Thursday 18th, April 2024
canara news

ಕೊಂಕಣಿ ಸಾಹಿತಿ ಎಡ್ವಿನ್ ಜೆ. ಎಫ್. ಡಿ'ಸೋಜಾಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

Published On : 24 Dec 2016   |  Reported By : Canaranews Network


ಮಂಗಳೂರು: ಕೊಂಕಣಿ ಸಾಹಿತಿ ಎಡ್ವಿನ್ ಜೆ.ಎಫ್. ಡಿ'ಸೋಜಾ ಅವರ"ಕಾಳೆ ಭಾಂಗಾರ್' ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ. ಈ ಕಾದಂಬರಿಯನ್ನು ಗೋವಾ ಕೊಂಕಣಿ ಅಕಾಡೆಮಿ 2013ರಲ್ಲಿ ದೇವನಾಗರಿಗೆ ಲಿಪ್ಯಂತರ ಮಾಡಿ ಪ್ರಕಟಿಸಿತ್ತು.

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ 2014ರಲ್ಲಿ ಈ ಕೃತಿಯನ್ನು 2013ರ ಅತ್ಯುತ್ತಮ ಕಾದಂಬರಿ ಎಂದು ಪುರಸ್ಕರಿಸಿತ್ತು. ಈ ಕಾದಂಬರಿಗೆ 2014ರಲ್ಲಿ ವಿಮಲಾ ವಿ. ಪೈ ವಿಶ್ವ ಕೊಂಕಣಿ ಸಾಹಿತ್ಯ ಪುರಸ್ಕಾರ ಲಭಿಸಿತ್ತು. ಎಡ್ವಿನ್ ಜೆ.ಎಫ್. ಡಿ'ಸೋಜಾ ಅವರು ಇಂಗ್ಲಿಷ್ನಲ್ಲಿ ಬರವಣಿಗೆ ಕ್ಷೇತ್ರಕ್ಕೆಪಾದಾರ್ಪಣೆ ಮಾಡಿದ್ದು, 1964ರಲ್ಲಿ ಕೊಂಕಣಿಯಲ್ಲಿ ಬರೆಯಲು ಆರಂಭಿಸಿದ್ದರು.

ಕೊಂಕಣಿ ಮಾತ್ರವಲ್ಲ ಇಂಗ್ಲಿಷ್ ದಿನ ಪತ್ರಿಕೆ ಮತ್ತು ಮ್ಯಾಗಸಿನ್ಗಳಲ್ಲಿ ಅವರ ಲೇಖನಗಳು ಪ್ರಕಟವಾಗುತ್ತಿವೆ. ಹಲವು ಕಥೆ, ಕಾದಂಬರಿಗಳನ್ನು ರಚಿಸಿರುವ ಅವರಿಗೆ ಇದುವರೆಗೆ 13 ಸಾಹಿತ್ಯ ಪ್ರಶಸ್ತಿ/ಪುರಸ್ಕಾರಗಳು ಲಭಿಸಿವೆ. 2008ರಿಂದ 2012ರ ತನಕ ಸಾಹಿತ್ಯ ಅಕಾಡೆಮಿ ಸದಸ್ಯರಾಗಿದ್ದರು. ಪ್ರಸ್ತುತ ಮಂಗಳೂರಿನ ಸಂತ ಅಲೋಶಿಯಸ್ ಕೊಂಕಣಿ ಸಂಸ್ಥೆಯ ಕಾರ್ಯ ನಿರ್ವಾಹಕ ನಿರ್ದೇಶಕರಾಗಿದ್ದಾರೆ. 2013ರಿಂದ ಗೋವಾ ವಿ.ವಿ. ಕೊಂಕಣಿ ವಿಭಾಗದ ಸಲಹಾ ಸಮಿತಿ ಸದಸ್ಯರಾಗಿದ್ದಾರೆ.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here