Friday 14th, May 2021
canara news

ಅಧಿಕಾರಿಗಳ ವಿರುದ್ಧ ಸಚಿವರಿಗೆ ವರದಿ: ನಳಿನ್

Published On : 24 Dec 2016   |  Reported By : Canaranews Network

ಮಂಗಳೂರು: ಬಿ.ಸಿ. ರೋಡ್ ಸೇರಿದಂತೆ ಜಿಲ್ಲೆಯ ವಿವಿಧೆಡೆ ರಾಷ್ಟ್ರೀಯ ಹೆದ್ದಾರಿಗಳಿಗೆ ತೊಂದರೆಯಾಗುವ ಕಟ್ಟಡಗಳನ್ನು ತೆರವುಗೊಳಿಸುವುದಕ್ಕೆ ಮೀನಾಮೇಷ ಎಣಿಸುತ್ತಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಕೇಂದ್ರ ಭೂಸಾರಿಗೆ ಖಾತೆ ಸಚಿವ ನಿತಿನ್ ಗಡ್ಕರಿ ಅವರಿಗೆ ವರದಿ ನೀಡುವುದಾಗಿ ಸಂಸದ ನಳಿನ್ಕುಮಾರ್ ಕಟೀಲು ಎಚ್ಚರಿಸಿದ್ದಾರೆ.

ಅವರು ಬುಧವಾರ ಜಿ.ಪಂ. ಸಭಾಂಗಣದಲ್ಲಿ ನಡೆದ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನ ಕುರಿತ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.್ಹೆದ್ದಾರಿ ಇಕ್ಕೆಲಗಳ ಕಟ್ಟಡದ ತೆರವಿಗೆ ಸರಕಾರದಿಂದ ಹಣ ಸಂದಾಯ ಮಾಡಿ ವರ್ಷಗಳೇ ಕಳೆದಿವೆ.

ಪ್ರಾಧಿಕಾರದ ಯೋಜನಾ ನಿರ್ದೇಶಕರು ಪ್ರತಿ ಬಾರಿ ಸಭೆಗೆ ಗೈರಾಗುತ್ತಿದ್ದಾರೆ ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಸಂಸದರು, ಸಭೆಗೆ ಗೈರಾದ ಯೋಜನಾ ನಿರ್ದೇಶಕರಿಗೆ ನೋಟಿಸ್ ಜಾರಿ ಮಾಡುವಂತೆ ಜಿ.ಪಂ. ಸಿಇಒ ಹಾಗೂ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

More News

 ಲಾಕ್‍ಡೌನ್ ಸಮಯದಲ್ಲಿಯೂ ಅಶಕ್ತರಿಗೆ ನೆರವಾಗುತ್ತಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ : ಮಮತಾ ಶೆಟ್ಟಿ
ಲಾಕ್‍ಡೌನ್ ಸಮಯದಲ್ಲಿಯೂ ಅಶಕ್ತರಿಗೆ ನೆರವಾಗುತ್ತಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ : ಮಮತಾ ಶೆಟ್ಟಿ
ಮಹಾ ವಿಕಾಸ್ ಅಘಾಡಿ (ಎಂವಿಎ ಮೈತ್ರಿ) ಸರಕಾರದ ಜನಸ್ಪಂದನೆ
ಮಹಾ ವಿಕಾಸ್ ಅಘಾಡಿ (ಎಂವಿಎ ಮೈತ್ರಿ) ಸರಕಾರದ ಜನಸ್ಪಂದನೆ
ಮಂಗಳೂರು  ವಿಮಾನ ನಿಲ್ದಾಣದಲ್ಲಿ ಆರ್‍ಟಿ-ಪಿಸಿಆರ್ ವಿನÀಃ ಹೊರೆಗೆ ಬಿಡಲಾಗುವುದಿಲ್ಲ
ಮಂಗಳೂರು ವಿಮಾನ ನಿಲ್ದಾಣದಲ್ಲಿ ಆರ್‍ಟಿ-ಪಿಸಿಆರ್ ವಿನÀಃ ಹೊರೆಗೆ ಬಿಡಲಾಗುವುದಿಲ್ಲ

Comment Here