Thursday 8th, May 2025
canara news

ನ್ನಡ ಸಂಘ ಸಾಂತಾಕ್ರೂಜ್ ವತಿಯಿಂದ ೭೮ನೇ ಸ್ವಾತಂತ್ರ‍್ಯ ದಿನಾಚರಣೆ

Published On : 16 Aug 2024   |  Reported By : Rons Bantwal


ಸ್ವಾತಂತ್ರ‍್ಯತಾ ದೇಶದ ಜನರು ನಿರ್ಬಿತರಾಗಿರಲಿ : ಸುಜಾತ ಆರ್.ಶೆಟ್ಟಿ

ಮುಂಬಯಿ (ಆರ್‌ಬಿಐ), ಆ.೧೬: ಕನ್ನಡ ಸಂಘ ಸಾಂತ್ರಾಕ್ರೂಜ್ ಇವರಿಂದ ದೇಶದ ೭೮ನೇ ಸ್ವಾತಂತ್ರ‍್ಯ ದಿನಾಚರಣೆಯನ್ನು ಸಂಘದ ಕಚೇರಿಯಲ್ಲಿ ಕಳೆದ ಗುರುವಾರ ಬೆಳಿಗ್ಗೆ ಸಂಘದ ಅಧ್ಯಕ್ಷೆ ಸುಜಾತ ಆರ್.ಶೆಟ್ಟಿ ಅಧ್ಯಕ್ಷತೆಯಲ್ಲಿ ಆಚರಿಸಿತು.

ಸಂಘದ ಸದಸ್ಯರು, ನೆರೆಹೊರೆಯ ನಾಗರಿಕರು ಮತ್ತು ಮಕ್ಕಳು ಉಪಸ್ಥಿತರಿದ್ದು, ಸಂಘದ ಅಧ್ಯಕ್ಷೆ ಸುಜಾತ ಶೆಟ್ಟಿ ರಾಷ್ಟçಧ್ವಜವನ್ನು ಆರಿಸಿದರು. ಸದಸ್ಯರು ರಾಷ್ಟç ಧ್ವಜಕ್ಕೆ ಗೌರವ ವಂದನೆ ಸಲ್ಲಿಸಿ ರಾಷ್ಟç ಗೀತೆಯೊಂದಿಗೆ ರಾಷ್ಟçಪ್ರೇಮ ಮೆರೆದರು.

ಸುಜಾತ ಶೆಟ್ಟಿ ಅಧ್ಯಕ್ಷೀಯ ನುಡಿಗಳನ್ನಾಡಿ ನೇರವೇರಿದ್ದ ನಾಗರಿಕರಿಗೆ ತಮ್ಮ ಶುಭಾಶಯಗಳನ್ನು ತಿಳಿಸಿದರು. ಹಾಗೂ ೭೮ ವರ್ಷದ ಹಿಂದೆ ಸ್ವಾತಂತ್ರ÷್ಯಕ್ಕಾಗಿ ಹೋರಾಡಿದ ಮಹಾನುಭಾವರನ್ನು ಸ್ವರಿಸುತ್ತಾ ವಂದಿಸಿದರು. ಅಲ್ಲದೆ ಗಡಿ ಪ್ರದೇಶದಲ್ಲಿ ಸದಾ ದೇಶದ ರಕ್ಷಣೆ ಮಾಡುತ್ತಿರುವ ಸೈನಿಕರಿಗೆ ಭಾರತ್ ಮಾತೆ ಶಕ್ತಿಯನ್ನು ನೀಡಲಿ. ಭಾರತ ದೇಶದ ವಿಶ್ವದಲ್ಲಿ ಪ್ರಥಮ ದರ್ಜೆಯನ್ನು ಪಡೆದು ನಮ್ಮ ದೇಶದ ಜನರು ನಿರ್ಬಿತರಾಗಿರಲಿ ಎಂದು ತಿಳಿಸಿದರು.

ಸಂಘದ ಗೌರವಾಧ್ಯಕ್ಷ ಎಲ್.ವಿ.ಅಮೀನ್ ಮಾತನಾಡಿ ೧೯೪೭ರಲ್ಲಿ ನಮಗೆ ಸ್ವಾತಂತ್ರ÷್ಯ ಸಿಕ್ಕಿತು. ಇಂದು ನಾವೇ ೭೮ನೇ ಸ್ವಾತಂತ್ರ ್ಯ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಸ್ವಾತಂತ್ರ ್ಯ ಚಳುವಳಿಯ ಸಂದರ್ಭದಲ್ಲಿ ಸುಭಾಷ್ ಚಂದ್ರ ಭೋಸ್ ಅವರು ನನಗೆ ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ÷್ಯ ಕೊಡಿಸುತ್ತೇನೆ ಎಂದು ಹೇಳಿದ ಮಾತುಗಳು ತಮಗೆಲ್ಲರಿಗೂ ತಿಳಿದ ವಿಷಯ. ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರ ಸ್ವೀಕರಿಸಿದ ನಂತರ ನಾವು ನಮ್ಮ ದೇಶದ ಸರ್ವಾಂಗೀಣ ಅಭಿವೃದ್ಧಿಯನ್ನು ನೋಡುತ್ತಿದ್ದೇವೆ. ನಮ್ಮ ದೇಶವು ವಿಶ್ವದ ೫ನೇ ಅತೀ ದೊಡ್ಡ ಆರ್ಥಿಕ ಮಹಾಶಕ್ತಿಯಾಗಿದೆ. ನಾವು ಈಗಾಗಲೇ ವಿಶ್ವ ಗುರುವಾಗಿದ್ದೇವೆ.

ಈ ಸಂದರ್ಭದಲ್ಲಿ ಸಂಘದ ಗೌರವ ಕೋಶಾಧಿಕಾರಿ ಸುಧಾಕರ್ ಉಚ್ಚಿಲ್, ಜೊತೆ ಕೋಶಾಧಿಕಾರಿ ಬನ್ನಂಜೆ ರವೀಂದ್ರ ಅಮೀನ್, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ವಿಜಯಕುಮಾರ್ ಕೆ.ಕೋಟ್ಯಾನ್, ಶಕೀಲಾ ಪಿ.ಶೆಟ್ಟಿ, ಲಿಂಗಪ್ಪ ಬಿ.ಅಮೀನ್, ಸುಮಾ ಎಂ.ಪೂಜಾರಿ, ಸುಮಿತ್ರಾ ಜಿ.ದೇವಾಡಿಗ, ಗಿರೀಶ್ ಶೆಟ್ಟಿ, ರೇಖಾ ಶೆಟ್ಟಿ, ಮಹಾಬಲ ಪೂಜಾರಿ ಹಾಗೂ ಸಂಘದ ಸದಸ್ಯರ ಮಕ್ಕಳು ಉಪಸ್ಥಿತರಿದ್ದರು. ಗೌರವ ಪ್ರಧಾನ ಕಾರ್ಯದರ್ಶಿ ಜಯ ಪೂಜಾರಿ ಸ್ವಾಗತಿಸಿ, ಧನ್ಯವಾದಗೈದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here