Sunday 16th, May 2021
canara news

`ಚನ್ನನ' ಬ್ಯಾರಿ ಜಾನಪದ ಕಥಾ ಸಂಕಲನ ಬಿಡುಗಡೆ

Published On : 26 Dec 2016   |  Reported By : Rons Bantwal


ಮಂಗಳೂರು, ಡಿ.26: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ಪ್ರಕಟಿಸಿದ, ಪತ್ರಕರ್ತ ಹಂಝ ಮಲಾರ್‍ಸಂಪಾದಿಸಿದ `ಚನ್ನನ' ಬ್ಯಾರಿ ಜಾನಪದ ಕಥಾ ಸಂಕಲನವನ್ನು ಅಕಾಡಮಿಯ ಕಚೇರಿಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಸಂಶೋಧಕ ಪೆÇ್ರ.ಬಿ.ಎಂ.ಇಚ್ಲಂಗೋಡು ಬಿಡುಗಡೆಗೊಳಿಸಿದರು.

ಬಳಿಕ ಮಾತನಾಡಿದ ಅವರು ಬ್ಯಾರಿ ಭಾಷೆಯ ಪುನರುಜ್ಜೀವನಕ್ಕೆ ಅಕಾಡಮಿ ಸಾಕಷ್ಟು ಕೆÀಲಸಗಳನ್ನು ಮಾಡುತ್ತಿದೆ. ಇದೀಗ ಬ್ಯಾರಿ-ಕನ್ನಡ-ಇಂಗ್ಲಿಷ್ ನಿಘಂಟುಕಾರ್ಯ ಪ್ರಗತಿಯಲ್ಲಿದೆ. ಅದಕ್ಕೆ ಪೂರಕವಾಗಿ ಬ್ಯಾರಿ ಜಾನಪದ ಕಥಾ ಸಂಕಲನ ಹೊರ ಬರುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.ಅವನತಿಯತ್ತ ಸಾಗುವ ಭಾಷೆಗಳ ಪುನರುಜ್ಜೀವನಕ್ಕೆ ಇಂತಹ ಪ್ರಯತ್ನ ಶ್ಲಾಘನಾರ್ಹಎಂದರು.

ಕೃತಿಯನ್ನು ಪರಿಚಯಿಸಿದ ಲೇಖಕ ಅಬ್ದುರ್ರಹ್ಮಾನ್ ಕುತ್ತೆತ್ತೂರು ಈ ಸಂಕಲನದಲ್ಲಿ ಕನ್ನಡ ಅಥವಾ ಇಂಗ್ಲಿಷ್ ಭಾಷೆಯ ಪ್ರಭಾವವಿಲ್ಲ. ಅದು ಈ ಕೃತಿಯ ಹೆಗ್ಗಳಿಕೆಯಾಗಿದೆ.ಕಥಾಲೋಕದಿಂದ ದೂರ ಸರಿಯುವ ಯುವಜನಾಂಗಕ್ಕೆ ಇಂತಹ ಕೃತಿಗಳು ಭಾಷೆಯ ಮೇಲೆ ಅಭಿಮಾನ ಹುಟ್ಟಲು ಕಾರಣವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮುಡಾ ಅಧ್ಯಕ್ಷ ಸುರೇಶ್ ಬಲ್ಲಾಳ್ ಶುಭ ಹಾರೈಸಿದರು.ಅಕಾಡಮಿಯ ರಿಜಿಸ್ಟ್ರಾರ್ ಉಮರಬ್ಬ ಅಧ್ಯಕ್ಷತೆ ವಹಿಸಿದ್ದರು.

ಅಕಾಡಮಿಯ ಸದಸ್ಯ ಆಲಿಯಬ್ಬ ಜೋಕಟ್ಟೆ ಉಪಸ್ಥಿತರಿದ್ದರು. ಸದಸ್ಯ ಶರೀಫ್ ನಿರ್ಮುಂಜೆ ಸ್ವಾಗತಿಸಿದರು. ಮಾಜಿ ಸದಸ್ಯಖಾಲಿದ್‍ಉಜಿರೆ ಬ್ಯಾರಿ ಗೀತೆಗಳನ್ನು ಹಾಡಿದರು. ಸದಸ್ಯೆ ಆಯಿಶಾ ಪೆರ್ಲ ವಂದಿಸಿದರು. ಕಾರ್ಯಕ್ರಮದ ಸಂಚಾಲಕ ಯೂಸುಫ್ ವಕ್ತಾರ್ ಕಾರ್ಯಕ್ರಮ ನಿರೂಪಿಸಿದರು.
....

 
More News

ಎನ್‌ಕೌಂಟರ್ ಸ್ಪೆಶಿಯಲಿಸ್ಟ್ ಪೋಲಿಸ್ ದಯಾ ನಾಯಕ್ ವರ್ಗಾವಣೆಗೆ ತಡೆ
ಎನ್‌ಕೌಂಟರ್ ಸ್ಪೆಶಿಯಲಿಸ್ಟ್ ಪೋಲಿಸ್ ದಯಾ ನಾಯಕ್ ವರ್ಗಾವಣೆಗೆ ತಡೆ
ಗೃಹಿಣಿ ಅನಿತಾ ಡಾಲು ರವಿ ನಿಧನ-ವಾರದ ಹಿಂದೆ ನಡೆಸಲ್ಪಟ್ಟ ಗೃಹ ಪ್ರವೇಶ
ಗೃಹಿಣಿ ಅನಿತಾ ಡಾಲು ರವಿ ನಿಧನ-ವಾರದ ಹಿಂದೆ ನಡೆಸಲ್ಪಟ್ಟ ಗೃಹ ಪ್ರವೇಶ
 ಲಾಕ್‍ಡೌನ್ ಸಮಯದಲ್ಲಿಯೂ ಅಶಕ್ತರಿಗೆ ನೆರವಾಗುತ್ತಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ : ಮಮತಾ ಶೆಟ್ಟಿ
ಲಾಕ್‍ಡೌನ್ ಸಮಯದಲ್ಲಿಯೂ ಅಶಕ್ತರಿಗೆ ನೆರವಾಗುತ್ತಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ : ಮಮತಾ ಶೆಟ್ಟಿ

Comment Here