Friday 19th, April 2024
canara news

ಸೃಜನಾ ಮುಂಬಯಿ-ಅಧ್ಯಯನ, ಅನ್ವೇಷಣೆ, ಸಂಶೋಧನೆಯ ಕಥನ ಪರ್ವ

Published On : 14 Mar 2015   |  Reported By : Rons Bantwal


ಮುಂಬಯಿ, ಮಾ.13: ಸೃಜನಾ ಮುಂಬಯಿ ಕನ್ನಡ ಲೇಖಕಿಯರ ಬಳಗವು, ಮುಂಬಯಿ ಕನ್ನಡ ಸಂಘದ ಆಶ್ರಯದಲ್ಲಿ ಮಹಿಳಾ ದಿನಾಚರಣೆಯನ್ನು ಸರಳ ಸಂಭ್ರಮ, ಸಂತಸದಿಂದ ಆಚರಿಸಿ ಕೊಂಡಿತು.

ಜಗಜ್ಯೋತಿ ಕಲಾವೃಂದ ಮುಂಬಯಿ ಇದರ ಸುಶೀಲಾ ಶೆಟ್ಟಿ ಸ್ಮಾರಕ ಪ್ರಶಸ್ತಿಗೆ ಭಾಜನರಾದ ಮಂಗಳೂರ ಲೇಖಕಿ ಶಶಿಲೇಖಾ ಬಿ., ಮಂಗಳೂರುನ ಲೇಖಕಿ, ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಸಕ್ರಿಯ ಸದಸ್ಯೆ, ಬಿ.ಎಂ ರೋಹಿಣಿ ಆಗಮಿಸಿ ಮುಂಬಯಿ ಲೇಖಕಿಯರೊಂದಿಗೆ ಮುಕ್ತ ಸಂವಾದದಲ್ಲಿ ಪಾಲ್ಗೊಂಡರು. ಮುಂಬಯಿ ಕನ್ನಡ ಸಂಘ, ಸೃಜನಾ ಬಳಗಕ್ಕಾಗಿ ಎಂದಿನಂತೆ ಮುಕ್ತಮನದ ಮುಕ್ತದ್ವಾರ ತೆರೆದಾಗ, ಅಲ್ಲಿ ಈ ಮಂಗಳೂರ ಲೇಖಕಿಯರ ಅಭ್ಯಾಸ, ಅನ್ವೇಷಣೆ,ಸಂಶೋಧನೆಯ ಕಥನ ಪರ್ವವೇ ತೆರೆದು ಕೊಂಡಿತು.

ವೈಚಾರಿಕ ಪ್ರಜ್ಞೆಯ, ಮಹಿಳಾ ಜಾಗೃತಿಯ ಆಶೋತ್ತರಗಳ, ನಿರಂತರ ಅಧ್ಯಯನಶೀಲೆ, ನಿವೃತ್ತ ಶಿಕ್ಷಕಿ ರೋಹಿಣಿ ಅವರ ಅಧ್ಯಯನ, ಸಂಶೋಧನೆಗಳಲ್ಲಿ ಹೆಗಲೆಣೆಯಾಗಿ, ಕರಾವಳಿ ಲೇಖಕಿಯರ, ವಾಚಕಿಯರ ಸಂಘದ ಕಾರ್ಯ ಚಟುವಟಿಕೆಗಳಲ್ಲಿ ಜೊತೆಯಾಗಿ ಸ್ನೇಹತಂತುವಿನಿಂದ ಬಿಗಿಯಲ್ಪಟ್ಟವರು, ಭೌತಶಾಸ್ತ್ರದ ಶಿಕ್ಷಕಿಯಾಗಿ, ಕಾಲೇಜ್ ಪ್ರಾಂಶುಪಾಲೆಯಾಗಿರುವ ಶಶಿಲೇಖಾ ಅವರು ದಕ್ಷಿಣ ಕನ್ನಡದ ಅವಿವಾಹಿತ ಮಹಿಳೆಯರ ಬಗೆಗೆ, ತುಳುನಾಡಿನ ಮಾಸ್ತಿ ಕಲ್ಲುಗಳು, ವೀರಗಲ್ಲುಗಳ ಬಗ್ಗೆ, ದಕ್ಷಿಣ ಕನ್ನಡದ ಲೈಂಗಿಕ ಕಾರ್ಯಕತರ್ೆಯರ ಬಗ್ಗೆ, ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿ, ಜೈಲು ಸೇರಿದ ಮಹಿಳೆಯರು ಮತ್ತು ಹಿಂದುಳಿದ ವರ್ಗದವರ ಬಗ್ಗೆ, ದಕ್ಷಿಣ ಕನ್ನಡ ಜಿಲ್ಲೆಯ ಮಹಿಳಾ ಹೋರಾಟದ ಬಗ್ಗೆ ಅಧ್ಯಯನದ ಹಾದಿ ಹಿಡಿದು ಹೊರಟ, ಕಾಯಕವೇ ಕೈಲಾಸವಾಗಿರುವ ಬಿ.ಎಂ.ರೋಹಿಣಿ ಅವರ ಶ್ರಧ್ಧೆ, ದಣಿವರಿಯದ ದುಡಿಮೆ ಹಾಗೂ ಕಾರ್ಯಸಿಧ್ಧಿಯ ಪರಿಚಯ ಈ ಸಾಹಿತ್ಯಕೂಟದಲ್ಲಿ ಸೃಜನಾ ಬಳಗದ ಪಾಲಿಗಾಯ್ತು. ಮೂವತ್ತೆಂಟು ವರ್ಷಗಳ ಸುದೀರ್ಘ ಶಿಕ್ಷಕ ವೃತ್ತಿಯ ಬಳಿಕವೂ ನಿರಂತರ ಅಧ್ಯಯನ, ಸಂಶೋಧನೆಗಳಲ್ಲಿ, ಅವುಗಳ ದಾಖಲಾತಿಯಲ್ಲಿ ಮಗ್ನರಾಗಿರುವ ದಣಿವಿರದ ಸಾಧಕಿ, ಬಿ.ಎಂ.ರೋಹಿಣಿ, ತಮ್ಮ ಗೆಳತಿ, ಪ್ರಾಂಶುಪಾಲೆ ಶಶಿಲೇಖಾ ಭಿ. ಅವರೊಡನೆ ಜೊತೆ ಜೊತೆಯಾಗಿ ತುಳುನಾಡ ಮಾಸ್ತಿಕಲ್ಲುಗಳು ಮತ್ತು ವೀರಗಲ್ಲುಗಳ ಅಧ್ಯಯನ, ಸಂಶೋಧನೆಯ ಚಿತ್ರವನ್ನು ಸೃಜನಾ ಬಳಗದೆದುರು ತೆರೆದಿಟ್ಟರು.

ಶಶಿಲೇಖಾ ಅವರ ವೃತ್ತಿ ಜೀವನದ ರಜಾದಿನಗಳಾದ ಶನಿವಾರ, ರವಿವಾರಗಳಲ್ಲಿ ಬೆಳಿಗ್ಗೆ ಎಂಟು ಗಂಟೆಯಿಂದ ರಾತ್ರಿ ಎಂಟುಗಂಟೆಯ ವರೆಗೆ ಕಾಲಿಗೆ ಚಕ್ರ ಕಟ್ಟಿ ಕೊಂಡಂತೆ ಅನ್ವೇಷಣೆಯ ಹಾದಿ ಹಿಡಿದು, ಮಾಸ್ತಿ ಕಲ್ಲುಗಳನ್ನೂ, ವೀರಗಲ್ಲುಗಳನ್ನೂ ಅರಸುತ್ತಾ, ಬಲ್ಲವರನ್ನು ಕೇಳುತ್ತಾ, ಸಂಘ, ಸಂಸ್ಥೆಗಳ ಮುಖ್ಯಸ್ಥರನ್ನು ಸಂಪಕರ್ಿಸುತ್ತಾ, ಐತಿಹ್ಯ, ಸ್ಥಳ ಪುರಾಣಗಳನ್ನು ಕಲೆ ಹಾಕುತ್ತಾ ಸಾಗಿದ ಸುದೀರ್ಘ ಶ್ರಮದ ಹಾದಿಯನ್ನು ಈ ಅನ್ವೇಷಕಿಯರು ತೆರೆದಿಟ್ಟರು. ಶಾಸನವಿರುವ ಮಾಸ್ತಿ ಕಲ್ಲು, ವೀರಗಲ್ಲುಗಳಂತೆಯೇ ಶಾಸನವಿರದ ಮಾಸ್ತಿ ಕಲ್ಲು, ವೀರಗಲ್ಲುಗಳೂ ಲಭಿಸಿ, ಅಧ್ಯಯನಕ್ಕೊಂದು ಮಿತಿಯನ್ನಿತ್ತುವೆಂದೂ, ಮಾಸ್ತಿ ವಿಗ್ರಹಗಳ ಪವಾಡ, ಕಾರಣಿಕಗಳಷ್ಟೇ ಲಭ್ಯವಾಗಿ, ಅವುಗಳ ಚಾರಿತ್ರಿಕ ಮೂಲ ಅಲಭ್ಯವಾಯ್ತೆಂದೂ ರೋಹಿಣಿ ನೋವಿನಿಂದಲೇ ನುಡಿದರು. ಮಾತೃ ಪ್ರಧಾನ ವ್ಯವಸ್ಥೆಯಿದ್ದ ತುಳುನಾಡಿನಲ್ಲೂ ಸಹಗಮನದ ಸಂಪ್ರದಾಯವು ಎಷ್ಟು ಪ್ರಚಲಿತವಿತ್ತು ಎಂಬುದನ್ನು ಗುರುತಿಸುವುದೇ ತಮ್ಮ ಅಧ್ಯಯನದ ಗುರಿ, ಎಂದೂ ಅವರಂದರು.

ಡಾ| ಸಬೀಹಾ ಭೂಮಿಗೌಡ ಅವರ ಜೊತೆಯಲ್ಲಿ ತಾನು ಕೈಕೊಂಡ `ಅವಿವಾಹಿತ ಮಹಿಳೆಯರ ಸಮಾಜೋ ಸಾಂಸ್ಕೃತಿಕ ಅಧ್ಯಯನ'ದ ಬಗೆಗೂ ರೋಹಿಣಿ ಅವರು ರೋಚಕ ವಿವರವನ್ನಿತ್ತರು.. ಅವಿವಾಹಿತ ಮಹಿಳೆಯರು ಸಾರ್ವಜನಿಕ ಆಸ್ತಿಯೆಂಬಂತೆ ಪುರುಷರು ನಡೆದು ಕೊಳ್ಳುವ ಬಗೆ, ಇಂತಹ ಮಹಿಳೆಯರ ಕೌಟುಂಬಿಕ ಬದುಕಿನ ಸಂಧಿಗ್ಧ, ತಲ್ಲಣಗಳು, ಅಪರ ವಯಸ್ಸಿನಲ್ಲಿ ಅವರಲ್ಲಿ ಬೆಳೆವ ಸಂಶಯ ಪ್ರವೃತ್ತಿ, ಯಾರನ್ನೂ ನಂಬದ, ನೆಚ್ಚದ ಸ್ವಭಾವ,ಜಿಪುಣತನ, ಅಂಥವರು, ಭೇಟಿಗೆ, ಮಾತಿಗೆ ತೆರೆದುಕೊಳ್ಳುವುದೇ ಪ್ರಯಾಸಕರವಾದ ಅನುಭವಗಳು, ಕೆಲವೆಡೆ ಕುಟುಂಬಗಳಲ್ಲಿ ಒಬ್ಬರಲ್ಲದೆ, ಇಬ್ಬರು, ಮೂವರೂ ಅವಿವಾಹಿತರಾಗಿ ಉಳಿವ ಪ್ರಸಂಗಗಳು ಇಂತಹ ತಾವು ಕಂಡು ಅಭ್ಯಸಿಸಿದ ಪ್ರಸಂಗಗಳನ್ನು ರೋಹಿಣಿ ನಿಚ್ಚಳವಾಗಿ ಮುಂಬೈ ಲೇಖಕಿಯರೆದುರು ಬಿಡಿಸಿಟ್ಟರು.

ಗುಲಾಬಿ ಬಿಳಿಮಲೆ ಅವರೊಡಗೂಡಿ ತಾವು ನಡೆಸಿದ 'ದಕ್ಷಿಣ ಕನ್ನಡ ಜಿಲ್ಲೆಯ ಮಹಿಳಾ ಹೋರಾಟದ ದಾಖಲೀಕರಣ'ದ ಅಧ್ಯಯನ, ಅನ್ವೇಷಣ, ದಾಖಲಾತಿಯ ವಿವರಗಳನ್ನೂ ರೋಹಿಣಿ ಅವರು ತೆರೆದಿಟ್ಟರು.. ಜಿಲ್ಲೆಯ ಕಾಫಿ ಕಾಖರ್ಾನೆಗಳಲ್ಲಿ, ಗೇರುಬೀಜ ಕಾಖರ್ಾನೆಗಳಲ್ಲಿ, ಹಂಚಿನ ಕಾಖರ್ಾನೆಗಳಲ್ಲಿ, ಬೀಡಿ ಉದ್ಯಮದಲ್ಲಿ ಹಾಗೂ ಇತರೆಡೆ ದುಡಿಯುತ್ತಿದ್ದ ಶ್ರಮಿಕ ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ನಡೆಸಿದ ಹೋರಾಟ ಎಲ್ಲಿಯೂ ದಾಖಲಾಗದೆ ಉಳಿದಿದ್ದು, ಅದನ್ನು ಅನ್ವೇಷಿಸಿ, ದಾಖಲಿಸುವ ಅಗತ್ಯವನ್ನು ಮನಗಂಡು ಅಂತೆಯೇ ಕಾರ್ಯಪ್ರವೃತ್ತರಾದ ಬಗ್ಗೆ ಅವರು ಮಾಹಿತಿಯಿತ್ತರು.

ಹಾಗೆಯೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರು ಮತ್ತು ಹಿಂದುಳಿದ ಸಮುದಾಯದವರು ಭಾಗವಹಿಸಿದ ವೃತ್ತಾಂತಗಳ ದಾಖಲೀಕರಣಕ್ಕಾಗಿ ಜೈಲುಗಳ ಕಡತಗಳ ಪರಿಶೀಲನೆಯ ಶ್ರಮದಾಯಕ ಕೈಂಕರ್ಯವನ್ನೂ ಕೈಗೊಂಡು, ಇದಕ್ಕಾಗಿ ಸರಕಾರಕ್ಕೆ ಬರೆದುಕೊಂಡು, ಅನುಮತಿ ಪಡೆದುಕೊಂಡು, ಜೈಲುಗಳನ್ನು ಸಂದಶರ್ಿಸಿ, ಅಲ್ಲಿ ಧೂಳು ಹಿಡಿದು ಕೊಳೆಯುತ್ತಾ ಬಿದ್ದಿರುವ ಕಡತಗಳ ರಾಶಿಯನ್ನು ಜಾಲಾಡಿದ ರೋಚಕ ವಿವರವನ್ನೂ ಅವರು ಬಿಡಿಸಿಟ್ಟರು . ಸ್ವಾತಂತ್ರ್ಯ ಪೂರ್ವದಲ್ಲಿನ ಕಡತಗಳಲ್ಲಿ ಸರಿಯಾದ ಸಂಪೂರ್ಣ ಗುರುತು, ಪರಿಚಯದ ದಾಖಲೆ ಇದ್ದರೆ, ಸ್ವಾತಂತ್ರ್ಯಾನಂತರದ ಕಡತಗಳಲ್ಲಿ ಅದೇನೂ ಇರದ, ಬರಿಯ ಹೆಸರುಗಳು ಮಾತ್ರ ಲಭ್ಯವಿರುವ ವಾಸ್ತವಕ್ಕೆ ತಾವು ಮುಖಾಮುಖಿಯಾದ ಬಗ್ಗೆಯೂ ಅವರು ನುಡಿದರು.

ಶ್ರೀಮತಿ ಹರಿಣಿ ಅವರ ಜೊತೆಯಲ್ಲಿ ತಾನು ಕೈಗೊಂಡ ಮಂಗಳೂರಿನಲ್ಲಿರುವ ಲೈಂಗಿಕ ಕಾರ್ಯಕತರ್ೆಯರ ಸಾಮಾಜಿಕ ಹಿನ್ನೆಲೆ ಮತ್ತು ಮಾನಸಿಕ ಪರಿಸ್ಥಿತಿಯ ಅಧ್ಯಯನದ ಬಗೆಗೂ, ರೋಹಿಣಿ ಅವರು ಮಾಹಿತಿಯನ್ನಿತ್ತರು. ಪರಿಸ್ಥಿತಿಗೆ ಬಲಿಬಿದ್ದು ಲೈಂಗಿಕ ಕಾರ್ಯಕತರ್ೆಯರಾಗಿ ಪರಿವತರ್ಿತರಾದವರು, ಹಣದಾಸೆಗೆ ದೈಹಿಕ ವಾಂಛೆಗೆ ದಾಸರಾಗಿ ಆ ವೃತ್ತಿಗಿಳಿದವರು, ಸಂಸಾರಿಗಳಾಗಿದ್ದೂ ಆ ವಿಷ ವತರ್ುಲವನ್ನು ಹೊಕ್ಕು ಬರುವವರು ಇಂತಹ ವಿಭಿನ್ನ ಪರಿಸ್ಥಿತಿಗಳ, ಮನಃಸ್ಥಿತಿಗಳ ವ್ಯಾಪಕ ಅಧ್ಯಯನದ ಬಗೆಗಿನ ಅವರ ಮಾತುಗಳು ತುಂಬ ರೋಚಕವಾಗಿದ್ದುವು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಲ್ಲವರ ಗುತ್ತು ಮನೆಗಳ ಮತ್ತು ಪ್ರಸಿಧ್ಧ ಮನೆತನಗಳ ಅಧ್ಯಯನ ಮತ್ತು ದಾಖಲೀಕರಣ, ಬಾಬು ಶಿವ ಪೂಜಾರಿ ಅವರ ಪ್ರೇರಣೆಯಿಂದ ತಾನು ಕೈಗೊಂಡಿರುವ ಪ್ರಸ್ತುತ ಕಾರ್ಯ ಎಂದು ಅವರಂದರು.

ಕ್ಷೀಣಕಾಯ, ಸರಳ ರೂಪಾಕಾರದಲ್ಲಿ ಅದಮ್ಯ ಸ್ರೀ ಶಕ್ತಿಯನ್ನು ತುಂಬಿಕೊಂಡು ನಾರೀ ಚೇತನಕ್ಕೆ ಮಾದರಿಯಾಗಿ ಪಾದರಸದಂತೆ ಕಾರ್ಯ ನಿರತೆಯಾಗಿರುವ ಈ ಅನನ್ಯ ಲೇಖಕಿ,ಸಾಧಕಿ ಬಿ.ಎಂ.ರೋಹಿಣಿ ಅವರೊಡನೆ ಹಾಗೂ ಶಶಿಲೇಖಾರೊಡನೆ ಕಳೆದ ಕಾಲ ಸೃಜನಾ ಬಳಗದಲ್ಲೂ ಚೈತನ್ಯದ ಬುಗ್ಗೆಯನ್ನೇ ಚಿಮ್ಮಿಸಿ ಹರಿಸಿತು. ಸೃಜನಾ ಬಳಗದ ಮಾರ್ಗದಶರ್ಿ ಡಾ.ಸುನೀತಾ ಎಂ.ಶೆಟ್ಟಿ, ಸಂಚಾಲಕಿ ದಾಕ್ಷಾಯಣಿ ಯಡಹಳ್ಳಿ, ಮಿತ್ರಾ ವೆಂಕಟ್ರಾಜ್, ಗಿರಿಜಾ ಶಾಸ್ತ್ರಿ, ಅಹಲ್ಯಾ ಬಲ್ಲಾಳ, ಡಾ..ವಾಣಿ ಉಚ್ಚಿಲ್ಕರ್, ಅಮಿತಾ ಭಾಗ್ವತ್, ಶಾರದಾ ಅಂಬೇಸಂಗೆ, ಮೀನಾ ಕಾಳಾವರ್ ಶ್ಯಾಮಲಾ ಮಾಧವ ಮತ್ತಿತರರು ಉಪಸ್ಥಿತರಿದ್ದರು. ಮುಂಬೈ ಕನ್ನಡ ಸಂಘದ ಅಧ್ಯಕ್ಷ, ಗುರುರಾಜ ನಾಯಕ್ ಅವರು, ಸಂಘದ ಸಂದರ್ಶಕರ ಕೈ ಬರಹದ ಕೈಪಿಡಿಯನ್ನು ಈ ಅತಿಥಿ ಲೇಖಕಿಯರಿಗಿತ್ತು ಸನ್ಮಾನಿಸಿದರು.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here