ಮಂಗಳೂರು, ಜು.31: ಅಖಿಲ ಭಾರತ ಬ್ಯಾರಿ ಪರಿಷತ್ ಇದರ ವಾರ್ಷಿಕ ಮಹಾಸಭೆ ನಗರದ ಓಶಿಯನ್ ಪಾರ್ಲ್ ಸಭಾಂಗಣದಲ್ಲಿ ಅಧ್ಯಕ್ಷ ಯು.ಹೆಚ್.ಖಾಲೀದ್ ಉಜಿರೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ನಡುಪದವು ಸ್ವಾಗತಿಸಿ ವರದಿ ವಾಚಿಸಿದರು.ಕೋಶಾಧಿಕಾರಿ ನಿಸಾರ್ ಫಕೀರ್ ಮೊಹಮ್ಮದ್ ಲೆಕ್ಕ ಪತ್ರ ವರದಿ ಮಂಡಿಸಿದರು.
ಅಧ್ಯಕ್ಷ ಯು.ಹೆಚ್.ಖಾಲಿದ್ ಉಜಿರೆ ಅಧ್ಯಕ್ಷ ಭಾಷಣ ಮಾಡಿದ ಬಳಿಕ ನೂತನ ಸಮಿತಿ ಸದಸ್ಯರನ್ನು ಆರಿಸಲಾಯಿತು. ಯೂಸುಫ್ ವಕ್ತಾರ್ ನೂತನ ಸಮಿತಿ ರಚನೆಯ ನೇತೃತ್ವ ವಹಿಸಿದ್ದರು.
ಅಧ್ಯಕ್ಷರಾಗಿ ಯು.ಎಚ್.ಖಾಲಿದ್ ಉಜಿರೆ, ಪ್ರಧಾನ ಕಾರ್ಯದರ್ಶಿ ಆಗಿ ಇಬ್ರಾಹಿಂ ನಡುಪದವು, ಕೋಶಾಧಿಕಾರಿ ಆಗಿ ನಿಸಾರ್ ಎಫ್.ಮೊಹಮ್ಮದ್, ಉಪಾಧ್ಯಕ್ಷ ಆಗಿ ಟಿ.ಎಂ.ಶಹೀದ್, ಎಂ.ಎಚ್ ಮೊಯ್ದಿನ್, ಅಬ್ದುಲ್ ಲತೀಫ್ ಕಂದಕ್, ಜೊತೆ ಕಾರ್ಯದರ್ಶಿ ಆಗಿ ಅಬ್ದುಲ್ ರಹಿಮಾನ್ ಕಲಗುಂಡಿ, ಮೊಹಮ್ಮದ್ ಇಕ್ಬಾಲ್ ಶೌಕತ್, ಸಂಘಟನಾ ಕಾರ್ಯದರ್ಶಿ ಆಗಿ ಅಬ್ದುಲ್ ಸಲಾಂ ಪಿ., ಮಾಧ್ಯಮ ಕಾರ್ಯದರ್ಶಿ ಆಗಿ ಬಶೀರ್ ಕಲ್ಕಟ್ಟ ಹಾಗೂ 23 ಮಂದಿಯನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.
ಸಲಹೆಗಾರರ ಬಿ.ಎ.ಹನೀಫ್ ಸಂಘಟನೆ ಕಾರ್ಯ ಚಟುವಟಿಕೆಗಳ ಬಗ್ಗೆ ಸಲಹೆ ನೀಡಿದರು. ನಿಸಾರ್ ಎಫ್. ಮೊಹಮ್ಮದ್ ವಂದಿಸಿದರು