Friday 19th, April 2024
canara news

ಕನ್ನಡ ಮತ್ತಷ್ಟು ಉಜ್ವಲಗೊಳಿಸುವುದು ನಮ್ಮೆಲ್ಲರ ಹೊಣೆ

Published On : 31 Dec 2016   |  Reported By : Rons Bantwal


ಕನ್ನಡ ಚಿಂತನ ಮಾಲಿಕೆ-5 ಉದ್ಘಾಟಿಸಿ ಎಂ.ಶಶಿಧರ್ ಹೆಗ್ಡೆ

ಮಂಗಳೂರು : ಡಿ.29, ಕನ್ನಡ ಭಾಷೆಗಿರುವಂತಹ ಗಟ್ಟಿ ಇತಿಹಾಸವನ್ನು ಬೇರೆ ಯಾವ ಭಾಷೆಗಳು ಹೊಂದಿಲ್ಲ. ಒಂದು ರಾಜ್ಯದ ಆಡಳಿತ ಭಾಷೆಯಾಗಿ ಪ್ರಚಲಿತದಲ್ಲಿರುವ ಜಗತ್ತಿನ ಅತ್ಯಂತ ಹಳೆಯ ಭಾಷೆ ಎನ್ನುವ ಕೀರ್ತಿಯನ್ನು ಕನ್ನಡ ಭಾಷೆ ಹೊಂದಿದೆÉ. ಇದು ಕನ್ನಡಿಗರೆಲ್ಲರೂ ಹೆಮ್ಮೆ ಪಡುವ ವಿಷಯ. ಅಂತಹ ಭಾಷೆಯಾದ ಕನ್ನಡವನ್ನು ಮತ್ತಷ್ಟು ಉಜ್ವಲಗೊಳಿಸುವುದು ನಮ್ಮೆಲ್ಲರ ಹೊಣೆ ಎಂದು ?ಕನ್ನಡ ಚಿಂತನ ಮಾಲಿಕೆ -5ನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಮಂಗಳೂರು ಮಹಾನಗರ ಪಾಲಿಕೆ ಮುಖ್ಯ ಸಚೇತಕ ಎಂ. ಶಶಿಧರ್ ಹೆಗ್ಡೆ ಅವರು ಅಭಿಪ್ರಾಯ ಪಟ್ಟರು.

ಮಂಗಳೂರಿನ ಮಹಿಳಾ ಐ.ಟಿ.ಐ ಸಭಾಂಗಣದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಮತ್ತು ಮಂಜುನಾಥ್ ಎಜುಕೇಷನ್ ಟ್ರಸ್ಟ್ ಮಂಗಳೂರು ಸಂಯುಕ್ತವಾಗಿ ಹಮ್ಮಿಕೊಂಡ ಈ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಕನ್ನಡ ಸಾಹಿತ್ಯ ಪರಿಷತ್ ಪೂರ್ವಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ವಹಿಸಿದ್ದರು. ಈ ಸಂದರ್ಭದಲ್ಲಿ ಅವರು ಮಾತನಾಡಿ ?ಕನ್ನಡ ಮತ್ತು ತುಳು ಭಾಷೆ ನಮಗೆ ಇಬ್ಬರು ಅಮ್ಮಂದಿರಿದ್ದಂತೆ ಒಬ್ಬಳು ಹೆತ್ತ ತಾಯಿಯಾದರೆ ಮತ್ತೊಬ್ಬಳು ಸಾಕು ತಾಯಿ, ಇಬ್ಬರನ್ನೂ ಪ್ರೀತಿಯಿಂದ ಕಾಣಬೇಕು. ಕನ್ನಡ ನಮ್ಮ ರಾಜ್ಯ ಭಾಷೆ ಮತ್ತು ಆಡಳಿತ ಭಾಷೆ. ಸ್ವಾಭಾವಿಕವಾಗಿ ಕನ್ನಡವನ್ನು ಎಲ್ಲಾ ಕ್ಷೇತ್ರಗಳಲ್ಲಿ ಬಳಕೆಗೆ ತರಬೇಕಾದುದು ನಮ್ಮೆಲ್ಲರ ಆದ್ಯ ಕರ್ತವ್ಯ. ಅದರಲ್ಲೂ ವಿದ್ಯಾರ್ಥಿಗಳು ಕನ್ನಡವನ್ನು ಬೆಳೆಸಿ ಪ್ರೋತ್ಸಾಹಿಸುವ ಮಹಾತ್ಕಾರ್ಯವನ್ನು ಮಾಡಬೇಕು ಎಂದರು.

ಮುಖ್ಯ ಅತಿಥಿü ಮಂಗಳೂರಿನ ಖ್ಯಾತ ಚಾರ್ಟರ್ಡ್ ಅಕೌಂಟೆಂಟ್ ಸಿಎ.ಎಸ್.ಎಸ್. ನಾಯಕ್ ಅವರು ನಮ್ಮ ಕಲೆ ಸಂಸ್ಕøತಿಗಳ ಜೀವಾಳ ನಮ್ಮ ಮಾತೃ ಭಾಷೆಯಾಗಿರುತ್ತದೆ. ಮಾತೃಭಾಷೆ ಶಿಕ್ಷಣದಿಂದ ವ್ಯಕ್ತಿಯ ಬೌದ್ಧಿಕತೆ ಪರಿಪೂರ್ಣವಾಗಿರುತ್ತದೆ ಎಂಬುದು ಹಲವು ಭಾಷಾ ಪಂಡಿತರ ಅಭಿಪ್ರಾಯ ಎಂದು ಆದಿಕವಿ ಪಂಪನ ಹಲವು ಮಾತುಗಳನ್ನು ತಮ್ಮ ಭಾಷಣಗಳಲ್ಲಿ ಉಲ್ಲೇಖಿಸಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಹೃದಯವಾಹಿನಿ ಕರ್ನಾಟಕ ಅಧ್ಯಕ್ಷ ಕೆ.ಪಿ ಮಂಜುನಾಥ್ ಸಾಗರ್ ?ಸರಕಾರಿ ಕನ್ನಡ ಶಾಲೆಗಳಲ್ಲಿ ಕಲಿತವರಿಗೆ ಸರಕಾರದ ಉದ್ಯೋಗದಲ್ಲಿ ಮೀಸಲಾತಿ ನಿಗದಿಪಡಿಸಿದರೆ ಕನ್ನಡ ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದ ಬಾಗಿಲು ಮುಚ್ಚುವುದನ್ನು ತಪ್ಪಿಸಬಹುದು ಎಂದರು.

ಮತ್ತೋರ್ವ ಮುಖ್ಯ ಅತಿಥಿ, ಮಂಗಳೂರು ಸೆಂಟ್ರಲ್ ರೋಟರಿ ಕ್ಲಬ್ ಪೂರ್ವಾಧ್ಯಕ್ಷ ಎಲಿಯಾಸ್ ಸ್ಯಾಂಕ್ತಿಸ್ ಮಾತನಾಡಿ ನೀವು ಯಾರಾದರೂ ಒಬ್ಬ ಸಾಧಕನನ್ನು ಗಮನಿಸಿ ಆತನ ಮೂಲವನ್ನು ಹುಡುಕ ಹೊರಟರೆ ಆತ ಹಳ್ಳಿಯಿಂದ ಬಂದವನಾಗಿರುತ್ತಾನೆ. ಅದಕ್ಕೆ ಕಾರಣ ಆತನ ಮನೋಸ್ಥೈರ್ಯ. ಹಳ್ಳಿಯ ಜೀವನ ಬಡತನ ಮತ್ತು ಸವಾಲುಗಳಿಂದ ಕೂಡಿರುತ್ತದೆ. ಅದರಿಂದ ಹೊರಬರುವಾಗ ಪರಿಪಕ್ವತೆ ಆತನಲ್ಲಿ ಮನೆ ಮಾಡಿರುತ್ತಾರೆ ಎಂದರು.

ಸಮಾಜ ಸೇವಕ ಅಲೆವೂರು ಶೇಖರ ಪೂಜಾರಿಯವರಿಗೆ ಸಮಾರಂಭದಲ್ಲಿ ಗೌರವ ಪುರಸ್ಕಾರ ನೀಡಲಾಯಿತು. ಮಹಿಳಾ ಐಟಿಐ ಪ್ರಾಂಶುಪಾಲ ಎ. ಬಾಲಕೃಷ್ಣ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಂಗವಾಗಿ ಜರುಗಿದ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಕಾಸರಗೋಡು ಅಶೋಕ್ ಕುಮಾರ್ ವಹಿಸಿದ್ದರು. ಕವಿಗಳಾಗಿ ದೇವಿಕಾ ನಾಗೇಶ್ ಶೆಟ್ಟಿ, ಯಶೋಧ ಮೋಹನ್, ಕಲಂದರ್ ಕಾಸಿಕ್ ಬಜ್ಪೆ ಮತ್ತು ಎಂ.ರವಿ ಪಾಲ್ಗೊಂಡಿದ್ದರು.

ಭಾವಗೀತೆ ಮತ್ತು ಲಿಖಿತ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಿಗೆ ನಗದು ಪುರಸ್ಕಾರ ಮತ್ತು ಪ್ರಶಂಶನಾ ಪತ್ರ ನೀಡಲಾಯಿತು. ಸ್ವರಸಂಗಮ ತಂಡದಿಂದ ಕನ್ನಡಗೀತೆ ಮತ್ತು ಭಾವಗೀತೆ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮವನ್ನು ಎಂ.ರವಿ ಮತ್ತು ಶಿವಕುಮಾರ್ ನಿರೂಪಿಸಿದರು.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here