ಮುಂಬಯಿ, (ಆರ್‌ಬಿಐ), ಜು.೧೮: ಗೋಪಾಲಕೃಷಣ್ ಪಬ್ಲಿಕ್ ಟ್ರಸ್ಟ್, ಗೋಕುಲ, ಬಿ. ಎಸ್.ಕೆ.ಬಿ. ಎಸೋಸಿಯೇಶನ್ ಸಹಯೋಗದೊಂದಿಗೆ ಗೋಕುಲ ಸಭಾಗೃಹದಲ್ಲಿ ದೇವ ಶಯನೀ ಆಷಾಢ ಏಕಾದಶಿ ಪರ್ವ ದಿನವನ್ನು ಕಳೆದ ಬುಧವಾರ (ಜು.೧೭)ರಂದು ಸಾಮೂಹಿಕ ವಿಷ್ಣು ಸಹಸ್ರನಾಮ ತುಳಸಿ ಅರ್ಚನೆ ಮತ್ತು ಗೋಕುಲ ಭಜನಾ ಮಂಡಳಿಯ ಆಯೋಜನೆಯಲ್ಲಿ ಪ್ರಾತಃಕಾಲ ೮ ಗಂಟೆಯಿAದ ರಾತ್ರಿ ೮ ಗಂಟೆಯ ವರೆಗೆ ೧೨ ಗಂಟೆಗಳ ಹರಿನಾಮ ಸಂಕೀರ್ತನೆಗಳೊAದಿಗೆ ಅತ್ಯಂತ ವಿಜೃಂಭಣೆಯಿAದ ಆಚರಿಸಿತು.
ಶ್ರೀ ಗೋಪಾಲಕೃಷ್ಣ ದೇವರ ದಿವ್ಯ ಮೂರ್ತಿಯನ್ನು ವಿಶೇಷ ತುಳಸಿ ಮಾಲೆ, ಪುಷ್ಪ ಹಾರಗಳಿಂದ ದೇವಾಲಯದ ಅರ್ಚಕ ವೇ. ಮೂ. ಗಣೇಶ್ ಭಟ್ ಅತ್ಯಂತ ಮನೋಹರವಾಗಿ ಅಲಂಕರಿಸಿದ್ದರು. ಅಂತೆಯೇ ಸಭಾಗೃಹದಲ್ಲಿ ಅಲಂಕರಿಸಿದ ತುಳಸಿ ವೃಂದಾವನದ ಮಧ್ಯೆ ಶ್ರೀ ವಿಠಲ ದೇವರ ಭಾವಚಿತ್ರವನ್ನಿಟ್ಟು ಪ್ರತಿಷ್ಠಾಪಿಸಿ, ತುಳಸಿ ಹಾರ, ಪುಷ್ಪ ಹಾರಗಳಿಂದ ಶೃಂಗರಿಸಿ, ದೇವಾಲಯದಲ್ಲಿ ಪ್ರಾತಃಕಾಲದ ನಿತ್ಯ ಪೂಜೆಯಾದ ನಂತರ ವೇ.ಮೂ. ಗಣೇಶ್ ಭಟ್ ರವರ ಪ್ರಾರ್ಥನೆಯೊಂದಿಗೆ ಅಧ್ಯಕ್ಷರು ಡಾ| ಸುರೇಶ ರಾವ್, ಗೌ| ಕಾರ್ಯದರ್ಶಿ ಎ.ಪಿ.ಕೆ. ಪೋತಿ, ಮತ್ತು ಸಂಸ್ಥೆಯ ಪದಾಧಿಕಾರಿಗಳು, ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ವಿಶ್ವಸ್ಥರು ಕೃಷ್ಣ ಆಚಾರ್ಯ, ರಾಮ ವಿಠಲ ಕಲ್ಲೂರಾಯ, ಎಸ್ ಎನ್. ಉಡುಪ, ಅರ್ಚಕರು ಶ್ರೀ ಉಮಾ ಮಹೇಶ್ವರಿ ದೇವಸ್ಥಾನ, ಜರಿಮರಿ, ಗೋಕುಲ ಭಜನಾ ಮಂಡಳಿಯ ಪದಾಧಿಕಾರಿಗಳು, ಸದಸ್ಯರೊಂದಿಗೆ ದೀಪ ಪ್ರಜ್ವಲನೆ ಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪ್ರಥಮವಾಗಿ ಗೋಕುಲ ಭಜನಾ ಮಂಡಳಿ ಹರಿನಾಮ ಸಂಕೀರ್ತನಾ ಸೇವೆ ಸಲ್ಲಿಸಿದ ನಂತರ, ಶ್ರೀ ಏಕನಾಥೇಶ್ವರಿ ಭಜನಾ ಮಂಡಳಿ, ದಾದರ್, ಶ್ರೀ ನಿತ್ಯಾನಂದ ಚಾಮುಂಡೇಶ್ವರಿ ಭಜನಾ ಮಂಡಳಿ, ಸಾಕಿನಾಕಾ, ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿ, ಅಂಧೇರಿ, ಶ್ರೀ ವಿಠ್ಠಲ ಭಜನಾ ಮಂಡಳಿ, ಮೀರಾ ರೋಡ್, ಶ್ರೀ ಜೈ ಅಂಬೆ ಚಾರಿಟೇಬಲ್ ಟ್ರಸ್ಟ್ ಭಜನಾ ಮಂಡಳಿ, ಸಾನ್ಪಾಡಾ ಶ್ರೀ ಶನೀಶ್ವರ ಭಜನಾ ಮಂಡಳಿ, ನೇರೂಲ್, ಶ್ರೀ ಹರಿಕೃಷ್ಣ ಭಜನಾ ಮಂಡಳಿ, ನವಿ ಮುಂಬಯಿ, ಶ್ರೀ ಉಮಾ ಮಹೇಶ್ವರಿ ಭಜನಾ ಮಂಡಳಿ, ಜರಿಮರಿ, ಶ್ರೀ ಸ್ಕಂದ ಭಜನಾ ಮಂಡಳಿ, ಚೆಂಬೂರು, ಶ್ರೀ ಗಣಪತಿ ಅಯ್ಯಪ್ಪ ದುರ್ಗಾದೇವಿ ಭಜನಾ ಮಂಡಳಿ, ನೇರೂಲ್, ಶ್ರೀ ರಾಮ ಭಜನಾ ಮಂಡಳಿ, ನೇರೂಲ್ ಪಾಲ್ಗೊಂಡು, ಅತ್ಯಂತ ಭಕ್ತಿಭಾವದಿಂದ ಸಂಕೀರ್ತನಾ ಸೇವೆ, ನೃತ್ಯ ಭಜನಾ ಸೇವೆ ಸಲ್ಲಿಸಿತು. ಶ್ರೀಮತಿ ಪ್ರೇಮಾ ರಾವ್ ಕಾರ್ಯಕ್ರಮ ನಿರೂಪಿಸಿದರು.
ಅಂದು ವಿಶೇಷವಾಗಿ ಆಯೋಜಿಸಿದ ಸಾಮೂಹಿಕ ವಿಷ್ಣು ಸಹಸ್ರನಾಮ ತುಳಸಿ ಅರ್ಚನೆ ಪ್ರಯುಕ್ತ ಸೇವಾಥಿsðಗಳಿಗೆ ಸಾಮೂಹಿಕ ಸಂಕಲ್ಪವನ್ನು ವೇದಮೂರ್ತಿ ದರೆಗುಡ್ಡೆ ಶ್ರೀನಿವಾಸ್ ಭಟ್ ರವರು ರಾಮ ವಿಠಲ ಕಲ್ಲೂರಾಯರೊಂದಿಗೆ ನೆರವೇರಿಸಿ ವಿಷ್ಣು ಸಹಸ್ರ ನಾಮ ಪಠನೆ ಗೈದರು. ಅವರೊಂದಿಗೆ ಭಕ್ತಾದಿಗಳು ವಿಷ್ಣು ಸಹಸ್ರ ನಾಮ ಪಠಣೆಯೊಂದಿಗೆ ಶ್ರೀ ಕೃಷ್ಣನಿಗೆ ತುಳಸಿ ಅರ್ಚನೆ ಗೈದರು. ಅಂತೆಯೇ ವೇದಮೂರ್ತಿ ಗಣೇಶ್ ಭಟ್ ರವರು ಶ್ರೀ ಗೋಪಾಲಕೃಷ್ಣ ದೇವರಿಗೆ ವಿಷ್ಣು ಸಹಸ್ರನಾಮದೊಂದಿಗೆ ತುಳಸಿ ಅರ್ಚನೆ ಗೈದು ಮಹಾ ಪೂಜೆ, ಮಹಾ ಮಂಗಳಾರತಿ ಬೆಳಗಿದರು. ಅಂತೆಯೇ ಸಂಜೆ ಭಗವದ್ಗೀತೆ ಪಠನೆ, ವಿಷ್ಣು ಸಹಸ್ರನಾಮ ಪಠನೆ ಇತ್ಯಾದಿ ನೆರವೇರಿತು. ರಾತ್ರಿ ದೇವಾಲಯದಲ್ಲಿ ನಿತ್ಯ ಪೂಜೆಯಾದ ನಂತರ ಗೋಕುಲ ಭಜನಾ ಮಂಡಳಿಯಿAದ ಭಜನಾ ಮಂಗಳ ನೆರವೇರಿದ ನಂತರ ವೇ.ಮೂ. ಗಣೇಶ್ ಭಟ್ ರವರು ಶ್ರೀ ವಿಠಲ ದೇವರಿಗೆ ಮಂಗಳಾರತಿ ಬೆಳಗಿ ಭಕ್ತಾದಿಗಳಿಗೆ ತೀರ್ಥಪ್ರಸಾದ ವಿತರಿಸಿದರು.