Saturday 5th, July 2025
canara news

ಡಿಸೆಂಬರ್ 18ರಂದು, ಕಲಾಭಾರತಿಯಲ್ಲಿ ಡಾ. ಬಸವರಾಜ್ ರಾಜ್ ಗುರು ಸ್ಮೃತಿ ದಿನ - ಬೆಳ್ಳಿ ಹಬ್ಬ ಆಚರಣೆ

Published On : 30 Dec 2016   |  Reported By : Canaranews Network


ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕರ್ನಾಟಕ ಸಂಘ ಮುಂಬಯಿ ಇದರ ಕಲಾವೇದಿಕೆ ‘ಕಲಾಭಾರತಿ’ ಆಶ್ರಯದಲ್ಲಿ ರವಿವಾರ ದಿನಾಂಕ 18.12.2016ರಂದು ಬೆಳಿಗ್ಗೆ 10.00 ಗಂಟೆಗೆ ಯೋಜನಾ ಪ್ರತಿಷ್ಠಾನ ಇವರ ಪ್ರಾಯೋಜಕತ್ವದಲ್ಲಿ ಡಾ. ಬಸವರಾಜ್ ರಾಜ್‍ಗುರು ಸ್ಮೃತಿ ದಿನ - ಬೆಳ್ಳಿ ಹಬ್ಬ ಆಚರಣೆಯ ನಿಮಿತ್ತ ಆಚರಿಸಿದ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮದಲ್ಲಿ ಶ್ರೀಮತಿ ಯೋಜನಾ ಶಿವಾನಂದ ಮತ್ತು ಡಾ. ಮಿಲಿಂದ ಮಾಲ್‍ಶೆ ಅವರಿಂದ ಹಿಂದುಸ್ತಾನಿ ಶಾಸ್ತ್ರೀಯ ಗಾಯನ ಜರಗಿತು. ಪಕ್ಕವಾದಕರಾಗಿ ಜ್ಞಾನೇಶ್ವರ್ ಸೋನಾವಣೆ ಹಾರ್ಮೋನಿಯಂನಲ್ಲಿ, ತಬಲಾದಲ್ಲಿ ಪ್ರಸಾದ್ ಕರಂಬೆಳಕರ್ ಸಹಕರಿಸಿದರು.

ಇದೇ ಸಂದರ್ಭದಲ್ಲಿ ಕನ್ನಡ – ಮರಾಠಿ ಕಲಿಕಾ ವರ್ಗದಲ್ಲಿ (2015-16) ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಮತ್ತು ಕನ್ನಡ ಶಾಲಾ - ಕಾಲೇಜುಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವೇದಿಕೆಯಲ್ಲಿ ಉಪಸ್ಥಿತರಿದ್ದ ಡಾ. ಮಿಲಿಂದ ಮಾಲ್‍ಶೆ, ಪಂ. ರಾಮದಾಸ್ ಭಟ್ಕಳ್‍ಮತ್ತು ಶ್ರೀಮತಿ ಯೋಜನಾ ಪಾಟೀಲ್ ಅವರು ವಿತರಿಸಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here