Friday 9th, May 2025
canara news

ಶ್ಯಾಮಲಾ ಮಾಧವ - ಪರಿಚಯ

Published On : 30 Mar 2015   |  Reported By : Rons Bantwal


ಹುಟ್ಟೂರು ಮಂಗಳೂರು. ತಂದೆ ಶ್ರೀ ನಾರಾಯಣ ಯು . ಹಾಗೂ ತಾಯಿ ಶ್ರೀಮತಿ ವಸಂತಿ. ತಂದೆ ನಾರಾಯಣ ಯು. ಮಂಗಳೂರ ಸೆರಗಿನ ಸೋಮೇಶ್ಡರ ಉಚ್ಚಿಲದ ಶಾಲಾ ಕರೆಸ್ಪಾಂಡೆಂಟ್ ಆಗಿ ಶೈಕ್ಷಣಿಕ ಕ್ಷೇತ್ರ, ಸಹಕಾರಿ ಕ್ಷೇತ್ರಗಳಲ್ಲಿ ದುಡಿದವರು . ಸುವಿಚಾರ, ಸದಾಚಾರಗಳ , ಮಿತಮಾತಿನ ಸತ್ಯನಿಷ್ಠರು. ತಾಯಿ ಶ್ರೀಮತಿ ವಸಂತಿ , ನಗರದ ಬೆಸೆಂಟ್ ಶಾಲೆಯಲ್ಲಿ ಪಿ.ಟಿ. ಹಾಗೂ ಗೈಡಿಂಗ್ ಶಿಕ್ಷಕಿಯಾಗಿ , ಶಿಸ್ತು, ಸೇವೆ, ದಕ್ಷತೆಗೆ ಹೆಸರಾದವರು.ಅಂತೆಯೇ ಮನೆಯಲ್ಲಿ ಪರಿಪೂರ್ಣ ಗೃಹಿಣಿ.

ಬೆಸೆಂಟ್ ರಾಷ್ಟ್ರೀಯ ಪಾಠಶಾಲೆಯಲ್ಲೇ ಪ್ರಾಥಮಿಕ ಹಾಗೂ ಮಾಧ್ಯಮಿಕ ವಿದ್ಯಾಭ್ಯಾಸ. ಬಳಿಕ ನಗರದ ಸೈಂಟ್ ಆಗ್ನಿಸ್ ಹೈಸ್ಕೂಲ್, ಹಾಗೂ ಕಾಲೇಜ್ಗಳಲ್ಲಿ ವಿದ್ಯಾಭ್ಯಾಸ ಮುಂದರಿಕೆ . ವಿಜ್ಞಾನದ ವಿದ್ಯಾಥಿ೯ನಿಯಾದರೂ, ಬಾಲ್ಯದಿಂದಲೇ ಮನೆಯಲ್ಲೂ, ಶಾಲೆಯಲ್ಲೂ , ಮನೆಯ ಸುತ್ತಣ ನಗರದ ವಾಚನಾಲಯಗಳಿಂದಲೂ ಬೆಳೆಸಿಕೊಂಡ ಕನ್ನಡ, ಇಂಗ್ಲಿಷ್ ಸಾಹಿತ್ಯ ಪ್ರೀತಿ . ಸ್ವಾತಂತ್ರ್ಯೋತ್ತರ ಭಾರತದಲ್ಲಿ ಬೆಸೆಂಟ್ ಶಾಲೆಯಲ್ಲಿ ಆಚರಿಸಲ್ಪಡುತ್ತಿದ್ದ ರಾಷ್ಟ್ರೀಯ ಹಬ್ಬಗಳು , ಡಾ. ಶಿವರಾಮ ಕಾರಂತರ ನೃತ್ಯ ನಾಟಕಗಳು ,ಪಂಡಿತ ಪಿ.ಕೆ. ನಾರಾಯಣರ ದೇಶಭಕ್ತಿ ತುಂಬಿದ ಕ್ರಾಂತಿ ಗೀತೆಗಳು , ಅಲ್ಲಿನ ಶಿಕ್ಷಕ ವೃಂದ, ನಗರ ಹಾಗೂ ಸೋಮೇಶ್ವರ ಉಚ್ಚಿಲದ ಸುರಮ್ಯ ಪ್ರಕೃತಿ ಬೀರಿದ ಪರಿಣಾಮ ಅಪಾರ.

ಹನ್ನೊಂದರ ಹರೆಯದಲ್ಲಿ ಪ್ರಥಮ ಕವನ " ಕಡಲಿನ ಕರೆ " , ರಾಷ್ಟ್ರಬಂಧು ಪತ್ರಿಕೆಯಲ್ಲಿ ಪ್ರಕಟ.

ಕಾಲೇಜ್ ವಿದ್ಯಾಭ್ಯಾಸದ ಬಳಿಕ, ದಾಂಪತ್ಯ ನಿಮಿತ್ತ ಮುಂಬೈ ವಾಸ. ಅಲ್ಲಿ, ಅಜ್ಜಿಮನೆಯನ್ನು ನೆನೆಸಿ ಕೊಂಡು ಬರೆದ " ಅಮೃತ ವಷಿ೯ಣಿ "" ಬೆಳ್ಳಿ" ಯಲ್ಲಿ ಪ್ರಕಟ. ಪ್ರಥಮ ಕಥೆ " ಅಶೋಕ "ವೂ ಬೆಳ್ಳಿಯಲ್ಲಿ ಪ್ರಕಟ.

ಮುಂದೆ ನಾಡಿನ ಹಾಗೂ ಮುಂಬೈಯ ಹೆಚ್ಚಿನೆಲ್ಲ ಪತ್ರಿಕೆಗಳಲ್ಲಿ ಕಥೆ, ಕವನ,ಲೇಖನ, ಪ್ರವಾಸ ಕಥನ, ವ್ಯಕ್ತಿ ಪರಿಚಯ, ಅನುವಾದ ಕೃತಿಗಳು ಪ್ರಕಟ.

ಪ್ರಕಟಿತ ಕೃತಿಗಳು ;
ದೂರದರ್ಶನದಲ್ಲಿ ಧಾರಾವಾಹಿಯಾಗಿ ಮನಸೆಳೆದ " ಫಮಾ೯ನ್ " ಪ್ರಸಾರ ಮುಗಿದಾಗ, ಮೂಲಕೃತಿ " ಆಲಂಪನಾ " ಪುಸ್ತಕವನ್ನರಸಿ ಪಡೆದು, ಆ ಉತ್ಕೃಷ್ಟ ಉದೂ೯ ಸಾಹಿತ್ಯಕೃತಿಯ ಹಿಂದೀ ಅನುವಾದದ ಸೊಸು, ಶ್ರೇಷ್ಠತೆಗೆ ಮಾರು ಹೋಗಿ, ಕನ್ನಡಕ್ಕೆ 

ಅನುವಾದಿಸಿದ ಕೃತಿ, " ಆಲಂಪನಾ " , ಭಾಗೀರಥಿ ಪ್ರಕಾಶನದಿಂದ 1994ರಲ್ಲಿ ಪ್ರಕಟಿತ. .

ತಂದೆಯವರು ಹಾಗೂ ಹಿರಿಯ ಪರಂಪರೆಯನ್ನು ಸ್ಮರಿಸಿ ಬರೆದು, ಸಂಪಾದಿಸಿದ ಕೃತಿ " ಸತ್ಸಂಚಯ " 2003ರಲ್ಲಿ ಗುಡ್ಡೆಮನೆ ಪ್ರಕಾಶನದಿಂದ ಪ್ರಕಟ.

' ಆಲಂಪನಾ" ಕೃತಿಯ ಯಶಸ್ಸಿನ ಬೆನ್ನಿಗೇ , ಅತ್ಯಂತ ಪ್ರಿಯವಾಗಿ ಹೃದಯದಲ್ಲಿ ಅಚ್ಚೊತ್ತಿ ಕೊಂಡ ಆಂಗ್ಲ ಸಾಹಿತ್ಯ ಕೃತಿ , ಅಮೆರಿಕನ್ ಸಾಹಿತಿ ಮಾರ್ಗರೆಟ್ ಮಿಶೆಲ್ಳ " ಗಾನ್ ವಿದ್ ದ ವಿಂಡ್ " ವಿಶ್ವಸಾಹಿತ್ಯ ಕೃತಿಯ ಕನ್ನಡಾನುವಾದಕ್ಕೆ ತೊಡಗಿ, ವರ್ಷದಲ್ಲೇ ಪೂರೈಸಿದ ಕನ್ನಡಾನುವಾದವು, ಸುದೀರ್ಘವೆಂಬ ಕಾರಣದಿಂದ ಒಳಗುಳಿದು, ಹತ್ತು ವರ್ಷಗಳ ಬಳಿಕ, 2004 ರಲ್ಲಿ ಅಂಕಿತ ಪುಸ್ತಕದಿಂದ ಬೆಳಕು ಕಂಡಿತು .ಯಶಸ್ಸು, ಕೀತರ್ಿಗೆ ಭಾಜನವಾಯ್ತು.2004ರಲ್ಲಿ ಅನುವಾದಿಸಿದ, ನಿವೃತ್ತ ಪೊಲೀಸ್ ಅಧಿಕಾರಿ ರಾಮಯ್ಯ ರೈ ಅವರ " ಮೈ ಡೇಸ್ ಇನ್ ಪೊಲಿಸ್" ಕೃತಿಯ ಅನುವಾದ, " ಪೊಲಿಸ್ ಡೈರಿ ", 2005ರಲ್ಲಿ " ಸುಧಾ " ವಾರ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿ ಜನಪ್ರಿಯವಾಯ್ತು. ಆಂಗ್ಲ ಲೇಖಕಿ ಮೇರಿ ಶೆಲ್ಲಿಯ ವಿಶ್ವಸಾಹಿತ್ಯ ಕೃತಿ " ಫ್ರಾಂಕಿನ್ಸ್ಟೈನ್ " ಕಾದಂಬರಿಯ ಕನ್ನಡಾನುವಾದವು, 2007ರಲ್ಲಿ ಅಂಕಿತ ಪುಸ್ತಕದಿಂದ ಬೆಳಕು ಕಂಡು, ವಿದ್ವತ್ ವಲಯದಲ್ಲಿ ಮನ್ನಣೆ ಪಡೆಯಿತು.

ಕಥಾ ಸಂಗ್ರಹ, " ಆ ಲೋಕ ", 2009ರಲ್ಲಿ ಸುಮುಖ ಪ್ರಕಾಶನದಿಂದ ಬೆಳಕು ಕಂಡಿತು.

ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕಾಗಿ, ಭಾಗಶಃ ಅನುವಾದಿಸಿದ ಆಂಗ್ಲ ಲೇಖಕ ವಿಲ್ ಡ್ಯುರಾಂಟ್ ಅವರ " ದ ಸ್ಟೋರಿ ಆಫ್ ಸಿವಿಲಿಸೇಶನ್ "ಕೃತಿಯ ಅನುವಾದದ ಭಾಗಗಳನ್ನೊಳಗೊಂಡ ಸಂಪೂರ್ಣ ಬೃಹತ್ ಕೃತಿ, ಪ್ರಾಧಿಕಾರದಿಂದ 2012ರಲ್ಲಿ ಪ್ರಕಟವಾಗಿ ಕೈ ಸೇರಿತು.

ಎಂ .ಆರ್.ಪೈ ಫೌಂಡೇಶನ್ಗಾಗಿ ಅನುವಾದಿಸಿ ಕೊಟ್ಟ " ಎಂ.ಆರ್.ಪೈ - ಆನ್ ಅನ್ಕಾಮನ್ ಕಾಮನ್ ಮ್ಯಾನ್ " ಕೃತಿಯ ಅನುವಾದ , " ಅಸಾಮಾನ್ಯ ಶ್ರೀ ಸಾಮಾನ್ಯ ಎಂ.ಆರ್ . ಪೈ " ಕೃತಿ, 2013ರಲ್ಲಿ ಐ.ಬಿ.ಎಚ್. ಪ್ರಕಾಶನದಿಂದ ಬೆಳಕು ಕಂಡಿತು.

ಲೇಖನ ಸಂಗ್ರಹ, " ಬದುಕು ಚಿತ್ರ ಚಿತ್ತಾರ " , ಬರಹ ಪಬ್ಲಿಕೇಶನ್ಸ್ನಿಂದ 2013ರಲ್ಲಿ ಪ್ರಕಟವಾಯ್ತು.

ಸ್ಪಾರೋ ಸಂಸ್ಥೆಗಾಗಿ [ ಸ್ಪೀಚ್ & ಪಿಕ್ಚರ್ ಆಕೆೃ೯ವ್ ರಿಟ್ರೀವ್ & ರಿಸಚ್೯ ಆನ್ ವಿಮೆನ್ " } ಮಾಡಿ ಕೊಟ್ಟ ಬಿ.ಟಿ.ಲಲಿತಾ ನಾಯಕ್ ಅವರ ಎರಡು ಸಣ್ಣ ಕತೆಗಳ ಇಂಗ್ಲಿಷ್ ಅನುವಾದ ಸಂಸ್ಥೆಯ ಆಕೆೃ೯ವ್ ಸೇರಿದೆ.

ಕಲ್ಕತ್ತಾದ ಕೃತಿ ಪ್ರಕಾಶನಕ್ಕಾಗಿ ಅನುವಾದಿಸಿದ ತುಳಸೀ ವೇಣು ಗೋಪಾಲ್ ಅವರ " ಹೊಂಚು" ಕಥೆಯ ಇಂಗ್ಲಿಷ್ ಅನುವಾದ " ಕಥಾ" ಸಂಚಯದಲ್ಲಿ 2011ರಲ್ಲಿ ಪ್ರಕಟಿತ.

ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕಾಗಿ ಭಾಗಶಃ ಮರಾಠಿಯಿಂದ ಅನುವಾದಿಸಿ ಕೊಟ್ಟ ಅಂಬೇಡ್ಕರ್ ಬರಹಗಳು ಮತ್ತು ಭಾಷಣಗಳು , ಪ್ರಾಧಿಕಾರದಿಂದ ಪ್ರಕಟವಾಗುತ್ತಿದೆ.

ಆಂಗ್ಲ ಲೇಖಕಿ, ಶಾಲಟ್ ಬ್ರಾಂಟಿಯ ವಿಶ್ವ ಸಾಹಿತ್ಯ ಕೃತಿ, " ಜೇನ್ ಏರ್ ", ಬೆಂಗಳೂರಿನ ತೇಜು ಪ್ರಕಾಶನದಿಂದ ಇದೀಗ ಬಿಡುಗಡೆಯ ಹಂತದಲ್ಲಿದೆ .

ಪ್ರಕಟಣೆಗೆ ಕಾದಿರುವ ಅನುವಾದ ಕೃತಿಗಳು ;

ಅರುಂಧತಿ ರಾಯ್ ವಿರಚಿತ " ದ ಗಾಡ್ ಆಫ್ ಸ್ಮಾಲ್ ಥಿಂಗ್ಸ್ " ಕೃತಿಯ ಪೂರ್ಣ ಕನ್ನಡಾನುವಾದ ಪ್ರಕಟಣೆಗೆ ಕಾದಿದೆ.

ಬರವಣಿಗೆಯ ಹಾದಿಯಲ್ಲಿ ;

ಆಂಗ್ಲ ಲೇಖಕಿ ಎಮ್. ಎಮ್. ಕೇ ವಿರಚಿತ ಬೃಹತ್ಕೃತಿ, " ಫಾರ್ ಪೆವಿಲಿಯನ್ಸ್ " ಅನುವಾದ ಸಾಗಿದೆ.

ಪ್ರಶಸ್ತಿ ವಿವರ
" ಗಾನ್ ವಿತ್ ದ ವಿಂಡ್ " ಕೃತಿಗೆ ಕನರ್ಾಟಕ ಸಾಹಿತ್ಯ ಅಕಾಡೆಮಿಯಿಂದ 2004ರ ಅತ್ಯುತ್ತಮ ಅನುವಾದವೆಂದು ಪುಸ್ತಕ ಬಹುಮಾನ.

" ಗಾನ್ ವಿತ್ ದ ವಿಂಡ್ " ಕೃತಿಗೆ ಕ ನಾ೯ಟಕ ಲೇಖಕಿಯರ ಸಂಘದಿಂದ ಅತ್ಯುತ್ತಮ ಅನುವಾದವೆಂದು 2005ರ ಎಚ್.ವಿ.ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ.

ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ ಅನುವಾದ ಕ್ಷೇತ್ರದ ಒಟ್ಟು ಸಾಧನೆಗಾಗಿ 2014ರ ಗೌರವ ಪ್ರಶಸ್ತಿ ಪ್ರಕಟ.

ಅನುವಾದ ಕೃತಿ " ಆಲಂಪನಾ ", ಕೇಂದ್ರ ಸಾಹಿತ್ಯ ಅಕಾಡೆಮಿಯ ಅತ್ಯುತ್ತಮ ಅನುವಾದ ಕೃತಿಗಾಗಿ ಕೊನೆಯ ಸುತ್ತಿನ ಸ್ಪಧೇ೯ಗಾಗಿ ಸತತ ಎರಡು ವರ್ಷ ಆಹ್ವಾನಿತವಾಗಿತ್ತು.

ಅನುವಾದ ಕೃತಿ " ಫ್ರಾಂಕಿನ್ಸ್ಟೆನ್ " , ಅನುವಾದ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ಸ್ಪಧೇ೯ಯಲ್ಲಿ ಕೊನೆಯ ಸುತ್ತಿನಲ್ಲಿ ಪರಿಗಣಿತವಾಗಿತ್ತು.

ಮುಂಬಯಿ ವಿಶ್ವ ವಿದ್ಯಾಲಯ ಕನ್ನಡ ವಿಭಾಗದಿಂದ 2010ರಲ್ಲಿ ಗೌರವ ಪುರಸ್ಕಾರ ಪ್ರಾಪ್ತವಾಯ್ತು.

ಹುಟ್ಟೂರಿನ ಸಾಂಸ್ಕೃತಿಕ ವೇದಿಕೆಯಿಂದ 2010ರಲ್ಲಿ ಗೌರವ ಪುರಸ್ಕಾರ.

"ಆಲಂಪನಾ " ಪ್ರಕಟವಾದ ಬೆನ್ನಲ್ಲೇ, ವೈ.ಎಂ.ಬಿ.ಎ. ಸಂಸ್ಥೆಯಿಂದ ಗೌರವ ಪುರಸ್ಕಾರ ಪ್ರಾಪ್ತ .

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here