾವ್, ಹರೀಶ್ ರಾವ್, ರಘುರಾಮ ರಾವ್, ವಿಘ್ನೇಶ್ ಭಿಡೆ ಉಪಸ್ಥಿತರಿದ್ದರು.

ಪ್ರತಿಭೋತ್ಸವ ಕಾರ್ಯಕ್ರಮದಲ್ಲಿ ವಿಪ್ರ ಸಮಾಗಮ ವೇದಿಕೆಯ ಸದಸ್ಯರು, ಮಕ್ಕಳು, ಮೊಮ್ಮಕ್ಕಳು ಗಾಯನ, ಕೊಳಲು ವಾದನ, ಏಕಪಾತ್ರಾಭಿನಯ, ಭರತನಾಟ್ಯ, ಯಕ್ಷ ನೃತ್ಯ, ಕಿರು ಪ್ರಹಸನ, ನೃತ್ಯ ಭಜನೆ ಪ್ರಸ್ತುತ ಪಡಿಸಿದರು.

ವೇದಿಕೆಯ ಅಧ್ಯಕ್ಷ ರಾಮಕೃಷ್ಣ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಪೂರ್ಣಿಮಾ ಪ್ರಭಾಕರ ರಾವ್ ಪೇಜಾವರ ನಿರೂಪಿಸಿದರು. ಪೂರ್ಣಿಮಾ ಪ್ರಶಾಂತ್ ಶಾಸ್ತ್ರಿ ವಂದಿಸಿದರು




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here