Friday 29th, March 2024
canara news

ಸಯಾನ್‍ನ ಗೋಕುಲ ಸನ್ನಿಧಿಯಲ್ಲಿನ ಶ್ರೀ ಗೋಪಾಲಕೃಷ್ಣ ದೇವರ ಸ್ಥಳಾಂತರ

Published On : 31 Dec 2016   |  Reported By : Rons Bantwal


ಮುಂಬಯಿ ಆಧ್ಯಾತ್ಮಕ್ಕೆ ಆಳವಾಗಿ ಅಂಟಿಕೊಂಡ ಪುಣ್ಯಭೂಮಿ : ಪಂಜ ಭಾಸ್ಕರ್ ಭಟ್

(ಚಿತ್ರ / ವರದಿ : ರೊನ್ಸ್ ಬಂಟ್ವಾಳ್)

ಮುಂಬಯಿ, ಡಿ.31: ಯಾಂತ್ರಿಕ ಜೀವನವಿದ್ದ ವಾತಾವರಣದಲ್ಲೂ ಆಧ್ಯಾತ್ಮಕ್ಕೆ ಆಳವಾಗಿ ಅಂಟಿ ಕೊಂಡ ಮುಂಬಯಿಗರು ಎಷ್ಟು ಅಂಟಿಕೊಂಡಿದ್ದಾರೆ ಎಂದರೆ ಇಲ್ಲಿನ ಸಯಾನ್‍ನ ಗೀತಾ ಮಂದಿರದ ಶ್ರೀ ಕೃಷ್ಣ ಸನ್ನಿಧಾನದ ಬಿಂಬ ಸಂತೋಷದ ಸಮಯದಲ್ಲಿ ಪ್ರದರ್ಶಿಸಿದ ಭಕ್ತಿಭಾವಗಳೇ ಇದಕ್ಕೆ ಸಾಕ್ಷಿ. ಸರ್ವತ್ರ ವ್ಯಾಪಕನಾದ ಶ್ರೀಕೃಷ್ಣ ಭಗವಂತನನ್ನು ಆರಾಧಿಸಿದ ಪುಣ್ಯಭೂಮಿ ಮುಂಬಯಿಯಾಗಿದೆ. ತೃಣಕಾಷ್ಟಗಳನ್ನು ಕಾಣುವುದಕ್ಕೆ ಏಕಾಗ್ರಹತೆ ಇಲ್ಲದಿರುವ ಜನಸಾಮಾನ್ಯರಿಗೆ ದೇವಾಲಯ ಬಿಂಬ ಇವುಗಳ ಮೂಲಕ ದೇವರನ್ನು ಆರಾಧಿಸುವುದಕ್ಕೆ ಜ್ಞಾನಿಗಳು ಅವಕಾಶಗಳನ್ನು ಕಲ್ಪಿಸಿ ಕೊಟ್ಟರು. ದೇವಾಲಯ ಮತ್ತು ಬಿಂಬಗಳಲ್ಲಿ ಯಾವುದೇ ಜೀರ್ಣತೆಗಳು ಕಂಡು ಬಂದಾಗ ಅದನ್ನು ನವೀಕರಿಸ ಬೇಕೆಂದೇ ಶಾಸ್ತ್ರದ ಶಾಸನ. ನವೀಕರಣದ ನೆವದಿಂದ ಬಿಂಬ ಸಂಕೋಚ ಪ್ರಕ್ರಿಯೆಯು ನಡೆಸಲ್ಪಟ್ಟ ಗೋಕುಲ ಶ್ರೀ ಕೃಷ್ಣ ಸನ್ನಿಧಾನವು ಶಾಸ್ತ್ರೀಯವಾಗಿ ನವೀಕರಿಸಲ್ಪಟ್ಟರೂ ನೂತನ ದೇವಾಲಯದಲ್ಲಿ ಶೀಘ್ರ ಶಾಸ್ತ್ರೀಯವಾಗಿ ಪುನಃರ್ ಪ್ರತಿಷ್ಠಾಪಿಸುವ ಸದಾವಕಾಶವನ್ನು ಭಗವಂತನು ಅತ್ಯಂತ ಸುಲಲತಿವಾಗಿ ಬಿಎಸ್‍ಕೆಬಿಎ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು ಮತ್ತು ಪದಾಧಿಕಾರಿಗಳಿಗೆ ಹಾಗೂ ಭಕ್ತಾಭಿಮಾನಿಗಳಿಗೆ ಅನುಗ್ರಹಿಸಲಿ ಎಂದು ವಿದ್ವಾನ್ ಪಂಜ ಭಾಸ್ಕರ್ ಭಟ್ ತಿಳಿಸಿದರು.

ಸಯಾನ್ ಪೂರ್ವದಲ್ಲಿನ ಬಿಎಸ್‍ಕೆಬಿ ಅಸೋಸಿಯೇಶನ್ ಹಾಗೂ ಗೋಪಾಲಕೃಷ್ಣ ಪಬ್ಲಿಕ್ (ಜಿಕೆಪಿ) ಸಂಸ್ಥೆಯ ಯೋಜನೆ ಭವ್ಯ ಗೋಕುಲ ಭವನದ ನಿಮಿತ್ತ ಆಶ್ರಯದ ಬಾಲಾಲಯದಲ್ಲಿ ಪ್ರತಿಷ್ಠಾಪಿಸಲುದ್ದೇಶಿತ ಶ್ರೀ ಗೋಪಾಲಕೃಷ್ಣ ದೇವರ ಸ್ಥಳಾಂತರ ಧಾರ್ಮಿಕ ಕಾರ್ಯಕ್ರಮದಲ್ಲಿ ಪ್ರವಚನಗೈದು ಪಂಜ ಭಾಸ್ಕರ್ ಭಟ್ ನೆರೆದ ಸದ್ಭಕ್ತರನ್ನು ಅನುಗ್ರಹಿಸಿದರು.

ಆ ಪ್ರಯುಕ್ತ ಇಂದು ಬೆಳಿಗ್ಗೆ ನಿತ್ಯ ಪೂಜೆ, ಅನುಜ್ಞಾ ಕಲಶದ ನಂತರ ಶ್ರೀ ದೇವರ ಸಂಕೋಚ ಪ್ರಕ್ರಿಯೆ ನಡೆಸಲಾಯಿತು. ಪ್ರಧಾನ ಹೋಮ ನೇರವೇರಿಸಲ್ಪಟ್ಟವು. ಅಸೋಸಿಯೇಶನ್‍ನ ಹಾಗೂ ಜಿಕೆಪಿ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು ಮತ್ತು ವಿಜಯಲಕ್ಷ್ಮೀ ಎಸ್.ರಾವ್ ಹಾಗೂ ಗುರುರಾಜ್ ಭಟ್ ಮತ್ತು ಅನಿತಾ ಗುರುರಾಜ್ ದಂಪತಿಗಳು ಹೋಮಗಳ ಯಜಮಾನತ್ವ ವಹಿಸಿದ್ದರು. ಗೋಕುಲ ಭಜನಾ ಮಂಡಳಿ, ವಾಗ್ದೇವಿ ಭಜನಾ ಮಂಡಳಿ, ಮಧ್ವೇಶ ಭಜನಾ ಮಂಡಳಿ, ಶ್ರೀ ಕೃಷ್ಣ ಭಜನಾ ಮಂಡಳಿ, ಹರಿಕೃಷ್ಣ ಭಜನಾ ಮಂಡಳಿ, ವಿಠಲ ಭಜನಾ ಮಂಡಳಿ, ಗೋಪಾಲಕೃಷ್ಣ ಭಜನಾ ಮಂಡಳಿಗಳಿಂದ ನಿರಂತರ ಭಜನೆಗೈದರು.

ಏಕಕಾಲಕ್ಕೆ ಸಾಮೂಹಿಕ ವಿಷ್ಣು ಸಹಸ್ರನಾಮಾರ್ಚನೆ, ಪುಷ್ಪಾರ್ಚನೆ, ಅಭಿಷೇಕ ಕಲಶ, ಬ್ರಾಹ್ಮಣರಿಂದ ವೇದಘೋಷ ನಡೆಸಲ್ಪಟ್ಟಿತು. ಮಂತ್ರಪೂರಕವಾಗಿ, ಏಕಾಭಿಪ್ರಾಯವಾಗಿ, ದೀಕ್ಷಾರಾಧ್ಯರಾಗಿ ದುರಾಭ್ಯಾಸ ಬಿಟ್ಟು ಸಾತ್ವಿಕ ಗುಣ ಮೈಗೂಡಿಸುವ ಪ್ರತಿಜ್ಞೆಯಾನುಸಾರ ಪದಾಧಿಕಾರಿಗಳ ಕೃಷ್ಣಾರ್ಪಣ ಪ್ರತಿಜ್ಞಾ ಸಂಕಲ್ಪದಂತೆ ಶ್ರೀದೇವರಿಗೆ ವಿದ್ವಾನ್ ಮುರಳೀಧರ ತಂತ್ರಿ ಎಡಪದವು ಅವರು ಶಾಸ್ತ್ರೋಕ್ತವಾಗಿ ಪೂಜೆಹವನ ನೇರವೇರಿಸಿ ಹರಸಿದರು. ಗೋಕುಲದ ಪ್ರಧಾನ ಅರ್ಚಕ ಮುಚ್ಚೂರು ಹರಿ ಭಟ್, ರಾಘವೇಂದ್ರ ಭಟ್, ಕೃಷ್ಣಪ್ರಸಾದ್ ತಂತ್ರಿ, ಸುದರ್ಶನ ತಂತ್ರಿ, ಗುರುರಾಜ ಉಡುಪ, ಕೃಷ್ಣರಾಜ ಉಪಾಧ್ಯಾಯ, ಕೃಷ್ಣರಾಜ ತಂತ್ರಿ ಮೀರಾರೋಡ್ ಮತ್ತಿತರ ಪುರೋಹಿತರು ಸಹಯೋಗವನ್ನಿತ್ತರು.

ಮಠ, ಕ್ಷೇತ್ರ, ಸನ್ನಿಧಿಗಳಿಗೆ ಕೊಡುವ ಮರ್ಯಾದೆಯಂತೆ ಉಪಸ್ಥಿತ ರಾಮದಾಸ ಉಪಾಧ್ಯಾಯ ರೇಂಜಳ (ಪೇಜಾವರ ಮಠ), ವಾಸುದೇವ ಸಾಮಗ, ಅಂಬೋಲಿ ಶ್ರೀಪತಿ ಭಟ್, ವಾಸುದೇವ ಉಡುಪ, ಶ್ರೀಧರ ಭಟ್, ಕೈರಬೆಟ್ಟು ವಿಶ್ವನಾಥ ಭಟ್, ಜಿಕೆಪಿ ವಿಶ್ವಸ್ಥ ಸದಸ್ಯರುಗಳಾದ ಪೆರ್ಣಂಕಿಲ ಹರಿದಾಸ ಭಟ್, ಎಸ್.ಎನ್ ಉಡುಪ ಜೆರಿಮೆರಿ ಸೇರಿದಂತೆ ಅನೇಕ ವಿದ್ವಾಂದರು, ಪುರೋಹಿತರಿಗೆ ಡಾ| ಸುರೇಶ್ ಎಸ್.ರಾವ್ ಸಾಂಪ್ರದಾಯಿಕ ಗುರುದಕ್ಷಿಣೆ ನೀಡಿ ಗೌರವಿಸಿದರು. ಗೋಕುಲದ ಪ್ರಧಾನ ಅರ್ಚಕರಾಗಿ ಸುಮಾರು ಮೂರು ದಶಕಗಳ ಅವಿರತ ಸೇವೆ ಸಲ್ಲಿಸಿದ ಮುಚ್ಚೂರು ಹರಿ ಭಟ್ ಮತ್ತು ಮಾಧವಿ ಭಟ್ ದಂಪತಿಯನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್‍ನ ಕಾರ್ಯದರ್ಶಿ ಮತ್ತು ಟ್ರಸ್ಟೀ ಎ.ಎಸ್ ರಾವ್, ಕಾರ್ಯದರ್ಶಿ ಎ.ಪಿ.ಕೆ ಪೆÇೀತಿ, ಖಜಾಂಚಿ ಕೃಷ್ಣ ಆಚಾರ್ಯ, ವಿಶ್ವಸ್ಥ ಸದಸ್ಯ ಬಿ.ರಮಾನಂದ ರಾವ್, ಬಿಎಸ್‍ಕೆಬಿಎ ಉಪಾಧ್ಯಕ್ಷರುಗಳಾದ ವಾಮನ ಹೊಳ್ಳ ಮತ್ತು ಪಿ.ಉಮೇಶ್ ರಾವ್, ಗೌರವ ಪ್ರಧಾನ ಕಾರ್ಯದರ್ಶಿ ಪಿ.ಸಿ.ಎನ್ ರಾವ್, ಗೌರವ ಕೋಶಾಧಿಕಾರಿ ಸಿಎ| ಹರಿದಾಸ್ ಭಟ್, ಜೊತೆ ಕಾರ್ಯದರ್ಶಿಗ ಳಾದ ಚಂದ್ರಶೇಖರ್ ಭಟ್ ಮತ್ತು ಪ್ರಶಾಂತ್ ಹೆರ್ಲೆ, ಜೊತೆ ಕೋಶಾಧಿಕಾರಿಗಳಾದ ಕುಸುಮಾ ಶ್ರೀನಿವಾಸ್ ಮತ್ತು ಅವಿನಾಶ್ ಶಾಸ್ತ್ರಿ, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಗೀತಾ ಆರ್.ಎಲ್ ಭಟ್, ಪ್ರೇಮಾ ಎಸ್. ರಾವ್, ಗುರುರಾಜ್ ಭಟ್, ಯು.ಆರ್ ರಾವ್, ಯು.ಉಮೇಶ್ ರಾವ್, ಗಣೇಶ್ ಆಚಾರ್ಯ, ವಾಣಿ ಭಟ್ ಮತ್ತು ಅಮೃತ್ ಸೋಮೇಶ್ವರ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಶೈಲಿನಿ ರಾವ್, ಬಿಎಸ್‍ಕೆಬಿಎ ಮುಖವಾಣಿ ಗೋಕುಲವಾಣಿ ಮಾಸಿಕದ ಸಂಪಾದಕ ಡಾ| ವ್ಯಾಸರಾಯ ನಿಂಜೂರು, ವಿಜಯಲಕ್ಷ್ಮೀ ಭಟ್, `ಆಶ್ರಯ'ದ ಚಂದ್ರಾವತಿ ರಾವ್, ಪಿ.ವಿ ಐತಾಳ್, ಮಾಜಿ ಅಧ್ಯಕ್ಷರುಗಳಾದ ಕೆ.ಸುಬ್ಬಣ್ಣ ರಾವ್, ಹಿರಿಯ ಮುಂದಾಳು ಹೆಚ್.ಬಿ.ಎಲ್ ರಾವ್, ಡಾ| ಎ.ಎಸ್ ರಾವ್ ಸೇರಿದಂತೆ ನೂರಾರು ಭಕ್ತರು ಭಾಗವಹಿಸಿ ಶ್ರೀಕೃಷ್ಣದೇವರ ಕೃಪೆಗೆ ಪಾತ್ರರಾದರು.

ಇಂದು ರವಿವಾರ (ಜ.01) ಪ್ರಾತಃಕಾಲ 11.29 ಗಂಟೆಗೆ ನವಿಮುಂಬಯಿ ಅಲ್ಲಿನ ಸೀವುಡ್ಸ್‍ನ ಆಶ್ರಯದ ಬಾಲಾಲಯದಲ್ಲಿ ಶ್ರೀ ಗೋಪಾಲಕೃಷ್ಣ ದೇವರನ್ನು ಪ್ರತಿಷ್ಠಾಪಿಸಲಾಗುತ್ತಿದ್ದು, ಶ್ರೀಕೃಷ್ಣ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಉಭಯ ಸಂಸ್ಥೆಗಳ ಗೌರವ ಪ್ರಧಾನ ಕಾರ್ಯದರ್ಶಿ ಪಿ.ಸಿ.ಎನ್ ರಾವ್ ಮತ್ತು ಸರ್ವ ಪದಾಧಿಕಾರಿಗಳು ವಿನಂತಿಸಿದ್ದಾರೆ.

 

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here