Thursday 8th, May 2025
canara news

ಮುಂಬಯಿಯಲ್ಲಿ ಅಖಿಲ ಭಾರತ ತುಳು ಒಕ್ಕೂಟ ಮಂಗಳೂರು ಸದಸ್ಯತನ ಅಭಿಯಾನ

Published On : 25 Jul 2024   |  Reported By : Rons Bantwal


ಮುಂಬಯಿ (ಆರ್‌ಬಿಐ), ಜು.೨೩: ಅಖಿಲ ಭಾರತ ತುಳು ಒಕ್ಕೂಟ (ರಿ.) ಮಂಗಳೂರು ಇದರ ಮುಂಬಯಿ ಸದಸ್ಯತನ ಅಭಿಯಾನಕ್ಕೆ ಇಂದಿಲ್ಲಿ ಮಂಗಳವಾರ ಮುಂಬಯಿಯಲ್ಲಿ ಚಾಲನೆ ನೀಡಲಾಯಿತು.

ಹಿರಿಯ ಸಂಘಟಕ ರವೀಂದ್ರನಾಥ ಎಂ.ಭAಡಾರಿ, ಪ್ರಕಾಶ್ ಟಿ.ಶೆಟ್ಟಿ ನಲ್ಯ ಗುತ್ತು, ಒಕ್ಕೂಟದ ಕಾರ್ಯದರ್ಶಿ ಮೂಲ್ಕಿ ಕರುಣಾಕರ ಶೆಟ್ಟಿ, ಕೋಶಾಧಿಕಾರಿ ಚಂದ್ರಹಾಸ ದೇವಾಡಿಗ ಬೆದ್ರ, ಜೊತೆ ಕಾರ್ಯದರ್ಶಿ ಪಿ.ಎ ಪೂಜಾರಿ, ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ ಶೆಟ್ಟಿ, ತಾರಾನಾಥ್ ಶೆಟ್ಟಿ ಬೋಳಾರ ಉಪಸ್ಥಿತರಿದ್ದರು.

ಮುಂಬಯಿಯ ತುಳು ಸಂಘಟನೆ ಗಳ ಪ್ರಮುಖರ ಸಭೆಯನ್ನು ಇದೇ ಗುರುವಾರ (ಜು.೨೫) ಸಂಜೆ ೩.೦೦ ಗಂಟೆಗೆ ಕುರ್ಲಾ ಪೂರ್ವದಲ್ಲಿನ ಬಂಟರ ಭವನದ ಆನೆಕ್ಸ್ ಕಟ್ಟಡದ ಸಭಾಂಗಣದಲ್ಲಿ ಎ.ಸಿ.ಭಂಡಾರಿ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

೧೯೮೯ರಲ್ಲಿ ಮಂಗಳೂರಿನಲ್ಲಿ ಸಂಘಟಿಸಲ್ಪಟ್ಟ ಅಖಿಲ ಭಾರತ ತುಳು ಒಕ್ಕೂಟ ಸಂಸ್ಥೆ ಕಳೆದ ಮೂರುವರೆ ದಶಕಗಳಲ್ಲಿ ದುಬೈ ಸೇರಿದಂತೆ ಹಲವು ಚಾರಿತ್ರಿಕ ತುಳು ಸಮ್ಮೇಳನಗಳನ್ನು ಸಂಘಟಿಸಿದೆ. ಈ ಸಂಘಟನೆಯಲ್ಲಿ ಈಗಾಗಲೇ ದೇಶ ವಿದೇಶಗಳ ೪೫ ತುಳು ಸಂಘಟನೆಗಳು ಸದಸ್ಯತನ ಪಡೆದಿವೆ. ತುಳು ಭಾಷೆ, ಸಂಸ್ಕöÈತಿ ಯನ್ನು ಉಳಿಸಿ ಬೆಳೆಸುವಲ್ಲಿ, ತುಳು ಸಂಘ ಟನೆ ಗಳಿಗೆ ಸ್ಫೂರ್ತಿ, ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ತುಳು ಸಂಘ ಟನೆ ಗಳನ್ನು ಒಕ್ಕೂಟ ದ ಸದಸ್ಯ ಸಂಸ್ಥೆ ಗಳಾಗಿ ನೋಂದಣಿ ಮಾಡಲಾಗುವುದು.

ದಿ| ಎಸ್.ಆರ್.ಹೆಗ್ಡೆ, ದಿ| ಅಡ್ಯಾರ್ ಮಹಾಬಲ ಶೆಟ್ಟಿ, ಲಯನ್ ದಿವಾಕರ ಶೆಟ್ಟಿ ಸಾಂಗ್ಲಿ, ಧರ್ಮಪಾಲ ಯು. ದೇವಾಡಿಗ ಮೊದಲಾದ ಕ್ರಿಯಾಶೀಲ ನಾಯಕರ ನೇತೃತ್ವದಲ್ಲಿ ಒಕ್ಕೂಟವು ಬೆಳೆದಿದ್ದು ಸದಸ್ಯ ಕೂಟಗಳ ಸಂಖ್ಯೆಯನ್ನು ನೂರರ ಗಡಿ ಮುಟ್ಟಿಸುವ ಸಂಕಲ್ಪ ಹೊಂದಿದೆ.

ಅನುಭವಿ ಸಂಘಟಕರಾದ ಕರ್ನೂರ್ ಮೋಹನ ರೈ ಹಾಗೂ ಅಶೋಕ ಪಕ್ಕಳ ಅವರು ಮುಂಬಯಿ ಸದಸ್ಯತನ ಅಭಿಯಾನದ ನೇತೃತ್ವ ವಹಿಸಲಿರುವರು ಎಂದು ಸಂಘಟಕರು ತಿಳಿಸಿದ್ದಾರೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here