ಸೇನೆಯ ಶಿಸ್ತನ್ನು ಜೀವನದಲ್ಲಿ ಅಳವಡಿಸಿ ಯುವ ಜನಾಂಗ ದಾರಿ ತಪುö್ಪವ ಸಾಧ್ಯತೆಯಿಲ್ಲ: ಆತ್ರಾಡಿ ಸುರೇಶ ಹೆಗ್ಡೆ
ಮುಂಬಯಿ (ಆರ್‌ಬಿಐ), ಜು.೧೭: ಅಗ್ನಿ ವೀರ ದಂತಹ ಯೋಜನೆಗಳಲ್ಲಿ ಯುವಜನರು ಸೇರಿಕೊಂಡು ಸೇನೆಯಲ್ಲಿ ಸ್ವಲ್ಪ ವರ್ಷ ಸೇವೆ ಮಾಡಿ ಬಂದರೆ ಆತ ಜೀವನ ಪೂರ್ತಿ ಸೈನಿಕನ ಶಿಸ್ತಿನಲ್ಲಿ ಬದುಕುತ್ತಾನೆ. ಎಲ್ಲ ಪ್ರೆಜೆಗಳು ಸೇನೆಯ ತರಬೇತಿ ಪಡೆದಾಗ ಶಿಸ್ತಿನ ಸ್ವಸ್ಥ ಜೀವನ ನಡೆಸುವುದು ಸಾಧ್ಯವಾಗುತ್ತದೆ . ಐಲೇಸಾ ಸಂದೀಪ ನಂದಾ ದೀಪದಂತ ಕಾರ್ಯಕ್ರಮ ಮೂಲಕ ಸೈನಿಕರ ಬಗ್ಗೆ ಈ ರೀತಿಯ ಗೌರವ ಭಾವನೆ ಇಟ್ಟು ಕೊಳ್ಳುವುದು ಅನುಕರಣೀಯ'' ಎಂದು ವಾಯು ಸೇನೆಯ ಮಾಜಿ ವಾರಂಟ್ ಆಫೀಸರ್ ಆತ್ರಾಡಿ ಸುರೇಶ ಹೆಗ್ಡೆಯವರು ಅಭಿಪ್ರಾಯ ಪಟ್ಟರು . ಕಳೆದ ಆದಿತ್ಯವಾರ (ಜು.೧೪) ಬೆಂಗಳೂರಿನ ಐಲೇಸಾ ದಿ ವಾಯ್ಸ್ ಆಫ್ ಓಷನ್ (ರಿ) ಸಂಸ್ಥೆ ಮೇಜರ್ ಸಂದೀಪ್ ಉನ್ನಿಕೃಷ್ಣನ್‌ರಿಗೆ ಸಮರ್ಪಿಸಿದ ''ನಂದಾದೀಪಾ ಸಂದೀಪ'' ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು .
ಐಲೇಸಾದ ಹೆಸರು ಕೇಳಿದ್ದೆ ಆದರೆ ಅವರ ಬಗ್ಗೆ ಅಷ್ಟೇನೂ ತಿಳಿದಿರಲಿಲ್ಲ ಆದರೆ ಇವತ್ತು ಈ ಕಾರ್ಯಕ್ರಮ ನೋಡಿ ನಾನು ಸದಾ ನಿಮ್ಮ ಜೊತೆಗೆ ಇರಬೇಕು ಎನ್ನುವ ನಿರ್ಧಾರಕ್ಕೆ ಬಂದಿದ್ದೇನೆ, ಇಂತಹ ಕಾರ್ಯಕ್ರಮಗಳು ಸೈನಿಕರ ಮತ್ತು ಅವರ ಮನೆಯವರ ಮನಸ್ಥ÷್ಯರ್ಯ ವನ್ನು ಹೆಚ್ಚಿಸುತ್ತದೆ ಎಂದು ಪ್ರಶಂಸಿದರು.
ಜಮ್ಮು ಕಾಶ್ಮೀರದಲ್ಲಿ ಉಗ್ರಗಾಮಿಗಳಿಂದ ದಾಳಿಗೊಳಗಾಗಿ ತನ್ನ ದೇಹದ ಕೆಳಭಾಗದ ಸ್ವಾಧೀನ ಕಳೆದು ಕೊಂಡ ಮೈಸೂರು ನಿವಾಸಿ ಹವಲ್ದಾರ್ ಬಿ.ರಮೇಶ್ ಮಾತನಾಡಿ ಸೈನಿಕನಾಗಬೇಕು ಎನ್ನುವುದು ನನ್ನ ಜೀವನದ ಕನಸು, ಹಾಗಾಗಿ ಗೆಳೆಯರ ಪ್ರೋತ್ಸಾಹದ ಕಾರಣ ಪರೀಕ್ಷೆಗೆ ಹಾಜರಾಗಿದ್ದೆ , ಗೆಳೆಯರು ಆಯ್ಕೆಯಾಗಲಿಲ್ಲ ಆದ್ರೂ ಅವರಿಗಿಂತ ದೇಹ ಧಾರ್ಢ್ಯತೆಯಲ್ಲಿ ಕೊರತೆಯಿದ್ದರೂ ಅದೃಷ್ಟಕ್ಕೆ ನಾನು ಆಯ್ಕೆಯಾದೆ . ಬಹುಶಃ ಆ ಭಾರತ ಮಾತೆಗೆ ಸೇವೆ ಸಲ್ಲಿಸುವ ಯೋಗ ನನಗಿತ್ತು ಆದರೆ ಇನ್ನೇನು ಸೇವೆ ಮುಗಿಯಬೇಕು ಅನ್ನುವಷ್ಟರಲ್ಲಿ ಉಗ್ರರ ಧಾಳಿಯಲ್ಲಿ ತೀವ್ರವಾಗಿ ಗಾಯಗೊಂಡೆ . ಸದ್ಯ ನಿವೃತ್ತಿಯಾಗಿ ಈಗ ಸಂತೃಪ್ತಿಯ ಜೀವನ ಮಾಡುತ್ತಿದ್ದೇನೆ . ಸೇನೆ ನನ್ನಲ್ಲಿ ಆತ್ಮ ವಿಶ್ವಾಸವನ್ನು ಬೆಳೆಸಿ ಇಂತಹ ಕಠಿಣ ಸಂದರ್ಭದಲ್ಲೂ ಬದುಕುವುದನ್ನು ಕಲಿಸಿತು . ಸಂಗೀತದಲ್ಲಿ ಆಸಕ್ತಿಯಿರುವುದರಿಂದ ನಿವೃತ್ತ ಬದುಕು ಸುಶ್ರಾವ್ಯವಾಗಿದೆ, ಹಾಗಾಗಿ ಐಲೇಸಾ ಸಂಸ್ಥೆಯ ಸ್ನೇಹ ಬೆಳೆಯಿತು ಎಂದು ಸಂತೋಷ ವ್ಯಕ್ತಪಡಿಸಿದರು. ಎಲ್ಲರ ಒತ್ತಾಯದ ಮೇರೆಗೆ ''ಸಂದೇಶ ಆತಾ ಹೈ.... '' ಹಾಡು ಹಾಡಿ ಎಲ್ಲರ ಕಣ್ಣಾಲಿಗಳನ್ನು ತುಂಬಿಸಿದರು. ಸಂದೀಪ ತಂದೆ ಮಾತನಾಡಿ ''ಐಲೇಸಾ, ಮೊದಲು ಬಂದು ನನ್ನಲ್ಲಿ ಕಾರ್ಯಕ್ರಮದ ಬಗ್ಗೆ ಕೇಳಿದಾಗ ಹಲವಾರು ಕಾರ್ಯಕ್ರಮಗಳಿಂದ ಬೇಸರವಾಗಿ ಅಷ್ಟೇನೂ ಮನಸ್ಸಿಲ್ಲದೆ ಒಪ್ಪಿದ್ದೆ. ಆದರೆ ಇವತ್ತು ಕಾರ್ಯಕ್ರಮದಲ್ಲಿ ಅವರ ಪ್ರಾಮಾಣಿಕ ಕಳಕಳಿ ಕಂಡಾಗ ಮನಸ್ಸು ತುಂಬಿ ಬಂತು . ಈ ರೀತಿಯ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಲಿ'' ಎಂದು ಹರಸಿದರು.ಐಲೇಸಾ ಸಂಸ್ಥೆಯ ಡಾ. ರಮೇಶ್ಚಂದ್ರ , ಡಾ. ಸುಶೀಲಾ , ಸುಧಾಕರ ಶೆಟ್ಟಿ . ಆತ್ಮಾರಾಮ್ ಆಳ್ವ , ಸುಮಾ ಕೋಟೆ , ಪ್ರಕಾಶ್ ಪಾವಂಜೆ ನಮಿತಾ ಅನಂತ್ , ದಿನೇಶ್ ಕಿನ್ನಿಗೋಳಿ ಮಧುರವಾಗಿ ಹಾಡಿ ಭಾವುಕ ಕ್ಷಣಗಳ ಅಲೆಯೆಬ್ಬಿಸಿದರು.
ಸೂರಿ ಮಾರ್ನಾಡು ಮತ್ತು ಅವರ ಪತ್ನಿ ಡಾ| ವಿದ್ಯಾಸೂರಿ ಮಾರ್ನಾಡು ಮುಂಬಯಿAದ ಆಗಮಿಸಿ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡು ಮನುಷ್ಯ ಸ್ವಾರ್ಥದ ಬಗ್ಗೆ ಶಾಂತಾರಾಮ್ ಶೆಟ್ಟಿ ರಚಿಸಿದ ''ದುರ್ಯೋಧನ ಬೆವರ್ದನ'' ಕಾವ್ಯ ವಾಚನ ಮಾಡಿ ಎಲ್ಲರ ಮನ ಗೆದ್ದರು.ನಮಿತಾ ಅನಂತ್ ರಾವ್ ಅವರ ಶಿಷ್ಯೆ ಯಿಂದ ನಂದಾ ದೀಪ ಸಂದೀಪ ಕಾರ್ಯಕ್ರಮಕ್ಕೆ ನೃತ್ಯದ ಮೂಲಕ ನಮನ ಸಲ್ಲಿಸಲಾಯಿತು.ಅನಂತ್ ರಾವ್ ಕಾರ್ಯಕ್ರಮ ನಿರೂಪಿಸಿ ಮುಂಬೈ ಧಾಳಿಯ ಸಂಧರ್ಭ ಸೈನಿಕರು , ಪೊಲೀಸ್ ಮತ್ತು ತಾಜ್ ಹೋಟೆಲಿನ ಸಿಬ್ಬಂದಿ ತೋರಿದ ಬದ್ಧತೆಯನ್ನು ಎಳೆಎಳೆಯಾಗಿ ಬಿಡಿಸಿಟ್ಟು ಅವರ ತ್ಯಾಗವನ್ನು ಸ್ಮರಿಸಿದರು. ಐ ಲೇಸಾದ ಬೆನ್ನೆಲುಬು ಕವಿ ಕಥೆಗಾರ ಶಾಂತರಾಮ ಶೆಟ್ಟಿಯವರು ಬರೆದ ಕವನದ ಮೂಲಕ ಒಂದು ಸಂದೇಶವನ್ನು ಮೇಜರ್ ಸಂದೀಪ್ ಅವರಿಗೆ ಅರ್ಪಿಸಿ ಅದನ್ನು ಮುದ್ರಿಸಿ ಹಂಚಲಾಯ್ತು ಮತ್ತು ಶಾಂತರಾಮ ಶೆಟ್ಟಿಯವರ ಕನಸಿನ ಕಾರ್ಯಕ್ರಮ ಇದಾಗಿತ್ತು. ಇದನ್ನು ನನಸಾಗಿಸಲು ಐಲೇಸಾದ ಸಕ್ರಿಯ ಸದಸ್ಯರಾದ ವಿವೇಕ್ ಮಂಡೆಕರೆ, ಅಜೇಶ್ ಚಾರ್ಮಾಡಿ, ಡಾ| ರಾಜೇಶ್ ಆಳ್ವ , ಮೋಹನ್ ಕಾಮಾಕ್ಷಿ, ಪ್ರಶಾಂತ್ , ದಿಶಾ ಶೆಟ್ಟಿ ಸಹಕರಿಸಿದರು