ಮುಂಬಯಿ, (ಆರ್‌ಬಿಐ),ಜು.೧೯: ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿ (ಪಿಆರ್‌ಸಿಐ) ಮಂಗಳೂರು ವಿಭಾಗವು ಇತ್ತೀಚಿಗೆ ಮಂಗಳಗAಗೋತ್ರಿಯಲ್ಲಿ ವಿಶ್ವ ಪಿಆರ್ ದಿನಾಚರಣೆ ಆಚರಿಸಿತು. ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ| ಪಿ.ಎಲ್ ಧರ್ಮ ಅವರ ಅಸಾಧಾರಣ ಸಂವಹನ ಕೌಶಲ್ಯಕ್ಕಾಗಿ ಗುರುತಿಸಿ `ಅತ್ಯುತ್ತಮ ಪಬ್ಲಿಕ್ ರಿಲೇಶನ್ ವ್ಯಕ್ತಿ' ನೀಡಿ ಗೌರವಿಸಿತು.
ಕಾರ್ಯಕ್ರಮದಲ್ಲಿ ರಾಷ್ಟಿçÃಯ ಜಂಟಿ ಕಾರ್ಯದರ್ಶಿ ಡಾ| ರಾಘವೇಂದ್ರ ಹೊಳ್ಳ, ಪಿಆರ್‌ಸಿಐ ಮಂಗಳೂರು ಚಾಪ್ಟರ್‌ನ ಅಧ್ಯಕ್ಷ ಕ್ಯಾನುಟ್ ಪಿಂಟೋ, ಮಾಧ್ಯಮ ಸಂಯೋಜಕ ವರುಣ್ ಪ್ರಭು, ಸದಸ್ಯ ಹಾಗೂ ಪ್ರವಾಸೋದ್ಯಮ ಉತ್ಸಾಹಿ ಯತೀಶ್ ಬೈಕಂಪಾಡಿ, ಮಂಗಳೂರು ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಡಾ| ವೈ.ಸಂಗಪ್ಪ ಉಪಸ್ಥಿತರಿದ್ದು ಪ್ರಾಚಾರ್ಯರ ಸಾರ್ವಜನಿಕ ಕ್ಷೇತ್ರದಲ್ಲಿನ ಅನುಪಮ ಸೇವೆ, ಗೌರವಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿತು.
ಈ ಮನ್ನಣೆಯು ಸಾರ್ವಜನಿಕ ಸಂಪರ್ಕ ಕ್ಷೇತ್ರಕ್ಕೆ ಪ್ರೊ| ಧರ್ಮ ಅವರ ಮಹತ್ವದ ಕೊಡುಗೆಗಳನ್ನು ಮತ್ತು ಶೈಕ್ಷಣಿಕ ಮತ್ತು ಸಾರ್ವಜನಿಕ ಕ್ಷೇತ್ರಗಳಲ್ಲಿ ಪರಿಣಾಮಕಾರಿ ಆಗಿದ್ದು ಅವರ ಸಂವಹನಕ್ಕಾಗಿ ಅವರ ಸಮರ್ಪಣೆಯನ್ನು ಎತ್ತಿ ತೋರಿಸುತ್ತದೆ ಎಂದಿತು. ಆಚರಣೆಯು ಇಂದಿನ ಜಗತ್ತಿನಲ್ಲಿ ನುರಿತ ಸಂವಹನದ ಪ್ರಾಮುಖ್ಯತೆಯನ್ನು ಒತ್ತಿಹೇಳಿತು ಮತ್ತು ಪಿಆರ್ ವೃತ್ತಿಪರರಿಗೆ ಮಾನದಂಡವನ್ನು ಹೊಂದಿಸುತ್ತದೆ ಎಂದು ಡಾ| ರಾಘವೇಂದ್ರ ಹೊಳ್ಳ ತಿಳಿಸಿ ವಂದಿಸಿದರು.