Friday 14th, May 2021
canara news

ಹೈಕಮಾಂಡ್ನಿಂದ ನೋಟಿಸ್ ಬಂದಿಲ್ಲ; ಪೂಜಾರಿ

Published On : 24 Dec 2016   |  Reported By : Canaranews Network


ಹೈಕಮಾಂಡ್ನಿಂದ ನನಗೆ ನೋಟಿಸ್ ಬಂದಿದೆ ಎಂದು ಕೆಲವು ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಆದರೆ, ನನಗೆ ಯಾವುದೇ ನೋಟಿಸ್ ಬಂದಿಲ್ಲ.ನನ್ನನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಹೆಚ್ಚೆಂದರೆ ಪಕ್ಷದಿಂದ ಉಚ್ಚಾಟನೆ ಮಾಡಬಹುದು. ಆದರೆ, ನನ್ನ ರಕ್ತದಲ್ಲಿ ರುವ ಕಾಂಗ್ರೆಸ್ ಕಮಿಟ್ಮೆಂಟ್ ಅನ್ನು ಬೇರ್ಪಡಿಸಲು ಸಾಧ್ಯವಿಲ್ಲ. ನನ್ನ ತಂದೆ ಅಚ್ಚಾ ಕಾಂಗ್ರೆಸಿಗ.

ಪೂಜಾರಿಯ ರಕ್ತದಿಂದ ಕಾಂಗ್ರೆಸ್ ತೆಗೆಯಲು ಸಾಧ್ಯವಿಲ್ಲ. ಕಾಂಗ್ರೆಸ್ ಅಂದರೆ ನಮಗೆ ಪ್ರಾಣ. ಪೂಜಾರಿಯದ್ದು ಕಾಂಗ್ರೆಸ್ ಕುಟುಂಬ. ಪಕ್ಷದಿಂದ ನನ್ನನ್ನು ತೆಗೆಯುವುದಾದರೆ ಇವತ್ತೇ ತೆಗೆದು ಬಿಸಾಡಿ. ಪೂಜಾರಿಗೆ ಯಾವ ಬೇಸರವೂ ಇಲ್ಲ. ಪಕ್ಷದಿಂದ ತೆಗೆದು ಹಾಕಿದರೂ ನನ್ನ ನಿರ್ಣಯ ಬದಲಾಗಲ್ಲ. ಆದರೆ, ಇನ್ನು ನನ್ನ ಹೋರಾಟ ಆರಂಭವಾಗುತ್ತದೆ ಎಂದರು.

ಮೇಟಿಯವರನ್ನು ಪಕ್ಷದಿಂದ ಕಿತ್ತು ಹಾಕಿ: ಜನಾರ್ದನ ಪೂಜಾರಿ
ಮಂಗಳೂರು: ರಾಜ್ಯದ ಮುಖ್ಯಮಂತ್ರಿಗಳು ಮಾಜಿ ಸಚಿವ ಮೇಟಿಯವರ ರಕ್ಷಣೆ ಮಾಡಹೊರಟಿರುವುದು ಸರಿಯಲ್ಲ. ಮಾನ ಮರ್ಯಾದೆ ಇದ್ದರೆ ಅವರನ್ನು ತತ್ಕ್ಷಣ ಪಕ್ಷದಿಂದ ಕಿತ್ತು ಹಾಕಿ ಹೈಕಮಾಂಡ್ಗೆ ಸತ್ಯ ಹೇಳಿ ಎಂದು ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಮುಖ್ಯಮಂತ್ರಿಯವರನ್ನು ಒತ್ತಾಯಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ಧರಾಮಯ್ಯನವರೇ ಏನಾಗಿದೆ ನಿಮಗೆ? ಮೇಟಿ ಮುಖ್ಯವೇ ನಿಮಗೆ? ಅವರು ಏನು ಮಾಡಿದ್ದಾರೆಂದು ಕಾಣುವುದಿಲ್ಲವೇ. ಅವರನ್ನು ರಕ್ಷಣೆ ಮಾಡ ಹೊರಟಿದ್ದೀರಲ್ಲ. ಪಕ್ಷಕ್ಕಿಂತ ಮೇಟಿ ದೊಡ್ಡವರೇ? ಮೇಟಿಯವರನ್ನು ಅಪ್ಪಿಕೊಂಡಿದ್ದೀರಲ್ಲ ಇದು ಸರಿಯಲ್ಲ ಎಂದರು.

 

 
More News

 ಲಾಕ್‍ಡೌನ್ ಸಮಯದಲ್ಲಿಯೂ ಅಶಕ್ತರಿಗೆ ನೆರವಾಗುತ್ತಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ : ಮಮತಾ ಶೆಟ್ಟಿ
ಲಾಕ್‍ಡೌನ್ ಸಮಯದಲ್ಲಿಯೂ ಅಶಕ್ತರಿಗೆ ನೆರವಾಗುತ್ತಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ : ಮಮತಾ ಶೆಟ್ಟಿ
ಮಹಾ ವಿಕಾಸ್ ಅಘಾಡಿ (ಎಂವಿಎ ಮೈತ್ರಿ) ಸರಕಾರದ ಜನಸ್ಪಂದನೆ
ಮಹಾ ವಿಕಾಸ್ ಅಘಾಡಿ (ಎಂವಿಎ ಮೈತ್ರಿ) ಸರಕಾರದ ಜನಸ್ಪಂದನೆ
ಮಂಗಳೂರು  ವಿಮಾನ ನಿಲ್ದಾಣದಲ್ಲಿ ಆರ್‍ಟಿ-ಪಿಸಿಆರ್ ವಿನÀಃ ಹೊರೆಗೆ ಬಿಡಲಾಗುವುದಿಲ್ಲ
ಮಂಗಳೂರು ವಿಮಾನ ನಿಲ್ದಾಣದಲ್ಲಿ ಆರ್‍ಟಿ-ಪಿಸಿಆರ್ ವಿನÀಃ ಹೊರೆಗೆ ಬಿಡಲಾಗುವುದಿಲ್ಲ

Comment Here