Friday 19th, April 2024
canara news

ಶಿಮಂತೂರು ಚಂದ್ರಹಾಸರ `ನಿರೀಕ್ಷೆ' ಶಾರದಾ ಅಂಚನ್‍ರ `ಅಭಿಮತ' ಕೃತಿಗಳ ಬಿಡುಗಡೆ

Published On : 25 Dec 2016   |  Reported By : Rons Bantwal


ಲೇಖಕರು ಕೃತಿ ರಚನೆ ಸಂದರ್ಭದಲ್ಲಿ ತನ್ಮಯರಾಗಬೇಕು: ಬಾಬು ಶಿವ ಪೂಜಾರಿ
(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)

ಮುಂಬಯಿ, ಡಿ.25: ದೇವ್‍ದಾಸ್‍ರಂತಹ ಮಹಾನ್ ಕಲಾವಿದ ಚಿತ್ರಿಸಿದ ಮುಖ ಪುಟಗಳಿಂದ ಈ ಎರಡೂ ಕೃತಿಗಳ ಮಹತ್ವ ಹೆಚ್ಚಿದೆ. ಲೇಖಕರು ಕೃತಿ ರಚನೆ ಸಂದರ್ಭದಲ್ಲಿ ತನ್ಮಯರಾಗಬೇಕು. ನಮ್ಮ ಸಾಹಿತ್ಯ ಕೃತಿಗಳನ್ನು ವಿಶ್ವ ಸಾಹಿತ್ಯಕ್ಕೆ ಸಮೀಕರಣಗೊಳಿಸಿ ರಚಿಸಬೇಕಾದ ಅಗತ್ಯವಿದೆ. ಆದ್ದರಿಂದ ನಾವೂ ಸಂಕುಚಿತೆಯನ್ನು ಬಿಟ್ಟು ಬರೆಯಬೇಕು ಎಂದು ಗುರುತು ಮಾಸಿಕದ ಸಂಪಾದಕ, ಸಂಶೋಧಕ, ಸಾಹಿತಿ ಬಾಬು ಶಿವ ಪೂಜಾರಿ ನುಡಿದರು.

ಕಳೆದ ಶನಿವಾರ ಸಂಜೆ ಸಾಂತಾಕ್ರೂಜ್ ಪೂರ್ವದಲ್ಲಿನ ಶ್ರೀ ಪೇಜಾವರ ಮಠದ ಸಭಾಗೃಹದಲ್ಲಿ ಪೂಜಾ ಪ್ರಕಾಶನ ಸಂಸ್ಥೆಯಿಂದ ಪ್ರಕಾಶಿತ ಕೃತಿಗಳ ಅನಾವರಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಬಾಬು ಪೂಜಾರಿ ಮಾತನಾಡಿದರು.

ಪ್ರಶಸ್ತಿ ಪುರಸ್ಕೃತ ರಂಗತಜ್ಞ ಡಾ| ಭರತ್‍ಕುಮಾರ್ ಪೆÇಲಿಪು ಮತ್ತು ತುಳು ಸಂಘ ಬರೋಡಾ ಅಧ್ಯಕ್ಷ ಶಶಿಧರ ಬಿ.ಶೆಟ್ಟಿ ಅತಿಥಿü ಅಭ್ಯಾಗತರಾಗಿ ಉಪಸ್ಥಿತರಿದ್ದು, ಪ್ರಸಿದ್ಧ ಚಿತ್ರಕಾರ ದೇವುದಾಸ ಶೆಟ್ಟಿ ಅವರು ಪೂಜಾ ಪ್ರಕಾಶನ ಸಂಸ್ಥೆ ಪ್ರಕಾಶಿತ, ಹೆಸರಾಂತ ಕವಿ ಶಿಮಂತೂರು ಚಂದ್ರಹಾಸ ಸುವರ್ಣ ಅವರ `ನಿರೀಕ್ಷೆ' ಕವನ ಸಂಕಲನ ಮತ್ತು ಪ್ರಶಸ್ತಿ ವಿಜೇತ ಕವಯತ್ರಿ, ಲೇಖಕಿ ಶಾರದಾ ಆನಂದ್ ಅಂಚನ್ ಅವರ ಸಮೀಕ್ಷೆ ಸಂಕಲನ `ಅಭಿಮತ' ಕೃತಿ ಬಿಡುಗಡೆ ಗೊಳಿಸಿದರು. ರಂಗತಜ್ಞ, ಸಾಹಿತಿ ಸಾ.ದಯ (ದಯಾನಂದ ಸಾಲ್ಯಾನ್) ಹಾಗೂ ಕವಿ, ಸಾಹಿತಿ ಡಾ| ಕರುಣಾಕರ ಎನ್.ಶೆಟ್ಟಿ ಕ್ರಮವಾಗಿ ಕೃತಿಗಳನ್ನು ಪರಿಚಯಿಸಿ ಶುಭಾರೈಸಿದರು.

ನಾನು ಮಾತನಾಡುವ ನಿರೀಕ್ಷೆ ಇರಿಸಿದವ ನಾನಲ್ಲ. ಆದರೆ ಕಲಾತ್ಮಕವಾಗಿ ಮಾತನಾಡಬಲ್ಲೆನು. ಗೆರೆ ಮತ್ತು ಬಣ್ಣಗಳೊಂದಿಗೆ ಈ ಕಾರ್ಯಕ್ರಮಕ್ಕೆ ಯಶಕೋರಿದ್ದೇನೆ ಎಂದು ದೇವುದಾಸ ಶೆಟ್ಟಿ ಅಭಿಮತ ವ್ಯಕ್ತ ಪಡಿಸಿದರು.

ಡಾ| ಪೆÇಲಿಪು ಮಾತನಾಡಿ ತುಳು ರಂಗ ಭೂಮಿಯಲ್ಲಿ 1976ರಲ್ಲೇ ಒಂದು ರೀತಿಯ ಹೊಸತನವನ್ನು ತಂದ ಶಿಮಂತೂರು ಚಂದ್ರಹಾಸ ಸುವರ್ಣರ ಪ್ರಧಾನ ಮಾಧ್ಯಮ ನಾಟಕ. ಅವರ ಬಿಡುಗಡೆಗೊಂಡ ನಿರೀಕ್ಷೆ ಕವಿತಾ ಸಂಕಲನದಲ್ಲಿ ವಾಸ್ತವವಾದ ಚಿಂತನೆಗಳಿವೆ. ತಮ್ಮ ಅನಿಸಿಕೆಯನ್ನು ನೇರ ಕವಿತೆಯಾಗಿ ಬರೆಯುತ್ತಾರೆ. ಇನ್ನಾದರೂ ರಂಗಭೂಮಿಗೆ ತೊಡಗಿಸಿಕೊಳ್ಳಬೇಕು ಎಂದು ಶುಭ ಹಾರೈಸಿದರು. ಶಾರದಾ ಅಂಚನ್ ಅವರು ಹಲವಾರು ಕೃತಿಗಳನ್ನು ಓದಿ ಬರೆದ ಸಮೀಕ್ಷಾ ಬರಹಗಳಿವೆ. ಸಾಹಿತಿಗಳು ಸಮಾಜವನ್ನು ಸೂಕ್ಷ್ಮಾವಾಗಿ ಗಮನಿಸಿ ತೀಕ್ಷವಾಗಿ ಸ್ಪಂದಿಸಬೇಕು ಎಂದು ನುಡಿದರು ಎಂದರು.

ಶಶಿಧರ ಶೆಟ್ಟಿ ಮಾತನಾಡಿ ಒಂದು ಕೃತಿ ಬದುಕಿಗೆ ಸೌಮ್ಯ ಅನಿಸಿದ್ದಾಗ ಆ ಕೃತಿ ಓದುಗರಿಗೆ ಆತ್ಮೀಯವಾಗುತ್ತಿದೆ. ಬಹುತೇಕ ಅವಿಭಜಿತ ದಕ್ಷಿಣ ಕನ್ನಡಿಗರು ಕೃಷಿಕರು ಅವರು ಬಡತನದಿಂದಲೇ ಮೇಲೆ ಬಂದವರು. ಆದರೆ ಬಡತನ ನಮ್ಮ ಬಲಹೀನತೆಯಲ್ಲ ಅದು ನಮ್ಮ ಶಕ್ತಿಯಾಗಬೇಕು. ಆಗ ಅದೇ ಸಾಹಿತ್ಯಕ್ಕೆ ಪ್ರೇರಣೆ ಆಗಲು ಸಾಧ್ಯ ಎಂದು ಎರಡೂ ಕೃತಿಕಾರರನ್ನು ಅಭಿನಂದಿಸಿದರು.

ಪೇಜಾವರ ಮುಂಬಯಿ ಶಾಖೆ ಹಾಗೂ ಅಭಿನಯ ಸಾಮ್ರಾಜ್ಯ ಮುಂಬಯಿ ಸಹಯೋಗದಲ್ಲಿ ಆಯೋಜಿಸಲ್ಪಟ್ಟ ಕಾರ್ಯಕ್ರಮದಲ್ಲಿ ಪೂಜಾಶ್ರೀ ಸಿ.ಸುವರ್ಣ, ಅನುರಾಗ್ ಎ.ಅಂಚನ್, ಡಾ| ಜಿ.ವಿ ಕುಲಕರ್ಣಿ, ಶಿಮಂತೂರು ಉದಯ ಶೆಟ್ಟಿ, ನಾರಾಯಣ ಬಂಗೇರ ಡೊಂಬಿವಲಿ, ಡಾ| ವಿಶ್ವನಾಥ ಕಾರ್ನಾಡ್, ಡಾ| ಕರುಣಾಕರ ಬಂಗೇರ, ಡಾ| ರವಿರಾಜ್ ಸುವರ್ಣ, ಡಾ| ಈಶ್ವರ ಕೆ.ಅಲೆವೂರು, ಹರೀಶ್ ಜಿ.ಪೂಜಾರಿ, ಜಯಕರ ಡಿ.ಪೂಜಾರಿ, ಸೋಮನಾಥ ಕರ್ಕೇರ, ಮಹೇಶ್ ಕಾರ್ಕಳ, ರಮೇಶ ಶಿವಪುರ, ನಾಗರಾಜ್ ಗುರುಪುರ, ವಿ.ಎಸ್ ಶ್ಯಾನ್‍ಭಾಗ್, ಉಮೇಶ್ ಶೆಟ್ಟಿ, ಸುರೇಶ್ ಎಸ್.ಸಾಲ್ಯಾನ್, ಪ್ರವೀಣ್ ಶೆಟ್ಟಿ ಬೊರಿವಿಲಿ, ಪ್ರಭಾಕರ್ ಅವಿೂನ್, ರಜಿತ್ ಸುವರ್ಣ, ಅಶೋಕ್ ಎಸ್.ಸುವರ್ಣ, ನವೀನ್ ಅವಿೂನ್ ಮತ್ತಿತರ ಗಣ್ಯರು ಉಪಸ್ಥಿತರಿದ್ದು ಕೃತಿಕಾರರನ್ನು ಅಭಿನಂದಿಸಿದರು.

ಪೂಜಾ ಪ್ರಕಾಶನದ ಸರಸ್ವತಿ ಚಂದ್ರಹಾಸ ಸುವರ್ಣ ಮತ್ತು ಕೃತಿಕರ್ತೆ ಶಾರದಾ ಎ.ಅಂಚನ್ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನೀಡಿದರು. ಆನಂದ್ ವಿ.ಅಂಚನ್, ಸರಸ್ವತಿ ಸಿ.ಸುವರ್ಣ, ಹೇಮಾ ಹರಿದಾಸ್, ಲಲಿತ ರವಿ.ಕೋಟ್ಯಾನ್, ವೀಣಾ ಡಿ. ಪೂಜಾರಿ, ಕು| ಎಸ್.ದರ್ಶ, ಸರೋಜಾ ಸುವರ್ಣ, ಕೃಷ್ಣರಾಜ್ ಸುವರ್ಣ ಅತಿಥಿüಗಳಿಗೆ ಪುಷ್ಫಗುಪ್ಚಗಳನ್ನಿತ್ತು ಗೌರವಿಸಿದರು. ಶಾರದಾ ಎ.ಅಂಚನ್ ಪ್ರಾರ್ಥನೆಯನ್ನಾಡಿದರು. ನವೀನ್ ಕರ್ಕೇರ ಸ್ವಾಗತಿಸಿ, ಅತಿಥಿüಗಳನ್ನು ಪರಿಚಯಿಸಿದರು ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆಗೈದರು.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here