Friday 19th, April 2024
canara news

ಸಂಜಯನಗರದಲ್ಲಿ ಐಡಿಹೆಚ್‍ಆರ್ ಸಂಸ್ಥೆಯ ನೂತನ ಮಳಿಗೆ ಪ್ರಾರಂಭ

Published On : 27 Oct 2020   |  Reported By : Rons Bantwal


ಮುಂಬಯಿ (ಆರ್‍ಬಿಐ), ಅ.27: ಬೆಂಗಳೂರು ಹೆಸರಘಟ್ಟ ಇಲ್ಲಿರುವ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (ಐಡಿಹೆಚ್‍ಆರ್) ಬಹುವರ್ಷಗಳ ಬೇಡಿಕೆಯಂತೆ ಬೀಜ ಮತ್ತು ನರ್ಸರಿ ಗಿಡಗಳು ಹಾಗೂ ಪರಿಕರಗಳ ಮಾರಟದ ನೂತನ ಮಳಿಗೆಯನ್ನು ಕಳೆದ ಭಾನುವಾರ ಬೆಂಗಳೂರು ಇಲ್ಲಿನ ಸಂಜಯನಗರದಲ್ಲಿ ಪ್ರಾರಂಭಿಸಲಾಯಿತು.

ಈ ತನ ರೈತರು ಹಾಗೂ ನಗರವಾಸಿಗಳು ತರಕಾರಿ ಬೀಜಗಳು, ಹೂ ಮತ್ತು ಹಣ್ಣಿನ ಬೆಳೆಗಳ ಗಿಡ ಹಾಗೂ ಇತರ ಪರಿಕರಗಳನ್ನು ಖರೀದಿಸಲು ನಗರದಿಂದ ಸುಮಾರು 30ಕಿ.ಮೀ ದೂರದ ಹೆಸರಘದ್ಯಕ್ಕೆ ಹೋಗಬೇಕಿತ್ತು. ಇದನ್ನು ಸಂಸ್ಥೆಯ ನಿರ್ದೇಶಕ ಡಾ| ಎಂ.ಆರ್ ದಿನೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಸಂಜಯನಗರದ ಕೆಇಬಿ ಕಛೇರಿ ಸಮೀಪದ ಐಡಿಹೆಚ್‍ರ್ ಜಾಗದಲ್ಲಿ ನೆರವೇರಿಸಲಾಯಿತು.

ನಿವೃತ್ತ ಹಣ್ಣಿನ ಬೆಳೆಗಳ ವಿಜ್ಞನಿಗಳಾದ ಡಾ| ಜಿ.ಎಸ್ ಪ್ರಕಾಶ್ ಮತ್ತು ಡಾ| ಬಿ. ಪ್ರಸನ್ನಕುಮಾರ್ ರವರು ಮುಖ್ಯ ಅತಿಥಿüಗಳಾಗಿ ಭಾಗವಹಿಸಿದ್ದರು. ವಿವಿಧ ಸಂಸ್ಥೆಗಳ ಪ್ರತಿನಿಧಿಗಳು, ಕೌಶ್ಯಲತಾ ಉದ್ದಿಮೆದಾರರು ಹಾಗೂ ಸಂಸ್ಥೆಯ ವಿಜ್ಞನಿಗಳು ಉಪಸ್ಥಿತರಿದ್ದು ಇನ್ನು ಮುಂದೆ ನಗರವಾಸಿಗಳು ಹಾಗೂ ದೂರದಿಂದ ಬರುವ ರೈತರು ಉತ್ತಮಬೀಜ, ಲಘು, ನರ್ಸರಿ ಸಸಿಗಳನ್ನು ಸಂಜಯನಗರದ ಮಾರಾಟ ಮಳಿಗೆಯಲ್ಲೇ ಖರೀದಿಸಿ ಲಾಭ ಪಡೆದುಕೊಳ್ಳಬಹುದು ಎಂದÀು ಎಂ.ಆರ್ ದಿನೇಶ್ ತಿಳಿಸಿದರು.

ಪ್ರಧಾನ ವಿಜ್ಞಾನಿ ಹಾಗೂ ಮಾಧ್ಯಮಗಳ ನೋಡಲ್ ಅಧಿಕಾರಿ ಡಾ| ಬಿ.ನಾರಾಯಣಸ್ವಾಮಿ ಸ್ವಾಗತಿಸಿ, ಇದೊಂದು ಗ್ರಾಹಕರಿಗೆ ಉತ್ತಮ ಗುಣಮಟ್ಟದ ಐಡಿಹೆಚ್‍ರ್ ಪರಿಕರಗಳನ್ನು ಕಾಲವ್ಯರ್ಥಮಾಡದೆ ಸುಲಭವಾಗಿ ನಗರದಲ್ಲೇ ಪಡೆಯುವ ಸುವರ್ಣವಕಾಶ ಎಂದÀು ಧನ್ಯವದಿಸಿದರು.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here