ಮುಂಬಯಿ (ಆರ್‌ಬಿಐ), ಜು.೧೭: ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನ ಮತ್ತು ಶ್ರೀ ಪೇಜಾವರ ಮಠ ಮುಂಬಯಿ ವತಿಯಿಂದ ಶ್ರದ್ಧಾಪೂರ್ವಕವಾಗಿ ಆಷಾಡ ಏಕಾದಶಿ ಪೂಜೆ ನೆರವೇರಿಸಲ್ಪಟ್ಟಿತು.
ಇಂದಿಲ್ಲಿ ಬುಧವಾರ ಆಷಾಢ ಏಕಾದಶಿ ಪ್ರಯುಕ್ತ ಸಾಂತಾಕ್ರೂಜ್ ಪೂರ್ವದ ಪ್ರಭಾತ್ ಕಾಲೋನಿಯಲ್ಲಿನ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸಭಾಗೃಹದಲ್ಲಿ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳ ಆಶೀರ್ವಾದ, ದಿವ್ಯ ಪ್ರೇರಣೆ ಹಾಗೂ ಮಾರ್ಗದರ್ಶನದಲ್ಲಿ ಭಜನೆ, ಲಕ್ಷ ತುಳಸಿ ಆರ್ಚಣೆ ನೆರವೇರಿಸಲಾಯಿತು.
ಪೇಜಾವರ ಶಾಖೆಯ ಆಡಳಿತಾಧಿಕಾರಿ ಡಾ| ರಾಮದಾಸ ಉಪಾಧ್ಯಾಯ ರೆಂಜಾಳ ಆರಂಭದಲ್ಲಿ ಶ್ರೀಕೃಷ್ಣ ದೇವರ ಸನ್ನಿಧಿಯಲ್ಲಿ ಏಕಾದಶಿ ಪೂಜೆ ನೆರವೇರಿಸಿ ಬಳಿಕ ಭಕ್ತರನ್ನೊಳಗೊಂಡು ಪೂಜಾಧಿಗಳೊಂದಿಗೆ ಮಹಾ ಮಂಗಳಾರತಿ ನೆರವೇರಿಸಿ ಭಕ್ತರಿಗೆ ಹರಸಿದರು. ಈ ಶುಭಾವಸರದಲ್ಲಿ ಪೇಜಾವರ ಮಠದಲ್ಲಿ (ಮಧ್ವ ಭವನದ) ಭಗವದ್ಗೀತಾ ಪಾಠಕ್ಕೆ ಚಾಲನೆಯನ್ನೀಡಲಾಯಿತು.
ಮಧ್ವೇಶ ಭಜನಾ ಮಂಡಳಿ ಸಾಂತಕ್ರೂಜ್ ಇದರ ಸದಸ್ಯೆಯರು ಶ್ಯಾಮಲಾ ಶಾಸ್ತಿç ಮಾರ್ಗದರ್ಶನದಲ್ಲಿ ಭಜನೆಗೈದರು. ಈ ಸಂದರ್ಭದಲ್ಲಿ ಶ್ರೀ ಪೇಜಾವರ ಮಠ ಮುಂಬಯಿ ಆಡಳಿತಾಧಿಕಾರಿಗಳಾದ ಪ್ರಕಾಶ್ ಆಚಾರ್ಯ ರಾಮಕುಂಜ, ಶ್ರೀಹರಿ ಭಟ್ ಪುತ್ತಿಗೆ ಮತ್ತು ನಿರಂಜನ್ ಗೋಗಟೆ ಸೇರಿದಂತೆ ಸಹ ಪುರೋಹಿತರು ಮತ್ತು ಭಕ್ತರು ಉಪಸ್ಥಿತರಿದ್ದರು.